ಶಿವನ ಅನುಗ್ರಹವನ್ನು ವೃದ್ಧಿಸಿಕೊಳ್ಳಲು ಮತ್ತು ಅಂತರಂಗದ ಭಕ್ತಿಯನ್ನು ವ್ಯಕ್ತಗೊಳಿಸಲು ಸದ್ಗುರುಗಳು ಅರ್ಪಿಸಿರುವ 42 ದಿನಗಳ ಶಕ್ತಿಯುತ ಸಾಧನ. ಒಳಗಿನ ಅನ್ವೇಷಣೆಗೆ ಒಂದು ಬಲವಾದ ಶಾರೀರಿಕ ಮತ್ತು ಮಾನಸಿಕ ಆಧಾರವನ್ನು ನಿರ್ಮಿಸುತ್ತದೆ.
ಮುಂಬರುವ ದೀಕ್ಷೆ - 07 Mar 2023
ನೋಂದಣಿ ಶುಲ್ಕ - Rs. 350 (*ಕಿಟ್‌ನ ಬೆಲೆಯನ್ನು ಹೊರತುಪಡಿಸಿ)
“ಶಿವಾಂಗ ಸಾಧನವು ನೀವು ಸೃಷ್ಟಿಯ ಮೂಲ ಮತ್ತು ಪರಮ ಸಾಧ್ಯತೆಯಾದ 'ಶಿವ'ನ ಒಂದು ‘ಅಂಗ’ವೆನ್ನುವುದನ್ನು ನಿಮ್ಮ ಅರಿವಿಗೆ ತರುವ ಬಗ್ಗೆಯಾಗಿದೆ.”
— ಸದ್ಗುರು
“ನನ್ನ ಜೀವನವು ಅಪಾರವಾಗಿ ಸುದಾರಿಸಿದೆ. ಶಿವನು ಎಲ್ಲೆಡೆ ಇದ್ದಾನೆಂಬುದನ್ನು ಅನುಭವಾತ್ಮಕವಾಗಿ ಕಾಣಲು ಪ್ರಾರಂಭಿಸಿದ್ದೇನೆ. ನನ್ನ ಅನುಭವದಲ್ಲಿ ಎಲ್ಲವೂ ಶಿವನೇ ಆಗಿದ್ದಾನೆ.”
ವಿಶಾಲ್
ಸಪ್ಲೈ ಚೈನ್ ಮ್ಯಾನೇಜರ್, ದೆಹಲಿ“ವೆಳ್ಳಿಯಂಗಿರಿ ಬೆಟ್ಟವನ್ನು ಹತ್ತುವಾಗ ನಾನು ಶಿವಶಂಭೋ ಎಂದು ಜಪಿಸುತ್ತಲೇ ಇದ್ದೆ. ನಾನು ಅದು ಹೇಗೆ ಶಿಖರವನ್ನು ತಲುಪಿದೆನೋ ನನಗೆ ಗೊತ್ತಿಲ್ಲ. ಯಾರೋ ನನ್ನನ್ನು ಅಲ್ಲಿಗೆ ಹೊತ್ತು ಸಾಗಿಸಿದಂತಿತ್ತು.”
ಅಭಿರಾಮ್
ಇಂಟೀರಿಯರ್ ಡಿಸೈನರ್, ಬೆಂಗಳೂರುಮುಂಬರುವ ಸಾಧನದ ದಿನಾಂಕ 07 Mar 2023
ಸಾಧನೆಯು ಹುಣ್ಣಿಮೆಯಂದು ಪ್ರಾರಂಭವಾಗಿ 42 ದಿನಗಳ ನಂತರ ಶಿವರಾತ್ರಿ (ಅಮಾವಾಸ್ಯೆಯ ಹಿಂದಿನ ರಾತ್ರಿ) ಯಂದು ಮುಕ್ತಾಯಗೊಳ್ಳುತ್ತದೆ.
ಪುರುಷರಿಗಾಗಿ ಸಾಧನಾ ಮಾರ್ಗಸೂಚಿಗಳು: ಹಿಂದಿ, ತಮಿಳು, ಇಂಗ್ಲಿಷ್, ಕನ್ನಡ, ಮಲಯಾಳಂ, ತೆಲುಗು.
ದೀಕ್ಷೆಯನ್ನು ಪಡೆಯಲು ನೋಂದಣಿ ಕಡ್ಡಾಯ.
ನಾನು ವೆಳ್ಳಿಯಂಗಿರಿ ಬೆಟ್ಟಗಳಿಗೆ ಹೋಗಲು ಉತ್ಸುಕನಾಗಿದ್ದೆ. ಅದು ಕೇವಲ ಒಂದು ಟ್ರೆಕ್ಕಿಂಗ್ ಆಗಿರಲಿಲ್ಲ, ಅದು ದೈವವನ್ನು ಭೇಟಿಯಾಗಲು ಹೋಗುವಂತೆಯೇ ಇತ್ತು. ನೀವು ಜೀವನದಲ್ಲಿ ಒಮ್ಮೆಯಾದರೂ ಅಲ್ಲಿರಬೇಕು, ಒಮ್ಮೆ ನೀವು ಹೋದರೆ, ನಿಮಗೆ ತಿಳಿಯುತ್ತದೆ!
ಪ್ರವೀಣ್
ಮುಂಬೈಅದು ಇನ್ನೊಂದು ಟ್ರೆಕ್ಕಿಂಗ್ ಎಂದು ನಾನು ಭಾವಿಸಿದ್ದೆ. ಆದರೆ ವೆಳ್ಳಿಯಂಗಿರಿಯು ನಿಮಗೆ ನೀವು ಊಹಿಸಿರದ ನಿಮ್ಮ ದೈಹಿಕ ಮಿತಿಗಳನ್ನು ತೋರಿಸುತ್ತದೆ. ಅದು ನಿಮ್ಮನ್ನು ಧ್ವಂಸಗೊಳಿಸಿ ನಂತರ ಅರಳಿಸುತ್ತದೆ!
ಸುವಿಗ್ಯ
ರೋಬೋಟಿಕ್ ಇಂಜಿನಿಯರ್, ಬೆಂಗಳೂರು.ನೀವು ಆನ್‍ಲೈನ್ ನಲ್ಲಿ ದೀಕ್ಷೆ ಮತ್ತು ಸಮಾಪಣೆಯಲ್ಲಿ ಭಾಗವಹಿಸಬಹುದು. ಧ್ಯಾನಲಿಂಗದಲ್ಲಿ ಸಮಾಪಣೆ ಮತ್ತು ವೆಳ್ಳಿಯಂಗಿರಿ ಯಾತ್ರೆ ಎರಡೂ ಆಯ್ಕೆಯ ವಿಷಯವಾಗಿರುತ್ತದೆ.
ಎಲ್ಲಾ ದೇಣಿಗೆಗಳು TKBP ಟ್ರಸ್ಟ್‌ಗೆ(ಲಾಭರಹಿತ) ಹೋಗುತ್ತವೆ
1
ನೋಂದಣಿ
ಶಿವಾಂಗ ಸಾಧನೆಯ ದೀಕ್ಷೆ ಪಡೆಯಲು ಅತ್ಯಗತ್ಯ.
2
ಸಾಧನಾ ಕಿಟ್
ದೀಕ್ಷೆಯಲ್ಲಿ ಪಾಲ್ಗೊಳ್ಳಲು ಅತ್ಯಗತ್ಯ. ನೀವು ಅದನ್ನು ಈಶಾ ಲೈಫ್ ನಿಂದ ತರಿಸಿಕೊಳ್ಳಬಹುದು.
3
ದೀಕ್ಷೆ
ನೀವು ಆನ್‍ಲೈನ್ ಅಥವಾ ಸ್ಥಳೀಯ ಕೇಂದ್ರದಲ್ಲಿ ತರಬೇತಿ ಹೊಂದಿದ ಶಿವಾಂಗರಿಂದ ದೀಕ್ಷೆಯನ್ನು ಪಡೆಯಬಹುದು
4
ಸಮಾಪಣೆ
ನೀವು ಆನ್‍ಲೈನ್ ಅಥವಾ ಈಶಾ ಯೋಗ ಕೇಂದ್ರದಲ್ಲಿ ವೈಯಕ್ತಿಕವಾಗಿಯೂ ಸಾಧನೆಯನ್ನು ಮುಕ್ತಾಯಗೊಳಿಸಬಹುದು
ಶಿವನಿಗೆ ಅರ್ಪಿಸಲಾಗುವ ಚೈತನ್ಯಪೂರ್ಣ ಭಕ್ತಿಸ್ತೋತ್ರಗಳು, ಸದ್ಗುರುಗಳ ವಿವೇಕದ ನುಡಿಮುತ್ತುಗಳು, ಮತ್ತು ಶಕ್ತಿಯುತ ಮಾರ್ಗದರ್ಶಿತ ಧ್ಯಾನಗಳ ಮೂಲಕ ಭಕ್ತಿಯ ಜ್ವಾಲೆಯನ್ನು ಪೋಷಿಸಿರಿ.
ನೀವು ನಮ್ಮನ್ನು
info@shivanga.org | +9183000 83111 ಮೂಲಕವೂ ಸಂಪರ್ಕಿಸಬಹುದು
ಹೆಚ್ಚಿನ ವಿವರಗಳಿಗೆ ಶಿವಾಂಗ ಕೈಪಿಡಿಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ.