ನಮ್ಮ ದೇಹವನ್ನು ಶುದ್ಧೀಕರಿಸಿ ನಮ್ಮನ್ನು ಧ್ಯಾನಸ್ಥಿತಿಗೆ ತರುವ ಮಂತ್ರವೇ ಆಉಮ್ ನಮಃ ಶಿವಾಯ ಆಗಿದೆ. ಸದ್ಗುರುಗಳು ಈ ಮಂತ್ರದ ಪಠನೆಯ ಅರ್ಥವೇನು ಹಾಗೂ ಇದನ್ನು ಓಂ ನಮಃ ಶಿವಾಯ ಎಂದೆನದೆ ಆಉಮ್ ನಮಃ ಶಿವಾಯ’ ಎಂದೇಕೆ ಪಠಿಸಬೇಕು ಎಂದು ತಿಳಿಸುವರು.

ಈಶ ಬ್ರಹ್ಮಚಾರಿಗಳು ಹಾಡಿರುವ ವೈರಾಗ್ಯ ಆಲ್ಬಂನ ಭಾಗವಾಗಿ ಆಉಮ್ ನಮಃ ಶಿವಾಯವನ್ನು ನೀಡಲಾಗಿದೆ ಅದನ್ನು ಉಚಿತವಾಗಿ ಡೌನ್ ಲೋಡ್’ (download) ಮಾಡಿಕೊಳ್ಳಬಹುದು. Isha Chants Appನ ಭಾಗವಾಗಿ ಅದು ಲಭ್ಯ.

ಆಉಮ್ ನಮಃ ಶಿವಾಯ ಪಠಿಸುವ ಸರಿಯಾದ ಕ್ರಮ

ಸದ್ಗುರು: ಆಉಮ್ AUM ಎನ್ನುವ ಶಬ್ಧವನ್ನು ಓಂ ಎಂಬುದಾಗಿ ಪಠಿಸಬಾರದು. ಅದನ್ನು ಹೇಳುವ ರೀತಿ ಹೀಗಿದೆ. ನಿಮ್ಮ ಬಾಯನ್ನು ತೆರೆದು ’ಆ...’ ಮತ್ತು ನಿಧಾನವಾಗಿ ನಿಮ್ಮ ಬಾಯಿಯನ್ನು ಮುಚ್ಚಿದಾಗ ಊ ಮತ್ತು ಮಾ ಎಂದಾಗುತ್ತದೆ. ಅದು ಸ್ವಾಭಾವಿಕವಾಗಿ ಉಂಟಾಗುತ್ತದೆ. ಅದು ನೀವು ಮಾಡುವಂತಹುದಲ್ಲ. ನೀವು ಸುಮ್ಮನೆ ಬಾಯಿಯನ್ನು ತೆರೆದು, ಉಸಿರನ್ನು ಹೊರಬಿಟ್ಟರೆ ಅದು ’ಆ...’ ಆಗುತ್ತದೆ. ನೀವು ಬಾಯಿಯನ್ನು ಮುಚ್ಚುತ್ತಾ ಇರುವ ಹಾಗೆ ಅದು ನಿಧಾನವಾಗಿ ಊ... ಮತ್ತು ಬಾಯಿಯನ್ನು ಮುಚ್ಚಿದಾಗ ಮ್‌ಮ್‌ಮ್ ಆಗುತ್ತದೆ. ಆ, ಊ ಮತ್ತು ಮಾ ಅಸ್ತಿತ್ವದ ಮೂಲ ಶಬ್ಧಗಳಾಗಿವೆ. ನೀವು ಈ ಮೂರೂ ಶಬ್ದಗಳನ್ನು ಒಟ್ಟಾಗಿ ಉಚ್ಚರಿಸಿದರೆ, ನಿಮಗೇನು ದೊರಕುವುದು? ಆಉಮ್ ಆದ್ದರಿಂದ ನಾವು ಆಉಮ್ ಎನ್ನವುದು ಹೆಚ್ಚು ಮೂಲಮಂತ್ರವಾಗಿದೆ ಎಂದು ಹೇಳುತ್ತೇವೆ. ಹೀಗಾಗಿ ಮಂತ್ರವನ್ನು ಓ ನಮಃ ಶಿವಾಯ ಎಂದು ಹೇಳದೆ ಅದನ್ನು ಆಉಮ್ ನಮಃ ಶಿವಾಯ ಎಂದು ಉಚ್ಚರಿಸಬೇಕು.

ವಿಶ್ವದ ಹೆಚ್ಚಿನ ಆಧ್ಯಾತ್ಮಿಕ ಮಾರ್ಗಗಳಲ್ಲಿನ ಸಾಧನೆಗಳ ಮೂಲ ಬಗೆಯು ಯಾವಾಗಲೂ ಯುಕ್ತ ರೀತಿಯ ಪ್ರಜ್ಞೆಯಿಂದ ಮಂತ್ರವನ್ನು ಉಪಯೋಗಿಸದೆ, ತಮ್ಮ ಆಂತರ್ಯದಲ್ಲಿ ಸರಿಯಾದ ಶಕ್ತಿಗಳ ಸ್ತರಗಳಿಗೆ ಏರಲು ಅನೇಕ ಜನರು ಅಸಮರ್ಥರಾಗಿದ್ದಾರೆ. ಸುಮಾರು ೯೦% ಜನರು ತಮ್ಮನ್ನು ತಾವು ಕ್ರಿಯಾಶೀಲಗೊಳಿಸಲು ಅವರಿಗೆ ಯಾವಾಗಲೂ ಒಂದು ಮಂತ್ರದ ಅವಶ್ಯಕತೆಯಿದೆ. ಅದಿಲ್ಲದೆ ಅವರು ತಮ್ಮನ್ನು ತಾವು ನಿರ್ವಹಿಸಿಕೊಳ್ಳಲಾರರು.

ಈಶ ಚಾಂಟ್ಸ್ – ಉಚಿತ ಮೊಬೈಲ್ App
ವೈರಾಗ್ಯ - mp3 ಡೌನ್ಲೋಡ್ 

ಪಂಚಾಕ್ಷರಗಳು

ಆದ್ದರಿಂದ ನಿರ್ದಿಷ್ಟ ಸಂಸ್ಕೃತಿಗಳಲ್ಲಿ ಮಹಾಮಂತ್ರವೆಂದು ಕರೆಯಲ್ಪಡುವ ಮೂಲಮಂತ್ರವು ಆಉಮ್ ನಮಃ ಶಿವಾಯವಾಗಿದೆ. ವಿವಿಧ ಆಯಾಮಗಳಲ್ಲಿ ಆಉಮ್ ನಮಃ ಶಿವಾಯ ಮಂತ್ರವನ್ನು ಅಭ್ಯಸಿಸಬಹುದು. ಇವುಗಳನ್ನು ಪಂಚಾಕ್ಷರಗಳೆಂದು ಕರೆಯುತ್ತಾರೆ; ಇದರಲ್ಲಿ ಐದು ಮಂತ್ರಗಳಿವೆ. ಪ್ರಕೃತಿಯ ಐದು ಮೂಲ ಶಕ್ತಿಗಳನ್ನು ಈ ಪಂಚಾಕ್ಷರಗಳು ಪ್ರತಿನಿಧಿಸುತ್ತವೆ. ಮತ್ತು ಅವು ಶರೀರದ ಐದು ಪ್ರಮುಖ ಕೇಂದ್ರಗಳನ್ನೂ ಪ್ರತಿನಿಧಿಸುತ್ತವೆ. ಅವು ಈ ಐದು ಕೇಂದ್ರಗಳನ್ನು ಕ್ರಿಯಾಶೀಲಗೊಳಿಸುವ ಮಾರ್ಗಗಳಾಗಿವೆ. ಅವು ಒಂದು ಅತ್ಯಂತ ಶಕ್ತಿಯುತವಾದ ಶುದ್ಧೀಕರಿಸುವ ಪದ್ಧತಿಯಾಗಿದೆ.

ಈ ಮಂತ್ರವನ್ನು ನಾವು ಅನೇಕ ವಿವಿಧ ಆಯಾಮಗಳಲ್ಲಿ ನೋಡಬಹುದು. ಪ್ರಸ್ತುತದಲ್ಲಿ ನಾವು ಈ ಮಂತ್ರವನ್ನು ಂದು ಶುದ್ಧೀಕರಣದ ಪ್ರಕ್ರಿಯೆಯನ್ನಾಗಿ ಬಳಸಲು ಇಚ್ಛಿಸುತ್ತೇವೆ ಹಾಗೂ ಅದೇ ಸಮಯದಲ್ಲಿ ನಾವು ಹೊಂದಬಹುದಾದ ಎಲ್ಲಾ ಸಾಧನಾಸ್ಥಿತಿಗಳ ಅಧಾರವೆಂದೂ ಬಳಸಬಹುದು. ಆಉಮ್ ನಮಃ ಶಿವಾಯ ಒಂದು ಕೆಟ್ಟ ಪದವೇನಲ್ಲ. ನೀವು ಅದನ್ನು ಉಚ್ಚರಿಸಬಹುದು. ಪ್ರಶ್ನೆ ಎಂದರೆ, ನೀವು ಅದಕ್ಕೆ ಸಿದ್ಧರಿರುವಿರೇ? ಎಂಬುದು ಅದು ಯಾರನ್ನೂ ಕುರಿತದಲ್ಲ. ನೀವು ಯಾರನ್ನೂ ಕರೆಯುತ್ತಿಲ್ಲ. ನೀವು ನಿಮ್ಮನ್ನೇ ಲೀನವಾಗಿಸಿಕೊಳ್ಳಬೇಕೆಂದು ಇಚ್ಛಿಸುವಿರಿ. ಏಕೆಂದರೆ ಶಿವನು ಲಯಕಾರಕನಾಗಿದ್ದಾರೆ. ನೀವು ಲಯಕಾರಕವನ್ನು ಕರೆದು ಅವನು ನಿಮ್ಮನ್ನು ಸಂರಕ್ಷಿಸುವವನೆಂದು ಆಶಿಸುವುದು ತಪ್ಪಲ್ಲವೇ?

ಸಂಪಾದಕರ ಟಿಪ್ಪಣಿ: ಮಂತ್ರದ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ತಿಳಿಯಲು, Becoming A Mantra ಸದ್ಗುರು ಸ್ಪಾಟ್ ಅನ್ನು ನೋಡಿ.

ಇತರ "ಮಿಸ್ತಿಕ್ ಚಾಂಟ್ಸ್"ಗಳನ್ನು ಇಲ್ಲಿ ಕೇಳಬಹುದು.