ರುದ್ರ ಅಂದರೆ ಶಿವ ಮತ್ತು ಅಕ್ಷ ಅಂದರೆ ಕಣ್ಣೀರು. ರುದ್ರಾಕ್ಷ ಅಂದರೆ ಶಿವನ ಆನಂದಭಾಷ್ಪ. ದಂತಕತೆಯ ಪ್ರಕಾರ ಶಿವ ದೀರ್ಘಾವಧಿ ಕಾಲ ಧ್ಯಾನದಲ್ಲಿ ಕುಳಿತುಕೊಂಡಾಗ ಅವನ ಪರಮಾನಂದ ಎಷ್ಟರ ಮಟ್ಟಕ್ಕೆ ತಲುಪುತ್ತದೆಯೆಂದರೆ, ಅದು ಅವನನ್ನು ಸಂಪೂರ್ಣವಾಗಿ ನಿಶ್ಚಲಗೊಳಿಸಿತು, ಅವನಲ್ಲಿ ಯಾವುದೇ ರೀತಿಯ ಚಲನೆ ಕಾಣಲಿಲ್ಲ. ಅವನಲ್ಲಿ ಉಸಿರಾಟವೂ ಇಲ್ಲ ಎಂಬಂತೆ ಭಾಸವಾಗುತ್ತಿತ್ತು ಮತ್ತು ಎಲ್ಲರೂ ಅವನು ಸಾವನ್ನಪಿರಬಹುದು ಎಂದೇ ತಿಳಿದಿದ್ದರು. ಅವನು ಜೀವಿಸಿದ್ದಾನೆ ಎಂಬುದಕ್ಕೆ ಒಂದೇ ಒಂದು ಸಂಕೇತವಿತ್ತು – ಅವನ ಕಣ್ಣಿನಿಂದ ಸುರಿಯುತ್ತಿದ್ದ ಆನಂದಭಾಷ್ಪ. ಈ ಕಣ್ಣಿರು ಭೂಮಿಯ ಮೇಲೆ ಬಿದ್ದು, ಅದುವೇ ರುದ್ರಾಕ್ಷವಾಯಿತು.