logo
logo

ಮನೆಯಲ್ಲಿ ಮಹಾಶಿವರಾತ್ರಿ

ಮಹಾಶಿವರಾತ್ರಿಯ ಸಮಯದಲ್ಲಿ ಈಶಾ ಯೋಗ ಕೇಂದ್ರಕ್ಕೆ ಬರಲು ಸಾಧ್ಯವಾಗದವರು, ಕೆಳಗಿನ ವಿಧಾನಗಳ ಮೂಲಕ ಈ ಅವಕಾಶವನ್ನು ಉಪಯೋಗಿಸಬಹುದು.

ರಾತ್ರಿಯಿಡೀ ನಿಮ್ಮ ಬೆನ್ನೆಲುಬನ್ನು ನೇರವಾಗಿ ಇಟ್ಟುಕೊಂಡು ಎಚ್ಚರವಾಗಿ, ಜಾಗರಣೆ ಮತ್ತು ಜಾಗೃತಿಯಿಂದ ಕುಳಿತುಕೊಳ್ಳುವುದು ಅತ್ಯಂತ ಲಾಭದಾಯಕವಾಗಿದೆ.

ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು, ನೀವು ಸದ್ಗುರುಗಳ ಚಿತ್ರವನ್ನು ಇಟ್ಟು , ದೀಪ ಹಚ್ಚಿ, ಹೂವುಗಳನ್ನು ಅರ್ಪಿಸಿ, ಧೂಪವನ್ನು ಹಚ್ಚಬಹುದು.

ನೀವು ಭಕ್ತಿಗೀತೆಯನ್ನು ಪಠಿಸಬಹುದು, ಹಾಡಬಹುದು ಅಥವಾ ಕೇಳಬಹುದು.

ಒಬ್ಬರೆ ಇದ್ದರೆ, ಒಡಾಡುವುದು ಅಥವಾ ಪ್ರಕೃತಿಯೊಂದಿಗೆ ಇರುವುದು ಒಳ್ಳೆಯದು. ನೀವು ಗುಂಪಿನಲ್ಲಿದ್ದರೆ ಸಾಧ್ಯವಾದಷ್ಟು ಮೌನವಾಗಿರುವುದು ಉತ್ತಮ.

ಮಧ್ಯರಾತ್ರಿಯ ಸಾಧನಾವನ್ನು ಈ ಕೆಳಗಿನಂತೆ ಮಾಡಬಹುದು:

ರಾತ್ರಿ 11:10 ರಿಂದ 11:30 ರವರೆಗೆ - ನಾಡಿ ಶುದ್ಧಿ

ರಾತ್ರಿ 11:30 ರಿಂದ 11:50 ರವರೆಗೆ - ಆಮ್ ಪಠಣೆ

ರಾತ್ರಿ 11:50 ರಿಂದ 12:10 ರವರೆಗೆ - " ಆಮ್ ನಮಃ ಶಿವಾಯ" ಪಠಣೆ

ನೀವು ನೇರ ಪ್ರಸಾರ ಅಥವಾ ವೆಬ್‌ಕಾಸ್ಟ್ ಮೂಲಕ ಆಚರಣೆಗಳನ್ನು ಅನುಸರಿಸುತ್ತಿದ್ದರೆ, ಅಲ್ಲಿ ನೀಡಲಾದ ಧ್ಯಾನದ ಸೂಚನೆಗಳನ್ನು ಅನುಸರಿಸಬಹುದು.

ಮಧ್ಯರಾತ್ರಿ ಧ್ಯಾನ

ಮಧ್ಯರಾತ್ರಿಯಲ್ಲಿ, ಸದ್ಗುರುಗಳು ಅಲ್ಲಿ ನೆರೆದಿದ್ದ ಇಡೀ ಜನಸಮೂಹವನ್ನು ಅತ್ಯಂತ ಶಕ್ತಿಯುತವಾದ ಧ್ಯಾನಕ್ಕೆ ದೀಕ್ಷೆ ನೀಡುತ್ತಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಕಾದಿರುವುದು ಇದಕ್ಕಾಗಿಯೆ. ನಿಮ್ಮ ಸಮಯ ವಲಯದಲ್ಲಿ (ಮಧ್ಯರಾತ್ರಿಯ 20 ನಿಮಿಷಗಳ ಮೊದಲು ಪ್ರಾರಂಭಿಸಿ) ಮಧ್ಯರಾತ್ರಿಯ ಧ್ಯಾನವನ್ನು ಮಾಡಲು ಸದ್ಗುರುಗಳು ಹೇಳುತ್ತಾರೆ.

ನೀವು ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು

ಶಕ್ತಿಯುತ ಮಂತ್ರ ಪಠಣೆ

ಪ್ರಬುದ್ಧ ಗುರುವಿನ ಸಮ್ಮುಖದಲ್ಲಿ ಒಂದು ಸಣ್ಣ ಮಂತ್ರವೂ ನಮ್ಮನ್ನು ಪರಿವರ್ತಿಸುವ ಪ್ರಬಲ ಪ್ರಕ್ರಿಯೆಯಾಗುತ್ತದೆ. ಈ ಮಹಾಶಿವರಾತ್ರಿ, ಸದ್ಗುರುಗಳ ಈ ಮಾರ್ಗದರ್ಶಿ ಧ್ಯಾನದಲ್ಲಿ ಭಾಗವಹಿಸಲು ವೆಬ್‌ನಲ್ಲಿ ಲೈವ್ ಆಗಿ ನಮ್ಮೊಂದಿಗೆ ಸೇರಿಕೊಳ್ಳಿ.