ಭಾರತದಲ್ಲಿ ಕೊರೊನಾ ಎರಡನೇ ಅಲೆ (Corona Virus Second Wave) ಹಾವಳಿಯೆಬ್ಬಿಸುತ್ತಿದೆ. ಅನೇಕ ಕಡೆ ಲಾಕ್ ಡೌನ್ ಕೂಡ ಹೇರಲಾಗಿದೆ. ಕೋವಿಡ್ Covid-19 ವೈರಸ್ ಎದುರಿಸಲು ಅನುವಾಗುವಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಕನ್ನಡದಲ್ಲಿ ಟಿಪ್ಸ್ ಗಳನ್ನು ಕೇಳಿ. ಕೊರೊನಾ ವ್ಯಾಕ್ಸಿನ್ ಭಾರತ ಸೇರಿದಂತೆ ವಿಶ್ವದಾದ್ಯಂತ ಕೊಡಲಾಗುತ್ತಿದೆಯಾದರೂ, ಸಂಪೂರ್ಣ ಜನಸಂಖ್ಯೆಗೆ ಅದು ಸಿಗಬೇಕೆಂದರೆ ಅದರದ್ದೇ ಆದ ಸಮಯ ಹಿಡಿಯುತ್ತದೆ. ಆದಾಗ್ಯೂ, ವ್ಯಾಕ್ಸಿನ್ ಪಡೆದರೂ ಸಾಮಾಜಿಕ ಅಂತರ(Social Distancing), ಮಾಸ್ಕ್, ಸ್ಯಾನಿಟೈಸರ್ ಮುಂತಾದವುಗಳನ್ನು ಅಭ್ಯಾಸದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ. ಹಾಗೆಯೇ, ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಕೆಲಸ ಮಾಡುವುದು ಬಹಳ ಪ್ರಯೋಜನಕಾರಿ. ಈ ವಿಡಿಯೋದ ಸದುಪಯೋಗ ಪಡೆದುಕೊಳ್ಳಿ.
Subscribe