logo
logo

Adiyogi - Source of Yoga

ಆದಿಯೋಗಿ - ಯೋಗದ ಮೂಲ


ಸುಮಾರು 15,000 ವರ್ಷಗಳಿಗೂ ಹಿಂದೆ, ಎಲ್ಲಾ ಮತಧರ್ಮಗಳು ಹುಟ್ಟುವ ಮುನ್ನವೇ, ಆದಿಯೋಗಿ, ಮೊದಲ ಯೋಗಿ, ಹಿಮಾಲಯದಲ್ಲಿ ಕಾಣಿಸಿಕೊಂಡನು.

ಅವನು, ಒಂದೋ ಭಾವಪರವಶನಾಗಿ ನರ್ತಿಸುತ್ತಿದ್ದನು ಅಥವಾ ಅಚಲನಾಗಿ ಕುಳಿತಿರುತ್ತಿದ್ದನು. ಅವನು ಹಾಗೆ ಕುಳಿತಿರುವಾಗ ಅವನು ಜೀವಂತವಿದ್ದಾನೆ ಎಂದು ಊಹಿಸಲು ಇದ್ದ ಒಂದೇ ಗುರುತೆಂದರೆ ಅವನ ಕಣ್ಣಿಂದ ಉದುರುತ್ತಿದ್ದ ಆನಂದಬಾಷ್ಪ. ಯಾರಿಗೂ ಕಲ್ಪಿಸಿಕೊಳ್ಳಲೂ ಆಗದಿದ್ದುದನ್ನು ಅವನು ಅನುಭವಿಸುತ್ತಿದ್ದಾನೆಂಬುದು ಸ್ಪಷ್ಟವಾಗಿತ್ತು. ಜನರು ಆಸಕ್ತಿಯಿಂದ ಅವನ ಸುತ್ತ ನೆರೆದರು, ಆದರೆ ಅವನು ಅವರನ್ನು ಗಮನಿಸದ ಕಾರಣ, ಏಳು ಅತ್ಯಾಸಕ್ತಿಯ ಸಾಧಕರನ್ನು ಹೊರತುಪಡಿಸಿ, ಮಿಕ್ಕವರೆಲ್ಲರೂ ಅಲ್ಲಿಂದ ಹೊರಟುಹೋದರು. "ದಯವಿಟ್ಟು, ನಿನಗೇನು ತಿಳಿದಿದೆಯೋ, ಅದನ್ನು ನಾವು ತಿಳಿಯಬೇಕು." ಎಂದು ಅವರು ಅವನ ಬಳಿ ಗೋಗರೆದರು. ಅವರ ಧೃಡನಿಷ್ಠೆಯನ್ನು ಕಂಡು, ಆದಿಯೋಗಿಯು ಅವರಿಗೆ ಕೆಲ ಪೂರ್ವಸಿದ್ಧತೆಯ ಸಾಧನೆಗಳನ್ನು ಕಲಿಸಿಕೊಟ್ಟು ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟನು. ಆದಿಯೋಗಿ ಅವರನ್ನು ನಿರ್ಲಕ್ಷಿಸುತ್ತಿರುವಂತೆಯೇ, 84 ವರ್ಷಗಳ ಕಾಲ ಆ ಏಳು ಸಾಧಕರು ಏಕನಿಷ್ಠರಾಗಿ ಸಾಧನೆಯನ್ನು ಮಾಡಿದರು. ಕೊನೆಗೆ ಬೇಸಿಗೆಯ ಅಯನ ಸಂಕ್ರಾತಿಯ ದಿನದಂದು, ದಕ್ಷಿಣಾಯನದ ಪ್ರಾರಂಭದಲ್ಲಿ, ಆದಿಯೋಗಿಯ ಗಮನ ಆ ಏಳು ಸಾಧಕರ ಮೇಲೆ ಬಿದ್ದಿತು. ಜ್ಞಾನವನ್ನು ಸ್ವೀಕರಿಸಲು ಅವರ ಪಾತ್ರತೆಯು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಮುಂದಿನ 28 ದಿನಗಳ ಕಾಲ ಅವರನ್ನು ನಿಕಟವಾಗಿ ಅವಲೋಕಿಸಿದ ನಂತರ, ಇಂದು ಗುರು ಪೌರ್ಣಮಿ ಎಂದು ಕರೆಯಲಾಗುವ ಹುಣ್ಣಿಮೆಯ ದಿನದಂದು, ಅವನು ಮೊದಲ ಗುರು, ಆದಿ ಯೋಗಿಯಾಗಿ ಪರಿವರ್ತಿತನಾದನು. ಇಂದಿನ ಕಾಲದಲ್ಲಿ ಸಪ್ತರ್ಷಿಗಳೆಂದು ಪ್ರಸಿದ್ಧರಾಗಿರುವ ಅವನ ಏಳು ಶಿಷ್ಯರಿಗೆ ಕಾಂತಿ ಸರೋವರದ ದಡದಲ್ಲಿ, ಆದಿಯೋಗಿಯು ಯೋಗ ವಿಜ್ಞಾನವನ್ನು ವ್ಯವಸ್ಥಿತವಾಗಿ ಪ್ರತಿಪಾದಿಸಲು ಆರಂಭಿಸಿದನು.

ಮನುಷ್ಯರು ತಮ್ಮ ಮಿತಿಗಳನ್ನು ಮೀರಿ, ಅವರ ಪರಮ ಸ್ವರೂಪವನ್ನು ತಲುಪಲು ಆದಿಯೋಗಿಯು 112 ವಿಧಾನಗಳನ್ನು ಪ್ರತಿಪಾದಿಸಿದನು. ಆದಿಯೋಗಿ ನೀಡಿದ್ದು ವ್ಯಕ್ತಿಗತ ಪರಿವರ್ತನೆಯ ಸಾಧನೆಗಳು - ಜಗತ್ತನ್ನು ರೂಪಾಂತರಗೊಳಿಸುವುದಕ್ಕೆ ವ್ಯಕ್ತಿಗತ ಪರಿವರ್ತನೆಯೊಂದೇ ದಾರಿ. ಮಾನವಕಲ್ಯಾಣ ಮತ್ತು ಮುಕ್ತಿಗೆ ಅವನು ನೀಡಿದ ಮೂಲಭೂತ ಸಂದೇಶವಿದು: "ಅಂತರ್ಮುಖರಾಗುವುದೊಂದೇ ಬಿಡುಗಡೆಯ ದಾರಿ." ವ್ಯಕ್ತಿನಿಷ್ಠ ವಿಜ್ಞಾನದ ಮೂಲಕ ಮಾನವಕಲ್ಯಾಣವನ್ನು ವೈಜ್ಞಾನಿಕವಾದ ರೀತಿಯಲ್ಲಿ ನಾವು ಉದ್ದೇಶಿಸುವ ಸಮಯ ಬಂದಿದೆ.

    Share

Related Tags

ಆದಿಯೋಗಿ

Get latest blogs on Shiva

Related Content

Nandi - The Meditative Bull