ಆದಿಯೋಗಿ ಪ್ರದಕ್ಷಿಣೆ

ಒಂದು ಪ್ರಬಲ ಶಕ್ತಿ ಮೂಲದ ಚೈತನ್ಯವನ್ನು ಮೈಗೂಡಿಸಿಕೊಳ್ಳಲು ಅದನ್ನು ಬಲಮುರಿಯಾಗಿ ಸುತ್ತು ಬರುವ ಪ್ರಕ್ರಿಯೆಯನ್ನು ಪ್ರದಕ್ಷಿಣೆಯೆನ್ನುತ್ತಾರೆ. ಈಶ ಯೋಗ ಕೇಂದ್ರವಿರುವ ಹನ್ನೊಂದು ಡಿಗ್ರಿ ಅಕ್ಷಾಂಶದಲ್ಲಿ ಇದು ವಿಶೇಷವಾಗಿ ಪ್ರಭಾವಪೂರ್ಣವಾಗಿರುತ್ತದೆ. ಸದ್ಗುರುಗಳಿಂದ ವಿರಚಿತವಾದ ‘ಆದಿಯೋಗಿ ಪ್ರದಕ್ಷಿಣೆ’ಯ ಪ್ರಕ್ರಿಯೆಯು, ಆದಿಯೋಗಿಯ ಅನುಗ್ರಹಕ್ಕೆ ಪಾತ್ರರಾಗಲು ಸಹಾಯ ಮಾಡುತ್ತದೆ. ಈ ಅನುಗ್ರಹವು ನಿಮ್ಮ ಪರಮ ಮುಕ್ತಿಯೆಡೆಗಿನ ನಿಮ್ಮ ಹಾತೊರೆತವನ್ನು ಉತ್ತೇಜಿಸುವುದು.

ಆದಿಯೋಗಿ ಪ್ರದಕ್ಷಿಣೆಯನ್ನು ಮಾಡಲು, ಅಗತ್ಯವಿರುವ ಎಲ್ಲಾ ಕಾಣಿಕೆಗಳನ್ನು (ಅಕ್ಕಿ, ಧೂಪ, ಹೆಸರುಕಾಳು, ಕಪ್ಪು ಎಳ್ಳು) ಒಂದು ಬಟ್ಟೆಯ ಚೀಲದಲ್ಲಿ (ಆದಿಯೋಗಿಯ ಚಿತ್ರವಿರುವ ಬಟ್ಟೆಯ ಚೀಲವು ಖರೀದಿಸಲು ಲಭ್ಯವಿರುತ್ತದೆ) ಹಾಕಿಟ್ಟುಕೊಳ್ಳಿ. ಪ್ರದಕ್ಷಿಣೆಯನ್ನು ಆದಿಯೋಗಿಯ ಮುಂದೆ “ಯೋಗ ಯೋಗ ಯೋಗೇಶ್ವರಾಯ” ಸ್ತೋತ್ರವನ್ನು ಮೂರು ಬಾರಿ ಪಠಸಿ ಆರಂಭಿಸಿ. ಪಠಣೆಯು ಮುಗಿದ ಬಳಿಕ, ಯೋಗೇಶ್ವರ ಲಿಂಗಕ್ಕೆ ನೀರನ್ನು ಅರ್ಪಿಸಿ. (ಮಹಾಶಿವರಾತ್ರಿಯ ದಿನದಂದು, ಯೋಗೇಶ್ವರ ಲಿಂಗಕ್ಕೆ ನೀರನ್ನು ಅರ್ಪಿಸುವುದು ಸಾಧ್ಯವಾಗುವುದಿಲ್ಲ.) ನಂತರ, ಗಂಡಸರು ಸೂರ್ಯಕುಂಡಕ್ಕೆ ಹೋಗಿ, ಅಲ್ಲಿ ಸೂರ್ಯಕುಂಡದ ಒಂದು ಕೊಡ ನೀರನ್ನು ತಮ್ಮ ತಲೆಯ ಮೇಲೆ ಸುರಿದುಕೊಳ್ಳಬೇಕು.

ತ್ರಿಮೂರ್ತಿ ಫಲಕದ ಬಳಿ ಬಂದು, ಅಲ್ಲಿ ತ್ರಿಮೂರ್ತಿಯ ಮುಂದೆ ಇರಿಸಲಾಗಿರುವ ಕಲ್ಲಿನ ಉರಳಿಯಲ್ಲಿ ಧೂಪವನ್ನು ಅರ್ಪಿಸಿ. ಲಿಂಗ ಭೈರವಿಯ ಆಲಯಕ್ಕೆ ತೆರಳಿ, ಅಲ್ಲಿ ಹೆಸರುಕಾಳನ್ನು ಸಮರ್ಪಿಸಿ. ಮಹಿಳೆಯರು ಚಂದ್ರಕುಂಡಕ್ಕೆ ಬಂದು, ಅಲ್ಲಿ ಚಂದ್ರಕುಂಡದ ಒಂದು ಕೊಡ ನೀರನ್ನು ತಮ್ಮ ತಲೆಯ ಮೇಲೆ ಸುರಿದುಕೊಳ್ಳಬೇಕು. ನಂತರ, ಧ್ಯಾನಲಿಂಗಕ್ಕೆ ತೆರಳಿ, ಕಪ್ಪು ಎಳ್ಳನ್ನು ಅರ್ಪಿಸಿ. ಧ್ಯಾನಲಿಂಗಕ್ಕೆ ಕಾಣಿಕೆಯನ್ನು ಅರ್ಪಿಸಿದ ನಂತರ, ಆದಿಯೋಗಿಯ ಬಳಿ ಮರಳಿ ಬಂದು, ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಅಕ್ಕಿಯನ್ನು ಸಮರ್ಪಿಸಿ. ಇದು ಪ್ರದಕ್ಷಿಣೆಯ ಒಂದು ಸುತ್ತು.

ಪ್ರತಿ ಪ್ರದಕ್ಷಿಣೆಯ ಸುತ್ತಿನಲ್ಲೂ, ಅಕ್ಕಿ, ಧೂಪ, ಹೆಸರುಕಾಳು ಮತ್ತು ಕಪ್ಪು ಎಳ್ಳಿನ ಕಾಣೆಕೆಯನ್ನು ಅರ್ಪಿಸಬೇಕು. ಒಂದು ವರ್ಷಕ್ಕೆ ನಿರ್ದಿಷ್ಟ ಸಂಖ್ಯೆಯ ಪ್ರದಕ್ಷಿಣೆಯನ್ನು ಹಾಕಲು ನೀವು ನಿರ್ಧರಿಸಬಹುದು. ಆದಿಯೋಗಿ ಪ್ರದಕ್ಷಿಣೆಯನ್ನು 1, 3, 5, 7, 9, 12, 18, 21, 24, 33, 48, 64, 84, 96, 108, 208, 308, 408, 508, 608, 708, 808, 908 or 1008 ಬಾರಿಯಂತೆ ಮಾಡಬಹುದು. ಒಂದು ವರ್ಷದಲ್ಲಿ ನೀವೆಷ್ಟು ಪ್ರದಕ್ಷಿಣೆಗಳನ್ನು ಹಾಕಲು ಸಂಕಲ್ಪಿಸಿದ್ದೀರೋ, ಅದನ್ನು ಒಂದು ವರ್ಷದ ಅವಧಿಯೊಳಗೆ ಮುಗಿಸುವಂತೆ ಖಚಿತಪಡಿಸಿಕೊಳ್ಳಬೇಕು.

ಪ್ರದಕ್ಷಿಣೆಯನ್ನು ಹಾಕುತ್ತಿರುವ ಸಮಯದಾದ್ಯಂತ, “ಯೋಗ ಯೋಗ ಯೋಗೇಶ್ವರಾಯ” ಸ್ತೋತ್ರದ ಪಠಣೆಯನ್ನು ಮಾಡಿ.

ಯೋಗ ಯೋಗ ಯೋಗೇಶ್ವರಾಯ ಸ್ತೋತ್ರ:

ಯೋಗ ಯೋಗ ಯೋಗೇಶ್ವರಾಯ
ಭೂತ ಭೂತ ಭೂತೇಶ್ವರಾಯ
ಕಾಲ ಕಾಲ ಕಾಲೇಶ್ವರಾಯ
ಶಿವ ಶಿವ ಸರ್ವೇಶ್ವರಾಯ
ಶಂಭೋ ಶಂಭೋ ಮಹಾದೇವಾಯ

ಪ್ರದಕ್ಷಿಣೆಯ ಸಮಯ: ಪ್ರತಿ ದಿನ ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ. ಮಹಾಶಿವರಾತ್ರಿಯಂದು, ಬೆಳಿಗ್ಗೆ 6:00 ರಿಂದ ಅಪರಾಹ್ನ 2:00 ರವರೆಗೆ.

ದಯವಿಟ್ಟು ಗಮನಿಸಿ:

 • ಆಯಾ ದಿನಕ್ಕೆ ನೀವು ನಿಗದಿಪಡಿಸಿಕೊಂಡಿರುವ ಪ್ರದಕ್ಷಿಣೆಯ ಸುತ್ತುಗಳ ಅನುಸಾರವಾಗಿ ನೀವು ಅರ್ಪಿಸಬೇಕಿರುವ ಕಾಣಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು.
 • ಪ್ರದಕ್ಷಿಣೆಯನ್ನು ಆರಂಭಿಸುವ ಮುನ್ನ ಗಂಡಸರು ತಮ್ಮ ಶರ್ಟ್ ತೆಗದಿರಿಸಬೇಕು.
 • ಪ್ರದಕ್ಷಿಣೆಯ ಸಮಯದಲ್ಲಿ ಪಾದರಕ್ಷೆಯನ್ನು ಧರಿಸಬಾರದು.
 • ಪ್ರದಕ್ಷಿಣೆಯ ಸಮಯದಲ್ಲಿ ಮಾತನಾಡಬಾರದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು:

  • ಪ್ರತಿ ಕಾಣಿಕೆಯನ್ನು ನಾನು ಎಷ್ಟು ಪ್ರಮಾಣದಲ್ಲಿ ಅರ್ಪಿಸಬೇಕು (ಅಕ್ಕಿ, ಹೆಸರು ಕಾಳು, ಕಪ್ಪು ಎಳ್ಳು)?

ಪ್ರತಿಯೊಂದು ಕಾಣಿಕೆಯನ್ನು ನೀವು ಬಯಸಿದಷ್ಟು ಅರ್ಪಿಸಬಹುದು.

  • ಕಾಣಿಕೆಯನ್ನು ನಾವು ಮನೆಯಿಂದ ತರಬಹುದೇ?

ಹೌದು.

  • ಪ್ರದಕ್ಷಿಣೆಯ ಸಮಯದಲ್ಲಿ ನಾನು ಪಾದರಕ್ಷೆಯನ್ನು ಧರಿಸಬಹುದೇ

ಇಲ್ಲ.

  • ಈಶ ಯೋಗ ಕೇಂದ್ರದಲ್ಲಿ ಈ ಕಾಣಿಕೆಗಳನ್ನು ಖರೀದಿಸಬಹುದೇ?

ಹೌದು

  • ಸೂರ್ಯಕುಂಡ ಮತ್ತು ಚಂದ್ರಕುಂಡದೊಳಗೆ ಪ್ರವೇಶಿಸಲು ಶುಲ್ಕವನ್ನು ನೀಡಬೇಕೇ?

ಇಲ್ಲ.

  • ಯೋಗೇಶ್ವರ ಲಿಂಗಕ್ಕೆ ಸಮರ್ಪಿಸುವ ನೀರಿಗೆ ಶುಲ್ಕವನ್ನು ನೀಡಬೇಕೇ?

ಇಲ್ಲ.

  • ಲಿಂಗ ಭೈರವಿ ಮುಚ್ಚಿರುವ ಸಮಯದಲ್ಲಿ, ಅಪರಾಹ್ನ 1.20 ರಿಂದ to 4.20 ರ ವರೆಗೂ, ಕಾಣಿಕೆಯನ್ನು ಅರ್ಪಿಸಬಹುದೇ?

ಲಿಂಗ ಭೈರವಿಯ ಹೊರಗಿರುವ ಲಿಂಗ ಭೈರವಿ ಗುಡಿಯಲ್ಲಿ ಕಾಣಿಕೆಯನ್ನು ಅರ್ಪಿಸಬಹುದು.

  • ಪಂಚಭೂತ ಆರಾಧನೆಯ ಸಮಯದಲ್ಲಿ ಧ್ಯಾನಲಿಂಗವು ಮುಚ್ಚಿರುವ ಸಮಯದಲ್ಲಿ ಕಾಣಿಕೆಯನ್ನು ಅರ್ಪಿಸಬಹುದೇ?

ಹೌದು, ಸರ್ವಧರ್ಮ ಸ್ತಂಭದ ಮುಂಭಾಗದಲ್ಲಿ ಇರಿಸಲಾಗುವ ಧ್ಯಾನಲಿಂಗದ ಚಿತ್ರದ ಮುಂದೆ ನೀವು ಕಾಣಿಕೆಯನ್ನು ಅರ್ಪಿಸಬಹುದು.

  • ಎಷ್ಟು ಸುತ್ತು ಪ್ರದಕ್ಷಿಣೆಯನ್ನು ಹಾಕಬಹುದು?

ಒಂದು ವರ್ಷದಲ್ಲಿ ನೀವು ಇಚ್ಛಿಸಿದಷ್ಟು ಪ್ರದಕ್ಷಿಣೆಯ ಸುತ್ತುಗಳನ್ನು ಹಾಕಬಹುದು. ಆದರೆ, ಸುತ್ತುಗಳನ್ನು 1, 3, 5, 7, 9, 12, 18, 21, 24, 33, 48, 64, 84, 96, 108,…. ಬಾರಿಯಂತೆ ಮಾಡಬೇಕು.

  • ಧೂಪವನ್ನು ಅರ್ಪಿಸುವುದು ಹೇಗೆ?

ತ್ರಿಮೂರ್ತಿ ಫಲಕದ ಮುಂದೆ ಇರಿಸಲಾಗಿರುವ ಉರಳಿಯಲ್ಲಿ ಧೂಪವನ್ನು ಅರ್ಪಿಸಬಹುದು.

  • ಪ್ರತಿ ಸುತ್ತಿನಲ್ಲೂ ನಾನು ಕಾಣಿಕೆಯನ್ನು ಅರ್ಪಿಸಬೇಕೇ?

ಹೌದು.