logo
logo

ಶಿವನ ಗಣಗಳು – ಹುಚ್ಚರೋ ದಿವ್ಯರೋ?

ಯೋಗ ಪರಂಪರೆಯಲ್ಲಿ ಶಿವನ ಗಣಗಳು ಆತನ ನಿರಂತರ ಸಂಗಾತಿಗಳಾಗಿ ಪ್ರಸಿದ್ಧರಾಗಿದ್ದರೂ,ಆದರೆ ಅವರ ಬಗ್ಗೆ ಸ್ವಲ್ಪವೇ ತಿಳಿದಿದೆ . ಈ ಬ್ಲಾಗ್‌ಪೋಸ್ಟ್‌ನಲ್ಲಿ ಸದ್ಗುರು ಈ ರಹಸ್ಯಮಯ ಜೀವಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತಾರೆ.

ಸದ್ಗುರು: ಯೋಗ ಪರಂಪರೆಯಲ್ಲಿ, ಗಣಗಳು ಎಲ್ಲರೂ ಶಿವನ ಸ್ನೇಹಿತರು. ಅವರು ಯಾವಾಗಲೂ ಅವನ ಸುತ್ತ ಇರುತ್ತಿದ್ದರು. ಅವನಿಗೆ ಶಿಷ್ಯರು, ಪತ್ನಿ ಮತ್ತು ಇತರ ಅನೇಕ ಅಭಿಮಾನಿಗಳಿದ್ದರೂ, ಅವನ ವೈಯಕ್ತಿಕ ಸಹವಾಸ ಯಾವಾಗಲೂ ಗಣಗಳೊಂದಿಗೆ ಇತ್ತು. ಗಣಗಳನ್ನು ವಿಕೃತ, ತಲೆಕೆಟ್ಟ ಜೀವಿಗಳೆಂದು ವರ್ಣಿಸಲಾಗಿದೆ. ಅವರು ಎಲುಬುಗಳಿಲ್ಲದ  (ಮೂಳೆಗಳಿಲ್ಲದ) ಕೈಕಾಲುಗಳನ್ನು ಹೊಂದಿದ್ದರು  ದೇಹದ ವಿಚಿತ್ರ  ಭಾಗಗಳಿಂದ ಅವು ಹೊರಬರುತ್ತಿದ್ದವು  ಎಂದು ಹೇಳಲಾಗಿದೆ, ಆದ್ದರಿಂದ ಅವರನ್ನು ವಿಕೃತ ಮತ್ತು ತಲೆಕೆಟ್ಟ ಜೀವಿಗಳೆಂದು ವರ್ಣಿಸಲಾಗಿದೆ. ಅವರು ನಮಗಿಂತ  ಭಿನ್ನವಾಗಿದ್ದರು.

ಅವರು ಏಕೆ ಇಷ್ಟು ಭಿನ್ನವಾಗಿರಬಹುದು? ಈಗ ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗುವ ಜೀವನದ ಅಂಶವಿದಾಗಿರಬಹುದು. ನೋಡಿ, ಶಿವನನ್ನೇ ಯಾವಾಗಲೂ ಯಕ್ಷಸ್ವರೂಪ ಎಂದು ವರ್ಣಿಸಲಾಗಿದೆ. ಯಕ್ಷ ಎಂದರೆ ದಿವ್ಯ ಜೀವಿ. ದಿವ್ಯ ಜೀವಿ ಎಂದರೆ ಬೇರೆಲ್ಲಿಂದಲೋ ಬಂದವರು. ಸುಮಾರು 15,000 ವರ್ಷಗಳ ಹಿಂದೆ, ಶಿವನು ಮಾನಸರೋವರಕ್ಕೆ ಬಂದನು, ಇದು ಟಿಬೆಟ್‌ನಲ್ಲಿರುವ ಸರೋವರವಾಗಿದೆ. ಇದು ಟೆಥಿಸ್ ಸಮುದ್ರದ ಅವಶೇಷಗಳಲ್ಲಿ ಒಂದಾಗಿದ್ದು, ಮಾನವ ನಾಗರಿಕತೆಗಳ ಮೂಲವಾಗಿ ಪರಿಗಣಿಸಲಾಗಿದೆ. ಇಂದು, ಇದು ಸಮುದ್ರ ಮಟ್ಟದಿಂದ ಸುಮಾರು 15,000 ಅಡಿ ಎತ್ತರದಲ್ಲಿದೆ, ಆದರೆ ಅದು ವಾಸ್ತವವಾಗಿ ಒಂದು ಸಾಗರವಾಗಿದ್ದು, ಅದು ಮೇಲಕ್ಕೆ ಸರಿದು ಈಗ ಸರೋವರವಾಗಿದೆ.

ಗಣಗಳು ಶಿವನಿಗೆ ನಿಜವಾಗಿಯೂ ಹತ್ತಿರವಾಗಿದ್ದವರು.

ಶಿವನ ಸ್ನೇಹಿತರಾದ ಗಣಗಳು ಮಾನವರಂತೆ ಇರಲಿಲ್ಲ, ಮತ್ತು ಅವರು ಯಾವುದೇ ಮಾನವ ಭಾಷೆಗಳನ್ನು ಮಾತನಾಡುತ್ತಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅವರು ಸಂಪೂರ್ಣ ಕಿವಿಕೊಯ್ಯುವ ಧ್ವನಿಯಲ್ಲಿ(ಕರ್ಕಶ ಧ್ವನಿಯಲ್ಲಿ  )ಮಾತನಾಡುತ್ತಿದ್ದರು. ಶಿವ ಮತ್ತು ಅವನ ಸ್ನೇಹಿತರು ಸಂವಹನ ನಡೆಸಿದಾಗ, ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತಿದ್ದರು, ಆದ್ದರಿಂದ ಮಾನವರು ಅದನ್ನು ಸಂಪೂರ್ಣ, ಕಿವಿಕೊಯ್ಯುವ ಧ್ವನಿ  (ಕರ್ಕಶ ಧ್ವನಿ) ಎಂದು ವರ್ಣಿಸಿದ್ದಾರೆ . ಆದರೆ ಗಣಗಳು ಅವನಿಗೆ ನಿಜವಾಗಿಯೂ ಹತ್ತಿರವಾಗಿದ್ದವರು.

ಗಣಪತಿ ತನ್ನ ತಲೆಯನ್ನು ಕಳೆದುಕೊಂಡ ಕಥೆ ನಿಮಗೆ ತಿಳಿದಿದೆ. ಶಿವನು ಬಂದಾಗ ಈ ಹುಡುಗ ಅವನನ್ನು ತಡೆಯಲು ಪ್ರಯತ್ನಿಸಿದಾಗ, ಶಿವನು ಅವನ ತಲೆಯನ್ನು ಕತ್ತರಿಸಿದ. ಪಾರ್ವತಿ ದುಃಖಿತಳಾಗಿ ಶಿವನಲ್ಲಿ ತಲೆಯನ್ನು ಬದಲಾಯಿಸಲು ಕೇಳಿದಾಗ, ಅವನು ಬೇರೊಂದು ಜೀವಿಯ ತಲೆಯನ್ನು ತೆಗೆದುಕೊಂಡು ಮಗುವಿಗೆ ಅಳವಡಿಸಿದ. ಈ ಬೇರೆ ಜೀವಿಯನ್ನು ಆನೆ ಎಂದು ವರ್ಣಿಸಲಾಗಿದೆ. ಆದರೆ ನೀವು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ, ಯಾರೂ ಅವನನ್ನು ಗಜಪತಿ (ಆನೆಗಳ ಒಡೆಯ) ಎಂದು ಕರೆಯಲಿಲ್ಲ. ನಾವು ಯಾವಾಗಲೂ ಅವನನ್ನು ಗಣಪತಿ (ಗಣಗಳ ಒಡೆಯ) ಎಂದೇ ಕರೆದೆವು. ಶಿವನು ತನ್ನ ಸ್ನೇಹಿತರಲ್ಲಿ ಒಬ್ಬನ ತಲೆಯನ್ನು ತೆಗೆದು ಹುಡುಗನಿಗೆ ಅಳವಡಿಸಿದ.

ಗಣಗಳಿಗೆ ಎಲುಬುಗಳಿಲ್ಲದ ಅಂಗಗಳಿದ್ದವು, ಆದ್ದರಿಂದ ಈ ಹುಡುಗ ಗಣಪತಿಯಾದನು. ಏಕೆಂದರೆ ಈ ಸಂಸ್ಕೃತಿಯಲ್ಲಿ, ಎಲುಬುಗಳಿಲ್ಲದ ಅಂಗ ಎಂದರೆ ಆನೆಯ ಸೊಂಡಿಲು ಎಂದು ಅರ್ಥವಾಗುತ್ತಿತ್ತು, ಆದ್ದರಿಂದ ಕಲಾವಿದರು ಅದನ್ನು ಆನೆಯ ರೂಪದಲ್ಲಿ ಚಿತ್ರಿಸಿದರು - ಆದರೆ ನಿಜವಾಗಿ, ಅವನು ಗಜಪತಿಯಲ್ಲ, ಅವನು ಗಣಪತಿ. ಅವನಿಗೆ ಗಣಗಳಲ್ಲಿ ಒಬ್ಬನ ತಲೆ ಸಿಕ್ಕಿತು, ಮತ್ತು ಶಿವನು ಅವನನ್ನು ಗಣಗಳ ನಾಯಕನನ್ನಾಗಿ ಮಾಡಿದನು.

    Share

Related Tags

Get latest blogs on Shiva