ಅಭಿನವ್ ಬಿಂದ್ರ: ಯುವಜನರ ಸಮಗ್ರ ಬೆಳವಣಿಗೆಗೆ ಕ್ರೀಡೆಯು ಬಹಳ ಮುಖ್ಯವಾಗಿದ್ದು ಅವರ ಭೌತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಆರೋಗ್ಯವನ್ನಷ್ಟೆ ಅಲ್ಲದೆ, ಅವರಲ್ಲಿ ಸಹಯೋಗ ಮತ್ತು ಕ್ರೀಡಾಪಟುತ್ವವನ್ನು ಪೋಷಿಸುತ್ತದೆ. ನಮ್ಮ ದೇಶದ ಯುವಕರನ್ನು ಕ್ರೀಡೆಯ ಕಡೆಗೆ ಪ್ರೇರೇಪಿಸುವ ಚಳುವಳಿಯೊಂದನ್ನ ನಾವು ಹೇಗೆ ಸೃಷ್ಟಿಸಬಹುದು ಹಾಗೂ ನಮ್ಮ ಸಮಾಜವನ್ನು ಹೆಚ್ಚು ಕ್ರೀಡಾಸಕ್ತಿ ಹೊಂದಿದ ಸಮಾಜವನ್ನಾಗಿ ಹೇಗೆ ಮಾಡಬಹುದು?

ಸದ್ಗುರು: ನಮಸ್ಕಾರ, ಅಭಿನವ್. ಕ್ರೀಡೆಯಲ್ಲಿನ ಶ್ರೇಷ್ಠವಾದ ಸಂಗತಿಯೆಂದರೆ ನೀವದನ್ನು ಸಂಪೂರ್ಣವಾದ ಒಳಗೊಳ್ಳುವಿಕೆಯಿಲ್ಲದೆ ಆಡಲು ಸಾಧ್ಯವಿಲ್ಲ. ನಮ್ಮ ಜೀವನದ ಸತ್ವವಿರುವುದೇ ನಮ್ಮ ಒಳಗೊಳ್ಳುವಿಕೆಯಲ್ಲಿ. ಕ್ರೀಡೆಯು ಒಳಗೊಳ್ಳುವಿಕೆಯನ್ನು ಬೇಡುತ್ತದೆ. ಒಳಗೊಳ್ಳುವಿಕೆಯಿಲ್ಲದೆ ನೀವು ಶಾಲೆಗೆ ಹೋಗಬಹುದು, ಕಛೇರಿಗೆ ತೆರಳಬಹುದು. ಒಳಗೊಳ್ಳುವಿಕೆಯಿಲ್ಲದೆ ನೀವು ಮದುವೆಯನ್ನೂ ಸಹ ಮಾಡಿಕೊಳ್ಳಬಹುದು, ಆದರೆ, ಒಳಗೊಳ್ಳುವಿಕೆಯಿಲ್ಲದಿದ್ದರೆ, ನಿಮಗೆ ಆಟವಾಡಲು ಸಾಧ್ಯವಿಲ್ಲ – ನಿಮಗೆ ಬೇಕಾದ ರೀತಿಯಲ್ಲಿ ಯಾವುದೂ ನಡೆಯುವುದಿಲ್ಲ. 

Sadhguru playing cricket at Isha Yoga Center

 

ನೀವು ಚೆಂಡನ್ನು ಒದ್ದಾಗ ಅಥವಾ ಹೊಡೆದಾಗ, ಇಲ್ಲವೆ ಗುಂಡನ್ನು ಹಾರಿಸಿದಾಗ, ನಿಮ್ಮಲ್ಲಿ ಸಂಪೂರ್ಣವಾದ ಒಳಗೊಳ್ಳುವಿಕೆಯಿಲ್ಲದಿದ್ದರೆ, ನೀವು ಗುರಿಯಿಟ್ಟ ಸ್ಥಳಕ್ಕೆ ಅದು ತಲುಪುವುದಿಲ್ಲ. ಸಮಾಜದಲ್ಲಿ ಏನಾದರು ನಿಮ್ಮಿಷ್ಟದಂತೆ ನಡೆಯದಿದ್ದರೆ, ಬೇರೊಬ್ಬರನ್ನು ದೂಷಿಸುವ ಮೂಲಕ ಅದನ್ನು ಮುಚ್ಚಿಹಾಕಬಹುದು. ಆದರೆ ಕ್ರೀಡೆಯಲ್ಲಿ, ನೀವೇನು ಮಾಡಿದರೂ ಅದು ಎದ್ದು ಕಾಣುತ್ತದೆ – ನೀವು ಮಾಡುವುದಕ್ಕೆ ನೀವೇ ಹೊಣೆಗಾರರಾಗಿರುತ್ತೀರಿ. 

 

ಇದು ಕ್ರೀಡೆಯಲ್ಲಿನ ಅತ್ಯುತ್ತಮ ಅಂಶ. ಇದು ನಮ್ಮ ಜೀವನದೊಳಗೆ ಬರಬೇಕೇ? ನಿಸ್ಸಂಶಯವಾಗಿ! ಕ್ರೀಡೆಯನ್ನು ಈ ದೇಶದ ಒಂದು ಭಾಗವನ್ನಾಗಿ ಹೇಗೆ ಮಾಡುವುದು? ಭಾರತವು ಕ್ರೀಡಾಸಕ್ತ ದೇಶವಾಗಬೇಕಾದರೆ, ನಮ್ಮ ದೇಶದ ಅರವತ್ತೈದು ಪ್ರತಿಶತದಷ್ಟಿರುವ ಗ್ರಾಮೀಣ ಜನತೆಯು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಇದಕ್ಕಾಗಿ ನಾವು ಗ್ರಾಮೋತ್ಸವವನ್ನು ನಡೆಸುತ್ತಿದ್ದೇವೆ ಮತ್ತಿದರಲ್ಲಿ ಸಾವಿರಾರು ಹಳ್ಳಿಗಳ ಜನರು ಭಾಗವಹಿಸುತ್ತಾರೆ. ತಮ್ಮ ವೃತ್ತಿಪರ ಕ್ರೀಡಾಜೀವನದಿಂದ ನಿವೃತ್ತರಾಗಿರುವಂತಹ ಹಿರಿಯ ಕ್ರೀಡಾಪಟುಗಳು ಇದನ್ನು ಇಡೀ ದೇಶದಲ್ಲಿ ಪ್ರಚುರಪಡಿಸಿ, ಗ್ರಾಮೀಣ ಭಾರತಕ್ಕೆ ಕ್ರೀಡೆಯನ್ನು ತರಲು ಸಹಾಯ ಮಾಡಬೇಕೆಂದು ನಾನು ಕೋರುತ್ತೇನೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image