Main Centers
International Centers
India
USA
Wisdom
FILTERS:
SORT BY:
ನಿಮಗೆ ಇಷ್ಟವಿರಲಿ ಇಲ್ಲದಿರಲಿ, ಜೀವನವು ನಿಮ್ಮ ಕೈಯಲ್ಲಿ ಎಲ್ಲ ರೀತಿಯ ದೊಂಬರಾಟವನ್ನು ಮಾಡಿಸುತ್ತದೆ. ನೀವು ಅದಕ್ಕೆ ಸಿದ್ಧರಾಗಿದ್ದರೆ ಅದನ್ನು ನೀವು ಉಲ್ಲಾಸದಿಂದ ಮಾಡಬಹುದು.
ಶಾಂತಿ-ಸಂತೋಷಗಳ ನೆಲೆ ಇರುವುದು ಮಾರುಕಟ್ಟೆಯಲ್ಲೂ ಅಲ್ಲ, ಕಾಡಿನಲ್ಲೂ ಅಲ್ಲ, ಬದಲಿಗೆ ನಿಮ್ಮೊಳಗೆ.
ನಿಮ್ಮ ಮಗುವು ಚೆನ್ನಾಗಿ ಬೆಳೆಯಲು ನೀವೇನೂ ಅತಿ ಬುದ್ಧಿವಂತರಾಗಿರಬೇಕಿಲ್ಲ. ಅದಕ್ಕೆ ನೀವು ಸಂತೋಷ, ಪ್ರೀತಿ, ಮತ್ತು ನೇರ ನಡೆ-ನುಡಿಗಳಿಂದ ತುಂಬಿರಬೇಕಷ್ಟೆ.
ನೀವು ಬೇರೆಲ್ಲರಿಗಿಂತಲೂ ಉತ್ತಮರಾಗಿರಬೇಕಾಗಿಲ್ಲ. ಆದರೆ ನೀವು ನಿಮ್ಮ ಅತ್ಯುತ್ತಮ ಮಟ್ಟದಲ್ಲಿರಬೇಕು.
ನೆಲದ ಮೇಲೆ ದೃಢವಾಗಿ ಕಾಲೂರಿ ನಿಲ್ಲುವುದು, ಮತ್ತು ಕೈಚಾಚಿ ಆಕಾಶವನ್ನು ಮುಟ್ಟುವುದು – ಇದುವೇ ಆಧ್ಯಾತ್ಮಿಕ ಪ್ರಕ್ರಿಯೆಯ ಸಾರಸತ್ತ್ವ.
ಅದು ಸುಲಭವಿರಲಿ ಕಷ್ಟವಿರಲಿ, ನಿಮಗೆ ಎಲ್ಲಿಗೆ ಹೋಗಬೇಕಿದೆಯೋ ಅದರ ಮೇಲಿಂದ ನಿಮ್ಮ ದೃಷ್ಟಿಯನ್ನು ಎಂದೂ ತೆಗೆಯಬೇಡಿ.
ನಿಯಂತ್ರಣ ಎಂದರೆ ನಿರ್ದಿಷ್ಟ ಮಿತಿಗಳೊಳಗೆ ಹಿಡಿದಿಡುವುದು. ನಿಮ್ಮ ಮನಸ್ಸನ್ನು ನಿಯಂತ್ರಿಸಬೇಡಿ – ಅದನ್ನು ಮುಕ್ತಗೊಳಿಸಿ.
ಇನ್ನೊಬ್ಬರು ಏನು ಮಾಡಬೇಕು ಎಂಬ ಬಗ್ಗೆ ನಿಮಗೆ ಯಾವುದೇ ನಿರೀಕ್ಷೆಗಳಿಲ್ಲದೇ ಹೋದಾಗ, ನೀವು ಯಶಸ್ವಿ ಸಂಬಂಧವನ್ನು ಹೊಂದುವಿರಿ.
ಯಾರ ಬಗ್ಗೆಯೂ ಎಂದೂ ಅಭಿಪ್ರಾಯ ರೂಪಿಸಿಕೊಳ್ಳಬೇಡಿ. ಅವರು ಈ ಕ್ಷಣ ಹೇಗಿದ್ದಾರೆ ಎಂಬುದಷ್ಟೆ ಮುಖ್ಯ.
ಕರ್ಮವು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಅದು ನಿಮ್ಮನ್ನು ಈ ದೇಹಕ್ಕೆ ಅಂಟಿಸುವ ಒಂದು ಗೋಂದು. ನೀವು ನಿಮ್ಮ ಎಲ್ಲ ಕರ್ಮವನ್ನೂ ತೊಳೆದುಬಿಟ್ಟಾಕ್ಷಣ, ನೀವು ನಿರ್ಗಮಿಸುವಿರಿ.
ನಿಜವಾದ ಕರುಣೆಯಲ್ಲಿ ಕೊಡು-ಕೊಳ್ಳುವಿಕೆಯಿರದು. ಅದು ಏನು ಅಗತ್ಯವೋ ಅದನ್ನು ಮಾಡುವ ಬಗ್ಗೆಯಾಗಿರುತ್ತದೆ.
ಬೋರ್ ಹೊಡೆಯುವುದು ಜೀವನದಲ್ಲಿ ತೊಡಗುವಿಕೆಯ ಕೊರತೆಯಿಂದ. ನೀವು ನಿಮ್ಮದೇ ಯೋಚನೆ-ಭಾವನೆಗಳಲ್ಲಿ ಕಳೆದುಹೋಗಿದ್ದೀರಿ.