#SimhaKriya #Sadhguru ಕೊರೊನಾ ಎರಡನೇ ಅಲೆ Corona Second Wave ಅಪ್ಪಳಿಸಿರುವ ಈ ಸಮಯದಲ್ಲಿ, ಈಶಾದ ಸಿಂಹ ಕ್ರಿಯಾ (Simha Kriya) ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ವರ್ಧಿಸಲು ಒಂದು ಸರಳವಾದ ಆದರೆ ಶಕ್ತಿಯುತವಾದ ಯೋಗ ಪ್ರಕ್ರಿಯೆ. ಉತ್ತಮವಾದ ರೋಗನಿರೋಧಕಶಕ್ತಿಯನ್ನು(Immunity Power) ಹೊಂದಿರುವುದು ಬಹಳ ಮುಖ್ಯ. ಆದ್ದರಿಂದ ಈ ಸರಳ ಕ್ರಿಯೆಯ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ. ಕೊರೊನಾ ವ್ಯಾಕ್ಸಿನ್ ಭಾರತ ಸೇರಿದಂತೆ ವಿಶ್ವದಾದ್ಯಂತ ಕೊಡಲಾಗುತ್ತಿದೆಯಾದರೂ, ಸಂಪೂರ್ಣ ಜನಸಂಖ್ಯೆಗೆ ಅದು ಸಿಗಬೇಕೆಂದರೆ ಅದರದ್ದೇ ಆದ ಸಮಯ ಹಿಡಿಯುತ್ತದೆ. ಆದಾಗ್ಯೂ, ವ್ಯಾಕ್ಸಿನ್ ಪಡೆದರೂ ಸಾಮಾಜಿಕ ಅಂತರ(Social Distancing), ಮಾಸ್ಕ್, ಸ್ಯಾನಿಟೈಸರ್ ಮುಂತಾದವುಗಳನ್ನು ಅಭ್ಯಾಸದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ. ಹಾಗೆಯೇ, ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಕೆಲಸ ಮಾಡುವುದು ಬಹಳ ಪ್ರಯೋಜನಕಾರಿ. ಈ ವಿಡಿಯೋದ ಸದುಪಯೋಗ ಪಡೆದುಕೊಳ್ಳಿ.

video
Jul 25, 2022
Subscribe