ಮಹಾಶಿವರಾತ್ರಿ ಸಾಧನೆ

ಮಹಾಶಿವರಾತ್ರಿಯ ಸಾಧನೆಯು ಅದ್ಭುತ ಸಾಧ್ಯತೆಗಳ ರಾತ್ರಿಯಾದ ಮಹಾಶಿವರಾತ್ರಿಗೆ ಸಿದ್ಧತೆಯ ಪ್ರಕ್ರಿಯೆಯಾಗಿದೆ. ಏಳು ವರ್ಷದ ಮೇಲ್ಪಟ್ಟ ಯಾರಾದರೂ ಈ ಸಾಧನೆಯಲ್ಲಿ ಭಾಗವಹಿಸಬಹುದು.

ಸಾಧನೆಯ ದಿನಗಳು:

The sadhana can be of varying duration. You can do the sadhana for 40, 21, 14, 7 or 3 consecutive days leading up to Mahashivratri, March 11, 2021.

 • 40 days: Jan 31 – Mar 11
 • 21 days: Feb 19 – Mar 11
 • 14 days: Feb 26 – Mar 11
 • 7 days: Mar 5 – Mar 11
 • 3 days: Mar 9 – Mar 11

ಮಹಾಶಿವರಾತ್ರಿಯಂದು ಸಾಧನೆಯನ್ನು ಅಂತ್ಯಗೊಳಿಸಲು ಸಾಧ್ಯವಾಗದಿದ್ದಲ್ಲಿ, ಶಿವರಾತ್ರಿಯ ಮುಂದಿನ ಅಮಾವಾಸ್ಯೆಯ ಮೊದಲು ಇದನ್ನು ಯೋಗ ಕೇಂದ್ರದಲ್ಲಿ ಅಂತ್ಯಗೊಳಿಸಬೇಕು.

ಪ್ರತಿದಿನದ ಸಾಧನೆಯ ಪ್ರಕ್ರಿಯೆ:

ಪ್ರತಿದಿನದ ಸಾಧನೆಯ ಪ್ರಕ್ರಿಯೆಯು ಕೆಳಕಂಡಂತಿದೆ:

 • ಬರಿದಾದ ಹೊಟ್ಟೆಯಲ್ಲಿ ಶಿವ ನಮಸ್ಕಾರದ 12 ಸುತ್ತುಗಳನ್ನು ಮಾಡಿ. ನಂತರ ಮೂರು ಬಾರಿ ಸರ್ವೇಭ್ಯೋ ಸ್ತೋತ್ರವನ್ನು ಪಠಿಸಿ. ಇದನ್ನು ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯಾಸ್ತದ ನಂತರ ದಿನಕ್ಕೆ ಒಂದು ಬಾರಿ ಮಾಡಬೇಕು.

ಸರ್ವೇಭ್ಯೋ ಸ್ತೋತ್ರ:

ॐ ಸರ್ವೇಭ್ಯೋ ದೇವೇಭ್ಯೋ ನಮಃ
(ಸರ್ವ ದೇವಾನುದೇವತೆಗಳಿಗೆ ನಮಿಸುತ್ತೇವೆ)
ॐ ಪಂಚಭೂತಾಯ ನಮಃ
(ಪಂಚಭೂತಗಳಿಗೆ ನಮಿಸುತ್ತೇವೆ)
ॐ ಶ್ರೀ ಸದ್ಗುರುವೆ ನಮಃ
(ಶ್ರೀ ಸದ್ಗುರುವಿಗೆ ನಮಿಸುತ್ತೇವೆ)
ॐ ಶ್ರೀ ಪೃಥ್ವಿಯೈ ನಮಃ
(ಭೂಮಿತಾಯಿಗೆ ನಮಿಸುತ್ತೇವೆ)
ॐ ಆದಿಯೋಗೇಶ್ವರಾಯ ನಮಃ
(ಯೋಗದ ಜನಕನಾದ ಈಶ್ವರನಿಗೆ ನಮಿಸುತ್ತೇವೆ)
ॐ, ॐ, ॐ

 • ಎಂಟರಿಂದ ಹತ್ತು ಕರಿಮೆಣಸಿನ ಕಾಳು, ಎರಡರಿಂದ ಮೂರು ಬಿಲ್ವ ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದಲ್ಲಿ ರಾತ್ರಿ ನೆನೆಸಿಡಿ. ಒಂದು ಮುಷ್ಟಿ ನೆಲಗಡಲೆಯನ್ನೂ ನೀರಿನಲ್ಲಿ ನೆನೆಸಿಡಿ. ಶಿವ ನಮಸ್ಕಾರ ಮತ್ತು ಸ್ತೋತ್ರ ಪಠಣೆಯ ನಂತರ, ಎಲೆಗಳನ್ನು ಅಗೆದು ತಿನ್ನಿ. ಕರಿಮೆಣಸಿನ ಕಾಳು, ಜೇನುತುಪ್ಪದ ಮಿಶ್ರಣಕ್ಕೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಸೇವಿಸಿ. ನೆನೆಸಿದ ನೆಲಗಡಲೆಯನ್ನೂ ಸೇವಿಸಿ. ಬೇವಿನ ಎಲೆಗಳು ಸಿಗದೇ ಇರುವ ಪಕ್ಷದಲ್ಲಿ, ನೀವದನ್ನು ಈಶ ಶಾಪಿಯಲ್ಲಿ (IshaShoppe.com) ಖರೀದಿಸಬಹುದು. ಇವುಗಳನ್ನು ಸೇವಿಸುವ ಮೊದಲು ನಿಮ್ಮ ನಿಯಮಿತ ಸಾಧನವಾದ ಶಾಂಭವಿ ಮಹಾಮುದ್ರೆಯನ್ನು ಪೂರ್ಣಗೊಳಿಸಿ.
 • ಶಿವ ನಮಸ್ಕಾರ ಅಭ್ಯಾಸದ ಕುರಿತು ಕೆಲ ಅಂಶಗಳು:
  • ಗರ್ಭಿಣಿಯರು ಶಿವ ನಮಸ್ಕಾರವನ್ನು ಮಾಡಬಾರದು.
  • ತಮ್ಮ ಋತುಚಕ್ರದ ಅವಧಿಯಲ್ಲಿ ಮಹಿಳೆಯರು ಶಿವ ನಮಸ್ಕಾರವನ್ನು ಮಾಡಬಹುದು.
  • ಹರ್ನಿಯ ಸಮಸ್ಯೆ ಇರುವವರು ಶಿವ ನಮಸ್ಕಾರವನ್ನು ಒಂದು ದಿಂಬು ಅಥವಾ ಕುರ್ಚಿ ಸಹಾಯವನ್ನು ಪಡೆದು ಮಾಡಬಹುದು.
 • ಬೆಳಿಗ್ಗೆ ಮತ್ತು ಸಂಜೆ, ಎರಡೂ ಹೊತ್ತಿನಲ್ಲಿ ದೀಪವನ್ನು ಬೆಳಗಿಸಿ. ದೀಪದ ಲಭ್ಯತೆ ಇಲ್ಲದಿದ್ದರೆ, ಒಂದು ಮೇಣದ ಬತ್ತಿಯನ್ನು ಬೆಳಗಿಸಿ.
 • “ಯೋಗ ಯೋಗ ಯೋಗೇಶ್ವರಾಯ” ಸ್ತೋತ್ರವನ್ನು ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಿದ ನಂತರ ಹನ್ನೆರಡು ಬಾರಿ ಪಠಿಸಿ. ಸಂಧ್ಯಾ ಕಾಲದ 40 ನಿಮಿಷದ ಅವಧಿಯಲ್ಲಿ ಈ ಸಾಧನೆಯನ್ನು ಮಾಡುವುದು ಉತ್ತಮ. ಎರಡು ಮಹತ್ವದ ಸಂಧ್ಯಾ ಕಾಲಗಳು ಸೂರ್ಯೋದಯ ಮತ್ತು ಸೂರ್ಯಾಸ್ತದ 20 ನಿಮಿಷ ಮುಂಚೆ ಆರಂಭವಾಗಿ 20 ನಿಮಿಷದ ನಂತರ ಮುಗಿಯುತ್ತದೆ.

ಯೋಗ ಯೋಗ ಯೋಗೇಶ್ವರಾಯ ಸ್ತೋತ್ರ:

ಯೋಗ ಯೋಗ ಯೋಗೇಶ್ವರಾಯ
ಭೂತ ಭೂತ ಭೂತೇಶ್ವರಾಯ
ಕಾಲ ಕಾಲ ಕಾಲೇಶ್ವರಾಯ
ಶಿವ ಶಿವ ಸರ್ವೇಶ್ವರಾಯ
ಶಂಭೋ ಶಂಭೋ ಮಹಾದೇವಾಯ

ಸಾಧನೆಯ ಮಾರ್ಗಸೂಚಿಗಳು:

ಸಾಧನೆಯ ಅವಧಿಯಲ್ಲಿ ಅನುಸರಿಸಲು ಕೆಲ ಮಾರ್ಗಸೂಚಿಗಳಿವೆ.

 • ದಿನಕ್ಕೆ ಕೇವಲ 2 ಬಾರಿ ಊಟವನ್ನು ಮಾಡಿ. ಮೊದಲ ಊಟ ಮಧ್ಯಾಹ್ನ 12:00 ನಂತರ ಮಾಡಬೇಕು.
 • ಹಸಿವಾದರೆ ಮೆಣಸಿನ ಕಾಳು – ಜೇನುತುಪ್ಪ – ನಿಂಬೆರಸ ಮತ್ತು ನೀರಿನ ಮಿಶ್ರಣವನ್ನು ಸೇವಿಸಬಹುದು.
 • ಧೂಮಪಾನ ಮಾಡಬೇಡಿ, ಮದ್ಯ ಮತ್ತು ಮಾಂಸಾಹಾರವನ್ನು ಸೇವಿಸಬೇಡಿ.
 • ಗಂಡಸರು ಬಲ ತೋಳಿಗೆ ಮತ್ತು ಮಹಿಳೆಯರು ಎಡ ತೋಳಿಗೆ ಒಂದು ಕಪ್ಪು ಬಟ್ಟೆಯನ್ನು ಕಟ್ಟಿಕೊಳ್ಳಬೇಕು. ಯಾವುದೇ ಕಪ್ಪು ಬಟ್ಟೆಯನ್ನು ಬಳಸಬಹುದು, ಅದರೆ ಈ ಬಟ್ಟೆಯ 12 ಇಂಚು ಉದ್ದ ಮತ್ತು 1 ಇಂಚು ಅಗಲದ್ದಾಗಿರಬೇಕು. ಸಾಧನೆಯಲ್ಲಿ ತೊಡಗಿರುವವರು ಈ ಬಟ್ಟೆಯನ್ನು ತಾವೇ ಖರೀದಿಸಬಹುದು.
 • ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಮಾತ್ರ ಧರಿಸಿ.
 • ನೈಸರ್ಗಿಕ ಸ್ನಾನದ ಪುಡಿಯನ್ನು ಬಳಸಿ ದಿನಕ್ಕೆರಡು ಬಾರಿ ಸ್ನಾನ ಮಾಡಿ. ನೈಸರ್ಗಿಕ ಸ್ನಾನದ ಪುಡಿಯು ಈಶ ಶಾಪಿಯಲ್ಲಿ ದೊರಕುತ್ತದೆ. ಹೆಚ್ಚಿನ ಮಾಹಿತಿಗಾಗಿ 91-9442645112-ಗೆ ಅನ್ನು ಸಂಪರ್ಕಿಸಿ.
 • ಈ ಕೆಳಗಿನ ಜಾಗಗಳಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳಿ: ಆಜ್ಞಾ – ಹುಬ್ಬುಗಳ ನಡುವೆ, ವಿಶುದ್ಧಿ – ಗಂಟಲಿನ ಬುಡದಲ್ಲಿ, ಅನಾಹತ – ಪಕ್ಕೆಲುಬು ಸೇರುವ ಸ್ಥಳದಿಂದ ಕೆಳಗಿರುವ ಮೆದುವಾದ ಜಾಗ, ಮತ್ತು ಮಣಿಪೂರಕ – ಹೊಕ್ಕಳಿನ ಸ್ವಲ್ಪ ಕೆಳಗೆ.

ಸಾಧನೆಯ ಸಮಾಪ್ತಿ:

ಸಾಧನೆಯು ಮಹಾಶಿವರಾತ್ರಿಯಂದು ಅಂತ್ಯವಾಗುತ್ತದೆ. ಈಶ ಯೋಗ ಕೇಂದ್ರದಲ್ಲಿ, ಅಥವಾ ಮನೆಯಲ್ಲಿ, ಅಥವಾ ಧ್ಯಾನಲಿಂಗದ ಚಿತ್ರದ ಎದುರಲ್ಲಿ ಈ ಮುಕ್ತಾಯದ ಪ್ರಕ್ರಿಯೆಯನ್ನು ಮಾಡಬಹುದು.

 • ಮಹಾಶಿವರಾತ್ರಿಯಂದು ಜಾಗರಣೆ ಖಂಡಿತವಾಗಿ ಮಾಡಬೇಕು.
 • ಯೋಗ ಯೋಗ ಯೋಗೇಶ್ವರಾಯ ಸ್ತೋತ್ರವನ್ನು 112 ಬಾರಿ ಪಠಿಸಬೇಕು.
 • ಆಹಾರ ಅಥವಾ ಹಣದ ಅಗತ್ಯವಿರುವ 3 ಜನರಿಗೆ ಏನನ್ನಾದರೂ ದಾನ ಮಾಡಿಬೇಕು.
 • ಒಂದು ಬಿಲ್ವಪತ್ರೆ / ಬೇವಿನ ಎಲೆ ಅಥವಾ 3/5 ದಳಗಳಿರುವ ಯಾವುದಾದರೊಂದು ಎಲೆಯನ್ನು ಧ್ಯಾನಲಿಂಗಕ್ಕೆ ಸಮರ್ಪಿಸಬೇಕು.
 • ತೋಳಿಗೆ ಕಟ್ಟಿರುವ ಕಪ್ಪು ಬಟ್ಟೆಯನ್ನು ಬಿಚ್ಚಿ, ಧ್ಯಾನಲಿಂಗದ ಎದುರಿರುವ ನಂದಿಯ ಬಳಿಯಿರುವ ಮರಕ್ಕೆ ಕಟ್ಟಬೇಕು. ಸ್ಥಳೀಯ ಕೇಂದ್ರಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ಈ ಪ್ರಕ್ರಿಯೆಯನ್ನು ಮಾಡುತ್ತಿರುವವರು, ಈ ಬಟ್ಟೆಯನ್ನು ಸುಟ್ಟು, ಸಾಧನೆಯ ಮುಕ್ತಾಯದ ನಂತರ ಅದರ ಭಸ್ಮವನ್ನು ತೋಳುಗಳಿಗೆ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಬೇಕು.
 • ಮುಕ್ತಾಯದ ಪ್ರಕ್ರಿಯೆಯನ್ನು ಮನೆಯಲ್ಲಿ ಮಾಡುತ್ತಿದ್ದರೆ, ಧ್ಯಾನಲಿಂಗದ ಈ ಚಿತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

MSR at home culmination dhyanalinga-photo

ಮಹಾಶಿವರಾತ್ರಿಯ ಸಾಧನೆಗೆ ಬೆಂಬಲವನ್ನು ಪಡೆದುಕೊಳ್ಳಲು ಕೆಳಗೆ ನೋಂದಾಯಿಸಿ!

 • ಮಹಾಶಿವರಾತ್ರಿಯ ಬಗ್ಗೆ ಇತ್ತೀಚಿನ ವೀಡಿಯೊಗಳು ಮತ್ತು ಲೇಖನಗಳನ್ನು ಪಡೆಯಿರಿ
 • ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯ ಆಚರಣೆಗಳ ಬಗ್ಗೆ ಅಪ್ಡೇಟ್-ಗಳನ್ನು ಪಡೆಯಿರಿ
 • Join us through a live webstream