ಪ್ರಶ್ನೆ: ನನ್ನ ಪ್ರೀತಿಯ ಸದ್ಗುರು! ನನ್ನ ಪ್ರಶ್ನೆಯಿದು: ಆಹಾರ ಮತ್ತು ಕೃಷಿ ಸಂಸ್ಥೆಗಳಿಂದ, ಕೃಷಿಗಾಗಿ, ಅದರ ಅನೇಕ “ಶೋಧ ಮತ್ತು ವಿಕಾಸ” (R&D) ವಿಭಾಗಗಳಿಗೆ, ಅನೇಕ ದಶಲಕ್ಷಗಳಷ್ಟು ಬಂಡವಾಳವನ್ನು ಹೂಡಲಾಗುತ್ತಿದೆ. ಅನೇಕ ವಿಜ್ಞಾನಿಗಳು ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ನಾವೇಕೆ ಹಸಿವನ್ನು ಸಂಪೂರ್ಣವಾಗಿ ನಿವಾರಿಸಿಲ್ಲ? ಇದರಿಂದ ನನಗೆ ಬಹಳ ಸಂಕಟವಾಗುತ್ತದೆ. ಆಧ್ಯಾತ್ಮಿಕ ವಿಜ್ಞಾನವು ಈ ಸಮಸ್ಯೆಯನ್ನು ಎದುರಿಸಬಲ್ಲದೆ?  ಇವೆರಡು ಒಂದಕ್ಕೊಂದು ಸಂಬಂಧಪಟ್ಟಿವೆಯೆ, ಮತ್ತಿದು ಈ ಅಂತರವನ್ನು ಕಡಿಮೆ ಮಾಡಬಲ್ಲದೆ?

ಸದ್ಗುರು: ಜಗತ್ತಿನಲ್ಲಿ, ಬಹಳಷ್ಟು ಜನರು ಹಸಿವು ಮತ್ತು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ – ಸಾಕಷ್ಟು ಪ್ರಮಾಣದಲ್ಲಿ ಆಹಾರವಿಲ್ಲವೆನ್ನುವ ಕಾರಣದಿಂದಾಗಿ ಅಲ್ಲ. 7.6 ಶತಕೋಟಿ ಜನರಿಗೆ ಸಾಕಾಗುವಷ್ಟು ಆಹಾರವು ನಮ್ಮಲ್ಲಿದೆ, ಆದರೂ 815 ದಶಲಕ್ಷ ಜನರಿಗೆ ತಿನ್ನುಲು ಆಹಾರವಿಲ್ಲ. ಇದು ಕೃಷಿಯ ವೈಫಲ್ಯದಿಂದಾಗಿಲ್ಲ, ಇದು ಮಾನವನ ಅಂತಃಕರಣದ ವೈಫಲ್ಯದಿಂದಾಗಿದೆ.

Number of undernourished people has been on the rise since 2014, reaching 815 million in 2016 | Why Haven’t We Solved World Hunger Yet?

 

ಪ್ರೀತಿಯು ಅಭಿವ್ಯಕ್ತಿಯನ್ನು ಕಂಡುಕೊಂಡಾಗ

ನೀವು ಎದ್ದುನಿಂತು "ಪ್ರೀತಿ" ಎಂಬ ಪದವನ್ನು ಬಳಸಿದಿರಿ. ಇದು ಕೇವಲ ನನ್ನೆಡೆಗೆ ತಿರುಗಿಸುವುದರ ಬದಲು, ನೀವು ಇದನ್ನು ಜಗತ್ತಿನೆಡೆ ನಿರ್ದೇಶಿಸಿದರೆ, ನಿಮ್ಮ ಪ್ರೀತಿಯಿಂದ ಏನು ಮಾಡಲು ಸಾಧ್ಯವಿದೆ ಎಂದು ನಾವು ನೋಡಬಹುದು. ಪ್ರೀತಿಯು ಅಭಿವ್ಯಕ್ತಿಯನ್ನು ಕಂಡುಕೊಂಡರೆ, ಈ 815 ದಶಲಕ್ಷ ಜನರು ಹಸಿವಿನಿಂದಿರುವುದಿಲ್ಲ. ಜಗತ್ತಿನಲ್ಲಿ ಆಹಾರವಿಲ್ಲದಿದ್ದರೆ, ಅದು ಬೇರೆ ವಿಷಯ, ಆದರೆ ಬೇಕಾಗಿರುವುದಕ್ಕಿಂತ ಹೆಚ್ಚು ಆಹಾರವನ್ನು ನಾವು ಹೊಂದಿದ್ದರೂ, ಆ ಜನರು ಹಸಿವೆಯಿಂದಿದ್ದಾರೆ ಎಂದರೆ, ಇದು ಕೇವಲ ಮಾನವನ ವೈಫಲ್ಯ, ಕೃಷಿಯ ವೈಫಲ್ಯವಲ್ಲ. ರೈತರಿಗೆ ಈಗ ಉತ್ಪಾದಿಸುತ್ತಿರುವುದಕ್ಕಿಂತ ಎರಡು ಪ್ರಮಾಣದಷ್ಟನ್ನು ಉತ್ಪಾದಿಸಲು ನೀವು ಹೇಳಿದರೆ, ಅದನ್ನವರು ಎರಡು ವರ್ಷಗಳಲ್ಲಿ ಮಾಡಬಹುದು. ಆದರೆ ತಿನ್ನಲು ಆಹಾರವಿಲ್ಲದ ಜನರಿಗೆ ಅದನ್ನು ಹೇಗೆ ತಲುಪಿಸುವುದು? ಅದೇ ದೊಡ್ಡ ಪ್ರಶ್ನೆಯಾಗಿರುವುದು. ಏಕೆಂದರೆ ಮಾರುಕಟ್ಟೆಗಳು, ಪಟ್ಟಭದ್ರ ಹಿತಾಸಕ್ತಿಗಳು, ಮತ್ತು ದೇಶಗಳು ಇದರ ನಡುವೆ ಬಂದು, ಆಹಾರವು ತಲುಪಬೇಕಿರುವಲ್ಲಿಗೆ ತಲುಪದಿರದಂತೆ ಮಾಡುತ್ತವೆ.

ರೈತರಿಗೆ ಈಗ ಉತ್ಪಾದಿಸುತ್ತಿರುವುದಕ್ಕಿಂತ ಎರಡು ಪ್ರಮಾಣದಷ್ಟನ್ನು ಉತ್ಪಾದಿಸಲು ನೀವು ಹೇಳಿದರೆ, ಅದನ್ನವರು ಎರಡು ವರ್ಷಗಳಲ್ಲಿ ಮಾಡಬಹುದು. ಆದರೆ ತಿನ್ನಲು ಆಹಾರವಿಲ್ಲದ ಜನರಿಗೆ ಅದನ್ನು ಹೇಗೆ ತಲುಪಿಸುವುದು? ಅದೇ ದೊಡ್ಡ ಪ್ರಶ್ನೆಯಾಗಿರುವುದು. ಏಕೆಂದರೆ ಮಾರುಕಟ್ಟೆಗಳು, ಪಟ್ಟಭದ್ರ ಹಿತಾಸಕ್ತಿಗಳು, ಮತ್ತು ದೇಶಗಳು ಇದರ ನಡುವೆ ಬರುತ್ತವೆ

ಒಂದು ಬಾರಿ, ನಾನು ವಿಶ್ವ ಆರ್ಥಿಕ ವೇದಿಕೆಯಲ್ಲಿದ್ದಾಗ(ವರ್ಲ್ಡ್ ಎಕಾನಾಮಿಕ್ ಫೋರಂ), ನನ್ನ ಅನೇಕ ಭಾಷಣಗಳನ್ನು ಅಲ್ಲಿ ನೆರೆದಿದ್ದ ನಾಯಕರುಗಳು ಕೇಳಿದ ನಂತರ ಅವರು, “ಸದ್ಗುರು, ಈ ಜಗತ್ತನ್ನು ಪರಿವರ್ತಿಸಲು ನಾವು ನಿಮಗಾಗಿ ಒಂದು ಕೆಲಸವನ್ನು ಮಾಡಬಹುದಿದ್ದರೆ, ಅದು ಯಾವುದು?” ಎಂದು ಕೇಳಿದರು. ಅದಕ್ಕೆ ನಾನು “ನೋಡಿ, ನಾನು ಇಪ್ಪತ್ತೈದು ಜನರನ್ನು ಹೆಸರಿಸುತ್ತೇನೆ. ಅವರನ್ನು ನನ್ನ ಬಳಿ ಐದು ದಿನಗಳವರೆಗೆ ಬಿಡಿ. ಆಗ ನೋಡುವಿರಿ, ಎರಡರಿಂದ ಮೂರು ವರ್ಷಗಳೊಳಗೆ, ಜಗತ್ತಿನಲ್ಲಿ ಭಾರಿ ಬದಲಾವಣೆಗಳಾಗುತ್ತವೆ” ಎಂದು ಹೇಳಿದೆ. “ಯಾರು ಈ ಇಪ್ಪತ್ತೈದು ಜನ?” ಎಂದು ಅವರು ಕೇಳಿದರು. ಇಪ್ಪತ್ತೈದು ಪ್ರಮುಖ ದೇಶಗಳ ನಾಯಕರ ಹೆಸರುಗಳನ್ನು ಹೇಳಿ ನಾನೆಂದೆ, “ಇವರನ್ನು ನನ್ನ ಬಳಿ ಐದು ದಿನಗಳ ಕಾಲ ಬಿಡಿ. ಸಾಮಾನ್ಯ ಜನರಿಗಾದರೆ ಎರಡರಿಂದ ಮೂರು ದಿನಗಳು ಸಾಕು, ಆದರೆ ಇವರುಗಳು ರಾಜಕೀಯದವರು, ನನಗೆ ಐದು ದಿನಗಳು ಬೇಕಾಗುತ್ತವೆ. ಐದು ದಿನಗಳು ಅವರನ್ನು ನನ್ನ ಬಳಿ ಬಿಡಿ. ಎರಡರಿಂದ ಮೂರು ವರ್ಷಗಳೊಳಗೆ ಜಗತ್ತು ಬೇರೆಯೇ ರೀತಿ ಆಗುತ್ತದೆ" ಎಂದು ಹೇಳಿದೆ.

ಏಕೈಕ ಪ್ರಶ್ನೆ

ಜಗತ್ತಿನ ಈ ಇಪ್ಪತ್ತೈದು ನಾಯಕರುಗಳು ಮನಸ್ಸು ಮಾಡಿದರೆ, ಜಗತ್ತಿನಲ್ಲಿರುವ ಪ್ರತಿಯೊಬ್ಬರು ಹೊಟ್ಟೆತುಂಬ ತಿನ್ನುತ್ತಿದ್ದಾರೆಂದು ನಾವು ಖಚಿತಪಡಿಸಿಕೊಳ್ಳಬಹುದು. ಪ್ರತಿಯೊಂದು ಮಗುವು ತುಂಬಿದ ಹೊಟ್ಟೆಯಲ್ಲಿ ನಿದ್ದೆಗೆ ಹೋಗಬಹುದು. ಇದನ್ನು ಮಾಡಲು ದಶಕಗಳೇನೂ ಬೇಕಾಗಿಲ್ಲ – ಕೇವಲ ಎರಡು ವರ್ಷಗಳಲ್ಲಿ ಇದನ್ನು ಮಾಡಬಹುದು. ಆಹಾರ, ತಂತ್ರಜ್ಞಾನ, ವಾಹನ ಸೌಕರ್ಯ, ವಿಧಿವಿಧಾನಗಳು – ಎಲ್ಲವೂ ನಮ್ಮ ಬಳಿ ಇವೆ. ಹಿಂದೆಂದೂ, ಮಾನವತೆಯ ಇತಿಹಾಸದಲ್ಲಿ ಇವುಗಳೆಲ್ಲವು ಇರಲಿಲ್ಲ. ಇಪ್ಪತ್ತೈದು ವರ್ಷಗಳ ಹಿಂದೆಯೂ ಇದು ಸಾಧ್ಯವಿರಲಿಲ್ಲ. ಆದರೆ ಇಂದು, ಮೊದಲ ಬಾರಿಗೆ ಇದೆಲ್ಲವೂ ನಮ್ಮ ಬಳಿಯಿದೆ. ಮಾನವನ ಇಚ್ಛೆಯೊಂದಿಲ್ಲವಷ್ಟೆ. ಮಾನವರು ಇದನ್ನು ಇಚ್ಛಿಸುವ೦ತೆ ಮಾಡಲು ಎಷ್ಟು ಸಮಯವನ್ನು ತೆಗೆದುಕೊಳ್ಳಬಹುದು? ಇರುವ ಒಂದೇ ಒಂದು ಪ್ರಶ್ನೆಯೆಂದರೆ, ನಾನು ಮತ್ತು ನೀವು, ಒಂದು ಪೀಳಿಗೆಯಾಗಿ ಇದುನ್ನು ಸಾಧ್ಯವಾಗುವಂತೆ ಮಾಡುತ್ತೇವೆಯೋ ಅಥವಾ ಮನೆಯಲ್ಲೇ ಕುಳಿತು ಕೇವಲ ನಮ್ಮ ಅಸಮಾಧಾನವನ್ನು ಹೊರಹಾಕುತ್ತಿರುತ್ತೇವೆಯೋ? ಇದರ ಬಗ್ಗೆ ದೋಷಾರೋಪಣೆಗಳನ್ನು ಮಾಡಿಕೊಂಡು ಅಳುತ್ತಾ ಕೂರುತ್ತೇವೆಯೋ ಅಥವಾ ಎದ್ದುನಿಂತು, ನಮ್ಮಿಂದ ಸಾಧ್ಯವಾಗುವಷ್ಟು ಕೆಲಸವನ್ನು ಮಾಡುತ್ತೇವೆಯೋ ಅನ್ನುವುದೊಂದೇ ಪ್ರಶ್ನೆ. 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image