“ಹುಣ್ಣಿಮೆಯ ರಾತ್ರಿಗಳಂದು ಆಂತರ್ಯ ಹಾಗೂ ಬಾಹ್ಯದಲ್ಲಿ ಉನ್ನತ ಮಟ್ಟದ ಶಕ್ತಿಯಿರುತ್ತದೆ. ಈ ಶಕ್ತಿಯನ್ನು ಆರೋಗ್ಯ, ಪರಮಾನಂದ ಹಾಗೂ ಯಶಸ್ಸಿಗಾಗಿ ಬಳಸಿಕೊಳ್ಳಲು ವಿಧಾನಗಳಿವೆ” - ಸದ್ಗುರು
ಪ್ರಕೃತಿ ಸಹಜವಾಗಿ ಶಕ್ತಿಯನ್ನು ವರ್ಧಿಸುವುದರಿಂದ ಆಧ್ಯಾತ್ಮಿಕ ಹಾದಿಯಲ್ಲಿರುವವರಿಗೆ ಪೌರ್ಣಿಮೆಯ ರಾತ್ರಿಗಳು ಧ್ಯಾನಕ್ಕೆ ಅನುಕೂಲಕರವಾಗಿರುತ್ತದೆ. ಸದ್ಗುರುಗಳು ಮಾಸಿಕ ಪೌರ್ಣಿಮೆ ಸತ್ಸಂಗವನ್ನು ಅರ್ಪಿಸುತ್ತಿದ್ದು, ಜಗತ್ತಿನಾದ್ಯಂತ ಸಾಧಕರಿಗೆ ಹುಣ್ಣಿಮೆ ರಾತ್ರಿಯ ಆಧ್ಯಾತ್ಮಿಕ ಸಂಭಾವ್ಯತೆಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡುತ್ತಿದ್ದಾರೆ.
ಪ್ರತಿ ಹುಣ್ಣಿಮೆಯೂ ನಿಮ್ಮ ಪರಮ ಸ್ವರೂಪವನ್ನು ಅರಿಯುವ ಹಾದಿಯಲ್ಲಿ ಮೆಟ್ಟಿಲಾಗುವ ಅಭೂತಪೂರ್ವ ಸಾಧ್ಯತೆಯನ್ನು ಈ ಸತ್ಸಂಗ ನೀಡಲಿದೆ.
ನಿಮ್ಮ ಗ್ರಹಣಶಕ್ತಿಯನ್ನು ಹೆಚ್ಚಿಸಲು ಹಾಗೂ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಮಾಡಲು ಕೆಲವು ಮಾರ್ಗಸೂಚಿಗಳು:
ಸದ್ಗುರುಗಳು ಮಾರ್ಚ್ 2021 ರಿಂದ ಪ್ರತಿ ತಿಂಗಳೂ, ಹುಣ್ಣಿಮೆಯಂದು ಸತ್ಸಂಗವನ್ನು ನೀಡುತ್ತಿದ್ದಾರೆ. ಮುಂಬರುವ ಸತ್ಸಂಗಗಳ ದಿನಾಂಕಗಳು ಇಂತಿವೆ:
● 18 ಜನವರಿ 2022