’ಸಿಎಎ’ ಅಥವಾ ‘ಪೌರತ್ವ ತಿದ್ದುಪಡಿ ಕಾಯ್ದೆ’ ಅನುಮೋದನೆಯಾದ ನಂತರ ದೇಶದ ಕೆಲವೆಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಕೆಲವು ಕಡೆ ಬಸ್ಸುಗಳಿಗೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿತ್ತು. ಸಿಎಎ ಮತ್ತು ಈ ಹಿಂಸಾಚಾರದ ಬಗ್ಗೆ ಸದ್ಗುರುಗಳು ಮಾತನಾಡಿದ್ದರು ಕೂಡ. ಈ ಹಿನ್ನಲೆಯಲ್ಲಿ, ಸದ್ಗುರುಗಳು ದಾವೋಸ್ ನಲ್ಲಿ ನಡೆದ ’ಜಾಗತಿಕ ಆರ್ಥಿಕ ಸಮಾವೇಶ’ (World Economic Form) ಭಾಗವಹಿಸಲು ತೆರಳಿದ್ದಾಗ ಅಲ್ಲಿಗೆ ಆಗಮಿಸಿದ್ದ ’ಇಂಡಿಯಾ ಟುಡೇ’ ನಿರೂಪಕ ರಾಹುಲ್ ಕನ್ವಾಲ್ ಸದ್ಗುರುಗಳೊಂದಿಗೆ ಚಿಕ್ಕ ಸಂದರ್ಶನ ಮಾಡಿದ್ದರು. ಇದು ಅದರ ಕನ್ನಡ ಅವತರಣಿಕೆ. ಸಿಎಎ ನಂತರ ಒಂದು ಜವಾಬ್ದಾರಿಯುತ ಸಮಾಜವಾಗಿ ನಾವು ಏನು ಮಾಡಬೇಕಿತ್ತು? ಸಿಎಎ ಕಾಯ್ದೆಯಲ್ಲಿ ಭಾರತೀಯರಿಗೆ ಮುಳುವಾಗುವಂಥದ್ದೇನಾದರೂ ಇದೆಯೇ? ಹಾಗಿದ್ದರೆ ಸರ್ಕಾರ ವಿಫಲವಾಗಿದ್ದೆಲ್ಲಿ? ಮಾಧ್ಯಮಗಳು ಯಾವ ರೀತಿ ನಡೆದುಕೊಳ್ಳಬೇಕಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಸದ್ಗುರುಗಳ ಮಾತುಗಳನ್ನು ಕೇಳಬಹುದು.
Subscribe