ಸದ್ಗುರುಗಳು ಅರ್ಪಿಸುವ ಈ ಸಾಧನವು ಮಹಾಶಿವರಾತ್ರಿಯ ಸಾಧ್ಯತೆಗಳನ್ನು ಹೆಚ್ಚು ಗ್ರಹಿಸಲು ಅನುವು ಮಾಡಿಕೊಡುತ್ತದೆ.
ಶಕ್ತಿಯ ಉನ್ನತ ಮಟ್ಟವನ್ನು (ಔನತ್ಯವನ್ನು) ಅನುಭವಿಸಿ
ತೀವ್ರವಾದ ಸಾಧನಾ ದಿನಚರಿಯೊಂದಿಗೆ ಶಿಸ್ತನ್ನು ರೂಢಿಸಿಕೊಳ್ಳಿ
ಉತ್ತಮ ಸಾಧ್ಯತೆಗಳ ರಾತ್ರಿಯಾದ ಮಹಾಶಿವರಾತ್ರಿಗೆ ಸಿದ್ಧರಾಗಿ
ಆದಿಯೋಗಿಯ ಅನುಗ್ರಹಕ್ಕೆ ನಿಮ್ಮ ಗ್ರಹಿಕೆಯನ್ನು ಹೆಚ್ಚಿಸಿಕೊಳ್ಳಿ
ಭಾವನಾತ್ಮಕ ಮತ್ತು ಮಾನಸಿಕ ಸಮತೋಲನವನ್ನು ಸ್ಥಾಪಿಸಿ
ಆಂತರಿಕ ಪರಿಶೋಧನೆಗಾಗಿ ಬಲವಾದ ದೈಹಿಕ ಮತ್ತು ಮಾನಸಿಕ ಆಧಾರವನ್ನು ರಚಿಸಿ
ಕಪ್ಪು ಬಟ್ಟೆಯನ್ನು ಧರಿಸಬೇಕು,
ಪುರುಷರು ಅದನ್ನು ಬಲಗೈಯ ಮೇಲ್ಭಾಗದಲ್ಲಿ ಕಟ್ಟಬಹುದು.
ಮಹಿಳೆಯರು ಅದನ್ನು ಎಡಗೈಯ ಮೇಲ್ಭಾಗದಲ್ಲಿ ಕಟ್ಟಬಹುದು.
12 ಇಂಚು ಉದ್ದ ಮತ್ತು 1 ಇಂಚು ಅಗಲವಿರುವ ಯಾವುದೇ ಕಪ್ಪು ಬಟ್ಟೆಯನ್ನು ಬಳಸಬಹುದು.
ಹರ್ಬಲ್ ಸ್ನಾನದ ಪುಡಿಯನ್ನು ಬಳಸಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ಹರ್ಬಲ್ ಸ್ನಾನದ ಪುಡಿ ಈಶ ಲೈಫ್‌ನಲ್ಲಿ ಲಭ್ಯವಿದೆ.
ಒಮ್ಮೆ ಬೆಳಿಗ್ಗೆ ಮತ್ತು ಒಮ್ಮೆ ಸಂಜೆ ಎಣ್ಣೆ ದೀಪವನ್ನು ಬೆಳಗಿಸಿ. ದೀಪ ಲಭ್ಯವಿಲ್ಲದಿದ್ದರೆ, ಮೇಣದಬತ್ತಿಯನ್ನು ಬಳಸಬಹುದು.
ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿದ ನಂತರ ಯೋಗ ಯೋಗ ಯೋಗೇಶ್ವರಾಯ ಜಪವನ್ನು ಹನ್ನೆರಡು ಬಾರಿ ಪಠಿಸಿ. 40 ನಿಮಿಷಗಳ ಸಂಧ್ಯಾ ಕಾಲದಲ್ಲಿ ಈ ಸಾಧನಾವನ್ನು ಮಾಡುವುದು ಉತ್ತಮ.
ಸಂಧ್ಯಾ ಕಾಲ - ದಿನದಲ್ಲಿ ಆಧ್ಯಾತ್ಮಿಕವಾಗಿ ಮಹತ್ವದ ಸಮಯಗಳು, ಉದಾಹರಣೆಗೆ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕಿಂತ ಮೊದಲ 20 ನಿಮಿಷದಿಂದ ನಂತರದ 20 ನಿಮಿಷಗಳವರೆಗೆ.
ಖಾಲಿ ಹೊಟ್ಟೆಯಲ್ಲಿ 12 ಬಾರಿ ಶಿವ ನಮಸ್ಕಾರ ಮಾಡಿ. ಸರ್ವೇಭ್ಯೋ ಮಂತ್ರವನ್ನು ಮೂರು ಬಾರಿ ಜಪಿಸಿ. ಇದನ್ನು ದಿನಕ್ಕೆ ಒಮ್ಮೆ, ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತದ ನಂತರ ಮಾಡಬೇಕು.
8-10 ಕಾಳುಮೆಣಸಿನ ಕಾಳುಗಳೊಂದಿಗೆ 2-3 ವಿಲ್ವಾ ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದಲ್ಲಿ ಮತ್ತು ಒಂದು ಹಿಡಿ ಕಡಲೆಕಾಳನ್ನು ನೀರಿನಲ್ಲಿ ರಾತ್ರಿ ನೆನೆಸಿಡಿ.
ಶಿವ ನಮಸ್ಕಾರ ಮತ್ತು ಪಠಣೆಯ ನಂತರ, ಎಲೆಗಳನ್ನು ಜಗಿದು, ಕಾಳುಮೆಣಸನ್ನು ನಿಂಬೆ ರಸದೊಂದಿಗೆ ಬೆರೆಸಿ ಸೇವಿಸಿ ಮತ್ತು ಕಡಲೆಕಾಳನ್ನೂ ತಿನ್ನಿರಿ.
ಬೇವು ಅಥವಾ ವಿಲ್ವಾ ಎಲೆಗಳು ಲಭ್ಯವಿಲ್ಲದಿದ್ದರೆ, ದಯವಿಟ್ಟು ಬೇವಿನ ಪುಡಿಯ ಉಂಡೆಗಳನ್ನು ತೆಗೆದುಕೊಳ್ಳಿ. ಈಶ ಲೈಫ್ ನಲ್ಲಿ ಬೇವಿನ ಪುಡಿ ಲಭ್ಯವಿದೆ.
ಇವುಗಳನ್ನು ಸೇವಿಸುವ ಮೊದಲು, ಶಾಂಭವಿ ಮಹಾಮುದ್ರಾ ಕ್ರಿಯೆಯಂತಹ ನಿಯಮಿತ ಸಾಧನಾವನ್ನು ನೀವು ಮುಗಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಕೆಳಗಿನ ಹೇಳಿರುವ ಭಾಗಗಳ ಮೇಲೆ ವಿಭೂತಿಯನ್ನು ಹಚ್ಚಿರಿ:
ಆಗ್ನ - ಹುಬ್ಬುಗಳ ನಡುವೆ
ವಿಶುದ್ಧಿ - ಗಂಟಲಿನ ಕುಳಿ
ಅನಾಹತ - ಪಕ್ಕೆಲುಬು ಸಂಧಿಸುವ ಸ್ಥಳದ ಕೆಳಗೆ
ಮಣಿಪೂರಕ - ಹೊಕ್ಕುಳ ಕೆಳಗೆ
ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಿ. ಮೊದಲ ಊಟ ಮಧ್ಯಾಹ್ನ 12 ಗಂಟೆಯ ನಂತರ ಮಾಡಿ.
ಅದಕ್ಕೂ ಮೊದಲು ಹಸಿವಾದರೆ ಕಾಳುಮೆಣಸು-ಜೇನುತುಪ್ಪ-ನಿಂಬೆರಸ ಮತ್ತು ನೀರಿನ ಮಿಶ್ರಣವನ್ನು ಮತ್ತೊಮ್ಮೆ ಕುಡಿಯಬಹುದು
ಎಲ್ಲರಿಗೂ ಸಾಧನೆಯ ಸಮಾಪಣೆ ಮಹಾಶಿವರಾತ್ರಿಯಂದು. ಅಂದು ಈಶ ಯೋಗ ಕೇಂದ್ರದಲ್ಲಿ ಸಾಧನೆಯನ್ನು ಸಮಾಪಣೆಗೊಳಿಸುವುದು ಉತ್ತಮ.
೧. ಇಡೀ ರಾತ್ರಿ ಜಾಗರಣೆಯಲ್ಲಿ ಇರುವುದು ಅಗತ್ಯ.
೨. ಯೋಗ ಯೋಗ ಯೋಗೇಶ್ವರಾಯ ಮಂತ್ರವನ್ನು 112 ಬಾರಿ ಪಠಿಸಿ.
೩. ನಿಸ್ಸಹಾಯಕರಾದ 3 ಜನರಿಗೆ ಆಹಾರ ಅಥವಾ ಹಣವನ್ನು ನೀಡಿ.
೪. ಧ್ಯಾನಲಿಂಗಕ್ಕೆ ವಿಲ್ವಾ ಎಲೆ / ಬೇವಿನ ಎಲೆ / 3 ಅಥವಾ 5 ದಳಗಳಿರುವ ಎಲೆಯನ್ನು ಅರ್ಪಿಸಿ
೫. ನಿಮ್ಮ ತೋಳಿನ ಕಪ್ಪು ಬಟ್ಟೆಯನ್ನು ತೆಗೆದು ಧ್ಯಾನಲಿಂಗದ ಮುಂದೆ, ನಂದಿಯ ಬಳಿ ಕಟ್ಟಿಕೊಳ್ಳಿ.
೬. ಧ್ಯಾನಲಿಂಗದ ಮುಂದೆ ಬಟ್ಟೆಯನ್ನು ಕಟ್ಟುವುದರಿಂದ ಆ ಜಾಗದಿಂದ ಹೋದ ನಂತರವೂ ಕರ್ಮದ ಅಚ್ಚನ್ನು ಕರಗಿಸುವ ಸಾಧ್ಯತೆಯನ್ನು ನೀಡುತ್ತದೆ.
112 ಅಡಿ ಆದಿಯೋಗಿಗೆ ಪ್ರದಕ್ಷಿಣೆ ಹಾಕಿ.
ನಿಮಗೆ ಈಶ ಯೋಗ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮಹಾಶಿವರಾತ್ರಿಯಂದು ಮನೆಯಲ್ಲಿಯೇ ಸಾಧನೆಯನ್ನು ಸಮಾಪಣೆಗೊಳಿಸಬಹುದು.
೧. ಇಡೀ ರಾತ್ರಿ ಜಾಗರನೆಯಲ್ಲಿ ಇರುವುದು ಅಗತ್ಯ.
೨. ಯೋಗ ಯೋಗ ಯೋಗೇಶ್ವರಾಯ ಮಂತ್ರವನ್ನು 112 ಬಾರಿ ಪಠಿಸಿ.
೩.ನಿಸ್ಸಹಾಯಕರಾದ 3 ಜನರಿಗೆ ಆಹಾರ ಅಥವಾ ಹಣವನ್ನು ನೀಡಿ
೪. ಧ್ಯಾನಲಿಂಗದ ಫೋಟೋಗೆ ವಿಲ್ವಾ ಎಲೆ / ಬೇವಿನ ಎಲೆ / 3 ಅಥವಾ 5 ದಳಗಳಿರುವ ಎಲೆಯನ್ನು ಅರ್ಪಿಸಿ. ಸಾಧನಾ ಕಿಟ್‌ನಲ್ಲಿ ಫೋಟೋ ಇರುತ್ತದೆ.
೫. ಮೇಲೆ ವಿವರಿಸಿದ ಸಮಾಪಣೆಯ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ನಿಮ್ಮ ತೋಳಿನಿಂದ ಕಪ್ಪು ಬಟ್ಟೆಯನ್ನು ತೆಗೆದು, ಸುಟ್ಟು ಅದರ ಬೂದಿಯನ್ನು ನಿಮ್ಮ ಮುಂದೋಳುಗಳು ಮತ್ತು ಕಾಲುಗಳ ಮೇಲೆ ಹಚ್ಚಿ.
ಬೆಳಗಿನ ಉಪಾಹಾರಕ್ಕಾಗಿ, 8-10 ಕಾಳುಮೆಣಸುಗಳನ್ನು 2-3 ವಿಲ್ವಾ ಅಥವಾ ಬೇವಿನ ಎಲೆಗಳೊಂದಿಗೆ ಜೇನುತುಪ್ಪದಲ್ಲಿ ಮತ್ತು ಒಂದು ಹಿಡಿ ಕಡಲೆಕಾಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ.ಶಿವ ನಮಸ್ಕಾರ ಮತ್ತು ಪಠಣೆಯ ನಂತರ, ಎಲೆಗಳನ್ನು ಜಗಿದು, ಕಾಳುಮೆಣಸನ್ನು ನಿಂಬೆ ರಸದೊಂದಿಗೆ ಬೆರೆಸಿ ಸೇವಿಸಿ ಮತ್ತು ಕಡಲೆಕಾಳನ್ನೂ ತಿನ್ನಿರಿ.
ಬೇವು ಅಥವಾ ವಿಲ್ವಾ ಎಲೆಗಳು ಲಭ್ಯವಿಲ್ಲದಿದ್ದರೆ, ದಯವಿಟ್ಟು ಬೇವಿನ ಪುಡಿಯ ಉಂಡೆಗಳನ್ನು ತೆಗೆದುಕೊಳ್ಳಿ. ಈಶ ಲೈಫ್ ನಲ್ಲಿ ಬೇವಿನ ಪುಡಿ ಲಭ್ಯವಿದೆ.
ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಿ. ಮೊದಲ ಊಟ ಮಧ್ಯಾಹ್ನ 12 ಗಂಟೆಯ ನಂತರ ಮಾಡಿ.
ಇವುಗಳನ್ನು ಸೇವಿಸುವ ಮೊದಲು, ಶಾಂಭವಿ ಮಹಾಮುದ್ರಾ ಕ್ರಿಯೆಯಂತಹ ನಿಯಮಿತ ಸಾಧನೆಯನ್ನು ಮುಗಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಧೂಮಪಾನ, ಮದ್ಯಪಾನ ಮತ್ತು ಮಾಂಸಾಹಾರ ಸೇವನೆಯಿಂದ ದೂರವಿರಿ.
ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಮಾತ್ರ ಧರಿಸಿ.
ಗರ್ಭಿಣಿಯರು ಶಿವ ನಮಸ್ಕಾರ ಮಾಡಬಾರದು.
ಮಹಿಳೆಯರು ತಮ್ಮ ಋತುಚಕ್ರದ ಅವಧಿಯಲ್ಲಿ ಶಿವ ನಮಸ್ಕಾರವನ್ನು ಮಾಡಬಹುದು.
ಅಂಡವಾಯು ಹೊಂದಿರುವ ಜನರು ಕುಶನ್ ಅಥವಾ ಕುರ್ಚಿಯನ್ನು ಬಳಸಿ ಶಿವ ನಮಸ್ಕಾರದ ಮಾರ್ಪಾಡುಗಳನ್ನು ಮಾಡಬಹುದು.
This sadhana kit includes...
ಸಾಧನಾ ಮಾರ್ಗಸೂಚಿಗಳು
ಯೋಗ ಯೋಗ ಯೋಗೇಶ್ವರಾಯ ಮಂತ್ರ - ಲಿರಿಕ್ಸ್
ಸರ್ವೇಭ್ಯೋ ಮಂತ್ರ - ಲಿರಿಕ್ಸ್