"ನೀವು ನೀಡಲು ನಿಮ್ಮ ಹೃದಯವನ್ನು ತೆರೆದಾಗ, ದೈವಾನುಗ್ರಹವು ನಿಮ್ಮ ತೆರೆದ ಹೃದಯದೊಳಗೆ ತಪ್ಪದೇ ಹರಿದು ಬರುತ್ತದೆ."
ವೆಳ್ಳಿಯಂಗಿರಿ ಪರ್ವತಗಳನ್ನು ಸ್ವಚ್ಛವಾಗಿರಿಸಲು, ನೈಸರ್ಗಿಕ ಪರಿಸರವನ್ನು ರಕ್ಷಿಸಲು, ಅವುಗಳ ಪವಿತ್ರತೆಯನ್ನು ಉಳಿಸಿಕೊಳ್ಳಲು ಮತ್ತು ಪರಿಸರ ಜಾಗೃತಿಯನ್ನು ಹೆಚ್ಚಿಸಲು, ತೆಂಕೈಲಾಯ ಭಕ್ತಿ ಪೇರವೈ, ವಾರ್ಷಿಕ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತದೆ.
ಬೇಸಿಗೆಯಲ್ಲಿ, ಶಿವಾಂಗ ಸ್ವಯಂಸೇವಕರು ಈಶ ಯೋಗ ಕೇಂದ್ರ, ಕೊಯಮತ್ತೂರಿನಲ್ಲಿ ಎಲ್ಲರಿಗೂ ಉಚಿತ ಮಜ್ಜಿಗೆಯನ್ನು ನೀಡುತ್ತಾರೆ, ಇದು ಜನರಿಗೆ ಬಿಸಿಲಿನ ಶಾಖವನ್ನು ನಿಭಾಯಿಸಲು, ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ಮತ್ತು ಸದಾ ಚುರುಕಾಗಿರಲು ಸಹಾಯ ಮಾಡುತ್ತದೆ.
ವಿವಿಧ ಶಿವಾಂಗ ಚಟುವಟಿಕೆಗಳು ಮತ್ತು ಅರ್ಪಣೆಗಳಲ್ಲಿ ತೊಡಗಿಸಿಕೊಂಡಿರುವ ನೂರಾರು ಸ್ವಯಂಸೇವಕರು ಮತ್ತು ಭಾಗವಹಿಸುವವರಿಗೆ ಅನ್ನದಾನವನ್ನು ಮಾಡಿ, ಮತ್ತು ಅವರ ಆಧ್ಯಾತ್ಮಿಕ ಪಯಣಕ್ಕೆ ಸಹಕರಿಸಿ.
ಭಕ್ತರು ಅನುಗ್ರಹಕ್ಕೆ ಪಾತ್ರರಾಗಲು ಶಿವಾಂಗ ತಂಡವು, ಶಿವಾಂಗ ಸಾಧನೆ, ಶಿವಾಂಗ ಸ್ಫೂರ್ತಿ, ಕೈಲಾಸ ವಾದ್ಯಂ ಮತ್ತು ಶಿವ ಯಾತ್ರೆಯಂತಹ ವಿವಿಧ ಆಧ್ಯಾತ್ಮಿಕ ಅರ್ಪಣೆಗಳನ್ನು ಒದಗಿಸುತ್ತದೆ.