ಪುರುಷರಿಗಾಗಿ ಶಿವಾಂಗ ಸಾಧನಾ

ದೀಕ್ಷೆ ಮತ್ತು ಸಮಾಪಣೆ ಆನ್‍ಲೈನ್ ಮೂಲಕ ನಡೆಸಲಾಗುವುದು.
Registration closed
For any queries, please contact us
at info@shivanga.org
ಶಿವಾಂಗ ಸಾಧನಾ ಎಂದರೆ ನೀವು, ಶಿವನ ಒಂದು ಅಂಗ, ಈ ಸೃಷ್ಟಿಯ ಮೂಲ ಮತ್ತು ಪರಮ ಸಾಧ್ಯತೆ ಎಂಬ ಅರಿವನ್ನು ತರುವುದು - ಸದ್ಗುರು
seperator
 
 
ಪುರುಷರಿಗಾಗಿ ಶಿವಾಂಗ ಸಾಧನಾ ಎನ್ನುವುದು 42 ದಿನಗಳ ತೀವ್ರತರವಾದ ವ್ರತವಾಗಿದೆ. ಈ ಸಾಧನೆಯು ದೇಹ, ಮನಸ್ಸು ಮತ್ತು ಪ್ರಾಣಶಕ್ತಿಗಳಲ್ಲಿ ಹೆಚ್ಚಿನ ಮಟ್ಟದ ಅನುಭವವನ್ನು ಕಂಡುಕೊಳ್ಳುವ ಹಾಗೂ ಧ್ಯಾನಲಿಂಗದ ಶಕ್ತಿಯನ್ನು ಹೀರಿಕೊಳ್ಳಲು ಒಬ್ಬರ ಗ್ರಹಿಸುವ ಸಾಮರ್ಥ್ಯವನ್ನು ವೃದ್ಧಿಸುವ ಸಲುವಾಗಿ ರೂಪಿಸಲಾಗಿದೆ.
 
ಈ ಸಾಧನೆಯು ತಮ್ಮೊಳಗಿನ ಭಕ್ತಿಯನ್ನು ಕಂಡುಕೊಳ್ಳಲು ಒಂದು ಅವಕಾಶವಾಗಿದೆ. ಮತ್ತು ‘ಶಿವಾಂಗ’ ಎಂದರೆ ‘ಶಿವನ ಅಂಗ’ ಎಂದರ್ಥ ಮತ್ತು ಇದು ಸೃಷ್ಠಿಯ ಮೂಲದೊಂದಿಗಿನ ಸಂಬಂಧವನ್ನು ನಮ್ಮ ಅರಿವಿಗೆ ತಂದುಕೊಳ್ಳಲು ಒಂದು ಅವಕಾಶವನ್ನು ಒದಗಿಸುತ್ತದೆ. ಇದು ಪವಿತ್ರ ವೆಳ್ಳಿಯಂಗಿರಿ ಶಿಖರಕ್ಕೆ ತೀರ್ಥಯಾತ್ರೆ ಮಾಡಲು ಮತ್ತು ಒಂದು ಶಕ್ತಿಯುತ ಅಭ್ಯಾಸವಾದ ‘ಶಿವ ನಮಸ್ಕಾರಕ್ಕೆ’ ದೀಕ್ಷೆ ಪಡೆಯಲು ಅವಕಾಶವನ್ನು ಒದಗಿಸುತ್ತದೆ .
 
Benefits of doing Shivanga Sadhana
 
 • 42 ದಿನಗಳ ಶಕ್ತಿಯುತವಾದ ವ್ರತ
 • ಪವಿತ್ರವಾದ "ಶಿವ ನಮಸ್ಕಾರ" ಅಭ್ಯಾಸಕ್ಕೆ ದೀಕ್ಷೆ
 • ‘ದಕ್ಷಿಣ ಕೈಲಾಸ’ವೆಂದು ಪ್ರಸಿದ್ಧವಾಗಿರುವ ವೆಳ್ಳಿಯಂಗಿರಿ ಬೆಟ್ಟಕ್ಕೆ ತೀರ್ಥಯಾತ್ರೆ
 • ಆಂತರಿಕ ಅನ್ವೇಷಣೆಗೆ ಬೇಕಾದ ಪ್ರಬಲ ದೈಹಿಕ ಮತ್ತು ಮಾನಸಿಕ ಮೂಲವನ್ನು ಒದಗಿಸುತ್ತದೆ.

   

   
  Sadhana Dates
   
  ಪುರುಷರಿಗಾಗೆ ಇರುವ ಈ 42 ದಿನಗಳ ವ್ರತವು, ಪೌರ್ಣಮಿಯಂದು ಆರಂಭಗೊಂಡು ಶಿವರಾತ್ರಿಯ ದಿನದಂದು ಸುಂದರವಾದ ’ವೆಳ್ಳಿಯಂಗಿರಿ’ ಬೆಟ್ಟದ ಯಾತ್ರೆಯಿಂದ ಹಿಂತಿರುಗಿದ ನಂತರ, ಧ್ಯಾನಲಿಂಗದ ಸಮ್ಮುಖದಲ್ಲಿ ಸಮರ್ಪಣೆಯೊಂದಿಗೆ  ಸಮಾಪ್ತಿಯಾಗುವುದು.
  ದೀಕ್ಷೆಯ ದಿನಾಂಕ
  ಸಮಾಪನೆಯ ದಿನಾಂಕ
  ಯಾತ್ರೆಯ ದಿನಾಂಕ
  ಜನವರಿ 28 (ತೈಪೂಸಮ್)
  ಮಾರ್ಚ್ 11 (ಮಹಾಶಿವರಾತ್ರಿ)
  ಮಾರ್ಚ್ 11 (ಮಹಾಶಿವರಾತ್ರಿ)
  ಫೆಬ್ರವರಿ 27
  ಎಪ್ರಿಲ್ 10
  ಎಪ್ರಿಲ್ 11
  ಮಾರ್ಚ್ 28 (ಪಂಗುನಿ ಉತಿರಮ್)
  ಮೇ 9
  ಮೇ 10
  ಎಪ್ರಿಲ್ 26
  ಜೂನ್ 8
  ಜೂನ್ 9
  ಮೇ 26
  ಜುಲೈ 8
  ಜುಲೈ 9
  ಜೂನ್ 24 (ಧ್ಯಾನಲಿಂಗ ಪ್ರತಿಷ್ಠಾಪನೆಯ ದಿನ, 22 ನೇ ವರ್ಷ)
  ಆಗಸ್ಟ್ ‘6
  ಆಗಸ್ಟ್ 7
  ಜುಲೈ 23
  ಸೆಪ್ಟೆಂಬರ್ 5
  ಸೆಪ್ಟೆಂಬರ್ 6

   

  ಪುರುಷರಿಗಾಗಿ ಸಾಧನಾ ಮಾರ್ಗಸೂಚಿಗಳು:

  ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ಮತ್ತು ತೆಲುಗು

   

  ಪುರುಷರಿಗೆ ಸಾಧನೆಯ ಸೂಚನೆಗಳು:

  • ಸಾಧನೆಯು ಹುಣ್ಣಿಮೆಯ ದಿನ ಪ್ರಾರಂಭವಾಗುತ್ತದೆ ಮತ್ತು 42 ದಿನಗಳ ನಂತರ ಶಿವರಾತ್ರಿಯಂದು (ಅಮಾವಾಸ್ಯೆಯ ಹಿಂದಿನ ದಿನ) ಕೊನೆಗೊಳ್ಳುತ್ತದೆ.
  • ಶಿವಾಂಗ ಭಕ್ತರಿಗಾಗಿ ಶಿವ ನಮಸ್ಕಾರ ಮತ್ತು ಸೂಕ್ತ ಮಂತ್ರಗಳಿಗೆ ದೀಕ್ಷೆ ನೀಡಲಾಗುವುದು.
  • ಶಿವ ನಮಸ್ಕಾರವನ್ನು ಸೂರ್ಯೋದಯದ ಮೊದಲು ಅಥವಾ ಖಾಲಿ ಹೊಟ್ಟೆಯಲ್ಲಿ ಸೂರ್ಯಾಸ್ತದ ನಂತರ ದಿನಕ್ಕೆ 21 ಬಾರಿ ಭಕ್ತಿಯಿಂದ ಮಾಡಬೇಕು.
  • ಶಿವಾಂಗ ಭಕ್ತರು ಕೊಯಮತ್ತೂರಿನ ಧ್ಯಾನಲಿಂಗಕ್ಕೆ ಶಿವರಾತ್ರಿಯಂದು ಬರುವುದು ಅವರ ಆಯ್ಕೆ.
  • ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು. ಸೋಪ್ ಬದಲಿಗೆ ಗಿಡಮೂಲಿಕೆಗಳ ಸ್ನಾನದ ಪುಡಿಯನ್ನು (ಸ್ನಾನ ಪುಡಿ) ಬಳಸಬಹುದು.
  • ಕನಿಷ್ಠ 21 ಜನರಿಂದ ಬಿಕ್ಷೆಯನ್ನು ಪಡೆಯಬೇಕು. (ಭಕ್ತರ ಆಯ್ಕೆಗೆ ಬಿಟ್ಟಿದ್ದು)
  • ವ್ರತ ನಡೆಸುವ ಅವಧಿಯಲ್ಲಿ, ಧೂಮಪಾನ, ಮದ್ಯಪಾನ ಮತ್ತು ಮಾಂಸಾಹಾರಿ ಆಹಾರವನ್ನು ಸೇವನೆ ನಿಷಿದ್ಧ.
  • ದಿನದಲ್ಲಿ ಕೇವಲ 2 ಬಾರಿ ಮಾತ್ರ ಆಹಾರ ಸೇವನೆ ಮಾಡಬೇಕು. ಮೊದಲ ಆಹಾರ ಮಧ್ಯಾಹ್ನ 12 ರ ನಂತರ ಇರಬೇಕು.
  • ಸಾಧನಾ ಅವಧಿಯಲ್ಲಿ ಬಿಳಿಯ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಬಹುದು.
  • ಸಾಧನಾಕ್ಕೆ ಶಿವಾಂಗ ಕಿಟ್ ನ ಅಗತ್ಯವಿದೆ. ಈ ಕಿಟ್ ಅನ್ನು ನೀವು ಈಶಾ ಲೈಫ್‌ಗೆ ಆರ್ಡರ್ ಮಾಡಬಹುದು.
   
  ನಮ್ಮನ್ನು ಸಂಪರ್ಕಿಸಿ
   

  Contact Details:

  Asia info@shivanga.org

  Phone:  +91-83000 83111

  Contact List

  Leave a Message

  Testimonials