ಸದ್ಗುರು: ಶಿವ – ಆದಿಯೋಗಿ ಒಬ್ಬ ಸನ್ಯಾಸಿ ಮತ್ತು ಘೋರ ತಪಸ್ವಿಯಾಗಿದ್ದನು, ಅವನು ಮಾನವ ತಲೆಬುರುಡೆಗಳ ಮಾಲೆ ಧರಿಸಿ ಸ್ಮಶಾನಗಳಲ್ಲಿ ಸಂಚರಿಸುತ್ತಿದ್ದ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಅವನು ಬಹಳ ಭಯಂಕರ ಮನುಷ್ಯನಾಗಿದ್ದನು ಮತ್ತು ಯಾರೂ ಅವನ ಹತ್ತಿರ ಹೋಗುವ ಸಾಹಸ ಮಾಡುತ್ತಿರಲಿಲ್ಲ. ಆಗ ಎಲ್ಲಾ ದೇವತೆಗಳು ಅವನ ಸ್ಥಿತಿಯನ್ನು ನೋಡಿ ಯೋಚಿಸಿದರು, “ ಅವನು ಹೀಗೆಯೇ ಉಳಿದರೆ, ಕ್ರಮೇಣ ಅವನ ಶಕ್ತಿ ಮತ್ತು ಕಂಪನಗಳು ಸಂಪೂರ್ಣ ಪ್ರಪಂಚದ ಮೇಲೆ ಪ್ರಭಾವ ಬೀರುತ್ತವೆ ಮತ್ತು ನಂತರ ಎಲ್ಲರೂ ತಪಸ್ವಿಗಳಾಗುತ್ತಾರೆ. ಇದು ಅರಿವು ಮತ್ತು ಮುಕ್ತಿಯ ದೃಷ್ಟಿಯಿಂದ ಒಳ್ಳೆಯದು, ಆದರೆ ನಮ್ಮ ಬಗ್ಗೆ ಏನು? ನಮ್ಮ ಆಟ ಮುಗಿಯುತ್ತದೆ. ಜನರು ನಾವು ಬಯಸುವ ವಸ್ತುಗಳನ್ನು ಪೂರೈಸುವುದಿಲ್ಲ. ನಾವು ನಮ್ಮ ಆಟಗಳನ್ನು ಆಡಲು ಸಾಧ್ಯವಿಲ್ಲ, ಆದ್ದರಿಂದ ನಾವು ಏನಾದರೂ ಮಾಡಬೇಕು.”
ಬಹಳಷ್ಟು ಅನುನಯದಿಂದ ಪುಸಲಾಯಿಸಿದ ನಂತರ, ಹೇಗೋ ಅವರು ಅವನನ್ನು ಸತಿಯೊಂದಿಗೆ ಮದುವೆ ಮಾಡಿಸಿದರು. ಈ ಮದುವೆಯ ನಂತರ, ಅವನು ಭಾಗಶಃ ಗೃಹಸ್ಥನಾದನು. ಅಲ್ಲಿ ಬಹಳ ಜವಾಬ್ದಾರಿಯುತ ಗೃಹಸ್ಥನಾಗಿದ್ದ ಕ್ಷಣಗಳಿದ್ದವು; ಜವಾಬ್ದಾರಿಯಿಲ್ಲದ ಮದ್ಯಪಾನಿ ಆಗಿದ್ದ ಕ್ಷಣಗಳಿದ್ದವು; ತೀವ್ರ ಕೋಪಗೊಂಡು ಅಸ್ತಿತ್ವವನ್ನೇ ಸುಟ್ಟುಹಾಕಬಹುದಾದ ಕ್ಷಣಗಳಿದ್ದವು; ಹಾಗೂ ಕೆಲವೊಮ್ಮೆ ತುಂಬಾ ಶಾಂತ ಮತ್ತು ಅಸ್ತಿತ್ವಕ್ಕೆ ಶಮನಕಾರಿಯಾಗಿದ್ದ ಹಿತವಾದ ಕ್ಷಣಗಳೂ ಇದ್ದವು.. ಅವನು ಬದಲಾಗುತ್ತಲೇ ಇದ್ದ.
ಜಗತ್ತಿಗೆ ಅಗತ್ಯವಿರುವಂತೆ ಅವನನ್ನು ಸಂಪೂರ್ಣವಾಗಿ ಹಿಡಿದಿಡಲು ಸತಿಗೆ ಸಾಧ್ಯವಾಗಲಿಲ್ಲ.ನಂತರ ಆದ ಘಟನೆಗಳಿಂದ), ಅವಳು ತಮ್ಮ ದೇಹವನ್ನು ತ್ಯಜಿಸಿದಳು ಮತ್ತು ಶಿವ ಮತ್ತೊಮ್ಮೆ ಬಹಳ ಘೋರ ತಪಸ್ವಿಯಾದ, ಮೊದಲಿಗಿಂತ ಹೆಚ್ಚು ಉಗ್ರ ಮತ್ತು ನಿರ್ಧಾರಿತ. ಈಗ ಸಂಪೂರ್ಣ ಪ್ರಪಂಚ ತಪಸ್ವಿಯಾಗುವ ಅಪಾಯವು ಇನ್ನೂ ಹೆಚ್ಚಾಗಿತ್ತು ಹಾಗಾಗಿ ದೇವತೆಗಳು ಬಹಳ ಚಿಂತಿತರಾದರು.
ಅವರು ಅವನನ್ನು ಮತ್ತೊಮ್ಮೆ ಮದುವೆಯ ಬಂಧನದಲ್ಲಿ ಸಿಕ್ಕಿಹಾಕಿಸಲು ಬಯಸಿದರು. ಆದ್ದರಿಂದ ಅವರು ಮಾತೃ ದೇವತೆಯನ್ನು ಪೂಜಿಸಿ, ಅವಳು ಪಾರ್ವತಿಯ ರೂಪವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡರು. ತನ್ನ ಜೀವನದಲ್ಲಿ ಹೇಗಾದರೂ ಶಿವನನ್ನು ಮದುವೆಯಾಗಬೇಕು ಎಂಬ ಕೇವಲ ಒಂದು ಗುರಿಯೊಂದಿಗೆ ಅವಳು ಪಾರ್ವತಿಯಾಗಿ ಜನಿಸಿದಳು ಅವಳು ಬೆಳೆದು ದೊಡ್ಡವಳಾದಳು. ಅವಳು ಅವನನ್ನು ಹಲವು ರೀತಿಯಲ್ಲಿ ಆಕರ್ಷಿಸಲು ಪ್ರಯತ್ನಿಸಿದಳು, ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ನಂತರ ದೇವತೆಗಳು ಕಾಮದೇವನನ್ನು ಬಳಸಿಕೊಂಡು ಹೇಗೋ ಶಿವನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು, ಮತ್ತು ಒಂದು ಕರಗಿ ಹೋಗುವ ಕ್ಷಣದಲ್ಲಿ, ಅವನು ಮತ್ತೆ ಗೃಹಸ್ಥನಾದ. ಅಂದಿನಿಂದ ಅವನು ತಪಸ್ವಿ ಮತ್ತು ಗೃಹಸ್ಥ ಎರಡೂ ಪಾತ್ರಗಳನ್ನು ತನ್ನೊಳಗೆ ಅದ್ಭುತ ಸಾಮರಸ್ಯ ಮತ್ತು ಸಮತೋಲನದಿಂದ ನಿರ್ವಹಿಸಲು ಪ್ರಾರಂಭಿಸಿದನು.
ಶಿವನು ಪಾರ್ವತಿಗೆ ಆತ್ಮಜ್ಞಾನವನ್ನು ಬೋಧಿಸಲು ಪ್ರಾರಂಭಿಸಿದ. ಅನೇಕ ವಿಚಿತ್ರ ಮತ್ತು ಆತ್ಮೀಯತೆಯ ವಿಧಾನಗಳಲ್ಲಿ , ಆತ್ಮವನ್ನು ತಿಳಿಯುವ ಬಗೆಯನ್ನು ಅವಳಿಗೆ ತಿಳಿಸಿದನು. ಪಾರ್ವತಿ ಪರಮಾನಂದವನ್ನು ಪಡೆದಳು. ಆದರೆ, ಯಾರಿಗಾದರೂ ಆಗುವಂತೆಯೇ, ಒಮ್ಮೆ ನೀವು ಶಿಖರವನ್ನು ತಲುಪಿದಾಗ ಮತ್ತು ಕೆಳಗೆ ನೋಡಿದಾಗ, ಮೊದಲು ನೀವು ಆನಂದದಿಂದ ಮುಳುಗಿಹೋಗುತ್ತೀರಿ; ನಂತರ ಕರುಣೆಯು ನಿಮ್ಮನ್ನು ಆವರಿಸುತ್ತದೆ ಮತ್ತು ನೀವು ಅದನ್ನು ಹಂಚಿಕೊಳ್ಳಲು ಬಯಸುತ್ತೀರಿ. ಯಾವುದೇ ರೀತಿಯಲ್ಲಿ ಎಲ್ಲರೂ ಅದನ್ನು ಹೊಂದಿರಬೇಕೆಂದು ನೀವು ಬಯಸುತ್ತೀರಿ.
ಮಹಾಶಿವರಾತ್ರಿಯ ದಿನವೇ ಶಿವ-ಪಾರ್ವತಿಯ ವಿವಾಹವಾದ ದಿನ. ಆದಿಯೋಗಿ ಒಬ್ಬ ತಪಸ್ವಿಯಾಗಿದ್ದು, ಈ ದಿನದಂದು ಆತನಿಗೆ ಯಾವುದೇ ಬಂಧನದ ಭಯವಿಲ್ಲದ ಕಾರಣ ಅವನ ಪರಮ ನಿರ್ಲಿಪ್ತತೆಯು, ಭಾವೋದ್ರೇಕದ ಪ್ರಪಂಚಕ್ಕೆ ಸ್ಥಳಾಂತರಗೊಂಡಿತು / ಚಲಿಸಿತು; ಮತ್ತು ಈ ಭಾವೋದ್ರೇಕವು ಅವನ ಜ್ಞಾನ ಮತ್ತು ಗ್ರಹಿಕೆಯ ಆಳವನ್ನು ಹಂಚಿಕೊಳ್ಳಲು ಸಾಧನವಾಯಿತು.
ಪಾರ್ವತಿಯು ಜಗತ್ತನ್ನು ನೋಡಿ ಶಿವನಿಗೆ ಹೇಳಿದಳು, "ನೀವು ನನಗೆ ಕಲಿಸಿದ್ದು ನಿಜವಾಗಿಯೂ ಅದ್ಭುತವಾಗಿದೆ, ಇದು ಎಲ್ಲರನ್ನೂ ತಲುಪಬೇಕು. ಆದರೆ ನೀವು ನನಗೆ ಈ ಜ್ಞಾನವನ್ನು ನೀಡಿದ ರೀತಿಯಲ್ಲಿ, ಇಡೀ ಜಗತ್ತಿಗೆ ಈ ಜ್ಞಾನವನ್ನು ನೀಡಲು ಸಾಧ್ಯವಿಲ್ಲ ಎಂದು ನನಗೆ ಕಾಣುತ್ತಿದೆ. ಜಗತ್ತಿಗೆ ಇದನ್ನು ನೀಡಲು ನೀವು ಬೇರೊಂದು ವಿಧಾನವನ್ನು ರೂಪಿಸಬೇಕು." ಆಗ ಶಿವನು ಯೋಗ ಪದ್ಧತಿಯನ್ನು ಪ್ರತಿಪಾದಿಸಲು ಪ್ರಾರಂಭಿಸಿದನು. ಅವನು ಏಳು ಶಿಷ್ಯರನ್ನು ಆಯ್ಕೆ ಮಾಡಿದ. ಅವರನ್ನು ಈಗ ಸಪ್ತಋಷಿಗಳೆಂದು ಆಚರಿಸಲಾಗುತ್ತದೆ /ಕರೆಯಲಾಗುತ್ತದೆ. ಆ ಸಮಯದಿಂದ, ಯೋಗವು ಆತ್ಮಸಾಕ್ಷಾತ್ಕಾರದ ವಿಜ್ಞಾನವಾಗಿ ಪರಿವರ್ತನೆಗೊಂಡಿತು, ಎಲ್ಲರಿಗೂ ಕಲಿಸಲು ಸಾಧ್ಯವಾಗುವಂತೆ ಅದು ಪದ್ಧತಿಬದ್ಧ ಮತ್ತು ವೈಜ್ಞಾನಿಕವಾಯಿತು.
ಹೀಗೆ ಶಿವನು ಎರಡು ಪದ್ಧತಿಗಳನ್ನು ರೂಪಿಸಿದನು - ತಂತ್ರ ಮತ್ತು ಯೋಗ. ಅವನು ತನ್ನ ಪತ್ನಿ ಪಾರ್ವತಿಗೆ ತಂತ್ರವನ್ನು ಕಲಿಸಿದನು. ತಂತ್ರವು ಅತ್ಯಂತ ಆಂತರಿಕವಾದುದು /ನಿಕಟವಾದುದು, ಅತ್ಯಂತ ಚಿಕ್ಕ ಗುಂಪಿನ ಜನರಲ್ಲಿ ಮಾತ್ರ ಮಾಡಬಹುದು, ಆದರೆ ಯೋಗವನ್ನು ದೊಡ್ಡ ಗುಂಪಿನ ಜನರಿಗೆ ನೀಡಬಹುದು. ಇದು ನಮ್ಮ ಸುತ್ತಲಿನ ಜಗತ್ತಿಗೆ, ವಿಶೇಷವಾಗಿ ಇಂದಿನ ಕಾಲಕ್ಕೆ ಹೆಚ್ಚು ಸೂಕ್ತವಾಗಿದೆ. ಆದ್ದರಿಂದ ಇಂದಿಗೂ ಶಿವನನ್ನು ಯೋಗದ ಮೊದಲ ಗುರು ಅಥವಾ ಆದಿ ಗುರು ಎಂದು ಪರಿಗಣಿಸಲಾಗುತ್ತದೆ.