logo
logo

ಶಿವನು ಸ್ಮಶಾನದಲ್ಲಿ ಅಥವಾ ಶ್ಮಶಾನ ಭೂಮಿಯಲ್ಲಿ ಏಕೆ ಕುಳಿತಿರುತ್ತಾನೆ?

ಮರಣದಿಂದ ಸುತ್ತುವರಿದ ಶಿವನನ್ನು ಏಕೆ ಕೆಲವೊಮ್ಮೆ ಸ್ಮಶಾನದಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ? ಈ ನಿರೂಪಣೆಯ ಹಿಂದಿನ ಸಾಂಕೇತಿಕತೆಯನ್ನು ಸದ್ಗುರು ನೋಡುತ್ತಾ ಜೀವನ ಮತ್ತು ಮರಣದ ಕೆಲವು ಮೂಲಭೂತ ಅಂಶಗಳನ್ನು ಅನ್ವೇಷಿಸುತ್ತಾರೆ.

ಸದ್ಗುರು: ಜನರಲ್ಲಿ ನನಗಿರುವ ಏಕೈಕ ಸಮಸ್ಯೆಯೆಂದರೆ ಅವರಲ್ಲಿ ಅಗತ್ಯವಿರುವ ತೀವ್ರತೆಯ ಕೊರತೆ. ಅವರು ಸಾಕಷ್ಟು ತೀವ್ರರಾಗಿದ್ದರೆ, ನಾವು ಪರಮಾತ್ಮನನ್ನು ತಲುಪಲು ಒಂದು ಜೀವಮಾನ ದುಡಿಯಬೇಕಾಗಿರಲಿಲ್ಲ - ಇಂದೇ ಕೆಲಸ ಮುಗಿಯಬಹುದಿತ್ತು. ಮರಣದ ಕ್ಷಣ ಅಥವಾ ಮರಣದ ಸಾಧ್ಯತೆಯು ಹೆಚ್ಚಿನ ಮಾನವರ ಜೀವನದಲ್ಲಿ ಅತ್ಯಂತ ತೀವ್ರವಾದ ಅನುಭವವಾಗಿದೆ. ಹೆಚ್ಚಿನವರು ತಮ್ಮ ಜೀವನದುದ್ದಕ್ಕೂ ಆ ಮಟ್ಟದ ತೀವ್ರತೆಯನ್ನು ಎಂದೂ ಮುಟ್ಟಿರುವುದಿಲ್ಲ. ಅವರ ಪ್ರೀತಿಯಲ್ಲಿ, ಅವರ ನಗುವಿನಲ್ಲಿ, ಅವರ ಆನಂದದಲ್ಲಿ, ಅವರ ಪರವಶತೆಯಲ್ಲಿ, ಅವರ ದುಃಖದಲ್ಲಿ - ಬೇರೆ ಎಲ್ಲಿಯೂ ಅವರು ಆ ಮಟ್ಟದ ತೀವ್ರತೆಯನ್ನು ಮುಟ್ಟುವುದಿಲ್ಲ - ಕೇವಲ ಮರಣದಲ್ಲಿ ಮಾತ್ರ.

ಆ ಕಾರಣಕ್ಕಾಗಿ, ಶಿವನು ಸ್ಮಶಾನ ಅಥವಾ ಕಾಯಾಂತಕ್ಕೆ ಹೋಗಿ ಕಾಯುತ್ತಾ ಕುಳಿತ. ಕಾಯ ಎಂದರೆ "ದೇಹ," ಅಂತ ಎಂದರೆ "ಕೊನೆ." ಕಾಯಾಂತ ಎಂದರೆ "ದೇಹ ಕೊನೆಗೊಳ್ಳುವ ಸ್ಥಳ" - "ಜೀವ ಕೊನೆಗೊಳ್ಳುವ ಸ್ಥಳ" ಅಲ್ಲ. ಇದು ಕಾಯಾಂತ, ಜೀವಾಂತ ಅಲ್ಲ. ನೀವು ಭೂಮಿಯಿಂದ ಪಡೆದುಕೊಂಡ ಎಲ್ಲವನ್ನೂ ಇಲ್ಲೆ ಬಿಟ್ಟು ಹೋಗಬೇಕು. ನಿಮ್ಮ ದೇಹವೇ ನಿಮಗೆ ತಿಳಿದಿರುವುದೆಲ್ಲ ಎಂಬಂತೆ ಜೀವಿಸಿದ್ದರೆ, ಅದನ್ನು ತ್ಯಜಿಸಬೇಕಾದ ಕ್ಷಣವು ನಿಮ್ಮ ಜೀವನದ ಅತ್ಯಂತ ತೀವ್ರ ಕ್ಷಣವಾಗುತ್ತದೆ. ದೇಹದಾಚೆಗಿನ ಏನನ್ನಾದರೂ ನೀವು ತಿಳಿದಿದ್ದರೆ, ಅದು ದೊಡ್ಡ ವಿಷಯವಲ್ಲ. ತಾನು ಯಾರು ಮತ್ತು ತಾನೇನು ಎಂಬುದರ ಸ್ವರೂಪವನ್ನು ಅರಿತವನಿಗೆ, ಕಾಯಾಂತವು ಅಷ್ಟು ದೊಡ್ಡ ಕ್ಷಣವಲ್ಲ. ಅದು ಕೇವಲ ಮತ್ತೊಂದು ಕ್ಷಣ, ಅಷ್ಟೇ. ಆದರೆ ಕೇವಲ ಭೌತಿಕ ದೇಹವಾಗಿ ಬದುಕಿದವರಿಗೆ, ನಿಮ್ಮ ಬಗ್ಗೆ ನಿಮಗೆ ತಿಳಿದಿರುವುದನ್ನೆಲ್ಲ ಬಿಟ್ಟುಕೊಡಬೇಕಾದ ಸಮಯ ಬಂದಾಗ, ಅದು ಬಹಳ ತೀವ್ರವಾದ ಕ್ಷಣವಾಗಲಿದೆ.

ಅಮರತ್ವವು ಎಲ್ಲರಿಗೂ ಸಹಜ ಸ್ಥಿತಿಯಾಗಿದೆ. ಮರಣವು ನೀವು ಮಾಡಿದ ತಪ್ಪು. ಇದು ಜೀವನದ ಬಗ್ಗೆ ತಪ್ಪಾದ ಗ್ರಹಿಕೆ. ಭೌತಿಕ ದೇಹಕ್ಕೆ ಸಂಬಂಧಿಸಿದಂತೆ, ಕಾಯಾಂತ, ದೇಹದ ಕೊನೆಯು ಖಂಡಿತವಾಗಿಯೂ ಬರುತ್ತದೆ. ಆದರೆ ಕೇವಲ ಕಾಯವಾಗಿರುವ ಬದಲು, ನೀವು ಜೀವವಾದರೆ, ನೀವು ಕೇವಲ ಜೀವಂತ ದೇಹವಾಗಿರದೆ ಜೀವಂತ ಜೀವಿಯಾಗಿದ್ದರೆ, ಆಗ ಅಮರತ್ವವು ನಿಮಗೆ ಸಹಜ ಸ್ಥಿತಿಯಾಗುತ್ತದೆ. ನೀವು ಮರ್ತ್ಯರೋ ಅಥವಾ ಅಮರರೋ ಎಂಬುದು ಕೇವಲ ಗ್ರಹಿಕೆಯ ಪ್ರಶ್ನೆ - ಯಾವುದೇ ಅಸ್ತಿತ್ವದ ಬದಲಾವಣೆಯ ಅಗತ್ಯವಿಲ್ಲ.

ಶಿವನು ಸ್ಮಶಾನದಲ್ಲಿ ಕುಳಿತಿದ್ದಾನೆ, ನಿಮ್ಮ ಮತ್ತು ನಿಮ್ಮ ಆಟದಿಂದ ಬೇಸರಗೊಂಡಿದ್ದಾನೆ, ಏಕೆಂದರೆ ನಗರದಾದ್ಯಂತ ನಡೆಯುವ ಇಡೀ ನಾಟಕವು ಸಂಪೂರ್ಣ ಮೂರ್ಖತನದ್ದು. ನಿಜವಾದ ವಿಷಯವು ಸ್ಮಶಾನದಲ್ಲಿ ಮಾತ್ರ ನಡೆಯುತ್ತದೆ.

ಶಿವನು ಸ್ಮಶಾನದಲ್ಲಿ ಕುಳಿತಿದ್ದಾನೆ, ನಿಮ್ಮ ಮತ್ತು ನಿಮ್ಮ ಆಟದಿಂದ ಬೇಸರಗೊಂಡಿದ್ದಾನೆ, ಏಕೆಂದರೆ ನಗರದಾದ್ಯಂತ ನಡೆಯುವ ಇಡೀ ನಾಟಕವು ಸಂಪೂರ್ಣ ಮೂರ್ಖತನದ್ದು. ನಿಜವಾದ ವಿಷಯವು ಸ್ಮಶಾನದಲ್ಲಿ ಮಾತ್ರ ನಡೆಯುತ್ತದೆ.ಅದಕ್ಕಾಗಿಯೇ ಜ್ಞಾನೋದಯವನ್ನು ಸಾಧನೆ ಅಥವಾ ಗಳಿಕೆ ಎಂದು ಕರೆಯದೆ, ಅರಿವು ಎಂದು ಉಲ್ಲೇಖಿಸಲಾಗುತ್ತದೆ. ನೀವು ನೋಡಿದರೆ, ಅದು ನಿಮಗೆ ಇರುತ್ತದೆ. ನೀವು ನೋಡದಿದ್ದರೆ, ಅದು ನಿಮಗೆ ಇರುವುದಿಲ್ಲ. ಇದು ಕೇವಲ ಗ್ರಹಿಕೆಯ ಪ್ರಶ್ನೆ - ಯಾವುದೇ ಮೂಲಭೂತ, ಅಸ್ತಿತ್ವದ ಬದಲಾವಣೆ ಇಲ್ಲ. ನೀವು ಇಂದ್ರಿಯಗಳಿಂದಲ್ಲ, ಆದರೆ ನಿಮ್ಮ ಪ್ರಜ್ಞೆಯಿಂದ ಸಜ್ಜುಗೊಂಡಿದ್ದರೆ, ನೀವು ಕಾಯವನ್ನು ಮಾತ್ರವಲ್ಲದೆ ಜೀವವನ್ನೂ ತಿಳಿಯುತ್ತೀರಿ, ಮತ್ತು ನೀವು ಸ್ವಾಭಾವಿಕವಾಗಿ ಅಮರರಾಗುತ್ತೀರಿ. ನಿಮ್ಮ ಅಮರತ್ವಕ್ಕಾಗಿ ನೀವು ದುಡಿಯಬೇಕಾಗಿಲ್ಲ. ಇದು ಹೀಗೆಯೇ ಇದೆ ಎಂಬುದನ್ನು ನೀವು ಅರಿತುಕೊಳ್ಳಬೇಕಷ್ಟೇ.

ಹೀಗಾಗಿ, ಶಿವನು ತನ್ನ ವಾಸಸ್ಥಾನವನ್ನು ಕಾಯಾಂತ ಅಥವಾ ಸ್ಮಶಾನಕ್ಕೆ ಬದಲಾಯಿಸಿದನು. ಶ್ಮ ಎಂದರೆ ಶವ ಅಥವಾ ಮೃತದೇಹ, ಶಾನ ಎಂದರೆ ಶಯ್ಯ ಅಥವಾ ಹಾಸಿಗೆ. ಸತ್ತ ದೇಹಗಳು ಮಲಗಿರುವ ಸ್ಥಳದಲ್ಲಿ ಅವನು ವಾಸಿಸುತ್ತಾನೆ, ಏಕೆಂದರೆ ಜೀವಂತ ಜನರೊಂದಿಗೆ ಕೆಲಸ ಮಾಡುವುದು ಸಮಯದ ವ್ಯರ್ಥ ಎಂದು ಅವನು ಅರಿತುಕೊಂಡ. ಅವರನ್ನು ಅಗತ್ಯವಿರುವ ತೀವ್ರತೆಯ ಮಟ್ಟಕ್ಕೆ ತರಲು ನಿಮಗೆ ಸಾಧ್ಯವಿಲ್ಲ. ಜನರನ್ನು ಸ್ವಲ್ಪ ತೀವ್ರಗೊಳಿಸಲು ನೀವು ಎಷ್ಟೋ ತಂತ್ರಗಳನ್ನು ಮಾಡಬೇಕಾಗುತ್ತದೆ.

ತೀವ್ರತೆ ಉದ್ಭವಿಸುವುದಿಲ್ಲ ಏಕೆಂದರೆ ನೀವು ಬದುಕುಳಿಯುವ ಸಹಜ ಪ್ರವೃತ್ತಿಯನ್ನು ನಿಮ್ಮೊಳಗೆ ದೊಡ್ಡದಾಗಿಸಿದ್ದೀರಿ. ಈ ಜೀವಂತ ದೇಹದಲ್ಲಿ ಎರಡು ಮೂಲಭೂತ ಶಕ್ತಿಗಳಿವೆ. ಒಂದು ಬದುಕುಳಿಯುವ ಸಹಜ ಪ್ರವೃತ್ತಿ - ಮತ್ತೊಂದು ಅಮಿತವಾಗಿ ವಿಸ್ತರಿಸುವ ಹಂಬಲ. ನೀವು ಬದುಕುಳಿಯುವ ಸಹಜ ಪ್ರವೃತ್ತಿಯನ್ನು ಬಲಪಡಿಸಿದರೆ, ಅದು ಯಾವಾಗಲೂ ಕಡಿಮೆ ಮಟ್ಟದಲ್ಲಿ ಆಡಲು ಪ್ರಯತ್ನಿಸುತ್ತದೆ, ಏಕೆಂದರೆ ಬದುಕುಳಿಯುವುದು ಎಂದರೆ ಸುರಕ್ಷಿತವಾಗಿ ಆಡುವುದು. ನೀವು ಅಮಿತವಾಗುವ ಹಂಬಲವನ್ನು ಬಲಪಡಿಸಿದರೆ, ನೀವು ಅಮಿತ ವಿಸ್ತರಣೆಯನ್ನು ಹುಡುಕುತ್ತಿದ್ದರೆ, ನಿಮ್ಮ ಎಲ್ಲ ಶಕ್ತಿಯು ಅದರ ಮೇಲೆ ಕೇಂದ್ರೀಕೃತವಾಗಿದ್ದರೆ, ಆಗ ಜೀವನದ ಪೂರ್ಣ ತೀವ್ರತೆ ಇರುತ್ತದೆ.

ಬದುಕುಳಿಯುವ ಪ್ರವೃತ್ತಿಯು ಪ್ರತಿಯೊಂದು ಜೀವಿಯಲ್ಲೂ ಪ್ರಬಲವಾಗಿರುತ್ತದೆ. ನಾವು ಮಾನವರಾಗಿ ವಿಕಸನಗೊಂಡ ಹಂತದಲ್ಲಿ, ಉನ್ನತ ಮಟ್ಟದ ಅರಿವು ಮತ್ತು ಬುದ್ಧಿವಂತಿಕೆಯು ನಮ್ಮ ಜೀವನದಲ್ಲಿ ಪ್ರವೇಶಿಸಿದೆ - ಇದು ಬದುಕುಳಿಯುವ ಪ್ರವೃತ್ತಿಯನ್ನು ಹತೋಟಿಯಲ್ಲಿಟ್ಟುಕೊಂಡು ವಿಸ್ತರಿಸುವ ಹಂಬಲವನ್ನು ಹೆಚ್ಚಿಸಬೇಕಾದ ಸಮಯ. ಈ ಎರಡು ಶಕ್ತಿಗಳಲ್ಲಿ, ಒಂದು ಯಾವಾಗಲೂ ನಿಮ್ಮಲ್ಲಿ ತೀವ್ರತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುತ್ತದೆ, ಇನ್ನೊಂದು ಯಾವಾಗಲೂ ನಿಮ್ಮನ್ನು ಮಂದಗತಿಯಲ್ಲಿಡಲು ಪ್ರಯತ್ನಿಸುತ್ತಿರುತ್ತದೆ. ಅಪರೂಪದ ಸಂಪನ್ಮೂಲಗಳನ್ನು ನೀವು ಉಳಿಸಬೇಕಾಗಬಹುದು, ಆದರೆ ಜೀವನ ಅಪರೂಪವಲ್ಲ.

ಶಿವನು ಸ್ಮಶಾನದಲ್ಲಿ ಕುಳಿತಿದ್ದಾನೆ, ನಿಮ್ಮ ಮತ್ತು ನಿಮ್ಮ ಆಟದಿಂದ ಬೇಸರಗೊಂಡು, ಊರಿನಾದ್ಯಂತ ನಡೆಯುವ ಎಲ್ಲಾ ನಾಟಕವೂ ಸಂಪೂರ್ಣ ಮೂರ್ಖತನದ್ದಾಗಿರುವುದರಿಂದ ಬೇಸರಗೊಂಡಿದ್ದಾನೆ. ನಿಜವಾದದ್ದು ಕೇವಲ ಸ್ಮಶಾನದಲ್ಲಿ ನಡೆಯುತ್ತದೆ. ಬಹುಶಃ ಹುಟ್ಟಿನ ಕ್ಷಣದಲ್ಲಿ ಮತ್ತು ಸಾವಿನ ಕ್ಷಣದಲ್ಲಿ ಏನೋ ನಡೆಯುತ್ತಿರುತ್ತದೆ. ಪ್ರಸೂತಿ ಮನೆಗಳು ಮತ್ತು ಸ್ಮಶಾನಗಳು ಮಾತ್ರ ವಿವೇಕಯುತ ಸ್ಥಳಗಳು, ಆದರೆ ಪ್ರಸೂತಿ ಸ್ವಲ್ಪ ಹೆಚ್ಚಾಗಿಯೇ ನಡೆಯುತ್ತಿದೆ.

ಸೀಮಿತವಾಗಿರುವುದು ತಪ್ಪೇ? ಇಲ್ಲ. ಆದರೆ ಸೀಮಿತವಾಗಿರುವುದು ನೋವಿನ ವಿಷಯ. ನೋವಿನಲ್ಲಿರುವುದು ತಪ್ಪೇ? ಇಲ್ಲ. ನೀವು ಅದನ್ನು ಆನಂದಿಸುತ್ತಿದ್ದರೆ, ನನ್ನ ಸಮಸ್ಯೆ ಏನಿದೆ?

ಶಿವನು ಜೀವನವು ಅತ್ಯಂತ ಅರ್ಥಪೂರ್ಣವಾಗಿರುವ ಸ್ಥಳದಲ್ಲಿ ಕುಳಿತಿದ್ದಾನೆ. ಆದರೆ ನೀವು ಭಯಭೀತರಾಗಿದ್ದರೆ, ನೀವು ಬದುಕುಳಿಯುವ ಅಥವಾ ಸ್ವ-ಸಂರಕ್ಷಣೆಯ ಸ್ಥಿತಿಯಲ್ಲಿದ್ದರೆ, ಇದು ನಿಮಗೆ ಅರ್ಥವಾಗುವುದಿಲ್ಲ. ನೀವು ವಿಸ್ತರಿಸಲು ಮತ್ತು ಪರಮಾತ್ಮನನ್ನು ಸ್ಪರ್ಶಿಸಲು ಹಂಬಲಿಸುತ್ತಿದ್ದರೆ ಮಾತ್ರ ಇದು ನಿಮಗೆ ಅರ್ಥವಾಗುತ್ತದೆ. ಬದುಕುಳಿಯಲು ಬಯಸುವವರಲ್ಲಿ ಅವನಿಗೆ ಆಸಕ್ತಿ ಇಲ್ಲ. ಬದುಕುಳಿಯಲು, ನಿಮಗೆ ಕೇವಲ ನಾಲ್ಕು ಕೈಕಾಲುಗಳು ಮತ್ತು ಕೆಲವು ಕಾರ್ಯನಿರ್ವಹಿಸುವ ಮೆದುಳಿನ ಕೋಶಗಳು ಮಾತ್ರ ಬೇಕು. ಅವು ಎರೆಹುಳಗಳೇ ಆಗಿರಲಿ, ಮಿಡತೆಗಳೇ ಆಗಿರಲಿ ಅಥವಾ ಯಾವುದೇ ಇತರ ಜೀವಿಗಳೇ ಆಗಿರಲಿ - ಅವೆಲ್ಲವೂ ಬದುಕುಳಿಯುತ್ತಿವೆ, ಚೆನ್ನಾಗಿಯೇ ಇವೆ. ಬದುಕುಳಿಯಲು ಅಷ್ಟೇ ಮೆದುಳು ನಿಮಗೆ ಬೇಕು. ಆದ್ದರಿಂದ ನೀವು ಬದುಕುಳಿಯುವ ಸ್ಥಿತಿಯಲ್ಲಿದ್ದರೆ, ಸ್ವ-ಸಂರಕ್ಷಣೆಯು ನಿಮ್ಮಲ್ಲಿ ಅತ್ಯಂತ ಪ್ರಬಲವಾಗಿದ್ದರೆ, ಅವನು ನಿಮ್ಮಿಂದ ಬೇಸರಗೊಂಡಿದ್ದಾನೆ - ನೀವು ಸಾಯುವವರೆಗೆ ಕಾಯುತ್ತಿದ್ದಾನೆ.

ಅವನನ್ನು ವಿನಾಶಕ ಎಂದು ಕರೆಯುತ್ತಾರೆ, ನಿಮ್ಮನ್ನು ನಾಶಮಾಡಲು ಅವನಿಗೆ ಇಷ್ಟವಿಲ್ಲ. ಅವನು ಸ್ಮಶಾನದಲ್ಲಿ ಕಾಯುತ್ತಿರುವುದು ದೇಹವು ನಾಶವಾಗುವವರೆಗೆ, ಏಕೆಂದರೆ ದೇಹವು ನಾಶವಾಗುವವರೆಗೆ, ಸುತ್ತಲಿನ ಜನರಿಗೂ ಸಹ ಮರಣ ಎಂದರೇನು ಎಂಬುದು ಅರಿವಾಗುವುದಿಲ್ಲ. ನೀವು ನೋಡಿರಬಹುದು, ತಮ್ಮ ಪ್ರೀತಿಯ ವ್ಯಕ್ತಿ ಸತ್ತಾಗ, ಜನರು ಸತ್ತ ದೇಹದ ಮೇಲೆ ಬೀಳುತ್ತಾರೆ, ಅಪ್ಪಿಕೊಳ್ಳುತ್ತಾರೆ, ಮುದ್ದಿಸುತ್ತಾರೆ, ಅದನ್ನು ಮತ್ತೆ ಜೀವಂತವಾಗಿಸಲು ಪ್ರಯತ್ನಿಸುತ್ತಾರೆ - ಹಲವಾರು ವಿಷಯಗಳನ್ನು ಮಾಡುತ್ತಾರೆ. ಆದರೆ ಒಮ್ಮೆ ದೇಹಕ್ಕೆ ಬೆಂಕಿ ಹಚ್ಚಿದ ಮೇಲೆ, ಯಾರೂ ಎಂದೂ ಜ್ವಾಲೆಗಳನ್ನು ಅಪ್ಪಿಕೊಳ್ಳಲು ಹೋಗುವುದಿಲ್ಲ. ಅವರ ಸ್ವ-ಸಂರಕ್ಷಣೆಯ ಸಹಜ ಪ್ರವೃತ್ತಿ  ಅವರನ್ನು ತಡೆಯುತ್ತದೆ.

ಇದು ಸರಿ ಮತ್ತು ತಪ್ಪಿನ ಪ್ರಶ್ನೆಯಲ್ಲ, ಆದರೆ ಸೀಮಿತ ಜ್ಞಾನ ಮತ್ತು ಅಂತಿಮ ಜ್ಞಾನದ ನಡುವಿನ ವ್ಯತ್ಯಾಸ. ಸೀಮಿತವಾಗಿರುವುದು ತಪ್ಪೇ? ಇಲ್ಲ. ಆದರೆ ಸೀಮಿತವಾಗಿರುವುದು ನೋವಿನ ವಿಷಯ. ನೋವಿನಲ್ಲಿರುವುದು ತಪ್ಪೇ? ಇಲ್ಲ. ನೀವು ಅದನ್ನು ಆನಂದಿಸುತ್ತಿದ್ದರೆ, ನನ್ನ ಸಮಸ್ಯೆ ಏನು? ನಾನು ಯಾವುದಕ್ಕೂ ವಿರುದ್ಧವಲ್ಲ. ನನಗೆ ಇಷ್ಟವಿಲ್ಲದ ಒಂದೇ ವಿಷಯವೆಂದರೆ ನೀವು ಒಂದು ದಿಕ್ಕಿನಲ್ಲಿ ಹೋಗಲು ಬಯಸುತ್ತೀರಿ, ಆದರೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುತ್ತೀರಿ.

ನಾನು ವಿರೋಧಿಸುವ ಏಕೈಕ ವಿಷಯವೆಂದರೆ ಅವಿವೇಕತೆ, ಏಕೆಂದರೆ ಮಾನವ ಜೀವನದ ಸಾರವೆಂದರೆ ನೀವು ಬೇರೆ ಯಾವುದೇ ಜೀವಿಗಿಂತ ಹೆಚ್ಚಿನ ವಿವೇಕವನ್ನು ಹೊಂದಿರುತ್ತೀರಿ - ಅಥವಾ ಹೊಂದಿರಬೇಕು, ಆದರೆ ಬಹಳಷ್ಟು ಜನರು ಅದನ್ನು ತಪ್ಪೆಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಸೃಷ್ಟಿ ಎಂದರೆ ಬುದ್ಧಿವಂತಿಕೆ. ಸೃಷ್ಟಿಕರ್ತ ಎಂದರೆ ಪರಮ ಬುದ್ಧಿವಂತಿಕೆ. ದುರದೃಷ್ಟವಶಾತ್, ಎಲ್ಲ ರೀತಿಯ ಗೊಂದಲದಲ್ಲಿರುವ ಅನೇಕ ಜನರು ದೇವರ ಬಗ್ಗೆ ಮಾತನಾಡುತ್ತಾರೆ, ಮತ್ತು ಹೆಚ್ಚಿನ ಜನರು ಗೊಂದಲದಲ್ಲಿರುವಾಗ ಮಾತ್ರ ದೇವರ ಬಗ್ಗೆ ಮಾತನಾಡುತ್ತಾರೆ.ನೀವು ಚೆನ್ನಾಗಿ, ಬೆಚ್ಚಗಿನ ಸ್ನಾನ ಮಾಡಿದರೆ, ನೀವು ಸಿನಿಮಾ ಹಾಡನ್ನು ಹಾಡುತ್ತೀರಿ. ನಿಮ್ಮನ್ನು ತಣ್ಣಗಿನ ತೀರ್ಥಕುಂಡದಲ್ಲಿ ಹಾಕಿದರೆ - "ಶಿವ! ಶಿವ!" ಕಷ್ಟ ಬಂದಾಗ ಮಾತ್ರ ಶಿವ ನಿಮ್ಮ ನೆನಪಿಗೆ ಬರುತ್ತಾನೆ. ಜೀವನ ನೀವು ಬಯಸಿದಂತೆ ಸಾಗುತ್ತಿದ್ದಾಗ, ನೀವು ಎಲ್ಲ ರೀತಿಯ ಜನರ ಮತ್ತು ಎಲ್ಲ ರೀತಿಯ ವಿಷಯಗಳ ಬಗ್ಗೆ ಯೋಚಿಸುತ್ತೀರಿ. ಯಾರಾದರೂ ನಿಮ್ಮ ತಲೆಗೆ ಗನ್ ಹಿಡಿದರೆ - "ಶಿವ! ಶಿವ!" ಅವನು ಕರೆಯಲು ತಪ್ಪಾದ ವ್ಯಕ್ತಿ. ಅವನು ಸ್ಮಶಾನದಲ್ಲಿ ಕಾಯುತ್ತಿರುತ್ತಾನೆ. ಯಾರಾದರೂ ನಿಮ್ಮ ತಲೆಗೆ ಗನ್ ಹಿಡಿದಾಗ, ನಿಮ್ಮನ್ನು ರಕ್ಷಿಸಲು ಶಿವನನ್ನು ಕರೆದರೆ - ಅವನು ರಕ್ಷಿಸುವುದಿಲ್ಲ.

ನೀವು ಕೇವಲ ಜೀವಂತ ದೇಹವಲ್ಲದೆ ಜೀವಂತ ಜೀವಿಯಾಗಿದ್ದರೆ, ಆಗ ಅಮರತ್ವವು ನಿಮಗೆ ಸಹಜ ಸ್ಥಿತಿಯಾಗಿರುತ್ತದೆ.

ಜೀವನದಲ್ಲಿ ಹಿಂದಕ್ಕೆ ತಿರುಗಿಸಲು ಪ್ರಯತ್ನಿಸುವುದು ಒಂದೇ ಕೆಲಸ ಆಗದ ವಿಷಯ. ನೀವು ಮುಂದಕ್ಕೆ ಓಡಿದರೆ, ಯಾವ ದಿಕ್ಕಿನಲ್ಲಿ ಹೋದರೂ, ಏನು ಮಾಡಲು ಬಯಸಿದರೂ - ನೀವು ಹಾಡುತ್ತೀರಿ, ನೀವು ನೃತ್ಯ ಮಾಡುತ್ತೀರಿ, ನೀವು ಧ್ಯಾನ ಮಾಡುತ್ತೀರಿ, ನೀವು ಅಳುತ್ತೀರಿ, ನೀವು ನಗುತ್ತೀರಿ - ಅದು ನಿಮ್ಮನ್ನು ಹೆಚ್ಚಿನ ತೀವ್ರತೆಯ ಮಟ್ಟಕ್ಕೆ ಕೊಂಡೊಯ್ಯುವವರೆಗೆ, ಎಲ್ಲವೂ ಕೆಲಸ ಮಾಡುತ್ತದೆ. ನೀವು ಅದನ್ನು ಹಿಂದಕ್ಕೆ ಸುರುಳಿಸಲು ಪ್ರಯತ್ನಿಸಿದರೆ, ಅದು ಕೆಲಸ ಮಾಡುವುದಿಲ್ಲ. ಹೆಚ್ಚಿನ ಮಾನವರನ್ನು ದುಃಖಿತರನ್ನಾಗಿ ಮಾಡಲು ನೀವು ಕತ್ತಿಯಿಂದ ಚುಚ್ಚಬೇಕಾಗಿಲ್ಲ. ನೀವು ಅವರನ್ನು ಒಂಟಿಯಾಗಿ ಬಿಟ್ಟರೆ ಸಾಕು, ಅವರು ದುಃಖಿತರಾಗುತ್ತಾರೆ. ಅವರ ಸ್ವ-ಸಂರಕ್ಷಣೆಯ ಸಹಜ ಪ್ರವೃತ್ತಿಯು ಸಮಂಜಸ ಮಿತಿಯನ್ನು ದಾಟಿ, ಜೀವನವನ್ನು ಕುಗ್ಗಿಸಲು ಮತ್ತು ಹಿಂದಕ್ಕೆ ತಿರುಗಿಸಲು ಪ್ರಯತ್ನಿಸುತ್ತಿದೆ. ಸ್ಮಶಾನದಲ್ಲಿ ಕುಳಿತು, ಇದು ಶಿವನ ಸಂದೇಶ: ನೀವು ಸತ್ತರೂ ಸಹ, ಅದು ಕೆಲಸ ಮಾಡುತ್ತದೆ, ಆದರೆ ನೀವು ಜೀವನವನ್ನು ಕುಗ್ಗಿಸಿದರೆ, ಅದು ಕೆಲಸ ಮಾಡುವುದಿಲ್ಲ. ನೀವು ಜೀವನವನ್ನು ಕುಗ್ಗಿಸುತ್ತೀರೋ ಅಥವಾ ಜೀವನವನ್ನು ನಡೆಯಲು ಬಿಡುತ್ತೀರೋ ಎಂಬುದು ನೀವು ಏನು ಮಾಡುತ್ತೀರಿ ಮತ್ತು ಏನು ಮಾಡುವುದಿಲ್ಲ ಎಂಬುದರ ಮೇಲೆ ಅವಲಂಬಿತವಾಗಿಲ್ಲ, ಆದರೆ ಈ ಜೀವನ ಪ್ರಕ್ರಿಯೆ ಈಗ ಎಷ್ಟು ಉಕ್ಕುವ ಮತ್ತು ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.

    Share

Related Tags

Get latest blogs on Shiva