#1 ಯೋಗ, ನೀವು ಯಾರಿಗಾದರೂ ನೀಡಬಲ್ಲ ಅತ್ಯುತ್ತಮ ಜೀವನ ಪರಿಹಾರ ಮಾರ್ಗ

4reasons-why-everyone-must-become-a-yoga-veera-reason-1

ಸಮಾಜದಿಂದ ಪಡೆದ ಸಹಾಯವನ್ನು ಹಿಂದಿರುಗಿಸಲು ನೀವು ಹೃತ್ಪೂರ್ವಕವಾಗಿ ಬಯಸಿದ ಕ್ಷಣಗಳನ್ನು ಎಂದಾದರೂ ಅನುಭವಿಸಿದ್ದೀರ? ಇದರ ಪ್ರಯತ್ನದಲ್ಲೇ, ನಾವು ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು, ಸ್ವಯಂಸೇವಕರಾಗುವುದು, ಸಮಾಜದ ಏಳಿಗೆಗೆ ಕಾರ್ಯಗೈಯತ್ತಿರುವ ಸಂಸ್ಥೆಗಳಿಗೆ ಧನಸಹಾಯ ಮಾಡುವುದು - ಇವುಗಳೆಲ್ಲವೂ ಒಂದು ರೀತಿಯಲ್ಲಿ ನಮಗೆ ತೃಪ್ತಿ ನೀಡುತ್ತವೆ. ಆದರೆ, ಸದ್ಗುರುಗಳು ಅನೇಕ ವೇಳೆ ಹೇಳಿರುವ ಹಾಗೆ, ಭೂಮಿಯ ಮೇಲೆ ಈಗ ತೀವ್ರವಾದ ಅಗತ್ಯವಿರುವುದು ಮಾನವ ಪ್ರಜ್ಞೆಯನ್ನು ಮೇಲೇರಿಸುವುದು.

"ಮಾನವತೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಪೋಷಣೆ, ಆರೋಗ್ಯ, ಶಿಕ್ಷಣ ಮತ್ತು ಪರಿಸರವನ್ನು ಒಳಗೊಂಡಂತೆ ಭೂಮಿಯ ಮೇಲಿನ ಪ್ರತಿಯೊಂದು ಮೂಲಭೂತ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ಸಾಮರ್ಥ್ಯ, ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ನಮ್ಮ ಬಳಿಯಿದೆ. ಇಲ್ಲದೇ ಇರುವ ಏಕೈಕ ವಿಷಯವೆಂದರೆ ಅದನ್ನು ಸಾಧ್ಯವಾಗಿಸುವೆಡೆಗಿನ ಮಾನವರ ಮನಃಪೂರ್ವಕತೆ. ಇದಾಗಬೇಕಿದ್ದರೆ ಅಗತ್ಯವಿರುವುದು ಒಳಗೂಡಿಸಿಕೊಳ್ಳುವ ಪ್ರಜ್ಞೆ." – ಸದ್ಗುರು

ಈ ನಿಟ್ಟಿನಲ್ಲಿ, ಚಿಕ್ಕದಾದರೂ ಮಹತ್ವಪೂರ್ಣವಾದ ಪಾತ್ರವನ್ನು ನೀವು ವಹಿಸಬಹುದಾದರೆ ಅದೆಷ್ಟು ಅತ್ಯಮೋಘವಾಗಿರುತ್ತದೆಯಲ್ಲವೇ?

ಇದನ್ನು ಸಾಕಾರಗೊಳಿಸಲು ಯೋಗವೊಂದೇ ದಾರಿ. ಯೋಗವೀರರಾಗುವ ಒಂದು ಸರಳ ಹೆಜ್ಜೆ ಇಡುವುದರ ಮೂಲಕ ನೀವೂ ಅನೇಕರ ಜೀವನದಲ್ಲಿ ಯೋಗವನ್ನು ಪರಿಚಯಿಸಬಹುದು.

ಈಗಲೇ ಪ್ರತಿಜ್ಞೆ ಮಾಡಿ!

#2 ನೀವು ಬೇರೆಯವರಿಗೆ ದಾರಿ ತೋರಿದಾಗ, ನಿಮ್ಮ ದಾರಿಯನ್ನೂ ನೀವು ಕಂಡುಕೊಳ್ಳುವಿರಿ...

4reasons-why-everyone-must-become-a-yoga-veera-reason4

ಜೀವನವನ್ನು ರೂಪಾಂತರಿಸುವ ಈ ವಿಜ್ಞಾನವನ್ನು ನೀವು ಇತರರಿಗೆ ನೀಡುತ್ತಿದಂತೆ, ನಿಮ್ಮದೇ ಜೀವನ ಸುಧಾರಿಸಿ ಸುಂದರವಾಗಿ ರೂಪಾಂತರಗೊಳ್ಳುವುದನ್ನು ಕಾಣುವಿರಿ.

"ಇತರರ ಹೃದಯವನ್ನು ಸ್ಪರ್ಶಿಸಿ ಅವರ ಜೀವನವನ್ನು ರೂಪಾಂತರಿಸುವಂತಹದ್ದನ್ನು 
ಅವರಿಗೆ ಒದಗಿಸುವುದರಲ್ಲಿರುವ ಸಂತೋಷ ಮತ್ತು ಧನ್ಯತೆಯನ್ನು ನೀವು ಅರಿಯಬೇಕೆಂದು ನನ್ನ ಆಶಯ.” - ಸದ್ಗುರು

ಅಂತಹ ಆಳವಾದ ಧನ್ಯತಾ ಭಾವವನ್ನು ತರುವಂತದ್ದನ್ನು ಮತ್ತು ನಮ್ಮನ್ನು ಮೂಲಭೂತವಾಗಿ ರೂಪಾಂತರಿಸುವಂತದ್ದನ್ನು ವರ್ಣಿಸಲು ಪದಗಳು ಏನೇನೂ ಸಾಲವು. ಅದನ್ನು ಅನುಭವಿಸಿಯೇ ತಿಳಿಯಬೇಕು...

ಈಗಲೇ ಪ್ರತಿಜ್ಞೆ ಮಾಡಿ!

#3 ಯೋಗದ ಲಾಭಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಪರಿಚಯಿಸಿ

4 reasons why everyone must become a yoga veera reason 3

ಯೋಗವನ್ನು ಪ್ರಯತ್ನಿಸಲು ಬಹಳ "ಬ್ಯುಸಿ" ಆಗಿರುವ ನಿಮ್ಮ ಕುಟುಂಬದವರು ಅಥವಾ ಸ್ನೇಹಿತರಿದ್ದಾರೆಯೇ? ದಿನದ ಕೆಲವೇ ಕೆಲವು ನಿಮಿಷಗಳನ್ನು ತೆಗೆದುಕೊಳ್ಳುವ ಈ ಸರಳ ಮತ್ತು ಸಶಕ್ತ ಅಭ್ಯಾಸವನ್ನು ಅವರಿಗೆ ನೀಡುವ ಮೂಲಕ, ನೀವು ಅವರಿಗೆ ಯೋಗದ ಗೀಳನ್ನು ಹಿಡಿಸಬಹುದು.

ಒಮ್ಮೆ ಅವರು ಯೋಗದಿಂದಾಗುವ ಲಾಭವನ್ನು ಅನುಭವಿಸಲು ಆರಂಭಿಸಿದರೆ, ಖಂಡಿತವಾಗಿಯೂ ಹೆಚ್ಚಿನದನ್ನು ಬಯಸುತ್ತಾರೆ! ಆದ್ದರಿಂದ ಪ್ರಯತ್ನಿಸಿ!

ಈಗಲೇ ಪ್ರತಿಜ್ಞೆ ಮಾಡಿ!

#4 ತೊಡಗುವಿಕೆಯ ತೀವ್ರತರ ಭಾವವನ್ನು ಅನುಭವಿಸಿ

4reasons-why-everyone-must-become-a-yoga-veera-reason-4

ಯೋಗವೀರರಾಗುವುದು ತೀವ್ರವಾದ ತೊಡಗುವಿಕೆಯನ್ನು ಅನುಭವಿಸಲು ಒಂದು ಸದವಕಾಶ. ನೀವೆಂದೂ ಏನನ್ನೂ ಆಳವಾಗಿ ಅನುಭವಿಸಿಲ್ಲವಾದರೆ, ಯಾರಿಗಾದರೂ ಸರಳವಾದ ಯೋಗಾಭ್ಯಾಸವನ್ನು ಕಲಿಸಲು ಪ್ರಯತ್ನಿಸಿ.

ಸದ್ಗುರುಗಳು ಯೋಗವೀರರಾಗುವ ಪ್ರಕ್ರಿಯೆಯನ್ನು ಅತ್ಯಂತ ಸರಳ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದಾರೆ. ಇದಕ್ಕೆ ಬೇಕಿರುವುದು ಮನಃಪೂರ್ವಕತೆಯಷ್ಟೆ. ನೀವೂ ಯೋಗವೀರರಾಗಬಹುದು!

ನೀವು ಮಾಡಬೇಕಾಗಿರುವುದು ಇಷ್ಟನ್ನೇ: ತಿಂಗಳಿಗೆ ಒಬ್ಬರಿಗೆ ಈ ಸರಳ ಮತ್ತು ಆಳವಾದ ಅಭ್ಯಾಸವನ್ನು ಕಲಿಸುವುದು.

ಈಗಲೇ ಪ್ರತಿಜ್ಞೆ ಮಾಡಿ!