logo
logo
Picture of the Dhyanalinga surrounded by lights

ಶಿವ ಲಿಂಗ - ನಿಮಗೆ ತಿಳಿಯದೇ ಇರಬಹುದಾದ 12 ವಿಷಯಗಳು

ಲಿಂಗ ಎಂಬ ಪದದ ಅರ್ಥ "ರೂಪ." ನಾವು ಇದನ್ನು "ರೂಪ" ಎಂದು ಕರೆಯುತ್ತಿರುವುದು ಏಕೆಂದರೆ ವ್ಯಕ್ತವಾಗದ್ದು ವ್ಯಕ್ತವಾಗಲು ಪ್ರಾರಂಭಿಸಿದಾಗ, ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸೃಷ್ಟಿ ಆರಂಭವಾದಾಗ, ಅದು ತಾಳಿದ ಮೊದಲ ರೂಪವು ದೀರ್ಘವೃತ್ತಾಕಾರವಾಗಿತ್ತು.

1. ಮೊದಲ ಮತ್ತು ಅಂತಿಮ ರೂಪ

ಸದ್ಗುರು: ಲಿಂಗ ಎಂಬ ಪದದ ಅರ್ಥ "ರೂಪ." ನಾವು ಇದನ್ನು "ರೂಪ" ಎಂದು ಕರೆಯುತ್ತಿರುವುದು ಏಕೆಂದರೆ ವ್ಯಕ್ತವಾಗದ್ದು ವ್ಯಕ್ತವಾಗಲು ಪ್ರಾರಂಭಿಸಿದಾಗ, ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸೃಷ್ಟಿ ಆರಂಭವಾದಾಗ, ಅದು ತಾಳಿದ ಮೊದಲ ರೂಪವು ದೀರ್ಘವೃತ್ತಾಕಾರವಾಗಿತ್ತು. ಪರಿಪೂರ್ಣ ದೀರ್ಘವೃತ್ತಾಕಾರವನ್ನು ನಾವು ಲಿಂಗ ಎಂದು ಕರೆಯುತ್ತೇವೆ. ಸೃಷ್ಟಿಯು ಯಾವಾಗಲೂ ದೀರ್ಘವೃತ್ತಾಕಾರ ಅಥವಾ ಲಿಂಗದಿಂದ ಪ್ರಾರಂಭವಾಗಿ, ನಂತರ ಅನೇಕ ವಿಷಯಗಳಾಗಿ ಮಾರ್ಪಾಡಾಯಿತು. ಮತ್ತು ನಮ್ಮ ಅನುಭವದಿಂದ ನಮಗೆ ತಿಳಿದಿರುವಂತೆ, ನೀವು ಆಳವಾದ ಧ್ಯಾನಸ್ಥಿತಿಯನ್ನು ತಲುಪಿದಾಗ, ಸಂಪೂರ್ಣ ವಿಲೀನತೆಯ ಬಿಂದುವು ಬರುವ ಮೊದಲು, ಮತ್ತೆ ಶಕ್ತಿಯು ದೀರ್ಘವೃತ್ತಾಕಾರ ಅಥವಾ ಲಿಂಗದ ರೂಪವನ್ನು ತಾಳುತ್ತದೆ. ಹೀಗಾಗಿ, ಮೊದಲ ರೂಪವು ಲಿಂಗ ಮತ್ತು ಅಂತಿಮ ರೂಪವೂ ಲಿಂಗ.

ಲಿಂಗ

ನೀನು ಚೊಚ್ಚಲು
ಬ್ರಹ್ಮಾಂಡದ ಶೂನ್ಯತೆಯ ಮೊದಲ ಅಭಿವ್ಯಕ್ತಿ

ಜ್ಞಾನಿಗಳು ನಿನ್ನನ್ನು ಶೋಧಿಸಿದರು
ಈ ಜೀವಂತ ತುಂಟತನದ ಮೂಲವೆಂದು

ನೀನು ಎಲ್ಲ ದುಃಖ ಮತ್ತು ಸುಖದ ಮೂಲ
ನೀನು ಕನಿಷ್ಠ ಮತ್ತು ಶ್ರೇಷ್ಠ

ಆಹಾ, ನೀನಾಡುವ ಆಟ
ನೀನು ಮೂಲವಾಗಿರುವ ಅಸಂಖ್ಯಾತ ರೂಪಗಳು
ಇದೂ ಅಲ್ಲ ಅದೂ ಅಲ್ಲ

ನಾನು ಸೃಷ್ಟಿಯಲ್ಲಿ ಹುಳುವಿನಂತೆ ಹರಿದೆ
ನಿನ್ನನ್ನು ಮತ್ತು ನನ್ನನ್ನು ಕಂಡುಕೊಳ್ಳಲು

ಓ ಈಶಾನ, ಅತ್ಯಂತ ವೈಭವಯುತ ರೂಪ
ನಿನ್ನ ನೆಲೆಯಾಗಿರಲು ಈಶವು ಧನ್ಯ

– ಸದ್ಗುರು

2. ಲಿಂಗ ಪ್ರತಿಷ್ಠಾಪನೆ

"ಅಗತ್ಯವಾದ ತಂತ್ರಜ್ಞಾನದೊಂದಿಗೆ, ಒಂದು ಸಾಮಾನ್ಯ ಸ್ಥಳವನ್ನು, ಒಂದು ಕಲ್ಲನ್ನೂ ಕೂಡ ದೈವೀಕವನ್ನಾಗಿಸಬಹುದು. ಇದೇ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆ." - ಸದ್ಗುರು

ಸದ್ಗುರು: ನೀವು ನನಗೆ ಯಾವುದೇ ವಸ್ತುವನ್ನು ಕೊಟ್ಟರೆ, ಉದಾಹರಣೆಗೆ ಒಂದು ಕಾಗದದ ತುಂಡು, ನಾನು ಅದನ್ನು ಅತ್ಯಂತ ಶಕ್ತಿಯುತವಾಗಿಸಿ ನಿಮಗೆ ಕೊಡಬಹುದು. ನಾನು ಮುಟ್ಟುವ ಮೊದಲು ಮತ್ತು ನಂತರ ನೀವು ಅದನ್ನು ಹಿಡಿದರೆ, ವ್ಯತ್ಯಾಸವನ್ನು ಅನುಭವಿಸುತ್ತೀರಿ, ಆದರೆ ಕಾಗದವು ಈ ಶಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ನೀವು ಪರಿಪೂರ್ಣ ಲಿಂಗ ರೂಪವನ್ನು ಸೃಷ್ಟಿಸಿದರೆ, ಅದು ಶಾಶ್ವತ ಶಕ್ತಿಯ ಭಂಡಾರವಾಗುತ್ತದೆ. ಒಮ್ಮೆ ನೀವು ಅದಕ್ಕೆ ಶಕ್ತಿಯನ್ನು ತುಂಬಿದರೆ, ಅದು ಯಾವಾಗಲೂ ಹಾಗೆಯೇ ಉಳಿಯುತ್ತದೆ.

ಪ್ರಾಣ ಪ್ರತಿಷ್ಠೆ

ಪ್ರತಿಷ್ಠಾಪನೆ ಎಂದರೆ ಒಂದು ಶಕ್ತಿರೂಪವನ್ನು ನೆಲೆಗೊಳಿಸುವುದು. ಪ್ರತಿಷ್ಠಾಪನೆಯ ಅತ್ಯಂತ ಸಾಮಾನ್ಯ ರೂಪವೆಂದರೆ ಮಂತ್ರಗಳು, ಪೂಜಾ ವಿಧಿಗಳು ಮತ್ತು ಇತರ ರೀತಿಯ ಪ್ರಕ್ರಿಯೆಗಳನ್ನು ಬಳಸುವುದು. ನೀವು ಒಂದು ರೂಪವನ್ನು ಮಂತ್ರಗಳ ಮೂಲಕ ಪ್ರತಿಷ್ಠಾಪಿಸಿದರೆ, ದೇವತೆಯನ್ನು ಜೀವಂತವಾಗಿಡಲು ನಿರಂತರ ನಿರ್ವಹಣೆ ಮತ್ತು ಪೂಜಾ ವಿಧಿಗಳ ಅಗತ್ಯವಿರುತ್ತದೆ.

ಪ್ರಾಣ ಪ್ರತಿಷ್ಠೆ ಹಾಗಲ್ಲ. ಒಮ್ಮೆ ಒಂದು ರೂಪವನ್ನು ಮಂತ್ರಗಳು ಅಥವಾ ಪೂಜಾ ವಿಧಿಗಳಿಂದಲ್ಲದೇ ಜೀವ ಶಕ್ತಿಗಳ ಮೂಲಕ ಪ್ರತಿಷ್ಠಾಪಿಸಿದರೆ, ಅದು ಶಾಶ್ವತವಾಗಿರುತ್ತದೆ ಮತ್ತು ಯಾವುದೇ ನಿರ್ವಹಣೆಯ ಅಗತ್ಯವಿರುವುದಿಲ್ಲ. ಅದಕ್ಕಾಗಿಯೇ ಧ್ಯಾನಲಿಂಗದಲ್ಲಿ ಯಾವುದೇ ಪೂಜೆಗಳಿಲ್ಲ; ಅದಕ್ಕೆ ಆ ನಿರ್ವಹಣೆಯ ಅಗತ್ಯವಿಲ್ಲ. ಅದು ಪ್ರಾಣ ಪ್ರತಿಷ್ಠೆಯಿಂದ ಪ್ರತಿಷ್ಠಾಪಿಸಲ್ಪಟ್ಟಿದೆ. ಅದು ಯಾವಾಗಲೂ ಹಾಗೆಯೇ ಇರುತ್ತದೆ. ನೀವು ಲಿಂಗದ ಕಲ್ಲಿನ ಭಾಗವನ್ನು ತೆಗೆದುಹಾಕಿದರೂ ಸಹ, ಅದು ಹಾಗೆಯೇ ಇರುತ್ತದೆ. ಇಡೀ ಜಗತ್ತೇ ಕೊನೆಗೊಂಡರೂ, ಆ ರೂಪವು ಹಾಗೆಯೇ ಉಳಿಯುತ್ತದೆ.

3. ಲಿಂಗ ನಿರ್ಮಾಣ - ಒಂದು ವ್ಯಕ್ತಿಗತ ವಿಜ್ಞಾನ

ಸದ್ಗುರು: ಲಿಂಗ ನಿರ್ಮಾಣದ ವಿಜ್ಞಾನವು ದೊಡ್ಡ ಅನುಭವಾತ್ಮಕ ಸಾಧ್ಯತೆಯಾಗಿದೆ, ಮತ್ತು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಆದರೆ ಕಳೆದ ಎಂಟು ಅಥವಾ ಒಂಬತ್ತು ನೂರು ವರ್ಷಗಳಲ್ಲಿ, ವಿಶೇಷವಾಗಿ ಭಕ್ತಿ ಚಳುವಳಿಯು ದೇಶವನ್ನು ಆವರಿಸಿದಾಗ, ದೇವಾಲಯ ನಿರ್ಮಾಣದ ವಿಜ್ಞಾನವು ಕೊಚ್ಚಿಹೋಯಿತು. ಒಬ್ಬ ಭಕ್ತನಿಗೆ, ಅವನ ಭಾವನೆಯ ಹೊರತು ಬೇರೇನೂ ಮುಖ್ಯವಲ್ಲ. ಅವನ ಮಾರ್ಗವು ಭಾವನೆ. ಅವನು ಎಲ್ಲವನ್ನೂ ಮಾಡುವುದು ಕೇವಲ ತನ್ನ ಭಾವನೆಯ ಶಕ್ತಿಯಿಂದ. ಆದ್ದರಿಂದ ಅವರು ವಿಜ್ಞಾನವನ್ನು ಬದಿಗಿರಿಸಿ ತಮಗೆ ಇಷ್ಟ ಬಂದ ಹಾಗೆ ದೇವಾಲಯಗಳನ್ನು ಕಟ್ಟಲು ಪ್ರಾರಂಭಿಸಿದರು. ಅದು ಒಂದು ಪ್ರೇಮ ವ್ಯವಹಾರ, ಗೊತ್ತೇ? ಭಕ್ತನು ತನಗೆ ಇಷ್ಟ ಬಂದದ್ದನ್ನು ಮಾಡಬಹುದು. ಅವನಿಗೆ ಎಲ್ಲವೂ ಸರಿ ಏಕೆಂದರೆ ಅವನಲ್ಲಿರುವ ಏಕೈಕ ಶಕ್ತಿ ಅವನ ಭಾವನೆ. ಇದರಿಂದಾಗಿ, ಲಿಂಗಗಳನ್ನು ನಿರ್ಮಿಸುವ ವಿಜ್ಞಾನವು ಹಿಂದೆ ಸರಿಯಿತು. ಇಲ್ಲದಿದ್ದರೆ, ಅದು ಬಹಳ ಆಳವಾದ ವಿಜ್ಞಾನವಾಗಿತ್ತು. ಇದು ಅತ್ಯಂತ ವ್ಯಕ್ತಿಗತ ವಿಜ್ಞಾನ, ಮತ್ತು ಅದನ್ನು ಎಂದಿಗೂ ಬರೆದಿಡಲಿಲ್ಲ ಏಕೆಂದರೆ ನೀವು ಅದನ್ನು ಬರೆದಿಟ್ಟರೆ, ಅದು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲ್ಪಡುತ್ತದೆ. ಹೀಗೆ ಅನೇಕ ಲಿಂಗಗಳನ್ನು ವಿಜ್ಞಾನದ ಜ್ಞಾನವಿಲ್ಲದೆ ನಿರ್ಮಿಸಲಾಗಿದೆ.

4. ಪಂಚ ಭೂತ ಸ್ಥಳಗಳ ಲಿಂಗಗಳು

ಸದ್ಗುರು: ಯೋಗದಲ್ಲಿ ಅತ್ಯಂತ ಮೂಲಭೂತ ಸಾಧನೆಯೆಂದರೆ ಭೂತ ಶುದ್ಧಿ. ಪಂಚ ಭೂತಗಳು ಪ್ರಕೃತಿಯಲ್ಲಿರುವ ಐದು ಮೂಲಾಂಶಗಳು. ನಿಮ್ಮನ್ನು ನೀವು ಸರಿಯಾಗಿ ಗಮನಿಸಿದರೆ, ನಿಮ್ಮ ಭೌತಿಕ ದೇಹವು ಐದು ಅಂಶಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶ. ಅವುಗಳು ನಿರ್ದಿಷ್ಟ ರೀತಿಯಲ್ಲಿ ಒಟ್ಟುಗೂಡಿ ದೇಹವಾಗುತ್ತವೆ. ಆಧ್ಯಾತ್ಮಿಕ ಪ್ರಕ್ರಿಯೆಯು ಭೌತಿಕ ಮತ್ತು ಐದು ಅಂಶಗಳನ್ನು ಮೀರಿ ಹೋಗುವುದರ ಕುರಿತಾಗಿದೆ. ಈ ಅಂಶಗಳು ನೀವು ಅನುಭವಿಸುವ ಪ್ರತಿಯೊಂದರ ಮೇಲೆ ದೊಡ್ಡ ಹಿಡಿತವನ್ನು ಹೊಂದಿವೆ. ಅವುಗಳನ್ನು ಮೀರಲು, ಯೋಗದ ಮೂಲಭೂತ ಅಭ್ಯಾಸವು ಭೂತ ಶುದ್ಧಿ ಎಂಬುದನ್ನು ಒಳಗೊಂಡಿದೆ. ಇಲ್ಲಿ ಒಳಗೊಂಡಿರುವ ಪ್ರತಿಯೊಂದು ಅಂಶಕ್ಕೂ, ಅದರಿಂದ ಮುಕ್ತರಾಗಲು ನೀವು ಮಾಡಬಹುದಾದ ನಿರ್ದಿಷ್ಟ ಅಭ್ಯಾಸವಿದೆ.

ದಕ್ಷಿಣ ಭಾರತದಲ್ಲಿ, ಐದು ಭವ್ಯ ದೇವಾಲಯಗಳನ್ನು ನಿರ್ಮಿಸಲಾಯಿತು, ಪ್ರತಿಯೊಂದರಲ್ಲೂ ಪಂಚ ಭೂತಗಳಲ್ಲಿ ಒಂದನ್ನು ಪ್ರತಿನಿಧಿಸುವ ಲಿಂಗವಿದೆ. ನೀವು ಜಲ ತತ್ವಕ್ಕಾಗಿ ಸಾಧನೆ ಮಾಡಬೇಕೆಂದರೆ, ತಿರುವನೈಕಾವಲ್‌ಗೆ ಹೋಗುತ್ತೀರಿ. ಆಕಾಶಕ್ಕಾಗಿ, ಚಿದಂಬರಂಗೆ; ವಾಯುವಿಗಾಗಿ, ಕಾಳಹಸ್ತಿಗೆ; ಭೂಮಿಗಾಗಿ, ಕಾಂಚೀಪುರಕ್ಕೆ ಮತ್ತು ಅಗ್ನಿಗಾಗಿ, ತಿರುವಣ್ಣಾಮಲೈಗೆ ಹೋಗುತ್ತೀರಿ.

ಈ ದೇವಾಲಯಗಳನ್ನು ಪೂಜೆಗಾಗಿ ಅಲ್ಲ, ಸಾಧನೆಯ ಸ್ಥಳಗಳಾಗಿ ನಿರ್ಮಿಸಲಾಗಿದೆ.

5. ಜ್ಯೋತಿರ್ಲಿಂಗಗಳು

ಸದ್ಗುರು: ಭಾರತೀಯ ಸಂಸ್ಕೃತಿಯು ಭೂಮಿಯ ಮೇಲಿನ ಅತ್ಯಲ್ಪ ಸಂಸ್ಕೃತಿಗಳಲ್ಲಿ ಒಂದಾಗಿದ್ದು, ಇಲ್ಲಿ ಸಾವಿರಾರು ವರ್ಷಗಳಿಂದ ಇಡೀ ಜನಸಂಖ್ಯೆಯು ಮಾನವನ ಪರಮ ಯೋಗಕ್ಷೇಮದ ಮೇಲೆ ಮಾತ್ರ ಕೇಂದ್ರೀಕೃತವಾಗಿತ್ತು. ನೀವು ಭಾರತದಲ್ಲಿ ಹುಟ್ಟಿದ ಕ್ಷಣದಿಂದಲೇ, ನಿಮ್ಮ ಜೀವನವು ನಿಮ್ಮ ವ್ಯಾಪಾರ, ನಿಮ್ಮ ಪತ್ನಿ, ನಿಮ್ಮ ಪತಿ ಅಥವಾ ನಿಮ್ಮ ಕುಟುಂಬದ ಬಗ್ಗೆ ಇರಲಿಲ್ಲ; ನಿಮ್ಮ ಜೀವನವು ಕೇವಲ ಮುಕ್ತಿಯ ಬಗ್ಗೆ ಮಾತ್ರ ಇತ್ತು. ಇಡೀ ಸಮಾಜವು ಹೀಗೆ ರಚಿತವಾಗಿತ್ತು.

ಈ ಪ್ರಸಂಗದಲ್ಲಿ, ಈ ಸಂಸ್ಕೃತಿಯಲ್ಲಿ ಅನೇಕ ರೀತಿಯ ಶಕ್ತಿಯುತ ಸಾಧನಗಳನ್ನು ಸೃಷ್ಟಿಸಲಾಯಿತು. ಜ್ಯೋತಿರ್ಲಿಂಗಗಳನ್ನು ಈ ದಿಕ್ಕಿನಲ್ಲಿ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿ ಸೃಷ್ಟಿಸಲಾಯಿತು. ಅಂತಹ ರೂಪಗಳ ಸಾನ್ನಿಧ್ಯದಲ್ಲಿರುವುದು ಒಂದು ಶಕ್ತಿಯುತ ಅನುಭವ.

ಜ್ಯೋತಿರ್ಲಿಂಗಗಳು ಅಪಾರ ಶಕ್ತಿಯನ್ನು ಹೊಂದಿವೆ ಏಕೆಂದರೆ ಅವುಗಳನ್ನು ಕೇವಲ ಮಾನವ ಸಾಮರ್ಥ್ಯವನ್ನು ಬಳಸಿ ಮಾತ್ರವಲ್ಲದೆ, ಪ್ರಕೃತಿಯ ಶಕ್ತಿಗಳನ್ನು ಬಳಸಿ ನಿರ್ದಿಷ್ಟ ರೀತಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಮತ್ತು ಸೃಷ್ಟಿಸಲಾಗಿದೆ. ಕೇವಲ ಹನ್ನೆರಡು ಜ್ಯೋತಿರ್ಲಿಂಗಗಳಿವೆ. ಅವುಗಳು ನಿರ್ದಿಷ್ಟ ಭೌಗೋಳಿಕ ಮತ್ತು ಖಗೋಳೀಯವಾಗಿ ಮಹತ್ವದ ಬಿಂದುಗಳಲ್ಲಿ ನೆಲೆಗೊಂಡಿವೆ. ಈ ಬಿಂದುಗಳು ಅಸ್ತಿತ್ವದಲ್ಲಿರುವ ನಿರ್ದಿಷ್ಟ ಶಕ್ತಿಗಳಿಗೆ ಒಳಪಟ್ಟಿವೆ. ಬಹಳ ಹಿಂದೆ, ನಿರ್ದಿಷ್ಟ ಮಟ್ಟದ ಗ್ರಹಿಕೆಯನ್ನು ಹೊಂದಿದ ಜನರು ಈ ಸ್ಥಳಗಳನ್ನು ಬಹಳ ಎಚ್ಚರಿಕೆಯಿಂದ ಅಳೆದು, ಖಗೋಳೀಯ ಚಲನೆಗೆ ಅನುಗುಣವಾಗಿ ಆ ಬಿಂದುಗಳನ್ನು ನಿಗದಿಪಡಿಸಿದರು.

ಕೆಲವು ಜ್ಯೋತಿರ್ಲಿಂಗಗಳು ಇನ್ನು "ಜೀವಂತ"ವಾಗಿಲ್ಲ, ಆದರೆ ಅವುಗಳಲ್ಲಿ ಅನೇಕವು ಇನ್ನೂ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿ ಉಳಿದಿವೆ.

6. ಮಹಾಕಾಲ - ಅಂತಿಮ ಕಾಲ ಯಂತ್ರ

ಸದ್ಗುರು: ಶಿ-ವ ಎಂದರೆ ಅಕ್ಷರಶಃ "ಅಸ್ತಿತ್ವದಲ್ಲಿಲ್ಲದ್ದು" ಅಥವಾ ಯಾವುದೂ-ಅಲ್ಲದ್ದು. ಅಡ್ಡಗೆರೆ ಮುಖ್ಯವಾದದ್ದು. ವಿಶಾಲವಾದ ಶೂನ್ಯತೆಯ ಮಡಿಲಲ್ಲಿ ಸೃಷ್ಟಿ ನಡೆಯಿತು. ಪರಮಾಣು ಮತ್ತು ಬ್ರಹ್ಮಾಂಡದ ಶೇಕಡಾ 99ರಷ್ಟು ಭಾಗ ವಾಸ್ತವವಾಗಿ ಖಾಲಿ ಜಾಗ - ಕೇವಲ ಯಾವುದೂ-ಅಲ್ಲದ್ದು. ಕಾಲ ಎಂಬ ಒಂದೇ ಪದವನ್ನು ಸಮಯ ಮತ್ತು ಆಕಾಶ  ಎರಡಕ್ಕೂ ಬಳಸಲಾಗುತ್ತದೆ ಮತ್ತು ಶಿವನ ರೂಪಗಳಲ್ಲಿ ಒಂದು ಕಾಲ ಭೈರವ. ಕಾಲ ಭೈರವನು ಕತ್ತಲೆಯ ಚೈತನ್ಯಮಯ ಸ್ಥಿತಿಯಾಗಿದ್ದಾನೆ, ಆದರೆ ಅವನು ಸಂಪೂರ್ಣವಾಗಿ ನಿಶ್ಚಲನಾದಾಗ, ಅವನು ಮಹಾಕಾಲನಾಗುತ್ತಾನೆ, ಅಂತಿಮ ಕಾಲ ಯಂತ್ರವಾಗುತ್ತಾನೆ.

ಉಜ್ಜಯಿನಿಯ ಮಹಾಕಾಲ ದೇವಾಲಯವು ಅದ್ಭುತವಾಗಿ ಪ್ರತಿಷ್ಠಾಪಿಸಲ್ಪಟ್ಟ ಸ್ಥಳವಾಗಿದೆ, ಈ ಶಕ್ತಿಶಾಲಿ ಅಭಿವ್ಯಕ್ತಿ ಖಂಡಿತವಾಗಿಯೂ ದುರ್ಬಲ ಹೃದಯಿಗಳಿಗಾಗಿ ಅಲ್ಲ. ಒರಟಾಗಿ ಮತ್ತು ಬಲಶಾಲಿಯಾಗಿ, ಇದು ಅಂತಿಮ ವಿಲೀನತೆಯನ್ನು ಹುಡುಕುವವರಿಗೆ ಲಭ್ಯವಿದೆ - ನಮಗೆ ತಿಳಿದಿರುವಂತೆ ಕಾಲದ ನಾಶ.

ಜಗತ್ತಿನ ಯಾವುದೇ ಕಡೆಯಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಯು ಯಾವಾಗಲೂ ಭೌತಿಕವನ್ನು ಮೀರುವುದರ ಬಗ್ಗೆ ಆಗಿದೆ, ಏಕೆಂದರೆ ರೂಪವು ಚಕ್ರಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಕಾಲ ಭೈರವನನ್ನು ಅಜ್ಞಾನದ ನಾಶಕನಾಗಿ ನೋಡಲಾಗುತ್ತದೆ: ಜನನ ಮತ್ತು ಮರಣ, ಅಸ್ತಿತ್ವ ಮತ್ತು ಅನಸ್ತಿತ್ವದ ಅನಿವಾರ್ಯ ಚಕ್ರಗಳನ್ನು ಒಡೆಯುವವನು.

7. ವಿಶ್ವದಾದ್ಯಂತ ಲಿಂಗಗಳು

ಸದ್ಗುರು: ಅಸೀಮಿತ ಆಯಾಮದ ಅರ್ಥದಲ್ಲಿ, ಅಥವಾ ಭೌತಿಕ ಸ್ವರೂಪಕ್ಕಿಂತ ಮೀರಿದ ಏನನ್ನಾದರೂ ಹೇಳುವಾಗ, ಶಿವನ ಬಗ್ಗೆ ಮಾತನಾಡದ ಜ್ಞಾನಿ ಯಾರೂ ಇರಲಿಲ್ಲ. ಏಕೈಕ ವ್ಯತ್ಯಾಸವೆಂದರೆ ಅವರು ತಮ್ಮ ಪ್ರದೇಶದ ಭಾಷೆ ಮತ್ತು ಸಂಕೇತಗಳಲ್ಲಿ ಅದನ್ನು ವ್ಯಕ್ತಪಡಿಸಿರಬಹುದು.

ಆದರೆ, ಕಳೆದ 1500 ವರ್ಷಗಳಲ್ಲಿ ಜಗತ್ತಿನಾದ್ಯಂತ ಧರ್ಮವನ್ನು ಹರಡುವ ಅತ್ಯಂತ ಆಕ್ರಮಣಕಾರಿ ವಿಧಾನಗಳ ಕಾರಣ, ಪ್ರಾಚೀನ ಮೆಸೊಪೊಟೇಮಿಯನ್ ನಾಗರಿಕತೆ, ಮಧ್ಯ ಏಷ್ಯಾದ ನಾಗರಿಕತೆಗಳು ಮತ್ತು ಉತ್ತರ ಆಫ್ರಿಕಾದ ನಾಗರಿಕತೆಗಳಂತಹ ಹಿಂದಿನ ಮಹಾನ್ ಸಂಸ್ಕೃತಿಗಳು ಅಳಿದುಹೋಗಿವೆ. ಆದ್ದರಿಂದ ಇದು ಈಗ ಅಷ್ಟು ಗೋಚರವಾಗುತ್ತಿಲ್ಲ, ಆದರೆ ಇತಿಹಾಸದ ಆಳಕ್ಕೆ ನೋಡಿದರೆ, ಇದು ಎಲ್ಲೆಡೆ ಇತ್ತು. ಹೀಗಾಗಿ, ಯಾವುದೋ ರೀತಿಯಲ್ಲಿ, ರಹಸ್ಯಮಯ ವಿಜ್ಞಾನಗಳು ಪ್ರತಿಯೊಂದು ಸಂಸ್ಕೃತಿಯಲ್ಲೂ ಇದ್ದವು. ಆದರೆ ಕಳೆದ 1500 ವರ್ಷಗಳಲ್ಲಿ, ಜಗತ್ತಿನ ಇತರ ಭಾಗಗಳಲ್ಲಿ ಅವು ಬಹುತೇಕ ನಾಶವಾದವು.

8. ಲಿಂಗಗಳು ವಿಭಿನ್ನ ವಸ್ತುಗಳಿಂದ ಮಾಡಲ್ಪಟ್ಟಿವೆ

ನೈಸರ್ಗಿಕವಾಗಿ ರೂಪುಗೊಂಡ ಲಿಂಗಗಳನ್ನು ಸ್ವ-ಉತ್ಪತ್ತಿ ಅಥವಾ ಸ್ವಯಂಭೂ-ಲಿಂಗಗಳು ಎಂದು ಕರೆಯಲಾಗುತ್ತದೆ. ಉತ್ತರದ ಜಮ್ಮು ರಾಜ್ಯದ ಅಮರನಾಥದಲ್ಲಿ ಒಂದು ಗುಹೆ ಇದೆ. ಗುಹೆಯ ಒಳಗೆ, ಪ್ರತಿ ವರ್ಷ ಮಂಜುಗಡ್ಡೆಯಿಂದ ಶಿವಲಿಂಗವು ರೂಪುಗೊಳ್ಳುತ್ತದೆ. ಗುಹೆಯ ಮೇಲ್ಭಾಗದಿಂದ ಸೋರುವ ಸ್ಟಾಲಗ್ಮೈಟ್‌ನಿಂದ ಲಿಂಗವು ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಗುಹೆಯ ಮೇಲ್ಭಾಗದಿಂದ ನೀರಿನ ಹನಿಗಳು ನಿಧಾನವಾಗಿ ಸೋರಿ ಬೀಳುವಾಗ ಮಂಜುಗಡ್ಡೆಯಾಗಿ ಮಾರ್ಪಡುವುದನ್ನು ನೋಡುವುದು ಅದ್ಭುತವಾಗಿರುತ್ತದೆ.

ಕೆಲವು ಲಿಂಗಗಳನ್ನು ಬಂಡೆ, ಮರ, ಅಥವಾ ರತ್ನಗಳಿಂದ ಕೆತ್ತಲಾಗಿದೆ; ಇನ್ನು ಕೆಲವನ್ನು ಮಣ್ಣು, ಮರಳು ಅಥವಾ ಲೋಹದಿಂದ ರೂಪಿಸಲಾಗಿದೆ. ಇವುಗಳನ್ನು ಪ್ರತಿಷ್ಠಿತ-ಲಿಂಗಗಳು ಎಂದು ಕರೆಯಲಾಗುತ್ತದೆ. ಅನೇಕ ಲಿಂಗಗಳನ್ನು ಲೋಹದ ಹೊದಿಕೆಯಿಂದ ಮುಚ್ಚಲಾಗಿದೆ ಮತ್ತು ಭಕ್ತರಿಗೆ ಉತ್ತಮವಾಗಿ ಪ್ರಸ್ತುತವಾಗಲು ಮುಖವನ್ನು ನೀಡಲಾಗಿದೆ. ಇವುಗಳನ್ನು ಮುಖಲಿಂಗಗಳು ಎಂದು ಕರೆಯಲಾಗುತ್ತದೆ. ಕೆಲವು ಲಿಂಗಗಳ ಮೇಲ್ಮೈಯಲ್ಲಿ ಶಿವನ ಸಂಪೂರ್ಣ ಪ್ರತಿಮೆಯನ್ನು ಕೆತ್ತಲಾಗಿದೆ.

ಲಿಂಗಗಳು ಪುರುಷ ಮತ್ತು ಸ್ತ್ರೀ ತತ್ವಗಳ ಸಂಯೋಗವನ್ನು ಪ್ರತಿನಿಧಿಸುತ್ತವೆ. ಸ್ತ್ರೀ ತತ್ವದ ಪೀಠವನ್ನು ಗೌರಿಪೀಠ ಅಥವಾ ಅವುಡೈಯಾರ್ ಎಂದು ಕರೆಯಲಾಗುತ್ತದೆ. ಲಿಂಗ ಮತ್ತು ಪೀಠ ಒಟ್ಟಿಗೆ ಶಿವ ಮತ್ತು ಶಕ್ತಿಯ, ಪುರುಷ ಮತ್ತು ಸ್ತ್ರೀ ತತ್ವಗಳ ಶಕ್ತಿಯ  ಸಂಯೋಗವನ್ನು ಸೂಚಿಸುತ್ತವೆ.

9. ಲಿಂಗ - ಒಬ್ಬ ಗುರು

ಯೋಗದಿಂದ ಪ್ರತಿಪಾದಿಸಲ್ಪಟ್ಟ ಶಕ್ತಿಯ ಸ್ಥಿತಿಗಳು ಪಂಚೇಂದ್ರಿಯಗಳ ವ್ಯಾಪ್ತಿಯಲ್ಲಿ ಇಲ್ಲದ ಕಾರಣ, ಈ ಆಂತರಿಕ ಸ್ಥಿತಿಗಳನ್ನು ಅನುಭವಿಸಲು ಸಾಮಾನ್ಯವಾಗಿ ಗುರುವಿನ ಮಾರ್ಗದರ್ಶನ ಅಗತ್ಯವಿರುತ್ತದೆ. ಅನೇಕ ಸಂಬಂಧಗಳು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಬಾಂಧವ್ಯವನ್ನು ಅವಲಂಬಿಸಿದ್ದರೆ, ಗುರು-ಶಿಷ್ಯ ಸಂಬಂಧವು ಶಕ್ತಿ ಆಧಾರಿತವಾಗಿರುವುದರಿಂದ ಅನನ್ಯವಾಗಿದೆ.

ಆಧುನಿಕ ವಿಜ್ಞಾನವು, ಪಂಚೇಂದ್ರಿಯಗಳ ಮೇಲೆ ಸಂಪೂರ್ಣ ಅವಲಂಬನೆಯಿಂದಾಗಿ, ಸಂಶೋಧನೆ ಅಥವಾ ಅನ್ವೇಷಣೆಯ ಪ್ರಕ್ರಿಯೆಯಲ್ಲಿ ಅನುಭವಾತ್ಮಕ ಅಥವಾ ತಾರ್ಕಿಕ ವಿಧಾನಕ್ಕೆ ಆದ್ಯತೆ ನೀಡಿದೆ, ಮಾನವ ಮನಸ್ಸಿನ ಸಾಮಾನ್ಯ ಶಕ್ತಿಗಳಿಗೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಂಡಿದೆ. ಆಧುನಿಕ ಶಿಕ್ಷಣವು ಈ ವಿಧಾನವನ್ನು ಪ್ರತಿಧ್ವನಿಸಿದೆ, ವ್ಯಕ್ತಿಯ ಗ್ರಹಿಕೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿ ಕಡೆಗಣಿಸಿದೆ. ಈ ವಾತಾವರಣದಲ್ಲಿ, ತಾರ್ಕಿಕತೆಯನ್ನು ಮೀರಿದ ಒಳನೋಟವನ್ನು ಹೊಂದಿರುವ ಗುರುವಿನ ಸಾಮರ್ಥ್ಯದ ಬಗ್ಗೆ ದೊಡ್ಡ ಸಂಶಯವಿದೆ. ಆದರೂ, ಇತಿಹಾಸದುದ್ದಕ್ಕೂ, ಸಾಧಕನು ಮತ್ತೆ ಮತ್ತೆ ಅಂತಃಪ್ರೇರಣೆಯಿಂದ ಗುರುವಿನತ್ತ ಆಕರ್ಷಿತನಾಗಿದ್ದಾನೆ. ಈ ಆಧ್ಯಾತ್ಮಿಕ ಮಾರ್ಗದರ್ಶನದ ಬಯಕೆಯನ್ನು ಪೂರೈಸಲು, ಕೆಲವು ದೂರದೃಷ್ಟಿಯುಳ್ಳ ಗುರುಗಳು ಗುರುವಿನ ಉಪಸ್ಥಿತಿ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುವ ಶಕ್ತಿ ಕೇಂದ್ರಗಳನ್ನು ಸೃಷ್ಟಿಸಿದ್ದಾರೆ.

ಧ್ಯಾನಲಿಂಗವು ಗುರುವಿನ ಪ್ರಮುಖ ಅಭಿವ್ಯಕ್ತಿಯಾಗಿದೆ. ಇದು ಯೋಗ ವಿಜ್ಞಾನದ ಅಂತಃಸತ್ವ, ಅವು ಉತ್ತುಂಗದಲ್ಲಿರುವ ಆಂತರಿಕ ಶಕ್ತಿಗಳ ಅಭಿವ್ಯಕ್ತಿಯಾಗಿದೆ.

10. ಬ್ರಹ್ಮಾಂಡ ಸ್ತಂಭವಾಗಿ ಶಿವಲಿಂಗ

ಕಥೆಯ ಅನುಗುಣವಾಗಿ, ಬ್ರಹ್ಮ ಮತ್ತು ವಿಷ್ಣು ಒಮ್ಮೆ ಒಂದು ದೊಡ್ಡ ಅಗ್ನಿ ಸ್ತಂಭವನ್ನು ಕಂಡರು. ಈ ಅನಂತವಾದ ತೇಜಸ್ಸಿನ ಸ್ತಂಭದಿಂದ ಔಮ್ ಎಂಬ ಧ್ವನಿ ಹೊರಹೊಮ್ಮುತ್ತಿತ್ತು. ವಿಸ್ಮಿತರಾಗಿ, ಅದನ್ನು ಪರೀಕ್ಷಿಸಲು ನಿರ್ಧರಿಸಿದರು. ಹಂಸದ ರೂಪ ತಾಳಿ, ಬ್ರಹ್ಮನು ಅದರ ಶಿಖರವನ್ನು ಹುಡುಕಿ ನೀಲಿ ಆಕಾಶದತ್ತ ಎತ್ತರಕ್ಕೆ ಹಾರಿದನು. ವರಾಹದ ರೂಪ ತಾಳಿ, ವಿಷ್ಣು ಅದರ ಬುಡವನ್ನು ಹುಡುಕಿ ವಿಶ್ವದ ಆಳಕ್ಕೆ ಅಗೆದನು.

ಇಬ್ಬರೂ ವಿಫಲರಾದರು. ಏಕೆಂದರೆ ಈ ವಿಶ್ವ ಸ್ತಂಭವು ಶಿವನೇ ಆಗಿದ್ದನು. ಅಳೆಯಲಾಗದ್ದನ್ನು ಹೇಗೆ ಅಳೆಯಲು ಸಾಧ್ಯ? ವಿಷ್ಣು ಹಿಂತಿರುಗಿ ಬಂದು ತನ್ನ ಸೋಲನ್ನು ಒಪ್ಪಿಕೊಂಡನು. ಆದರೆ, ವಿಫಲತೆಯನ್ನು ಒಪ್ಪಿಕೊಳ್ಳಲು ಇಷ್ಟಪಡದ ಬ್ರಹ್ಮನು, ತಾನು ಶಿಖರವನ್ನು ತಲುಪಿದ್ದೇನೆ ಎಂದು ಬಡಾಯಿಕೊಚ್ಚಿದನು. ಸಾಕ್ಷಿಯಾಗಿ, ತಾನು ಮೇಲೆ ಕಂಡುಕೊಂಡ ಬಿಳಿ ಕೇತಕಿ ಹೂವನ್ನು ತೋರಿಸಿದನು.

ಸುಳ್ಳು ಹೇಳಿದ ಕೂಡಲೇ, ಶಿವನು ಆದಿಯೋಗಿಯಾಗಿ (ಮೊದಲ ಯೋಗಿ) ಕಾಣಿಸಿಕೊಂಡನು. ಇಬ್ಬರು ದೇವರುಗಳೂ ಅವನ ಪಾದಕ್ಕೆ ಬಿದ್ದರು. ಈ ಸುಳ್ಳಿಗಾಗಿ, ಇನ್ನು ಮುಂದೆ ಬ್ರಹ್ಮನಿಗೆ ಪೂಜೆ ಸ್ವೀಕರಿಸುವ ವಿಶೇಷಾಧಿಕಾರ ಇರುವುದಿಲ್ಲ ಎಂದು ಶಿವನು ಘೋಷಿಸಿದನು. ಈ ಮೋಸಕ್ಕೆ ಸಹಾಯ ಮಾಡಿದ್ದಕ್ಕಾಗಿ ಆ ಹೂವು ಅನುಗ್ರಹವನ್ನು ಕಳೆದುಕೊಂಡಿತು. ಆದಿಯೋಗಿ ಇನ್ನು ಮುಂದೆ ಅದನ್ನು ನೈವೇದ್ಯವಾಗಿ ಸ್ವೀಕರಿಸಲು ನಿರಾಕರಿಸಿದನು. ಆದರೆ ಮಹಾಶಿವರಾತ್ರಿಯ ಪವಿತ್ರ ರಾತ್ರಿಗೆ ವಿನಾಯಿತಿ ನೀಡಲಾಯಿತು. ಇಂದಿಗೂ, ಬಿಳಿ ಕೇತಕಿ ಹೂವನ್ನು ವರ್ಷದ ಅತ್ಯಂತ ಕತ್ತಲೆಯ ರಾತ್ರಿಯಾದ, ಅತ್ಯಂತ ಆಧ್ಯಾತ್ಮಿಕ ಸಾಧ್ಯತೆಯ ರಾತ್ರಿ ಎಂದು ಪರಿಗಣಿಸಲ್ಪಡುವ ಈ ದಿನದಂದು ಮಾತ್ರ ಪೂಜೆಗೆ ಅರ್ಪಿಸಲಾಗುತ್ತದೆ.

11. ಧ್ಯಾನಲಿಂಗ

"ಧ್ಯಾನಲಿಂಗದ ಸನ್ನಿಧಿಯಲ್ಲಿ ಕೆಲನಿಮಿಷಗಳ ಕಾಲ ಮೌನವಾಗಿ ಕುಳಿತುಕೊಂಡರೆ ಸಾಕು, ಧ್ಯಾನವೆಂದರೇನೆಂದೇ ತಿಳಿಯದವರೂ ಕೂಡ ಆಳವಾದ ಧ್ಯಾನದ ಅನುಭೂತಿಯನ್ನು ಹೊಂದುತ್ತಾರೆ.." ಸದ್ಗುರು

ಸಂಸ್ಕೃತದಲ್ಲಿ "ಧ್ಯಾನ" ಎಂದರೆ "ಮನನ" ಮತ್ತು "ಲಿಂಗ" ಎಂದರೆ "ರೂಪ." ಸದ್ಗುರು ತಮ್ಮದೇ ಜೀವನ ಶಕ್ತಿಗಳನ್ನು ಪ್ರಾಣ-ಪ್ರತಿಷ್ಠ ಎಂಬ ರಹಸ್ಯಮಯ ಪ್ರಕ್ರಿಯೆಯ ಮೂಲಕ ಲಿಂಗವನ್ನು ಅದರ ಪರಮಾವಧಿಗೆ ಪ್ರತಿಷ್ಠಾಪಿಸಲು ಬಳಸಿದರು. ಈ ಪ್ರಕ್ರಿಯೆಯಲ್ಲಿ, ಎಲ್ಲಾ ಏಳು ಚಕ್ರಗಳನ್ನು (ದೇಹದಲ್ಲಿರುವ ಪ್ರಮುಖ ಶಕ್ತಿ ಕೇಂದ್ರಗಳು) ಅತ್ಯುನ್ನತ ಮಟ್ಟಕ್ಕೆ ಶಕ್ತಿಯುತಗೊಳಿಸಿ ಕೀಲಿ ಮಾಡಲಾಗಿದೆ, ಹೇಗೆಂದರೆ ಇದು ಅತ್ಯುನ್ನತ ಅಥವಾ ಅತ್ಯಂತ ವಿಕಸಿತ ಜೀವಿಯ ಶಕ್ತಿ ದೇಹದಂತೆ ಆಗಿದೆ.

ಯಾವುದೇ ಪೂಜೆ ಅಥವಾ ಪ್ರಾರ್ಥನೆಯನ್ನು ಬಯಸದ ಈ ಧ್ಯಾನ ಮಂದಿರವು ಎಲ್ಲಾ ಧರ್ಮಗಳನ್ನು ಒಂದೇ ಸಾಮಾನ್ಯ ಮೂಲದ ಅಭಿವ್ಯಕ್ತಿಗಳೆಂದು ಗುರುತಿಸುತ್ತದೆ.

Dhyanalinga

You are my Guru's will
My only obsession
In my dreams and my wakefulness
My only longing was to fulfill you

Willing to do anything
That men should and should not
Willing to offer myself and
Another hundred lives if need be

Here now that you have happened
O' Glorious one
May your Glory and Grace
Stir the sleeping hordes
Into wakefulness and light

Now that you have happened
And the gift of life still with me
What shall I do with myself

Have lived the peaks for too long
Time to graze the valleys of life.

– Sadhguru

12. ಲಿಂಗಗಳು ಚಕ್ರಗಳನ್ನು ಪ್ರತಿನಿಧಿಸುತ್ತವೆ

ಸದ್ಗುರು: ಚಕ್ರಗಳು ಶಕ್ತಿ ವ್ಯವಸ್ಥೆಯ ಸಂಗಮ ಬಿಂದುಗಳಾಗಿವೆ, ಅಲ್ಲಿ ಪ್ರಾಣ ನಾಡಿಗಳು ಶಕ್ತಿ ಸುಳಿಯನ್ನು ಸೃಷ್ಟಿಸಲು ಸೇರುತ್ತವೆ. ನೂರ ಹದಿನಾಲ್ಕು ಚಕ್ರಗಳಿವೆ, ಆದರೆ ಸಾಮಾನ್ಯವಾಗಿ, ನಾವು "ಚಕ್ರಗಳು" ಎಂದು ಹೇಳುವಾಗ ನಾವು ಜೀವನದ ಏಳು ಆಯಾಮಗಳನ್ನು ಪ್ರತಿನಿಧಿಸುವ ಏಳು ಮುಖ್ಯ ಚಕ್ರಗಳನ್ನು ಉಲ್ಲೇಖಿಸುತ್ತಿದ್ದೇವೆ. ಅವುಗಳು ಏಳು ಪ್ರಮುಖ ಸಂಚಾರಿ ಸಂಧಿಗಳಂತೆ.

ಪ್ರಸ್ತುತ, ಭಾರತದಲ್ಲಿರುವ ಹೆಚ್ಚಿನ ಲಿಂಗಗಳು ಗರಿಷ್ಠ ಎರಡು ಚಕ್ರಗಳನ್ನು ಪ್ರತಿನಿಧಿಸುತ್ತವೆ. ಈಶ ಯೋಗ ಕೇಂದ್ರದಲ್ಲಿರುವ ಧ್ಯಾನಲಿಂಗದ ವಿಶೇಷತೆಯೆಂದರೆ ಎಲ್ಲಾ ಏಳು ಚಕ್ರಗಳು ಅವುಗಳ ಗರಿಷ್ಠ ಮಟ್ಟದಲ್ಲಿ ಶಕ್ತಿಯುತವಾಗಿಸಿ ಸ್ಥಾಪಿಸಲಾಗಿದೆ. ಇದು ಅತ್ಯಂತ ಉನ್ನತ ಅಭಿವ್ಯಕ್ತಿಯಾಗಿದೆ, ಅಂದರೆ ನೀವು ಶಕ್ತಿಯನ್ನು ತೆಗೆದುಕೊಂಡು ಅದನ್ನು ಅತ್ಯಂತ ಉನ್ನತ ತೀವ್ರತೆಯ ಮಟ್ಟಕ್ಕೆ ತಳ್ಳಿದರೆ, ಅದು ಒಂದು ನಿರ್ದಿಷ್ಟ ಬಿಂದುವಿನವರೆಗೆ ಮಾತ್ರ ರೂಪವನ್ನು ತಾಳಬಲ್ಲದು. ಅದನ್ನೂ ಮೀರಿ, ಅದು ನಿರಾಕಾರವಾಗುತ್ತದೆ. ಅದು ನಿರಾಕಾರವಾದರೆ, ಜನರು ಅದನ್ನು ಅನುಭವಿಸಲು ಅಸಮರ್ಥರಾಗುತ್ತಾರೆ. ಶಕ್ತಿಯನ್ನು ಅತ್ಯಂತ ಉನ್ನತ ಬಿಂದುವಿಗೆ ತಳ್ಳುವುದು, ಮತ್ತು ಆ ಬಿಂದುವಿನಲ್ಲಿ ಅದನ್ನು ಖಚಿತಗೊಳಿಸುವುದು - ಹೀಗೆ ಧ್ಯಾನಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

    Share

Related Tags

Get latest blogs on Shiva