ದಯವಿಟ್ಟು ಮಹಾಶಿವರಾತ್ರಿ ವೆಬ್ ಪುಟಕ್ಕೆ ಭೇಟಿ ನೀಡಿ, ಅಲ್ಲಿರುವ “ಖುದ್ದಾಗಿ ಬನ್ನಿ” ಭಾಗದಲ್ಲಿ ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಿ. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ನಿಮ್ಮ ಪ್ರಶ್ನೆಯನ್ನು ಅಲ್ಲಿಯೇ ಕೇಳಬಹುದು. ವಿವಿಧ ಆಸನದ ಆಯ್ಕೆಗಳನ್ನು ನಿಮಗೆ ವಿವರಿಸಲು 4-7 ದಿನಗಳೊಳಗೆ ಸ್ವಯಂ-ಸೇವಕರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಗಮನಿಸಿ: ಕಾರ್ಯಕ್ರಮಕ್ಕಿರುವ ಅಪಾರವಾದ ಪಾಲ್ಗೊಳ್ಳುವಿಕೆಯ ಕಾರಣದಿಂದ, ನಿಮಗೆ ಈ ಸಮಯದೊಳಗೆ ಕರೆ ಮಾಡಿ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಸಾಧ್ಯವಾಗದಿದ್ದರೆ, ನೀವು ಆಯಾ ಸ್ಥಳೀಯ ಕೇಂದ್ರಗಳಲ್ಲಿರುವ ನೋಂದಣಿ ಕೇಂದ್ರಗಳಿಗೆ ಕರೆ ಮಾಡಬಹುದು.
ನಿಮ್ಮ ಆಯ್ಕೆಯ ವಿಭಾಗವನ್ನು ಸೂಚಿಸಿದ ನಂತರ, ಕಾಣಿಕೆಯ ಲಿಂಕ್-ಅನ್ನು ಹೊಂದಿದ ಇ-ಮೇಲನ್ನು ನಿಮಗೆ 24- 48 ಗಂಟೆಗಳೊಳಗೆ ಕಳುಹಿಸಲಾಗುತ್ತದೆ. ಈ ಇ-ಮೇಲ್-ನ ಶೀರ್ಷಿಕೆ, “please complete your donation” ಎಂದಿರುತ್ತದೆ.
ದಯವಿಟ್ಟು ನಿಮ್ಮ ಸ್ಪ್ಯಾಮ್ ಫೋಲ್ಡರ್-ಅನ್ನು ಪರಿಶೀಲಿಸಿ, ಇಮೇಲ್ ಅಲ್ಲಿಗೆ ಬರುವ ಸಾಧ್ಯತೆಯಿರುತ್ತದೆ. ಕಾಣಿಕೆಯ ಲಿಂಕ್ 30 ದಿನಗಳವರೆಗೆ ಸಕ್ರಿಯವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
ಹೌದು, ಮಹಾಶಿವರಾತ್ರಿಯ ನೋಂದಣಿ ಪ್ರಕ್ರಿಯೆಯಲ್ಲಿ ಬಳಸಿದ, ಸರ್ಕಾರದಿಂದ ನೀಡಲಾಗಿರುವ ಅಂಗೀಕಾರಾರ್ಹ ಫೋಟೋ ಐಡಿ ಕಾರ್ಡ್-ಅನ್ನು ದಯವಿಟ್ಟು ತನ್ನಿ.
ಹೊರದೇಶದಿಂದ ಬರುತ್ತಿರುವವರಿಗೆ ಅಂಗೀಕಾರಾರ್ಹ ವೀಸಾ ಸಹಿತವಿರುವ ಪಾಸ್ ಪೋರ್ಟ್ ಕಡ್ಡಾಯ.
ಕಾರ್ಯಕ್ರಮದ ದಿನದಂದು, ನೋಂದಣಿ ಮಾಡಿಕೊಂಡಿರುವವರಿಗೆ ಚೆಕ್-ಇನ್ ಕೌಂಟರ್-ಗಳು ಮಧ್ಯಾಹ್ನ 10 am to 5 pm ರಿಂದ ತೆರೆದಿರುತ್ತದೆ. ಶೌಚಾಲಯಗಳು ಮತ್ತು ಉಪಹಾರ / ಅಲ್ಪಾಹಾರ ಸೌಲಭ್ಯಗಳು ಆಚರಣೆಯ ಸ್ಥಳದಲ್ಲಿ ಲಭ್ಯವಿದೆ. ಇಮೇಲ್ ಮೂಲಕ ಕಳುಹಿಸಲಾದ ನಿಮ್ಮ ಇ-ಪಾಸ್-ನ ಪ್ರಿಂಟ್ ಔಟ್-ಅನ್ನು ದಯವಿಟ್ಟು ತನ್ನಿ.
ಮಹಾಶಿವರಾತ್ರಿಯನ್ನು ಇಂಗ್ಲಿಷಿನ ಜೊತೆ ತಮಿಳು, ಹಿಂದಿ ಮತ್ತು ಮ್ಯಾಂಡರಿನ್ ಅನುವಾದದೊಂದಿಗೂ ನಡೆಸಿಕೊಡಲಾಗುತ್ತದೆ.
ಹೌದು, ದಯವಿಟ್ಟು ನಿಮ್ಮ ಔಷಧಿಯನ್ನು ಜೊತೆಗೆ ತನ್ನಿ.
ಕಾರ್ಯಕ್ರಮದಾದ್ಯಂತ ಕುರ್ಚಿಗಳನ್ನು ಒದಗಿಸಲಾಗುವುದು.
ಮಹಾಶಿವರಾತ್ರಿಯ ಸಂದರ್ಭದಲ್ಲಿ, ಮಕ್ಕಳ ಅಥವಾ ಸಣ್ಣ ವಯಸ್ಸಿನವರ ಆರೈಕೆ ಮಾಡಲು ಸೌಲಭ್ಯಗಳು ನಮ್ಮ ಬಳಿಯಿಲ್ಲ. ನೀವು ಈ ಕಾರ್ಯಕ್ರಮಕ್ಕೆ ಬಂದಾಗ, ಅವರನ್ನು ಮನೆಯಲ್ಲಿ ಯಾರಾದರೂ ನೋಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿಬೇಕೆಂದು ವಿನಂತಿಸುತ್ತೇವೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರು 10 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಇಚ್ಛಿಸಿದರೆ ನೀವು ನಿಮ್ಮ ಕುಟುಂಬದೊಂದಿಗೆ ಕೊಯಮತ್ತೂರುನಲ್ಲಿ ತಂಗಬಹುದು ಮತ್ತು ಮಹಾಶಿವರಾತ್ರಿಯಂದು ಎಲ್ಲರನ್ನೂ ಕರೆತರಬಹುದು.
ಇದೊಂದು ದೊಡ್ಡ ಪ್ರಮಾಣದ ಕಾರ್ಯಕ್ರಮವಾದ್ದರಿಂದ, ಯಾವುದೇ ನಿರಾಸೆಯನ್ನು ತಪ್ಪಿಸಲು, 15 ದಿನಗಳಿಗಿಂತ ಮುಂಚಿತವಾಗಿ ನೀವು ನೋಂದಣಿ ಮಾಡುವುದು ಉತ್ತಮ. ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವುದು ಆಸನಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.
ನೀವು ಕಾಣಿಕೆ ನೀಡಿದ ಒಂದು ದಿನದೊಳಗಾಗಿ, ನಿಮಗೆ ಕಾಣಿಕೆಯ ರಸೀದಿ ಮತ್ತು ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ದೃಢೀಕರಣ ಇಮೇಲ್-ಅನ್ನು ಕಳುಹಿಸಲಾಗುವುದು. ಕಾರ್ಯಕ್ರಮವು ಹತ್ತಿರವಾಗುತ್ತಿದ್ದಂತೆ, ಇಮೇಲ್ ಮೂಲಕ ಪಾಸ್-ಅನ್ನು ಕಳುಹಿಸಲಾಗುವುದು.
ಹೌದು, ಮಹಾಶಿವರಾತ್ರಿಯ ಕಾರ್ಯಕ್ರಮವು ಎಲ್ಲರಿಗೂ ತೆರದಿರುತ್ತದೆ.
ಎಲ್ಲಾ ವಿಭಾಗದಲ್ಲೂ, ಒಬ್ಬರಿಗೆ ಒಂದು ಪಾಸ್. ಸೀಟಿಂಗ್ ಪಾಸ್-ಅನ್ನು ವರ್ಗಾಯಿಸಲಾಗದು.
ಹೌದು, ಕಾಣಿಕೆಯನ್ನು ಯಾರಾದರೂ ನೀಡಬಹುದು. ಅಂತೆಯೇ, ರಸೀದಿಯನ್ನು ಕಾಣಿಕೆ ನೀಡಿದವರ ಹೆಸರಿನಲ್ಲಿಯೇ ನೀಡಲಾಗುತ್ತದೆ. ನೀವು ಕಾಣಿಕೆಯನ್ನು ಕಂತುಗಳಲ್ಲಿ ಮಾಡಲು ಸಾಧ್ಯವಿಲ್ಲ.
ಇಲ್ಲ.
ಸೀಮಿತ ಪಾರ್ಕಿಂಗ್ ಸ್ಥಳಗಳು ಲಭ್ಯವಿರುತ್ತದೆ. ವಾಹನಗಳನ್ನು ಪಾರ್ಕ್ ಮಾಡುವುದು ಮಾಲೀಕರ ರಿಸ್ಕ್-ನಲ್ಲಿ ಮತ್ತು ಕಾರ್ಯಕ್ರಮದ ಆಯೋಜಕರು ಯಾವುದೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಿಲ್ಲ.
ಹೌದು, ನೀವು ಪಾಲ್ಗೊಳ್ಳಬಹುದು.
ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಆಶ್ರಮದಲ್ಲಿರುವಾಗ ಸಭ್ಯ ವಸ್ತ್ರಶೈಲಿಯನ್ನು ಅನುಸರಿಸಿರಿ. ಹೆಂಗಸರು ಮತ್ತು ಗಂಡಸರಿಬ್ಬರೂ ಭುಜಗಳು, ತೋಳಿನ ಮೇಲ್ಭಾಗ, ಮಣಿಗಂಟಿನ ತನಕ ಕಾಲುಗಳು ಮತ್ತು ಮೇಲ್-ಹೊಟ್ಟೆಯು ಮುಚ್ಚುವಂತೆ ಉಡುಗೆಯನ್ನು ಧರಿಸಿರಬೇಕು.
ತಕ್ಕುದಾದ ಪಾಶ್ಚಾತ್ಯ ಉಡುಪುಗಳು: ಪುರುಷರು ಮತ್ತು ಮಹಿಳೆಯರಿಗೆ ಮಣಿಗಂಟಿನ ತನಕದ ಪ್ಯಾಂಟ್ಗಳು (ಕ್ಯಾಪ್ರಿಸ್ ಅಥವಾ ಶಾರ್ಟ್ಸ್-ಗಳು ನಿಷಿದ್ಧ) ಮತ್ತು ಮೇಲ್-ತೋಳುಗಳು ಕಾಣದಿರುವ ಉದ್ದನೆಯ ಶರ್ಟ್ಗಳು. ನಿಮ್ಮ ಆರಾಮಕ್ಕಾಗಿ ಮತ್ತು ಸ್ಥಳೀಯ ಸಂಸ್ಕೃತಿಯ ಬಗ್ಗೆ ಗೌರವದ ಸಂಕೇತವಾಗಿ ಬಿಗಿಯಾದ ಉಡುಪುಗಳನ್ನು ಧರಿಸಬೇಡಿ.
ಯಕ್ಷ ಮತ್ತು ಮಹಾಶಿವರಾತ್ರಿಯ ಸಮಯದಲ್ಲಿ, ಭಾರತೀಯ ಸಂಸ್ಕೃತಿಯ ಉಡುಗೆ ತೊಡುವುದನ್ನು ಪ್ರೋತ್ಸಾಹಿಸಲಾಗುತ್ತದೆ.
ಡಿಸೆಂಬರ್-ನಿಂದ ಮಾರ್ಚಿಯವರೆಗೆ, ಹವಾಮಾನವು ರಾತ್ರಿಯ ಹೊತ್ತು ತಣ್ಣಗೆ ಮತ್ತು ದಿನದಲ್ಲಿ ಬೆಚ್ಚಗಿರುತ್ತದೆ. ಕನಿಷ್ಠ ಉಷ್ಣಾಂಶ 17°C (62.6°F) ಮತ್ತು ಗರಿಷ್ಠ ಉಷ್ಣಾಂಶ 35°C (95°F) ತಲುಪಬಹುದು.
ಯೋಗ ಕೇಂದ್ರದಲ್ಲಿ ತೀವ್ರತರವಾದ ನೀರಿನ ಕೊರತೆಯ ಕಾರಣದಿಂದ, ಬಟ್ಟೆಗಳನ್ನು ತೊಳೆಯುವುದು ಸಾಧ್ಯವಾಗುವುದಿಲ್ಲ. ಲಾಂಡ್ರಿಯ ಸೌಲಭ್ಯ ಲಭ್ಯವಿರುವುದಿಲ್ಲ. ಕಾರ್ಯಕ್ರಮದ ಪೂರ್ತಿ ಅವಧಿಯವರೆಗೆ ಸಾಕಾಗುವಷ್ಟು ಬಟ್ಟೆಗಳನ್ನು ತನ್ನಿ.
ಕೊಯಮತ್ತೂರು ನಗರದಿಂದ ಈಶ ಯೋಗ ಕೇಂದ್ರಕ್ಕೆ ಬರಲು ದಿನಪೂರ್ತಿ ಸಿಟಿಬಸ್ಗಳೂ, ಟ್ಯಾಕ್ಸೀಗಳೂ ದೊರೆಯುತ್ತವೆ. ಗಾಂಧಿಪುರಂ ಸಿಟಿ ಬಸ್ ನಿಲ್ದಾಣದಿಂದ, ಕೊಯಮತ್ತೂರಿನಿಂದ ಈಶ ಯೋಗ ಕೇಂದ್ರಕ್ಕೆ, ಬೆಳಿಗ್ಗೆ 5.30-ಯಿಂದ ಬಸ್ ನಂ. 14D-ನ ಸೇವೆಯು ಆರಂಭವಾಗುತ್ತದೆ.
ಈಶ ಟ್ರಾವೆಲ್ ಸಹಾಯವಾಣಿ: 9442615436, 0422-2515430
ಟ್ಯಾಕ್ಸಿ: 0422-40506070, ಏರ್ಪೋರ್ಟ್ ಪ್ರಿಪೇಯ್ಡ್: 99764 94000,
ಫಾಸ್ಟ್ ಟ್ರ್ಯಾಕ್: 0422-2200000 (ದಯವಿಟ್ಟು ಶುಲ್ಕ ಪರಿಶೀಲಿಸಿ ಮತ್ತು ಮುಂಚಿತವಾಗಿ ಕಾಯ್ದಿರಿಸಿ).
ಮೊಬೈಲ್ ಯಾಪ್-ಗಳ ಮೂಲಕ ಓಲಾ / ಊಬರ್ ಟ್ಯಾಕ್ಸಿಗಳು.
ಇಲ್ಲ, 10 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಮತ್ತು ದೈಹಿಕವಾಗಿ ಆರೋಗ್ಯವಾಗಿರುವವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
ಕಾರ್ಯಕ್ರಮದ ಸ್ವರೂಪದಿಂದಾಗಿ, ಮತ್ತು ನೀವು ಅದರ ಸಂಪೂರ್ಣ ಲಾಭ ಪಡೆದುಕೊಳ್ಳಲು, ಮೋಬೈಲ್ ಫೋನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.
ಗಮನಿಸಿ: ಮೊಬೈಲ್ ಫೋನ್ ಚಾರ್ಜಿಂಗ್ ಸೌಕರ್ಯ ಲಭ್ಯವಿಲ್ಲ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮಹಾ ಅನ್ನದಾನವನ್ನು ಮಾಡಲಾಗುತ್ತದೆ. ನಿಮ್ಮ ಪಥ್ಯಕ್ಕನುಸಾರವಾಗಿ ನೀವು ಸ್ವಂತ ಆಹಾರವನ್ನು ತರಬೇಕಿದ್ದರೆ, ನೀವು ಆರೋಗ್ಯಕರ ಸಸ್ಯಾಹಾರಿ ಆಹಾರವನ್ನು ತರಬಹುದು.
ಇಲ್ಲ.
ಕಾರ್ಯಕ್ರಮವು ಸಂಜೆ 6-ಕ್ಕೆ ಆರಂಭವಾಗುತ್ತದೆ. ದಯವಿಟ್ಟು 5 ಗಂಟೆಗೆ ಬಂದು ಕುಳಿತುಕೊಳ್ಳಿ. ದೇವಿ ಮೆರವಣಿಗೆಯು ಸುಮಾರು 7 ಗಂಟೆಯಷ್ಟರಲ್ಲಿ ಆರಂಭವಾಗುತ್ತದೆ.
ಸದ್ಗುರುಗಳು ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುತ್ತಾರೆ. ಆದ ಕಾರಣ, ಇದು ಸಾಧ್ಯವಾಗದಿರಬಹುದು. ನಿಮ್ಮನ್ನು ನೀವು ಸಂಪೂರ್ಣವಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಮ್ಮನ್ನು ನೀವು ನೂರಕ್ಕೆ ನೂರರಷ್ಟು ತೊಡಗಿಸಿಕೊಂಡರೆ, ಸದ್ಗುರುಗಳಿಗೆ ನಮಗೆ ಮಾರ್ಗದರ್ಶನ ನೀಡಲು ಅನುಕೂಲವಾಗುತ್ತದೆ.
ಒಂದು ಪ್ರಬಲ ಶಕ್ತಿ ಮೂಲದ ಚೈತನ್ಯವನ್ನು ಮೈಗೂಡಿಸಿಕೊಳ್ಳಲು ಅದನ್ನು ಬಲಮುರಿಯಾಗಿ ಸುತ್ತುವ ಪ್ರಕ್ರಿಯೆಯನ್ನು ಪ್ರದಕ್ಷಿಣೆಯೆನ್ನುತ್ತಾರೆ. ಈಶ ಯೋಗ ಕೇಂದ್ರವಿರುವ ಹನ್ನೊಂದು ಡಿಗ್ರಿ ಅಕ್ಷಾಂಶದಲ್ಲಿ ಇದು ವಿಶೇಷವಾಗಿ ಪ್ರಭಾವಪೂರ್ಣವಾಗಿರುತ್ತದೆ. ಸದ್ಗುರುಗಳಿಂದ ವಿರಚಿತವಾದ ‘ಆದಿಯೋಗಿ ಪ್ರದಕ್ಷಿಣೆ’ಯ ಪ್ರಕ್ರಿಯೆಯು, ಆದಿಯೋಗಿಯ ಅನುಗ್ರಹಕ್ಕೆ ಪಾತ್ರರಾಗಲು ಸಹಾಯ ಮಾಡುತ್ತದೆ. ಈ ಅನುಗ್ರಹವು ನಿಮ್ಮ ಪರಮ ಮುಕ್ತಿಯೆಡೆಗಿನ ನಿಮ್ಮ ಹಾತೊರೆತವನ್ನು ಉತ್ತೇಜಿಸುವುದು. ಇದನ್ನು ಎಲ್ಲರೂ ಮಾಡಬಹುದು.
ಪ್ರದಕ್ಷಿಣೆಯ ಸಮಯ: ಮಾರ್ಚಿ 4 – ಬೆಳಿಗ್ಗೆ 6:00 ರಿಂದ ಅಪರಾಹ್ನ 2:00 ರವರೆಗೆ. ಮಾರ್ಚಿ 5 – ಬೆಳಿಗ್ಗೆ 6 ರಿಂದ.
ಯಕ್ಷ ಮೂರು ದಿನದ ಕಾರ್ಯಕ್ರಮವಾಗಿದ್ದು, ಅದರ ನಂತರದ ಮಹಾಶಿವರಾತ್ರಿ ಒಂದು ರಾತ್ರಿಯ ಕಾರ್ಯಕ್ರಮ.
ಮಾರ್ಚಿ 1 – 3: ಯಕ್ಷ (ಪ್ರತಿ ಸಂಜೆ 6 – 8)
ಮಾರ್ಚಿ 4: ಮಹಾಶಿವರಾತ್ರಿ (ಸಂಜೆ 6 ರಿಂದ – ಬೆಳಿಗ್ಗೆ 6 ರವರಗೆ)
ಹೌದು, ನೀವು ಸಾಮಾನ್ಯ ಕಾಣಿಕೆಯನ್ನು ಇಲ್ಲಿ ನೀಡಬಹುದು.
ಗಮನಿಸಿ: ಈ ಲಿಂಕ್ ಬಳಸಿ ನೀಡಿದ ಕಾಣಿಕೆಯನ್ನು ಸೀಟಿಂಗ್ ಪಾಸ್ ಅಥವಾ ಬೇರೆ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವುದಿಲ್ಲ.
ಹೌದು, ಈ ರೀತಿಯಾಗಿ ಸಾಮಾನ್ಯ ಕಾಣಿಕೆಯನ್ನು ಕೊಡುವುದು ಸಾಧ್ಯವಿದೆ. ನೀವು ಭಾರತದ ಖಾತೆಯಿಂದ ಕಾಣಿಕೆಯನ್ನು ನೀಡುತ್ತಿದ್ದರೆ, ನೀವು ಭಾರತದ ಮೊಬೈಲ್ ನಂಬರ್, ಭಾರತದ ವಿಳಾಸ ಮತ್ತು ಪ್ಯಾನ್ ನಂಬರ್-ಅನ್ನು ಒದಗಿಸಬೇಕು.
ನೀವು ವಿದೇಶಿ ಖಾತೆಯಿಂದ ಕಾಣಿಕೆಯನ್ನು ನೀಡುತ್ತಿದ್ದರೆ, ನೀವು ವಿದೇಶದ ಮೊಬೈಲ್ ನಂಬರ್, ವಿದೇಶದ ವಿಳಾಸ ಮತ್ತು ಪಾಸ್ಪೋರ್ಟ್ ಪ್ರತಿಯನ್ನು ಒದಗಿಸಬೇಕು.
ಸೀಟಿಂಗ್ ಪಾಸ್-ಗಳ ವಿಷಯದಲ್ಲಿ, ರಾಷ್ಟ್ರೀಯತೆ ಮತ್ತು ವಸತಿಯ ದೇಶವನ್ನವಲಂಬಿಸಿ ಒಂದೇ ಖಾತೆಯಿಂದ (ಭಾರತ ಅಥವಾ ವಿದೇಶೀ) ಹಣವನ್ನು ಪಾವತಿಸಬೇಕು.
ಮಂತ್ರ ಪಠಣೆಯನ್ನು ಮಾಡಬಹುದು.
ಹೌದು.
ಮಹಾಶಿವರಾತ್ರಿಯ ಸಾಧನೆಯು ಅದ್ಭುತ ಸಾಧ್ಯತೆಗಳ ರಾತ್ರಿಯಾದ ಮಹಾಶಿವರಾತ್ರಿಗೆ ಸಿದ್ಧತೆಯ ಪ್ರಕ್ರಿಯೆಯಾಗಿದೆ. ಏಳು ವರ್ಷದ ಮೇಲ್ಪಟ್ಟ ಯಾರಾದರೂ ಈ ಸಾಧನೆಯಲ್ಲಿ ಭಾಗವಹಿಸಬಹುದು. ಇದನ್ನು ಮಾರ್ಚಿ 4, 2019 ಮಹಾಶಿವರಾತ್ರಿಯಂದು ಮುಕ್ತಾಯವಾಗುವ ರೀತಿಯಲ್ಲಿ 40, 21, 14, 7 ಅಥವಾ 3 ನಿರಂತರ ದಿನಗಳ ಕಾಲಾವಧಿಯಲ್ಲಿ ಮಾಡಬಹುದು. ಈ ಸಾಧನೆಯು ಧ್ಯಾನಲಿಂಗದಲ್ಲಿ ಅಂತ್ಯಗೊಳ್ಳುತ್ತದೆ. (ಅಥವಾ ಮನೆಯಲ್ಲಿ ಅಂತ್ಯಗೊಳ್ಳುತ್ತದೆ)
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಮಹಾಶಿವರಾತ್ರಿ ಸಾಧನೆಯ ಪುಟಕ್ಕೆ ಭೇಟಿ ನೀಡಿ.
ಮಂತ್ರ ಪಠಣೆಯನ್ನು ಮತ್ತು ಶಿವ ನಮಸ್ಕಾರ ಮಾಡುವ ರೀತಿಯನ್ನು ಈ ವೀಡಿಯೋವಿನಲ್ಲಿ ನೋಡಬಹುದು. video here
ಯಕ್ಷ, ಮಹಾಶಿವರಾತ್ರಿಯ ಮುನ್ನ ನಡೆಯುವ ಸಂಗೀತ ಮತ್ತು ನೃತ್ಯದ ಹರ್ಷೋಲ್ಲಾಸಭರಿತ ಉತ್ಸವ. ಇದು ಮಾರ್ಚಿ 1-3, 2019 ರಂದು ನಡೆಯುತ್ತದೆ.
ನಮ್ಮ ದೇಶದ ಪ್ರದರ್ಶನ ಕಲೆಗಳ ವೈಶಿಷ್ಟತೆ, ಶುದ್ಧತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ, ಈಶ ಫೌಂಡೇಶನ್ ವಾರ್ಷಿಕವಾಗಿ ಹೆಸರಾಂತ ಕಲಾವಿದರ ಪ್ರದರ್ಶನಗಳನ್ನೊಳಗೊಂಡ, “ಯಕ್ಷ” ಎಂಬ ಮೂರು ದಿನದ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸುತ್ತದೆ.
ಭಾರತದ ಭವ್ಯ ಪ್ರಾಚೀನ ಸಂಸ್ಕೃತಿಯ ಪರಂಪರೆಯಲ್ಲಿ ತಲ್ಲೀನವಾಗಲು ನಿಮ್ಮನ್ನು ನಾವು ಆಮಂತ್ರಿಸುತ್ತೇವೆ.
ಸದ್ಗುರುಗಳು ಯಾವುದೇ ನಿರ್ದಿಷ್ಟ ಸ್ಥಾನವನ್ನು ಸೂಚಿಸಿಲ್ಲ. ನಿಮಗೆ ಆರಾಮವೆನಿಸುವ ರೀತಿಯಲ್ಲಿ ನಿಮ್ಮ ಕೈಗಳು / ಅಂಗೈಗಳನ್ನು ಇರಿಸಬಹುದು.
ಸಾಧನೆಯ ಅವಧಿಯ ಉದ್ದಕ್ಕೂ ತೊಡಬೇಕು.
ಸಾಧನೆಯ ಅವಧಿಯಲ್ಲಿ ಯಾವುದೇ ಕಾರಣಕ್ಕಾಗಿಯೂ ಕಪ್ಪು ಬಟ್ಟೆಯನ್ನು ತೆಗೆದಿರಿಸಬಾರದು.
ವಿಭೂತಿಯನ್ನು ಮಾತ್ರ ಬಳಸಿ. ನೈಜವಾದ ವಿಭೂತಿಯೆಂದು ಖಚಿತಪಡಿಸಿಕೊಳ್ಳಲು, ಈಶದಿಂದ ಪಡೆದಿರುವ ವಿಭೂತಿಯನ್ನು ಬಳಸುವುದು ಉತ್ತಮ (ಈ ವಿಭೂತಿಯನ್ನು ಪವಿತ್ರೀಕರಿಸಲಾಗಿರುತ್ತದೆ ಕೂಡ).
ಸಾಮಾನ್ಯವಾಗಿ ಬೇವಿನ ಅಥವಾ ಬಿಲ್ವದ ಎಲೆಗಳು ಭಾರತೀಯ ಮಳಿಗೆಗಳಲ್ಲಿ ಪ್ರಪಂಚದಾದ್ಯಂತ ದೊರಕುತ್ತದೆ. ನೀವು ಬೇವಿನ ಪುಡಿಯನ್ನು ಖರೀದಿಸಿ, ಅದನ್ನು ಉಂಡೆಯನ್ನಾಗಿ ಮಾಡಿ, ನೀರಿನಲ್ಲಿ ಸೇರಿಸಿ ಸೇವಿಸಬಹುದು. ಇವೆರಡೂ ದೊರಕದಿದ್ದಲ್ಲಿ, ಸಾಧನೆಯ ಅಂತ್ಯದಲ್ಲಿ ಇದನ್ನು ಮಾಡದಿರಬಹುದು.
ಯಾವುದೇ ನಿರ್ದಿಷ್ಟ ಕ್ರಮಾನುಗತಿಯಿಲ್ಲ. ಶಿವನಮಸ್ಕಾರವನ್ನು ಸೂರ್ಯೋದಯದ ಮೊದಲು ಅಥವಾ ಸೂರ್ಯಾಸ್ತದ ನಂತರ ಮಾಡುತ್ತೀರೆಂದು ಖಚಿತಪಡಿಸಿಕೊಳ್ಳಿ.
ಎಂಟರಿಂದ ಹತ್ತು ಕರಿಮೆಣಸಿನ ಕಾಳು, ಎರಡರಿಂದ ಮೂರು ಬಿಲ್ವ ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದಲ್ಲಿ ರಾತ್ರಿ
ನೆನೆಸಿಡಿ. ಒಂದು ಮುಷ್ಟಿ ನೆಲಗಡಲೆಯನ್ನೂ ನೀರಿನಲ್ಲಿ ನೆನೆಸಿಡಿ. ಶಿವ ನಮಸ್ಕಾರ ಮತ್ತು ಸ್ತೋತ್ರ ಪಠಣೆಯ ನಂತರ,
ಎಲೆಗಳನ್ನು ಅಗೆದು ತಿನ್ನಿ. ಕರಿಮೆಣಸಿನ ಕಾಳು, ಜೇನುತುಪ್ಪದ ಮಿಶ್ರಣಕ್ಕೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಸೇವಿಸಿ.
ನೆನೆಸಿದ ನೆಲಗಡಲೆಯನ್ನೂ ಸೇವಿಸಿ. ಬೇವಿನ ಎಲೆಗಳು ಸಿಗದೇ ಇರುವ ಪಕ್ಷದಲ್ಲಿ, ನೀವದನ್ನು ಈಶ ಶಾಪಿಯಲ್ಲಿ
(IshaShoppe.com) ಖರೀದಿಸಬಹುದು. ಇವುಗಳನ್ನು ಸೇವಿಸುವ ಮೊದಲು ನಿಮ್ಮ ನಿಯಮಿತ ಸಾಧನವಾದ ಶಾಂಭವಿ
ಮಹಾಮುದ್ರೆಯನ್ನು ಪೂರ್ಣಗೊಳಿಸಿ.
ಸಾಧನೆಯ ಆರಂಭದಲ್ಲಿ ದೀಪ ಅಥವಾ ಮೇಣದ ಬತ್ತಿಯನ್ನು ಬೆಳಗಿಸಬೇಕು. ದೀಪವನ್ನು ಬೆಳಗಿಸಿ, ಅದನ್ನು ಸಾಧನೆಯ ನಂತರವೂ ಉರಿಯಲು ಬಿಡುವುದು ಸೂಕ್ತ. ಆದರೆ ನೀವು ದೊಡ್ಡದಾದ ಮೇಣದ ಬತ್ತಿಯನ್ನು ಬೆಳಗಿದ್ದರೆ ಅಥವಾ ಸುರಕ್ಷತೆಯ ಕಳಕಳಿಯಿದ್ದರೆ, ದೀಪವನ್ನು ಗಾಳಿಯಿಂದ ಆರಿಸದೇ, ಹೂವಿನಿಂದ ಆರಿಸುವುದು ಉತ್ತಮ.
ಸಾಧನೆಯ ಅವಧಿಯುದ್ದಕ್ಕೂ ನೀವು ಕಪ್ಪು ಬಟ್ಟೆಯನ್ನು ತೋಳಿನಲ್ಲಿ ಕಟ್ಟಿಕೊಂಡಿರಬೇಕು (40, 21, 14, 7 ಅಥವಾ 3 ದಿನಗಳು) ಮತ್ತು ಈ ಅವಧಿಯಲ್ಲಿ ಅದನ್ನು ತೆಗೆದಿರಿಸಬಾರದು.
ಈಶ ಕೇಂದ್ರಗಳಿಂದ ನೀವು ಸ್ನಾನದ ಪುಡಿಯನ್ನು ಪಡೆಯಬಹುದು. ನಿಮಗದು ದೊರಕದಿದ್ದರೆ, ರಾಸಾಯನಿಕದಿಂದ ಮುಕ್ತವಾಗಿರುವ ಯಾವುದೇ ಸಾವಯವ ವಸ್ತುವನ್ನು ಬಳಸಬಹುದು.
ಸಾಧನೆಯನ್ನು ಆರಂಭಿಸುವುದರ ಮುನ್ನ ವಿಭೂತಿಯನ್ನು ಹಚ್ಚಿ, ಅದನ್ನು ದಿನವಿಡಿ ಹಾಗೆಯೇ ಬಿಡಬಹುದು. ವಿಭೂತಿಯನ್ನು ಮನೆಯಲ್ಲಿ ತಯಾರಿಸಲು ಸಾಧ್ಯವಿಲ್ಲ, ಅದನ್ನೊಂದು ವಿಶ್ವಾಸಾರ್ಹ ಮೂಲದಿಂದ ಪಡೆಯುವುದು ಉತ್ತಮ. ನೈಜವಾದ ವಿಭೂತಿಯೆಂದು ಖಚಿತಪಡಿಸಿಕೊಳ್ಳಲು, ಈಶದಿಂದ ಪಡೆದಿರುವ ವಿಭೂತಿಯನ್ನು ಬಳಸುವುದು ಉತ್ತಮ (ಈ ವಿಭೂತಿಯನ್ನು ಪವಿತ್ರೀಕರಿಸಲಾಗಿರುತ್ತದೆ ಕೂಡ).
ಸಾಧನೆಯಲ್ಲಿ ತೊಡಗಿರುವವರಿಗೆ 12 ರ ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮೆಣಸಿನ ಕಾಳು, ಕಡಲೆ ಕಾಯಿ ಬೀಜ, ಇತ್ಯಾದಿಗಳನ್ನು ನೀವು ತರಬೇಕಾಗುತ್ತದೆ.
ಕಪ್ಪು ಬಟ್ಟೆಯನ್ನು ತೋಳಿನಲ್ಲಿಯೇ ಧರಿಸಬೇಕು.
ನೀವು ಸಾಧನೆಯನ್ನು ಮಾಡಲು ಸಂಕಲ್ಪ ಮಾಡಿದಾಗ, ಪ್ರತಿದಿನ ಸಾಧನೆಯನ್ನು ಮಾಡಲು ನೀವು ಬದ್ಧರಾಗಿರಬೇಕು. ನೀವು ಬದ್ಧರಾಗಿದ್ದರೆ, ಸಾಧನೆಯನ್ನು ಮಾಡಲು ದಾರಿಯನ್ನು ಕಂಡುಕೊಳ್ಳುತ್ತೀರಿ. ನೀವಿದನ್ನು ಸೂರ್ಯೋದಯದ ಮುಂಚೆ ಯಾವಾಗಾದರೂ ಮಾಡಬಹುದು. ಹಾಗಾಗಿ, ಬೆಳಿಗ್ಗೆ ಬೇಗ ಎದ್ದು, ನಿಮ್ಮ ದಿನವನ್ನು ಆರಂಭಿಸುವ ಮುಂಚೆಯೇ ಸಾಧನೆಯನ್ನು ಮಾಡಿ. ಈ ಸಾಧನೆಯು ಬಹಳ ಪ್ರಬಲವಾಗಿದ್ದು, ಇದಕ್ಕೆ ನಿಮ್ಮ ಜೀವನವನ್ನು ಪರಿವರ್ತಿಸುವ ಸಾಧ್ಯತೆಯಿದೆ. ಹಾಗಾಗಿ, ಇದನ್ನು ಹೇಗೆ ಮಾಡುವುದೆಂದು ನೋಡಿ!
ಮಹಾಶಿವರಾತ್ರಿಯಂದು ಜಾಗರಣೆ ಮಾಡುವುದು ಈ ಸಾಧನೆಯ ಅತ್ಯಗತ್ಯವಾದ ಭಾಗ. ನಿಮ್ಮ ಸಾಧನೆಗೆ ನೀವೇನು 40 ದಿನಗಳ ಪರಿಶ್ರಮ ಪಟ್ಟಿದ್ದೀರೋ, ಈ ರಾತ್ರಿಯಂದು ಅದರ ಪ್ರಯೋಜನವನ್ನು ಪಡೆಯುವ ಕಾರಣದಿಂದ ನೀವು ಈ ರಾತ್ರಿಯನ್ನು ಅಧಿಕತಮವಾಗಿ ಬಳಸಿಕೊಳ್ಳಬೇಕು. ನಿಮ್ಮನ್ನು ಎಚ್ಚರವಾಗಿಟ್ಟುಕೊಳ್ಳಲು ಇವುಗಳನ್ನು ಪ್ರಯತ್ನಿಸಿ – ತಣ್ಣನೆ ನೀರಿನ ಸ್ನಾನ, ತಲೆ ಕೂದಲನ್ನು ಒದ್ದೆಯಾಗಿರಿಸಿಕೊಂಡಿರುವುದು, ಎದ್ದು ನಡೆದಾಡುವುದು. ನಿಮ್ಮ ಸ್ಥಳೀಯ ಕೇಂದ್ರದಲ್ಲಿ ನೀವು ಭಾಗವಹಿಸಬಹುದಾದ ಆಚರಣೆಯಿದೆಯೇ ನೋಡಿ. ನೀವು ಈಶ ಯೋಗ ಕೇಂದ್ರದ ವೆಬ್ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಹೌದು, ಮಾಡಬಹುದು.
ಸಾಧನೆಯ ವಿಶದೀಕರಣ
ಮುಂಬರುವ ಮಹಾಶಿವರಾತ್ರಿಗಾಗಿ ಸದ್ಗುರುಗಳು ಕೆಳಗಿನ ಸಾಧನೆಗಳನ್ನು ನೀಡಿದ್ದಾರೆ:
1. ಶಿವಾಂಗ ಸಾಧನೆ: ಪುರುಷರಿಗಾಗಿ – ಈ ಸಾಧನೆಯು ವೆಳ್ಳಂಗಿರಿ ಬೆಟ್ಟದ ಚಾರಣದೊಂದಿಗೆ ಅಂತ್ಯಗೊಳ್ಳುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶಿವಾಂಗ ಸಾಧನೆ ಮತ್ತು ದೀಕ್ಷೆಯ ವೇಳಾಪಟ್ಟಿಯ ಪುಟವನ್ನು ನೋಡಿ.
2. ಮಹಾಶಿವರಾತ್ರಿ ಸಾಧನೆ: ಪುರುಷರು ಮತ್ತು ಮಹಿಳೆಯರಿಗೆ – 40/21/12/7/3 ದಿನಗಳ ಸಾಧನೆ. ಧ್ಯಾನಲಿಂಗದ ಎದುರು (ಅಥವಾ ಮನೆಯಲ್ಲಿ) ಸಮಾಪ್ತಿ.
ಹೆಚ್ಚಿನ ಮಾಹಿತಿಗಾಗಿ ಸಾಧನೆ ಸೂಚನೆಗಳು ಮತ್ತು ಮಾರ್ಗಸೂಚಿಗಳ ಪುಟವನ್ನು ನೋಡಿ.
Sit in a cross-legged posture. (If you are uncomfortable sitting on the floor, you can sit on a chair.)
Bring your thumb and ring finger together. Women should use their left hand, and men should use their right hand (as shown in the video).
If possible, make the first digits of the two fingers touch.
If you have a rudraksha, you can hold it between the fingers.
Ensure you get the correct pronunciation and tune of “AUM NAMAH SHIVAYA.”
Do it for 21 minutes at a stretch, using the audio.
Close your eyes throughout the process.
For the first 21 days (at least), light a lamp or keep a picture of Sadhguru, Adiyogi, or Dhyanalinga in front of you.
It is best to take a shower before the practice.
The practice can be done both in the morning and evening every day. If that is not possible, do it at least in the morning.
Sit in Ardhasiddhasana for the practice. If you have not learned it, sit in a simple cross-legged posture.
If you are sitting on a chair, cross your legs at the ankles with the right ankle over the left.
If you have a rudraksha, hold it with the tips of your thumb and ring finger. Otherwise, make the first digits of these two fingers touch. Women should use their left hand, while men should use their right hand.
Place your other hand on your thigh, and keep the palm relaxed and facing upward.
If you have a rudraksha, it is best to use it. You can take off your rudraksha mala and hold it in your hand, with your hand resting on your thigh.
Poornangas and Brahmacharies can also do the same.
If you don't have a rudraksha, you can still chant by bringing the first digit of your thumb and ring finger together.
No, please chant for only 21 minutes. If you have more time after the chant, Sadhguru has instructed that you simply sit still.
Do it intensely – not too loud but intense.
You can still do the practice. Please watch the initiation video and then continue with the daily practice.
It is best to use the audio.
There is no need to be on an empty stomach for the practice. However, it is best to avoid practicing right after a full meal. Maintaining a light stomach is ideal. If you practice early in the morning as recommended by Sadhguru, your stomach will naturally be empty.
No. Whether it is shivratri, purnima, amavasya, ekadasi, pradosham, or any other occasion, it must be done according to Sadhguru’s guidance — in the morning and in the evening.
It is best to chant the Mahamantra first and then continue with your other practices.
It is recommended to do the practice at 5:40 AM. However, if that is not possible, you can chant at any time in the morning or evening.
ನೀವು ಕೆಳಗೆ ಕೊಟ್ಟಿರುವ ಲಿಂಕ್ಅನ್ನು ಬಳಸಿ ನೋಂದಾಯಿಸಿಕೊಳ್ಳಬಹುದು:ಇಲ್ಲಿ ಕ್ಲಿಕ್ ಮಾಡಿ
ಶಾಂಭವಿ ಮಹಾಮುದ್ರ ಕ್ರಿಯೆಗೆ ದೀಕ್ಷೆ ಪಡೆದವರು ಮಾತ್ರ ಸ್ವಯಂಸೇವಕರಾಗಬಹುದು. ಎಲ್ಲಾ ಸ್ವಯಂಸೇವಕರು ಕನಿಷ್ಠ 7 ದಿನಗಳ ಮುಂಚಿತವಾಗಿ – ಅಂದರೆ ಫೆಬ್ರವರಿ 14 ರಂದು ಬರುವುದು ಒಳ್ಳೆಯದು.
ಭಾರತೀಯರು -ದಯವಿಟ್ಟು ನಿಮ್ಮ ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ, ಚಾಲಕರ ಪರವಾನಗಿ ಅಥವಾ ಆಧಾರ್ ಕಾರ್ಡ್ ತರಬೇಕು.
ಗಮನಿಸಿ: ನೀವು ಫಾರ್ಮ್ನಲ್ಲಿ ಅಪ್ಲೋಡ್ ಮಾಡುತ್ತಿರುವ ಫೋಟೋ ಐಡಿ ಕಾರ್ಡ್ನ್ನೇ ತರಬೇಕು.
ಮಹಾಶಿವರಾತ್ರಿ ಆಚರಣೆಗೆ ಬರುವ ಎಲ್ಲರಿಗೂ ಖಂಡಿತವಾಗಿಯೂ ಸ್ವಯಂಸೇವೆಯ ಅವಕಾಶಗಳು ಲಭ್ಯವಿರುತ್ತವೆ. ಸ್ವಯಂಸೇವಕರ ಸಮರ್ಪಣೆ ಮತ್ತು ಬದ್ಧತೆ ಇಲ್ಲದೆ ಈ ರೀತಿಯ ಕಾರ್ಯಕ್ರಮ ಸಾಧ್ಯವಿಲ್ಲ. ಆದರೆ ಈಶಾ ಯೋಗ ಕೇಂದ್ರದಲ್ಲಿ ಸೀಮಿತ ಮೂಲಸೌಕರ್ಯಗಳ ಕಾರಣ, ಫೆಬ್ರವರಿ 17 ರ ನಂತರ ಬರುವವರಿಗೆ ಸ್ವಯಂಸೇವಕ ವಸತಿ ನಿಲಯವನ್ನು ಒದಗಿಸಲು ಸಾಧ್ಯವಾಗುವುದಿಲ್ಲ.
ಎಲ್ಲಾ ಸ್ವಯಂಸೇವಕರು ತಾತ್ಕಾಲಿಕ ವಸತಿ ನಿಲಯದ ಸೌಲಭ್ಯಗಳಲ್ಲಿ ಉಳಿಯಲಿದ್ದಾರೆ.
ಅದನ್ನು ವಿಶೇಷವಾಗಿ ಮಹಾಶಿವರಾತ್ರಿಗಾಗಿ ರಚಿಸಲಾಗುತ್ತಿದೆ. ಎಲ್ಲಾ ಸ್ವಯಂಸೇವಕರು ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇವೆ. ತರಬೇಕಾದ ವಸ್ತುಗಳ ವಿವರವಾದ ಪಟ್ಟಿಗಾಗಿ ದಯವಿಟ್ಟು FAQ 6 ಅನ್ನು ನೋಡಿ. ಮಹಾಶಿವರಾತ್ರಿ ಕಾರ್ಯಕ್ರಮವು ಆಧ್ಯಾತ್ಮಿಕ ಸಾಧ್ಯತೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಬಗ್ಗೆಯಾಗಿದೆ, ಆದ್ದರಿಂದ ವೈಯಕ್ತಿಕ ಸೌಕರ್ಯ ಅಥವಾ ಅನುಕೂಲಕ್ಕಾಗಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿ ಬಂದರೆ ನೀವು ಸಹಕರಿಸಬೇಕೆಂದು ನಾವು ವಿನಂತಿಸುತ್ತೇವೆ.
ಆಶ್ರಮವು ಯಾವುದೇ ಹಾಸಿಗೆ ವಸ್ತುಗಳನ್ನು ಒದಗಿಸುವುದಿಲ್ಲ. ಎಲ್ಲಾ ಸ್ವಯಂಸೇವಕರು ತಮ್ಮದೇ ಆದ ಹಾಸಿಗೆ ವಸ್ತುಗಳನ್ನು -ಯೋಗ ಮ್ಯಾಟ್ / ಹಾಸಿಗೆ (ನಿಮಗೆ ಒಂದು ಅಗತ್ಯವಿದ್ದರೆ), ಬೆಡ್ಶೀಟ್ ಮತ್ತು ತಲೆ ದಿಂಬನ್ನು ತರಲು ವಿನಂತಿಸಲಾಗಿದೆ. ಡಿಸೆಂಬರ್ನಿಂದ ಮಾರ್ಚ್ವರೆಗೆ, ಹವಾಮಾನವು ರಾತ್ರಿಯಲ್ಲಿ ಸ್ವಲ್ಪ ತಂಪಾಗಿರುತ್ತದೆ ಮತ್ತು ಹಗಲಿನಲ್ಲಿ ಬೆಚ್ಚಗಿರುತ್ತದೆ, ತಾಪಮಾನವು ಕನಿಷ್ಠ 17 ° C (62.6 ° F) ಮತ್ತು ಗರಿಷ್ಠ 35 ° C (95 ° F) ತಲುಪುತ್ತದೆ. ದಯವಿಟ್ಟು ಬೆಚ್ಚಗಿನ ಬಟ್ಟೆಗಳು ಮತ್ತು ಬೆಚ್ಚಗಿನ ಬೆಡ್ಶೀಟ್ ತೆಗೆದುಕೊಂಡು ಬನ್ನಿ.
ಗಮನಿಸಿ: ಗುಂಪಾಗಿ ಬರುವ ಒಂದು ಕುಟುಂಬದ ಸದಸ್ಯರು ತಮ್ಮ ಸಾಮಾನುಗಳು ಮತ್ತು ಶೌಚಾಯಲದ ವಸ್ತುಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ, ಏಕೆಂದರೆ ಅವರಿಗೆ ಪ್ರತ್ಯೇಕ ವಸತಿ ನೀಡಬಹುದು.
ಶೌಚಲಯ ವಸ್ತುಗಳು
ಟಾರ್ಚ್ ಲೈಟ್
ಛತ್ರಿ
ಸೊಳ್ಳೆ ಬತ್ತಿಗಳು ಇತ್ಯಾದಿ
ಹಾಸಿಗೆ ವಸ್ತುಗಳು,
ಸಾಕಷ್ಟು ಬಟ್ಟೆಗಳು
ಬೆಚ್ಚಗಿಡುವ ಬಟ್ಟೆಗಳು (ಶಾಲು, ಸ್ವೆಟರ್ ಇತ್ಯಾದಿ)
ಔಷಧಗಳು (ತಲೆನೋವು,ಜ್ವರ, ನೋವು ನಿವಾರಕ ಮುಲಾಮು, ಜೀರ್ಣಕ್ರಿಯೆ ತೊಂದರೆಗೆ ಆಂಟ್ಯಾಸೈಡ್ಸ್ ನಂತಹ ಸಾಮಾನ್ಯ ಮತ್ತು ನಿಯಮಿತ ಔಷಧಗಳು ಇತ್ಯಾದಿ)
ಲಗೇಜ್ ಬೀಗ
ಪವರ್ ಬ್ಯಾಂಕ್
ಯೋಗ ಮ್ಯಾಟ್
ಸಣ್ಣ ಹಾಸಿಗೆ ಅಥವ ಸ್ಲೀಪಿಂಗ್ ಬ್ಯಾಗ್ (ಸಾಧ್ಯವಾದರೆ)
ನೀರಿನ ಬಾಟಲ್
ಬಿಸಿಲಿನಿಂದ ರಕ್ಷಣೆಗೆ ಟೋಪಿ
ಈಶಾ ಯೋಗ ಕೇಂದ್ರವು ಸುರಕ್ಷಿತ ಸ್ಥಳವಾಗಿದ್ದು, ಭದ್ರತಾ ಸಿಬ್ಬಂದಿಗಳು 24/7 ಲಭ್ಯವಿರುವರು. ಆದಾಗ್ಯೂ, ಇದು ದೊಡ್ಡ ಪ್ರಮಾಣದ ಕಾರ್ಯಕ್ರಮವಾದ್ದರಿಂದ, ನೀವು ನಿಮ್ಮ ವಸ್ತುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸಲು ನಾವು ಶಿಫಾರಸು ಮಾಡುತ್ತೇವೆ. ನೀವು ವಸತಿ ಸೌಕರ್ಯಗಳಲ್ಲಿ ಬಹಳ ಜನರೊಂದಿಗೆ ಉಳಿಯುವುದರಿಂದ, ದಯವಿಟ್ಟು ಯಾವುದೇ ಬೆಲೆಬಾಳುವ ವಸ್ತುಗಳು, ಆಭರಣಗಳು ಅಥವಾ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬೇಡಿ. ನಿಮ್ಮ ವಸ್ತುಗಳ ಸುರಕ್ಷತೆಗೆ ದಯವಿಟ್ಟು ಬೀಗವನ್ನು ತನ್ನಿರಿ ಮತ್ತು ಬೀಗಹಾಕಿ ಇಟ್ಟುಕೊಳ್ಳಿ.
ವಸತಿ ಸ್ಥಳಗಳಲ್ಲಿ ಸೀಮಿತ ಚಾರ್ಜಿಂಗ್ ಸೌಲಭ್ಯಗಳು ಲಭ್ಯವಿರುತ್ತದೆ. ಚಾರ್ಜ್ ಮಾಡುವಾಗ ದಯವಿಟ್ಟು ನಿಮ್ಮ ಮೊಬೈಲ್ ಫೋನ್ಗಳನ್ನು ಗಮನಿಸದೆ ಬಿಡಬೇಡಿ. ನಿಮ್ಮ ಸ್ವಂತ ಮೊಬೈಲ್ ಪವರ್ ಬ್ಯಾಂಕುಗಳನ್ನು ಹೊಂದಿರುವುದು ಉತ್ತಮ.
ಸ್ವಯಂಸೇವಕರು ಬೇಗವೆಂದರೆ ಫೆಬ್ರವರಿ 17 ರೊಳಗೆ ತಲುಪಬೇಕು ಮತ್ತು ಫೆಬ್ರವರಿ 23 ರವರೆಗೆ ಇರಬೇಕಾಗುತ್ತದೆ. ಈ ಕಾರ್ಯಕ್ರಮ ನಡೆಸಲು ಸಾಕಷ್ಟು ಸಿದ್ಧತೆಗಳು ಅಗತ್ಯವಿರುವುದರಿಂದ, ನೀವು ಮುಂಚೆಯೇ, ಜನವರಿಯಲ್ಲಿಯೇ ಬರಬಹುದೆಂದು ನಾವು ಶಿಫಾರಸು ಮಾಡುತ್ತೇವೆ.
ಮಹಾಶಿವರಾತ್ರಿ ಸಮಯದಲ್ಲಿ ಸ್ವಯಂಸೇವಕರು ಪ್ರತ್ಯೇಕ ಸ್ವಯಂಸೇವಕರ ತಾಣದಲ್ಲಿ ಕುಳಿತುಕೊಳ್ಳುತ್ತಾರೆ. ನಿಮಗಾಗಿ ಪಾಸ್ಅನ್ನು ಕೊಳ್ಳುವ ಅಗತ್ಯವಿಲ್ಲ.
ಸ್ವಯಂಸೇವಕರು, ‘ಮಹಾಶಿವರಾತ್ರಿ ಕಾರ್ಯಕ್ರಮವನ್ನು ಜನರು ಹೇಗೆ ಅನುಭವಿಸುತ್ತಾರೆ’ ಎಂಬುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಡೀ ರಾತ್ರಿಯ ಸಮಯದಲ್ಲಿ ಸ್ವಯಂಸೇವಕರಿಗೆ ವಿವಿಧ ಚಟುವಟಿಕೆಗಳನ್ನು ನೋಡಿಕೊಳ್ಳುಲು ನೀಡಲಾಗುವುದು. ಈ ಮಹಾಶಿವರಾತ್ರಿಯ ಸ್ವಯಂಸೇವಕರಾಗಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳುವ ಈ ನಿರ್ಧಾರವನ್ನು ಒಮ್ಮೆ ತೆಗೆದುಕೊಂಡ ನಂತರ, ನೀವು ರಾತ್ರಿಯಿಡೀ ಸ್ವಯಂಸೇವಕರಾಗಿ ಭಾಗವಹಿಸಬೇಕೆಂದು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ. ಸ್ವತಃ ಅರ್ಪಿಸಿಕೊಳ್ಳುವ ಮೂಲಕ ಕಾರ್ಯಕ್ರಮದ ಅನುಭವವನ್ನು ಹೆಚ್ಚು ವರ್ಧಿಸಬಹುದು. ನೀವು ಇನ್ನೂ ಪ್ರತ್ಯೇಕ ಪಾಸ್ ಪಡೆಯಲು ಬಯಸಿದರೆ, ನಿಮ್ಮ ಊರಿನ ಈಶ ಸಂಯೋಜಕ(ಕೋಆರ್ಡಿನೇಟರ್)ರೊಂದಿಗೆ ಪರಿಶೀಲಿಸಿದ ನಂತರ ನೀವು ಹಾಗೆ ಮಾಡಬಹುದು.
ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಆಶ್ರಮದಲ್ಲಿರುವಾಗ ಸಾಧಾರಣ ಶೈಲಿಯ ಬಟ್ಟೆಗಳನ್ನು ಧರಿಸಿ. ಪುರುಷರು ಮತ್ತು ಮಹಿಳೆಯರು ಭುಜಗಳು, ಮೇಲಿನ ತೋಳುಗಳು, ಸೊಂಟ ಮತ್ತು ಕಾಲುಗಳನ್ನು ಪಾದದವರೆಗೆ ಮುಚ್ಚಿಕೊಳ್ಳವಂತಹ ಬಟ್ಟೆಗಳನ್ನು ಎಲ್ಲಾ ಸಮಯದಲ್ಲೂ ಧರಿಸಬೇಕು. ಸರಿಯಾದ ಪಾಶ್ಚಾತ್ಯ ಉಡುಪಗಳೆಂದರೆ: ಪುರುಷರು ಮತ್ತು ಮಹಿಳೆಯರು ಪಾದದವರಿಗಿನ ಪ್ಯಾಂಟ್ (ಕ್ಯಾಪ್ರಿಸ್ ಅಥವಾ ಶಾರ್ಟ್ಸ್ ಧರಿಸುವಂತಿಲ್ಲ) ಮತ್ತು ಮೇಲಿನ ತೋಳುಗಳನ್ನು ಆವರಿಸುವ ಉದ್ದನೆಯ ಶರ್ಟ್. ನಿಮ್ಮ ಸ್ವಂತ ಹಿತಕ್ಕಾಗಿ ಮತ್ತು ಸ್ಥಳೀಯ ಸಂಸ್ಕೃತಿಯ ಗೌರವದ ಸಂಕೇತವಾಗಿ ದಯವಿಟ್ಟು ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ.
ಯಕ್ಷ ಮತ್ತು ಮಹಾಶಿವರಾತ್ರಿ ಸಮಯದಲ್ಲಿ, ಹಬ್ಬ ಮತ್ತು ಸಾಂಸ್ಕೃತಿಕ ಭಾರತೀಯ ಉಡುಗೆಗಳನ್ನು ಪ್ರೋತ್ಸಾಹಿಸಲಾಗುತ್ತದೆ.
ಯೋಗ ಕೇಂದ್ರದಲ್ಲಿ ತೀವ್ರ ನೀರಿನ ಕೊರತೆಯಿಂದಾಗಿ, ಬಟ್ಟೆಗಳನ್ನು ಒಗೆಯುವುದು ಸಾಧ್ಯವಾಗುವುದಿಲ್ಲ. ಲಾಂಡ್ರಿ ಸೌಲಭ್ಯ ಲಭ್ಯವಿರುವುದಿಲ್ಲ. ದಯವಿಟ್ಟು ನಿಮ್ಮ ವಾಸ್ತವ್ಯದ ಸಂಪೂರ್ಣ ಅವಧಿಗೆ ಸಾಕಾಗುವಷ್ಟು ಬಟ್ಟೆಗಳನ್ನು ತರನ್ನಿ.
ಆಗಬಹುದು
ಹೌದು. ದಯವಿಟ್ಟು ನಿಮ್ಮ ಔಷಧಿಗಳನ್ನು ನಿಮ್ಮೊಂದಿಗೆ ತನ್ನಿ.
ಶಾಂಭವಿ ಮಹಾಮುದ್ರಾ ಕ್ರಿಯೆಗೆ ದೀಕ್ಷೆ ಪಡೆದವರಿಗೆ ಮಾತ್ರ ಸ್ವಯಂಸೇವಕರ ವಸತಿ ಗೃಹದಲ್ಲಿ ಉಳಿಯಲು ಅವಕಾಶವಿರುತ್ತದೆ. ಇತರ ಕುಟುಂಬದ ಸದಸ್ಯರು ಮತ್ತು ಅತಿಥಿಗಳು ಮಹಾಶಿವರಾತ್ರಿಗೆ ನೋಂದಾಯಿಸಿಕೊಂಡು ರಾತ್ರಿಯಿಡೀ ನಡೆಯುವ ಆಚರಣೆಯಲ್ಲಿ ಸೇರಬಹುದು.
ಕಾರ್ಯಕ್ರಮದ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಈಶಾ ಯೋಗ ಕೇಂದ್ರದಲ್ಲಿ ಸೌಲಭ್ಯಗಳು ಅಥವಾ ಸಂಪನ್ಮೂಲಗಳಿಲ್ಲ. ನೀವು ಇಲ್ಲಿರುವಾಗ ಅವರಿಗೆ ಮನೆಯಲ್ಲಿ ಪಾಲಕರನ್ನು ವ್ಯವಸ್ಥೆ ಮಾಡಲು ನಾವು ವಿನಂತಿಸುತ್ತೇವೆ.
ಸೀಮಿತ ಪಾರ್ಕಿಂಗ್ ಲಭ್ಯವಿರುತ್ತದೆ. ಸ್ಥಳದ ಸಿದ್ಧತೆಗೆ ಸಹಕರಿಸಲು ನಿಮ್ಮ ವಾಹನವನ್ನು ನೀಡಲು ನೀವು ಬಯಸಿದರೆ, ನೀವು ಹಾಗೆ ಮಾಡಬಹುದು.
ಪ್ರಥಮ ಚಿಕಿತ್ಸಾ ಸೌಲಭ್ಯ ಲಭ್ಯವಿರುತ್ತದೆ; ಆದಾಗ್ಯೂ, ಸಾಮಾನ್ಯ ಸಂಚಾರ ಪರಿಸ್ಥಿತಿಗಳಲ್ಲಿ ಹತ್ತಿರದ ಆಸ್ಪತ್ರೆಗಳು ಸುಮಾರು 1 ಗಂಟೆ ದೂರದಲ್ಲಿವೆ. ದಯವಿಟ್ಟು ಗಮನಿಸಿ, ಮಹಾಶಿವರಾತ್ರಿ ಸಮಯದಲ್ಲಿ, ದಟ್ಟಣೆ ಹೆಚ್ಚಿರುವುದರಿಂದ ಆಸ್ಪತ್ರೆಗೆ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹತ್ತಿರದ ಔಷಧ ಅಂಗಡಿಗಳು 8-10 ಕಿಲೋಮೀಟರ್ ದೂರದಲ್ಲಿವೆ. ದಯವಿಟ್ಟು ನಿಮ್ಮ ನಿಯಮಿತ ಔಷಧಿಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ.
ಹೌದು, ನೀವು ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಬಹುದು ಮತ್ತು ಮಹಾಶಿವರಾತ್ರಿಯ ಸ್ವಯಂಸೇವಕರಾಗಬಹುದು.
ಹೆಚ್ಚುವರಿ ಪ್ರಶ್ನೆಗಳಿಗೆ, ದಯವಿಟ್ಟು ಸಹಾಯವಾಣಿ +91 83000 83111 ಗೆ ಕರೆ ಮಾಡಿ ಅಥವಾ info@mahashivarathri.org ಗೆ ಇಮೇಲ್ ಕಳುಹಿಸಿ.