logo
logo

ಮಹಾಶಿವರಾತ್ರಿಯ ಲಾಭಗಳು

ಆಧ್ಯಾತ್ಮಿಕ ಹಾದಿಯಲ್ಲಿರುವವರಿಗಲ್ಲದೆ ವೃತ್ತಿಜೀವನದಲ್ಲಿರುವವರಿಗೆ ಹಾಗೂ ಕುಟುಂಬಸ್ಥರಿಗೂ ಕೂಡ ಮಹಾಶಿವರಾತ್ರಿ ಬಹಳ ಮಹತ್ವದ್ದಾಗಿದೆ.

ಅಡ್ಡವಾಗಿದ್ದ ಬೆನ್ನೆಲುಬು ಲಂಬವಾಗಿ ಬದಲಾದದ್ದು ಜೀವಿಗಳ ವಿಕಾಸಾತ್ಮಕ ಪ್ರಕ್ರಿಯೆಯಲ್ಲಿ ಒಂದು ದೊಡ್ಡ ಹಂತವೆಂದು ಜೀವಶಾಸ್ತ್ರಜ್ಞರು ಸೂಚಿಸಿದ್ದಾರೆ. ಇದಾದ ನಂತರವೇ ಬುದ್ಧಿಶಕ್ತಿಯು ವಿಕಸನಗೊಂಡಿದ್ದು. ಹಾಗಾಗಿ, ಸರಿಯಾದ ಮಂತ್ರಗಳು ಮತ್ತು ಧ್ಯಾನದಿಂದ, ಮಹಾಶಿವರಾತ್ರಿಯ ರಾತ್ರಿಯುದ್ದಕ್ಕೂ ಆಗುವ ಶಕ್ತಿಯ ನೈಸರ್ಗಿಕ ಮೇಲ್-ಸ್ಫುರಣವನ್ನು ಬಳಸಿಕೊಂಡು ನಾವು ದೈವೀಕ ಚೈತನ್ಯಕ್ಕೆ ಒಂದು ಹೆಜ್ಜೆ ಹತ್ತಿರವಾಗಬಹುದು.

ಜೀವನದಲ್ಲಿ ಯಾವುದೇ ಸಾಧನೆಯನ್ನು ಮಾಡದಿದ್ದರೂ, ಈ ಶಕ್ತಿಯ ಮೇಲ್-ಸ್ಫುರಣವು ಸಂಭವಿಸುತ್ತದೆ. ಆದರೆ, ವಿಶೇಷವಾಗಿ ಯಾವುದಾದರೊಂದು ರೀತಿಯ ಯೋಗ ಸಾಧನೆಯಲ್ಲಿ ತೊಡಗಿರುವವರಿಗೆ , ಶರೀರವನ್ನು ನೇರವಾಗಿರಿಸಿರುವುದು - ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ - ಈ ರಾತ್ರಿ ಮಲಗದಿರುವುದು ಬಹಳ ಮುಖ್ಯವಾಗುತ್ತದೆ.

ಆಧ್ಯಾತ್ಮಿಕ ಹಾದಿಯಲ್ಲಿರುವವರಿಗಲ್ಲದೆ ವೃತ್ತಿಜೀವನದಲ್ಲಿರುವವರಿಗೆ ಹಾಗೂ ಕುಟುಂಬಸ್ಥರಿಗೂ ಕೂಡ ಮಹಾಶಿವರಾತ್ರಿ ಬಹಳ ಮಹತ್ವದ್ದಾಗಿದೆ. ಕುಟುಂಬಸ್ಥರು ಮಹಾಶಿವರಾತ್ರಿಯನ್ನು ಶಿವನ ಮದುವೆಯ ವಾರ್ಷಿಕೋತ್ಸವದಂತೆ ಆಚರಿಸುತ್ತಾರೆ. ಮಹತ್ವಾಕಾಂಕ್ಷಿಗಳಿಗಿದು ಶಿವ ತನ್ನೆಲ್ಲಾ ಶತ್ರುಗಳನ್ನು ಸದೆಬಡಿದ ದಿನ. ಆದರೆ ಯೋಗ ಪರಂಪರೆಯಲ್ಲಿ ನಾವು ಶಿವನನ್ನು ದೇವರೆಂದು ಪರಿಗಣಿಸದೆ, ಅವನನ್ನು ಮೊದಲ ಗುರು ಅಥವಾ ಆದಿ ಗುರು - ಯೋಗ ವಿಜ್ಞಾನದ ಉಗಮಕಾರಕನೆಂದು ಪರಿಗಣಿಸುತ್ತೇವೆ. "ಶಿವ" ಎಂಬ ಪದ "ಯಾವುದಿಲ್ಲವೋ ಅದು" ಎಂಬ ಅರ್ಥವನ್ನು ನೀಡುತ್ತದೆ. ನೀವು ನೀವಲ್ಲದಿರುವಸ್ಥಿತಿಯಲ್ಲಿದ್ದು ಶಿವನಿರಲು ಆಸ್ಪದ ನೀಡಬಹುದಾದರೆ, ಜೀವನದಲ್ಲೊಂದು ಹೊಸ ದೃಷ್ಟಿಕೋನ ಅರಳುವ ಮತ್ತು ಜೀವನವನ್ನು ಸಂಪೂರ್ಣವಾದ ಸ್ಪಷ್ಟತೆಯಿಂದ ನೋಡುವ ಸಂಭಾವ್ಯವು ಸಾಧ್ಯವಾಗುತ್ತದೆ.

    Share

Related Tags

ಆದಿಯೋಗಿ

Get latest blogs on Shiva

Related Content

ಶಿವ ತಾಂಡವ ಸ್ತೋತ್ರ