"ವೆಳ್ಳಿಯಂಗಿರಿಯು ಸಾಕ್ಷಾತ್ ಶಿವನಿಂದಲೇ ಅನುಗ್ರಹಿಸಲ್ಪಟ್ಟಿದೆ. ಅನೇಕ ಮಹಾನ್ ಯೋಗಿಗಳು, ಸಿದ್ಧರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಗುರುಗಳು ತಮ್ಮ ಪವಿತ್ರ ಜ್ಞಾನವನ್ನು ಈ ಶಿಖರಗಳಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ಅನುಗ್ರಹದ ಧಾರೆಯನ್ನು ತಮ್ಮ ಮೇಲೆ ಪ್ರವಹಿಸಲು ಬಿಟ್ಟವರನ್ನು ಹೇಗಿದ್ದರೂ ಅದು 'ಅತೀತ'ವಾಗಿರೋ ಆ ದಡಕ್ಕೆ ಸೇರಿಸುತ್ತದೆ."
ವೆಳ್ಳಿಯಂಗಿರಿ ಪರ್ವತಗಳ ಏಳನೇ ಬೆಟ್ಟದ ಮೇಲಿರುವ ಶಿವನ ದೇವಾಲಯದ ಹಾದಿಯು ಒಂದು ಕಾಲದಲ್ಲಿ ಸುಂದರವಾದ ಭೂದೃಶ್ಯವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಭಕ್ತರು ಬಿಟ್ಟು ಹೋಗುವ ತ್ಯಾಜ್ಯಗಳಿಂದ ತುಂಬಿಕೊಂಡಿದೆ.
ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ, ಆವರಣ ಮತ್ತು ಅರಣ್ಯ ಮಾರ್ಗಗಳಲ್ಲಿ ಕಸವನ್ನು ಬಿಟ್ಟು ಹೋಗುತ್ತಾರೆ, ಇದು ಪರಿಸರಕ್ಕೆ ಅಪಾಯವನ್ನುಂಟುಮಾಡುತ್ತದೆ. ಈ ಪ್ರಾಚೀನ ಬೆಟ್ಟಗಳ ಪರಿಸರ ಮತ್ತು ಅವುಗಳ ಪಾವಿತ್ರ್ಯತೆಯನ್ನು ಸಂರಕ್ಷಿಸಲು ಸ್ವಚ್ಛತಾ ಅಭಿಯಾನಗಳು ಅತ್ಯಗತ್ಯ.
"ನೀವು ನೀಡಲು ನಿಮ್ಮ ಹೃದಯವನ್ನು ತೆರೆದಾಗ, ದೈವಾನುಗ್ರಹವು ನಿಮ್ಮ ತೆರೆದ ಹೃದಯದೊಳಗೆ ತಪ್ಪದೇ ಹರಿದು ಬರುತ್ತದೆ."
ವೆಳ್ಳಿಯಂಗಿರಿ ಪರ್ವತಗಳ ಶುಚಿತ್ವವನ್ನು ಕಾಪಾಡಿಕೊಳ್ಳಲು ಮತ್ತು ಪವಿತ್ರವಾದ ನೈಸರ್ಗಿಕ ಪರಿಸರ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸಲು ಕೊಡುಗೆ ನೀಡಿ