ಮಹಾಶಿವರಾತ್ರಿಯನ್ನು ನಮ್ಮ ವೆಬ್ ನೇರ ಪ್ರಸಾರದಲ್ಲಿ ವೀಕ್ಷಿಸಿ.
ಭಾರತದಲ್ಲಿನ ಇರುಳಿನ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಅತಿದೊಡ್ಡ ಮತ್ತು ಅತ್ಯಂತ ಪ್ರಮುಖವಾದ ಆಚರಣೆಯಾಗಿದೆ. ವರುಷದ ಅತ್ಯಂತ ಕತ್ತಲೆಯ ರಾತ್ರಿಯಾದ ಇದು, ಯೋಗಪರಂಪರೆಯ ಉಗಮಕಾರಕನಾದ, ಆದಿಯೋಗಿಯೆಂದು ಪರಿಗಣಿಸಲ್ಪಡುವ ಶಿವನ ಅನುಗ್ರಹವನ್ನು ಕೊಂಡಾಡುವ ರಾತ್ರಿ. ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ. ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿರಿಸಿ,ಎಚ್ಚರ ಮತ್ತು ಜಾಗೃತರಾಗಿರುವುದು, ನಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ.