ಮನೆಯಲ್ಲಿದ್ದರೆ ಸಂಸಾರದ ಒತ್ತಡ. ಆಫೀಸಿಗೆ ಹೋದರೆ ಕೆಲಸದ ಒತ್ತಡ. ವಿದ್ಯಾರ್ಥಿಗಳಿಗೆ ಓದಿನ ಒತ್ತಡ, ಹಿರಿಯ ನಾಗರೀಕರಿಗೆ ವೃದ್ಧಾಪ್ಯದ ಒತ್ತಡ . ಮದುವೆಯಾಗದವರಿಗೆ ಒಂದು ಬಗೆಯ ಒತ್ತಡ, ಮದುವೆಯಾದವರಿಗೆ... ಅಯ್ಯೋ ಕೇಳಲೇಬೇಡಿ! ಹೀಗೆ ಚಿಕ್ಕವರಿಂದ ಹಿಡಿದು ವಯಸ್ಕರವರೆಗೆ ನಮ್ಮಲ್ಲಿ ಎಷ್ಟೊಂದು ಜನ ಒತ್ತಡದಲ್ಲೇ ಕಾಲಕಳೆಯುತ್ತಿದ್ದೇವಲ್ಲವೇ? ಜೀವನ ಕ್ಷಣಿಕ ಎನ್ನುತ್ತಾರೆ. ನಮ್ಮ ಅಮೂಲ್ಯ ಜೀವನವನ್ನು ಒತ್ತಡಗಳಲ್ಲೇ ಕಳೆದರೆ, ಜೀವನದ ಇತರ ಮಜಲುಗಳು ನಮಗೆ ದಕ್ಕುವುದು ಯಾವಾಗ? ನಾವದನ್ನು ಅನುಭವಿಸುವುದು ಯಾವಾಗ? ಇದಕ್ಕೆ ಏನಾದರೂ ಪರಿಹಾರವಿದೆಯೇ? ಯೋಗ ವಿಜ್ಞಾನವನ್ನು ಇದಕ್ಕೆ ಮದ್ದಾಗಿ ಹೇಗೆ ಬಳಸಿಕೊಳ್ಳಬಹುದು? ಕೇಳಿ, ಸದ್ಗುರುಗಳ ಮಾತುಗಳಲ್ಲಿ.
Subscribe