ನಿಮ್ಮ ಕಾರ್ಬನ್ ಫುಟ್‍ಪ್ರಿನ್ಟ್(ಇಂಗಾಲದ ಹೊರಸೂಸುವಿಕೆ)ಯನ್ನು ಕಡಿಮೆ ಮಾಡಲು 7 ಸರಳ ಉಪಾಯಗಳು
ನಿಮ್ಮ ಕಾರ್ಬನ್ ಫುಟ್‍ಪ್ರಿನ್ಟ್ ಕಡಿಮೆ ಮಾಡಲು ನೀವು ಹೆಚ್ಚಿಗೆ ಏನನ್ನು ಮಾಡಬಹುದು? ಅದು ನಿಮ್ಮ ಮನೆಯಿಂದಲೇ ಶುರುವಾಗಲಿ ಎಂದು ನಾವು ಹೇಳುತ್ತೇವೆ. ಸುಮಾರು ಮೂರರಲ್ಲಿ ಒಂದರಷ್ಟು ಇಂಗಾಲದ ಹೊರಸೂಸುವಿಕೆಯು ಮನೆಗಳಿಂದ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಹೊರಸೂಸುವಿಕೆಯನ್ನು ಕಡಿಮೆ ಮಾಡಲು 7 ಸುಲಭ ಕ್ರಮಗಳ ಬಗ್ಗೆ ಇಲ್ಲಿ ಓದಿ ತಿಳಿಯಿರಿ...
ನಿಮ್ಮ ಕಾರ್ಬನ್ ಫುಟ್‍ಪ್ರಿನ್ಟ್ ಕಡಿಮೆ ಮಾಡಲು ನೀವು ಹೆಚ್ಚಿಗೆ ಏನನ್ನು ಮಾಡಬಹುದು? ಅದು ನಿಮ್ಮ ಮನೆಯಿಂದಲೇ ಶುರುವಾಗಲಿ ಎಂದು ನಾವು ಹೇಳುತ್ತೇವೆ. ಸುಮಾರು ಮೂರರಲ್ಲಿ ಒಂದರಷ್ಟು ಇಂಗಾಲದ ಹೊರಸೂಸುವಿಕೆಯು ಮನೆಗಳಿಂದ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಹೊರಸೂಸುವಿಕೆಯನ್ನು ಕಡಿಮೆ ಮಾಡಲು 7 ಸುಲಭ ಕ್ರಮಗಳ ಬಗ್ಗೆ ಇಲ್ಲಿ ಓದಿ ತಿಳಿಯಿರಿ.
- ನಿಮ್ಮ ಯಂತ್ರೋಪಕರಣಗಳನ್ನು ಬಳಸದೇ ಇರುವ ಸಮಯದಲ್ಲಿ ಅವುಗಳನ್ನು ಆಫ್ ಮಾಡಿ
- ಶಾಪಿಂಗ್-ಗೆ ಹೋಗುವಾಗ ಮರುಬಳಕೆ ಮಾಡಬಹುದಾದ ಬಟ್ಟೆಯ ಬ್ಯಾಗನ್ನು ಕೊಂಡೊಯ್ಯಿರಿ
- ನಿಮ್ಮ ಕಂಪ್ಯೂಟರ್ ಸ್ಕ್ರೀನ್-ನ ಪ್ರಕಾಶತೆಯನ್ನು ಕಡಿಮೆ ಮಾಡಿ
- ದೂರವಾಣಿಯ ಮೂಲಕ ಸಾಧ್ಯವಾದಷ್ಟು ವ್ಯವಹರಿಸಿ ಮತ್ತು ಆದಷ್ಟೂ ದೂರವಾಣಿಯಲ್ಲೇ ನಿಮ್ಮ ಸಮಾಲೋಚನೆಗಳನ್ನು ನಡೆಸಿ
ನೀವು ನಿಜವಾಗಿಯೂ ಟ್ರ್ಯಾಫಿಕ್ ಜಾಮ್-ನಲ್ಲಿ ಪರದಾಡಿಕೊಂಡು ನಿಮ್ಮ ಕಛೇರಿಗೆ ಹೋಗಬೇಕಾಗಿಲ್ಲ ಅಥವಾ ಬೇರೆ ನಗರದಲ್ಲಿರುವ ನಿಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಲು ಬಿಸ್ನೆಸ್ ಮೀಟಿಂಗ್-ಗಾಗಿ ಖುದ್ದು ಹೋಗಬೇಕಾಗಿಲ್ಲ. ಮನೆಯಿಂದಲೇ ಕೆಲಸ ಮಾಡಬಹುದೇ ಎಂದು ನೀವು ನಿಮ್ಮ ಮೇಲಧಿಕಾರಿಯನ್ನು ಕೇಳಲು ಇದೊಂದು ಉತ್ತಮ ಕಾರಣ. - ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ
ಆಹಾರ ಪದಾರ್ಥಗಳು ನಿಮ್ಮ ಊಟದ ತಟ್ಟೆಗೆ ಬರುವ ಮುಂಚೆ ಎಷ್ಟು ದೂರವನ್ನು ಕ್ರಮಿಸಿ ಬಂದಿರುತ್ತವೆ ಎಂದು ನಿಮಗೆ ಗೊತ್ತಾದರೆ ನೀವು ದಿಗ್ಭ್ರಮೆಗೊಳ್ಳುತ್ತೀರಿ. ಒಂದು ಬಟ್ಟಲು ಕಾರ್ನ್-ಫ್ಲೇಕ್ಸ್ ಮತ್ತು ಬಾಟಲಿಯಲ್ಲಿನ ಹಣ್ಣಿನ ರಸ ಸರಳವಾಗಿ ಕಾಣಬಹುದು, ಆದರೆ ಅದು ಅಷ್ಟು ಸರಳವಾಗಿಲ್ಲ. ಪರ್ಯಾಯವಾಗಿ, ತಾಜಾ ಹಣ್ಣು ಮತ್ತು ತರಕಾರಿಗಳಿಗಾಗಿ ನೀವು ಸ್ಥಳೀಯ ಉತ್ಪನ್ನಗಳನ್ನು ಹಾಗೂ ಸಣ್ಣ ರೈತ ಸಂಘಗಳನ್ನು ಉತ್ತೇಜಿಸಿ. - ಪ್ಯಾಕೇಜಿಂಗ್-ನ ಕಡೆ ಗಮನ ನೀಡಿ ನೀವು ಶಾಪಿಂಗ್-ಗಾಗಿ ಹೊರಗಡೆ ಹೋದಾಗ, ಪ್ಯಾಕೇಜಿಂಗನ್ನು ಆದಷ್ಟು ಕಡಿಮೆ ಮಟ್ಟದಲ್ಲಿಟ್ಟಿರುವಂತಹ ಅಂಗಡಿಗಳಿಗೆ ಹೋಗಲು ಪ್ರಯತ್ನಿಸಿ. ಉದಾಹರಣೆಗೆ, ಪೆಟ್ಟಿಗೆ ಅಥವಾ ಪ್ಲಾಸ್ಟಿಕ್-ನಲ್ಲಿ ಸುತ್ತಿಟ್ಟಿರುವ ಟೊಮೆಟೊಗಳಿಗಿಂತ ಬಿಡಿಯಾಗಿಟ್ಟಿರುವ ಟೊಮೆಟೊಗಳನ್ನು ಖರೀದಿಸುವ ಆಯ್ಕೆಯನ್ನು ಮಾಡಿ.
- ಬಾಟಲ್ ನೀರು
ತಯಾರಿಕೆ ಮತ್ತು ಸಾಗಾಣಿಕೆಗೆ ಬೇಕಾದ ಸಂಪನ್ಮೂಲಗಳ ಕಾರಣದಿಂದಾಗಿ ಬಾಟಲ್ ಮಾಡಿದ ನೀರು ಭಾರಿ ದೊಡ್ಡ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿದೆ. ವಿಶೇಷವಾಗಿ ಭಾರತದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಮರುಬಳಕೆ ಮಾಡಲಾಗುತ್ತಿಲ್ಲ ಮತ್ತಿದು ಅದರ ಇಂಗಾಲದ ಹೊರಸೂಸುವಿಕೆಯನ್ನು ಮತ್ತಷ್ಟು ದೊಡ್ಡದಾಗಿಸಿದೆ. ಇದಕ್ಕೆ ಪರ್ಯಾಯವಾಗಿ ಪುನರ್ಬಳಕೆ ಮಾಡಲಾಗುವಂತಹ ನೀರಿನ ಬಾಟಲ್ಗಳನ್ನು ನೀವು ಬಳಸುವುದು ಉತ್ತಮ.
ಸಂಪಾದಕರ ಟಿಪ್ಪಣಿ: Project GreenHands ಪ್ರಾಜೆಕ್ಟ್ ಗ್ರೀನ್-ಹ್ಯಾಂಡ್ಸ್ ನಿಮ್ಮನ್ನು ಪ್ರತಿದಿನ ಮರಗಳನ್ನು ನೆಡುವಂತೆ ಉತ್ತೇಜಿಸುತ್ತದೆ. ನೀವು ನೀಡುವ ಅತ್ಯಲ್ಪ ದೇಣಿಗೆಯನ್ನು ಬಳಸಿ ಮರಗಳನ್ನು ನೆಡುವ ಮೂಲಕ ನಿಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಡಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಇಲ್ಲಿ ಸೈನ್ ಅಪ್ ಮಾಡಿ here ಮತ್ತು ನಿಮ್ಮ ಮರಗಳು ಬೆಳೆಯುವುದನ್ನು ನೋಡಿ!