Main Centers
International Centers
India
USA
Wisdom
FILTERS:
SORT BY:
ಒಮ್ಮೆ ನೀವು ಅಪರಿಮಿತತೆಯನ್ನು ಅನುಭವಿಸಿದರೆ, ನಿಮ್ಮ ಬದುಕಿನಲ್ಲಿನ ಸಾಧ್ಯತೆಗಳೂ ಅಪರಿಮಿತವಾಗುವುವು.
ಯೋಗವು ಬರೀ ವ್ಯಾಯಾಮವಲ್ಲ. ಅದು ಮನುಷ್ಯರು ತಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ ಮತ್ತು ತಂತ್ರಜ್ಞಾನ.
ಗಣೇಶನು ಮೇಧಾಶಕ್ತಿಯ ಸಾಕಾರರೂಪ. ಇಂದು ನಿಮ್ಮ ಮೆದುಳನ್ನು ವೃದ್ಧಿಗೊಳಿಸುವ ದಿನ, ನಿಮ್ಮ ಹೊಟ್ಟೆಯನ್ನಲ್ಲ.
ನಮ್ಮಲ್ಲಿ ಸಾಕಷ್ಟು ಮರಗಳಿದ್ದರೆ, ಸಾಕಷ್ಟು ಮಳೆಯಾಗುತ್ತದೆ, ಮತ್ತು ನಮ್ಮ ನದಿಗಳು ನಿರಂತರ ಹರಿಯುತ್ತವೆ.
ಮನುಷ್ಯ ಜೀವನದ ಗುಣಮಟ್ಟವು ನಿಜವಾಗಿಯೂ ಬದಲಾಗುವುದು ನಾವು ನಮ್ಮೊಳಗೆ ಬದಲಾದಾಗ ಮಾತ್ರ.
ತೊಳಲಾಡುತ್ತಿದ್ದರಷ್ಟೇ ಬದುಕು ಅತಿ ದೀರ್ಘವೆನಿಸುತ್ತದೆ. ಸಂತೋಷದಲ್ಲಿದ್ದರೆ ಬದುಕು ಬಹಳ ಚುಟುಕಾದುದು.
ನಿಮಗೆ ಏನೇ ನೀಡಲ್ಪಟ್ಟರೂ ನೀವು ಅದರಿಂದ ಏನೋ ಸುಂದರವಾದದ್ದನ್ನು ಮಾಡಿಕೊಳ್ಳಬಲ್ಲಿರಾದರೆ, ಅದುವೇ ಪ್ರಜ್ಞಾಶಕ್ತಿ.
ನಿಮಗೆ ನಿಜವಾಗಿಯೂ ನನ್ನ ಮತ್ತು ನಿಮ್ಮ ಹುಟ್ಟುಹಬ್ಬವನ್ನು ಆಚರಿಸಬೇಕೆಂದಿದ್ದರೆ, ಯೋಗವನ್ನು ನಿಮ್ಮ ಮತ್ತು ಇತರರ ಬದುಕಿನಲ್ಲಿ ಒಂದು ಜೀವಂತ ಸತ್ಯವಾಗಿಸಿ.
ಬಹುತೇಕ ಜನರು ತಮ್ಮ ಬದುಕನ್ನು ತಮ್ಮ ಸುತ್ತಲಿನ ಸಾಮಾಜಿಕ ವಿಷಯಗಳಿಗೆ ಒತ್ತೆಯಿಟ್ಟಿದ್ದಾರೆ. ಯೋಗವು ಈ ಒತ್ತೆಯನ್ನು ಬಿಡಿಸುವ ಬಗ್ಗೆಯಾಗಿದೆ.
ತಮ್ಮದೇ ಸ್ವನಿರ್ಮಿತ ಗಡಿಗಳನ್ನು ಯಾರು ಮುರಿಯುವುದಿಲ್ಲವೋ ಅವರು ಅದರೊಳಗೇ ಬಂಧಿತರಾಗಿ ಉಳಿಯುತ್ತಾರೆ.
ನಿಮ್ಮ ದೇಹ-ಮನಸ್ಸುಗಳು ನೀವು ಸಂಗ್ರಹಿಸಿದ ಶೇಖರಣೆಗಳಷ್ಟೆ. ನೀವು ಶೇಖರಿಸಿದ್ದು ‘ನಿಮ್ಮ’ದಾಗಬಹುದು, ಆದರೆ ಅದುವೇ ನೀವಾಗಲು ಸಾಧ್ಯವಿಲ್ಲ.
ನಿಮ್ಮ ಒಳಿತಿಗಿಂತ ಇತರರ ಒಳಿತು ನಿಮಗೆ ಹೆಚ್ಚು ಮುಖ್ಯವಾಗುವುದೇ ಭಕ್ತಿ.