Main Centers
International Centers
India
USA
FILTERS:
SORT BY:
ತಾಯ್ತನದ ಸೊಬಗು ಇರುವುದು ಸಂತಾನೋತ್ಪತ್ತಿಯಲ್ಲಲ್ಲ, ಬದಲಿಗೆ ಇನ್ನೊಂದು ಜೀವವನ್ನು ತನ್ನದೇ ಭಾಗವಾಗಿ ಒಳಗೂಡಿಸಿಕೊಳ್ಳುವ ಹೃತ್ಪೂರ್ವಕತೆಯಲ್ಲಿ.
ಒಳ್ಳೆತನ ಎಂಬುದು ನೀವು ಭಾವಿಸಿಕೊಳ್ಳುವ ಸ್ಥಿತಿಯಷ್ಟೆ. ಸಂತೋಷವು ನಿಜವಾದ ಅನುಭವ.
ನೀವು ಭೂಮಿಯನ್ನು ಬ್ರಹ್ಮಾಂಡದ ಇನ್ನೊಂದು ಭಾಗದಿಂದ ನೋಡಿದರೆ, ನಾವೆಲ್ಲರೂ ಅಲೌಕಿಕ ಜೀವಿಗಳೇ.
On this day, Gautama the Buddha realized there is no going towards Truth. If you become available, it is right here.
ದೇಹ-ಮನಸ್ಸುಗಳು ಪವಾಡಮಯ ಸಾಧನಗಳು. ಆದರೆ ಅವು ಉತ್ಕೃಷ್ಟವಾಗಿ ಕಾರ್ಯಗೈಯಬೇಕೆಂದರೆ, ಅವನ್ನು ನೀವು ಸರಿಯಾಗಿ ಧರಿಸಲು ಕಲಿಯಬೇಕು.
ಮಾನವ ಬದುಕು ಹೊಟ್ಟೆಪಾಡಿನೊಂದಿಗೆ ಮುಕ್ತಾಯವಾಗುವುದಿಲ್ಲ. ಮಾನವ ಬದುಕು ಪ್ರಾರಂಭವಾಗುವುದೇ ಹೊಟ್ಟೆಪಾಡಿನ ಏರ್ಪಾಡಾದ ಮೇಲೆ.
ಪ್ರೀತಿ ಎಂಬುದೊಂದು ವಿನಿಮಯವಲ್ಲ. ಪ್ರೀತಿಯು ನಿಮ್ಮೊಳಗೇ ನಡೆಯುವ ಒಂದು ಮಧುರವಾದ ಸಂಗತಿ. ಅದು ಬಾಹ್ಯ ಅಭಿವ್ಯಕ್ತಿಯನ್ನು ಪಡೆದುಕೊಳ್ಳಬಹುದು, ಆದರೆ ಅದು ಬರುವುದು ಒಳಗಿನಿಂದಲೇ.
ಯಾರನ್ನೂ ಮೆಚ್ಚಿಸಲು ಪ್ರಯತ್ನಿಸಬೇಡಿ. ನೀವು ನಿಜವಾಗಿಯೂ ಸಂತೋಷಭರಿತರಾಗಿದ್ದರೆ, ಮತ್ತು ಮಾನವತೆ ನಿಮ್ಮಲ್ಲಿ ಉಕ್ಕಿಹರಿಯುತ್ತಿದ್ದರೆ, ನೀವು ಎಲ್ಲರೊಂದಿಗೂ ಚೆನ್ನಾಗೇ ಇರುತ್ತೀರಿ.
ನಿಮ್ಮನ್ನು ಬಸವಳಿಸುತ್ತಿರುವುದು ನಿಮ್ಮ ಕೆಲಸವಲ್ಲ, ಬದಲಿಗೆ ನಿಮ್ಮದೇ ಯೋಚನೆ-ಭಾವನೆಗಳ ಗಿಜಿಗುಟ್ಟುವಿಕೆ.
ಉಪದ್ರವವು ಉಪದ್ರವ ಎನಿಸಿಕೊಳ್ಳುವುದು ನೀವದಕ್ಕೆ ಸಿದ್ಧತೆ ಮಾಡಿಕೊಂಡಿಲ್ಲದಿದ್ದರೆ ಮಾತ್ರ. ನೀವು ನಿಮ್ಮೊಳಗೆ ಅಗತ್ಯವಾದ ಸಾಧನೆಯನ್ನು ಮಾಡಿಕೊಂಡರೆ, ಅದೊಂದು ಮೆಟ್ಟಿಲಾಗುತ್ತದೆ.
ತಲೆಯಲ್ಲಿ ಸ್ವಲ್ಪವೂ ಸ್ಪಷ್ಟತೆಯಿಲ್ಲದಿದ್ದರೂ ಜನರು ಬಹಳ ಆತ್ಮವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಇದೊಂದು ಅನಾಹುತವೇ ಸರಿ.
ನಿಮ್ಮ ಹೃದಯ ತುಂಬಿದ್ದಾಗ, ಮತ್ತು ಮನಸ್ಸು ‘ನಾನು’ ಎಂಬುದರಿಂದ ಮುಕ್ತವಾಗಿದ್ದಾಗ, ನಿಮ್ಮ ಕಾಲುಗಳು ಕುಣಿಯುತ್ತವೆ.