ಓರ್ವ ಮಹಾದೇವಿಯ ಜನನಕ್ಕೆ ಸಾಕ್ಷಿಯಾಗುವುದು ಬಹಳ ಅಪರೂಪದ ಹಾಗೂ ಅತಿದೊಡ್ಡ ಸೌಭಾಗ್ಯ. ಮಾರ್ಚ್ 7ರಂದು ನೇಪಾಳದ ಕಠ್ಮಂಡುವಿನಲ್ಲಿ ಸದ್ಗುರುಗಳು ಒಂದು ತೀವ್ರವಾದ ಪ್ರಾಣಪ್ರತಿಷ್ಠಾಪನಾ ಪ್ರಕ್ರಿಯೆಯ ಮೂಲಕ ಲಿಂಗಭೈರವಿಯನ್ನು ಪ್ರತಿಷ್ಟಾಪಿಸಿದರು - ಪ್ರಾಣಶಕ್ತಿಗಳನ್ನು ಬಳಸಿ ಕಲ್ಲೊಂದನ್ನು ದೈವರೂಪವಾಗಿ ಪರಿವರ್ತಿಸುವ ನಿಗೂಢ ಯೋಗಪ್ರಕ್ರಿಯೆಯ ಮೂಲಕ - ನಂತರ 9ನೇ ತಾರೀಖು ನೇಪಾಳಕ್ಕೆ ಲಿಂಗಭೈರವಿಯನ್ನು ಸ್ವಾಗತಿಸುವ ಸಲುವಾಗಿ 'ಭೈರವಿ ಉತ್ಸವ'ವನ್ನು ನೃತ್ಯ, ಸಂಗೀತ ಮತ್ತು ಭಕ್ತಿ ಹಾಗೂ ಸದ್ಗುರುಗಳೊಂದಿಗಿನ ವಿಶೇಷ ಸತ್ಸಂಗದ ಜೊತೆ ಅದ್ಧೂರಿಯಾಗಿ ಆಚರಿಸಲಾಯಿತು.
Subscribe