FILTERS:
SORT BY:
ಕಾರ್ಯಗೈಯುವುದು ಕರ್ಮವಾಗಿರುವಂತೆಯೇ, ನಿಷ್ಕ್ರಿಯತೆಯೂ ಕರ್ಮವೇ.
ನೀವು ಸಮಾಜದಲ್ಲಿ ಬಹಳ ಚಾಣಾಕ್ಷರಾಗಿರಬಹುದು, ಆದರೆ ಜೀವನದ ವಿಷಯದಲ್ಲಿ ತೀರಾ ಪೆದ್ದರಾಗಿರಬಹುದು.
ನೀವದನ್ನು ಒತ್ತಡ, ತಳಮಳ, ಅಥವಾ ಖಿನ್ನತೆ ಇತ್ಯಾದಿಯಾಗಿ ಹೇಗಾದರೂ ಕರೆಯಿರಿ – ಮೂಲ ವಿಷಯವೇನೆಂದರೆ, ನಿಮ್ಮ ಬುದ್ಧಿಶಕ್ತಿ ನಿಮ್ಮದೇ ವಿರುದ್ಧ ತಿರುಗಿಬಿಟ್ಟಿದೆ ಅಷ್ಟೆ.
ನಿಮಗೆ ನೀವೇ ನರಳಾಟವನ್ನು ಉಂಟುಮಾಡಿಕೊಳ್ಳುವುದು ಅಸಹಾಯಕ ಮಗುವಿಗೆ ನರಳಾಟ ಕೊಟ್ಟಂತೆ. ನಿಮ್ಮೊಂದಿಗೆ ನೀವು ಹೋರಾಡಲಾರಿರಿ, ಅಥವಾ ನಿಮ್ಮಿಂದ ನೀವು ಓಡಿ ಹೋಗಲಾರಿರಿ – ನಿಮಗೆ ಯಾವುದೇ ರೀತಿಯ ರಕ್ಷಣೆಯಿಲ್ಲ.
ನಿಮ್ಮ ಮನಸ್ಸು ಚುರುಕಾಗಿರಬೇಕು. ಇಲ್ಲದಿದ್ದರೆ ಜೋಕ್ಗಳು ನಿಮಗೆ ಅರ್ಥವಾಗುವುದಿಲ್ಲ. ಜೋಕ್ ಅರ್ಥವಾಗದಿದ್ದರೆ, ನೀವೇ ಒಂದು ಜೋಕ್ ಆಗುತ್ತೀರಿ.
ಆರೋಗ್ಯವೆಂದರೆ ಬರೀ ರೋಗವಿಲ್ಲದೇ ಇರುವುದಲ್ಲ – ಅದು ನಿಮ್ಮೊಳಗಿನ ಒಂದು ಪರಿಪೂರ್ಣತೆಯ ಭಾವ.
ನೀವು ಯಾರನ್ನಾದರೂ ಭೇಟಿಯಾದಾಗ, ನಿಮ್ಮ ವ್ಯಕ್ತಿತ್ವದ ಅತ್ಯಂತ ಮಧುರವಾದ ಅಂಶಗಳಷ್ಟೆ ಅವರನ್ನು ಸೋಕಬೇಕು.
A life of excess is not a good life. Whatever you gather should only enhance Inner Wellbeing, not entangle you.
ಸಂತೋಷವನ್ನು ಹೊಂದಬೇಕು ಎಂಬ ಕಾರಣಕ್ಕೆ ನೀವು ಯಶಸ್ಸನ್ನು ಬಯಸುತ್ತೀರಿ. ಆದರೆ ನಿಮಗೆ ನಿಮ್ಮ ಪಾಡಿಗೆ ಸಂತೋಷದಿಂದ ಇರುವುದು ಹೇಗೆಂದು ಗೊತ್ತಿದ್ದರೆ, ನೀವು ಸದಾ ಯಶಸ್ವಿ.
ಯೋಗಸಾಧನೆಯನ್ನು ಮಾಡುವಾಗ ಅದನ್ನು ಜೀವಮಾನವಿಡೀ ಮಾಡುತ್ತೇನೆ ಎಂದೆಲ್ಲ ಯೋಚಿಸಬೇಡಿ. ಅದನ್ನು ಇಂದಿಗಾಗಿ ಮಾಡಿ ಅಷ್ಟೆ.
ನೀವು ಬುದ್ಧಿವಂತರಾಗಿದ್ದರೆ ನಿಮ್ಮ ಪ್ರತಿ ಹೆಜ್ಜೆಯನ್ನೂ ಗಮನವಿಟ್ಟು ನೋಡುವಿರಿ. ಎಲ್ಲದರ ಬಗ್ಗೆ ಪೂರ್ತಿ ಖಚಿತರಾಗಿರುವುದು ಮೂರ್ಖರಷ್ಟೆ.
Success is not a quantity. Success is a quality you live with.