ಈಶ ಕ್ರಿಯಾ ಎಂಬುದು ಸದ್ಗುರು ಅವರಿಂದ ಸೃಜಿಸಲ್ಪಟ್ಟ, ಭಾರತದ ಅಧ್ಯಾತ್ಮಜ್ಞಾನದಿಂದ ಶೋಧಿಸಿ ತೆಗೆದಂತಹ ಬಹಳ ಸರಳ, ಆದರೆ ಸಾಮರ್ಥ್ಯಶಾಲಿ ಅಭ್ಯಾಸ ಪ್ರಕ್ರಿಯೆ. ಮಾನವನು ತನ್ನ ಅಸ್ತಿತ್ವದ ಮೂಲದ ಸಂಪರ್ಕಕ್ಕೆ ಬರುವಂತೆ ಸಹಕರಿಸುವುದು, ಮತ್ತು ತನ್ಮೂಲಕ ತನ್ನ ಜೀವನವನ್ನು ತನ್ನ ಅಪೇಕ್ಷೆಗನುಸಾರವಾಗಿ ರೂಪಿಸಿಕೊಳ್ಳುವಂತಾಗಿಸುವುದು ಈಶ ಕ್ರಿಯಾದ ಉದ್ದೇಶ. ಉಚಿತವಾಗಿ ನಿರ್ದೇಶಿತ ಧ್ಯಾನದ ರೂಪದಲ್ಲಿ ನೀಡಲಾಗುವ ಈಶ ಕ್ರಿಯಾವು ನಮ್ಮ ಅಂತರಂಗದಲ್ಲಿರುವ ಅಸೀಮ ಶಕ್ತಿಯನ್ನು ಅನುಭವಿಸುವ ಸಂಭಾವ್ಯತೆಯನ್ನು ಕಲ್ಪಿಸಿಕೊಡುತ್ತದೆ.

video
Jun 9, 2022
Subscribe