ಪಂಚ ಭೂತ ಕ್ರಿಯಾ ಆನ್‍ಲೈನ್

ಮಹಾಶಿವರಾತ್ರಿಯಂದು ಸದ್ಗುರುಗಳೊಂದಿಗೆ

26 February 2025

03:00 AM - 03:30 AM

Registration Closed

ಪಂಚ ಭೂತ ಕ್ರಿಯಾ ಆನ್‌ಲೈನ್ – ವರ್ಷದ ಅತ್ಯಂತ ಶಕ್ತಿಯುತ ರಾತ್ರಿಯಾದ ಮಹಾಶಿವರಾತ್ರಿಯಂದು ಸದ್ಗುರುಗಳ ಅನುಗ್ರಹವನ್ನು ಪಡೆಯಲು ಇದು ಒಂದು ಅನನ್ಯ ಅವಕಾಶವಾಗಿದೆ.

ಯೋಗದಲ್ಲಿ, ಪಂಚಭೂತಗಳನ್ನು ಭೌತಿಕ ದೇಹವನ್ನು ಒಳಗೊಂಡಂತೆ ಸಕಲ ಸೃಷ್ಟಿಯ ತಳಹದಿಯಾಗಿ ನೋಡಲಾಗುತ್ತದೆ. ಯೋಗ ವಿಜ್ಞಾನಗಳು ಶಕ್ತಿಯುತ ಪ್ರಕ್ರಿಯೆಗಳನ್ನು ಹೊಂದಿದ್ದು ಅವು ಮಾನವ ಜೀವವ್ಯವಸ್ಥೆಯೊಳಗಿನ ಪಂಚಭೂತಗಳನ್ನು ಶುದ್ಧೀಕರಿಸುವ ಮೂಲಕ ದೇಹ ಮತ್ತು ಮನಸ್ಸುಗಳನ್ನು ಚೈತನ್ಯಭರಿತ ಆರೋಗ್ಯ ಮತ್ತು ಒಳಿತಿನ ಸ್ಥಿತಿಗೆ ಕೊಂಡೊಯ್ಯುತ್ತವೆ.

ಪಂಚಭೂತ ಕ್ರಿಯೆಯ ಮೂಲಕ ಸದ್ಗುರುಗಳು ಶಕ್ತಿಯುತ ಯೋಗಪ್ರಕ್ರಿಯೆಯಾದ ಭೂತ ಶುದ್ಧಿಯ ಪ್ರಯೋಜನವನ್ನು ಎಲ್ಲರೂ ಪಡೆಯಲು ಒಂದು ಅನನ್ಯ ಅವಕಾಶವನ್ನು ತೆರೆಯುತ್ತಿದ್ದಾರೆ. ಇಲ್ಲದಿದ್ದರೆ ಈ ಭೂತಶುದ್ಧಿಗೆ ತೀವ್ರವಾದ ಸಾಧನೆಯ (ಆಧ್ಯಾತ್ಮಿಕ ಅಭ್ಯಾಸ) ಅಗತ್ಯವಿರುತ್ತದೆ.

ನಿಮ್ಮ ಜೀವವ್ಯವಸ್ಥೆಯೊಳಗೆ ಈ ಪಂಚಭೂತಗಳು ಹೇಗೆ ವರ್ತಿಸುತ್ತವೆ ಎಂಬುದು ನಿಮ್ಮ ಆರೋಗ್ಯ ಮತ್ತು ಅನಾರೋಗ್ಯ, ಶಾಂತಿ ಮತ್ತು ಅಶಾಂತಿ, ಸಂತೋಷ ಮತ್ತು ತೊಳಲಾಟದ ನಡುವಿನ ನಿರ್ಧಾರಕ ಅಂಶವಾಗಿದೆ.

ಪ್ರಯೋಜನಗಳು

ದೇಹ ಮತ್ತು ಮನಸ್ಸನ್ನು ಸ್ಥಿರಗೊಳಿಸುತ್ತದೆ

ದುರ್ಬಲ ದೇಹಪ್ರಕೃತಿಯಿಂದ ಬಳಲುತ್ತಿರುವ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿ

ಮಾನಸಿಕ ಅಸ್ಥಿರತೆಗಳನ್ನು ಸಮತೋಲನಗೊಳಿಸುತ್ತದೆ

ನಿದ್ರಾಹೀನತೆ ಮತ್ತು ನಿರಂತರ ಭಯದ ಸ್ಥಿತಿಯಲ್ಲಿ ಬಳಲುತ್ತಿರುವವರಿಗೆ ಬಹಳವಾಗಿ ಸಹಾಯ ಮಾಡುತ್ತದೆ

Glimpses

ಕಾರ್ಯಕ್ರಮದ ವಿವರಗಳು

ಸೆಷನ್ ಪೂರ್ಣಗೊಂಡ ನಂತರ 24 ಗಂಟೆಗಳ ತನಕ ವಿಡಿಯೋ ಲಭ್ಯವಿರುತ್ತದೆ.

ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಅನುವಾದ ಲಭ್ಯವಿರುತ್ತದೆ.

ಗಮನಿಸಿ:
Registration Closed

ಕಾರ್ಯಕ್ರಮದ ಮಾರ್ಗಸೂಚಿಗಳು

14 ವರ್ಷಕ್ಕಿಂತ ಮೇಲ್ಪಟ್ಟವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. 14 ರಿಂದ 18 ವರ್ಷ ವಯಸ್ಸಿನೊಳಗಿನವರು ಕಾರ್ಯಕ್ರಮಕ್ಕೆ ನೋಂದಾಯಿಸಬೇಕೆಂದರೆ ಅವರ ಪೋಷಕರ ಒಪ್ಪಿಗೆ ಅಗತ್ಯವಿರುತ್ತದೆ.

ಪರಿಚಯಾತ್ಮಕ ಸೆಷನ್ ಫೆಬ್ರವರಿ 23, ಬೆಳಗ್ಗೆ 8 ಗಂಟೆಯಿಂದ ಫೆಬ್ರವರಿ 26, ಬೆಳಗ್ಗೆ 8 ರವರೆಗೆ ಲಭ್ಯವಿರುತ್ತದೆ.

ಪಂಚ ಭೂತ ಕ್ರಿಯಾ ಕಿಟ್‌ ನಲ್ಲಿರುವ ವಸ್ತುಗಳ ಪರಿಚಯ ಮಾಡಿಕೊಳ್ಳಲು ಮತ್ತು ಪ್ರಕ್ರಿಯೆಗೆ ನಿಮ್ಮನ್ನು ಸಿದ್ಧಪಡಿಸಲು ಈ ಸೆಷನ್ ಸಹಾಯ ಮಾಡುತ್ತದೆ.

ನಿಮಗೆ ಸ್ಥಿರವಾದ ಇಂಟರ್ನೆಟ್ ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ಇಂಟರ್ನೆಟ್ ಬ್ರೌಸರ್‌ನೊಂದಿಗೆ ಕಾರ್ಯನಿರ್ವಹಿಸುವ ಡಿವೈಸ್ ಅಗತ್ಯ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಸಂಪರ್ಕಿಸಿ

 
Close