ಕಾವೇರಿ ನದಿ ಮತ್ತದರ ಜಲಾನಯನ ಪ್ರದೇಶವು ಜಗತ್ತಿನಲ್ಲಿಯೇ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲೊಂದು. ಆದರೆ ಇಂದು ಈ ಪ್ರದೇಶದ 87% ಹಸಿರು ಹೊದಿಕೆ ಕಣ್ಮರೆಯಾಗಿದೆ. ಕಾವೇರಿಯು 70 ವರ್ಷ ಹಿಂದಿಗಿಂತ ಇಂದು 40% ಬತ್ತಿಹೋಗಿದ್ದಾಳೆ. ಮರಗಳಿಲ್ಲದೆ ಮಣ್ಣಿಗೆ ನೀರನ್ನು ಇಂಗಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ಮಳೆಯ ಸಮಯದಲ್ಲಿ ಎಲ್ಲಾ ನೀರು ಹರಿದು ಹೋಗಿ ಪ್ರವಾಹ ಉಂಟಾದರೆ, ಬೇಸಿಗೆಯಲ್ಲಿ ಬರವುಂಟಾಗುತ್ತಿದೆ. ‘ಕಾವೇರಿ ಕೂಗು’ ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ. ಇದು ಕಾವೇರಿ ನದಿಯ ಪುನಶ್ಚೈತನ್ಯದ ಕಾರ್ಯವನ್ನು ಪ್ರಾರಂಭಿಸುವುದಲ್ಲದೆ, 8.4 ಕೋಟಿ ಜನರ ಬದುಕನ್ನು ರೂಪಾಂತರಿಸುತ್ತದೆ. #CauveryCalling
Subscribe