Main Centers
International Centers
India
USA
Wisdom
FILTERS:
SORT BY:
ಹೋಳಿಯು ಮೂಲಭೂತವಾಗಿ ಬದುಕು ಒಂದು ಲವಲವಿಕೆಯುತ ಪ್ರಕ್ರಿಯೆ ಎಂದು ಗುರುತಿಸುವ ಬಗ್ಗೆಯಾಗಿದೆ. ಈ ದಿನದಂದು ನೀವು ಅತ್ಯಂತ ಹೆಚ್ಚು ಜೀವಂತಿಕೆಯಿಂದಿರಬೇಕು, ಏಕೆಂದರೆ ಜೀವಂತವಾಗಿರುವುದೇ ಅತ್ಯಮೂಲ್ಯವಾದದ್ದು.
ಮನುಷ್ಯರು ನರಳುವುದು ತಮ್ಮದೇ ನೆನಪು ಮತ್ತು ಕಲ್ಪನೆಗಳನ್ನು; ಅಂದರೆ, ಅವರು ನರಳುವುದು ಅಸ್ತಿತ್ವದಲ್ಲಿ ಇಲ್ಲದೇ ಇರುವುದನ್ನು.
ನಿಮ್ಮ ಗಮನಶೀಲತೆಯು ಎಷ್ಟು ಆಳವಾಗಿದೆ ಎಂಬುದು ನಿಮ್ಮ ಅನುಭವವು ಎಷ್ಟು ಆಳವಾಗಿದೆ ಎಂಬುದನ್ನು ನಿರ್ಧರಿಸುತ್ತದೆ. ನಿಮ್ಮ ಗಮನಶೀಲತೆಯು ಪ್ರಬುದ್ಧವಾಗಿದ್ದರೆ, ಜೀವನದ ನಿಮ್ಮ ಅನುಭವವೂ ಪ್ರಬುದ್ಧವಾಗಿರುತ್ತದೆ.
ನೀವು ನಿಮ್ಮ ವ್ಯಕ್ತಿತ್ವದಲ್ಲಿ ಕಡಿಮೆ ನೆಲೆಯೂರಿದ್ದಷ್ಟೂ ನಿಮ್ಮ ಉಪಸ್ಥಿತಿಯು ಹೆಚ್ಚು ಪ್ರಬಲವಾಗುತ್ತದೆ.
ನೀವು ಯಾರನ್ನೇ ಭೇಟಿಯಾದರೂ, ಅದು ನಿಮಗೆ ಅವರೊಂದಿಗೆ ಸಿಗುತ್ತಿರುವ ಕೊನೆಯ ಅವಕಾಶ ಎಂಬಂತೆ ಮಾತನಾಡಿ. ಅದು ನಿಮ್ಮ ಬದುಕನ್ನು ರೂಪಾಂತರಿಸುತ್ತದೆ.
ಶಿಸ್ತು ಎಂದರೆ ನಿಯಂತ್ರಣವಲ್ಲ. ಶಿಸ್ತು ಎಂದರೆ ಏನು ಅಗತ್ಯವಿದೆಯೋ ಅದನ್ನು ಮಾಡುವ ವಿವೇಚನೆಯನ್ನು ಹೊಂದಿರುವುದು.
ಇನ್ನೊಬ್ಬರೊಂದಿಗೆ ನಿಮ್ಮ ಒಡನಾಟವು ಎಷ್ಟು ಸುಂದರವಾಗಿರುತ್ತದೆ ಎಂಬುದು ನಿಮ್ಮ ಹೃತ್ಪೂರ್ವಕತೆ, ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯ, ಮತ್ತು ನೀವೆಷ್ಟು ಸಂತೋಷಭರಿತರಾಗಿದ್ದೀರಿ ಎಂಬುದನ್ನು ಅವಲಂಬಿಸಿದೆ.
ಸಮಯವು ಹಣವಲ್ಲ. ಸಮಯವು ಜೀವನ.
ಪ್ರಶ್ನಿಸುವುದು ಒಳ್ಳೆಯದು – ಅದರರ್ಥ ನೀವು ಸತ್ಯವನ್ನು ಅರಸುತ್ತಿದ್ದೀರಿ. ಆದರೆ ಸಂಶಯ ಎಂಬುದೊಂದು ರೋಗ.
ಮಹಿಳೆಯು ಪುರುಷನ ಜಗತ್ತಿಗೆ ಹೊಂದಿಕೊಳ್ಳುವ ಅಗತ್ಯ ಬೀಳಬಾರದು. ಅರ್ಧ ಜಗತ್ತು ಹೇಗಿದ್ದರೂ ಅವಳದ್ದೇ ಆಗಿರಬೇಕು.
ಜೀವನಕ್ಕೆ ವಿಫಲತೆ ಎಂಬುದಿಲ್ಲ. ವಿಫಲತೆ ಎಂಬುದು ಇರುವುದು ತಮ್ಮನ್ನು ಸದಾ ಇತರರೊಂದಿಗೆ ಹೋಲಿಸಿಕೊಳ್ಳುತ್ತಿರುವವರಿಗೆ ಮಾತ್ರ.
ನೀವು ವಿಚಿತ್ರ ಎಂದು ಪ್ರಪಂಚ ಅಂದುಕೊಂಡರೆ ಪರವಾಗಿಲ್ಲ. ಎಲ್ಲರೂ ವಿಭಿನ್ನವಾಗಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಯಾರದ್ದಾದರೂ ಕಣ್ಣಿಗೆ ವಿಚಿತ್ರವಾಗಿ ತೋರುತ್ತಾರೆ. ಸಂತೋಷಭರಿತ ವಿಚಿತ್ರವೋ ಅಥವಾ ತೊಳಲಾಡುವ ವಿಚಿತ್ರವೋ – ಇದು ನಿಮ್ಮ ಆಯ್ಕೆ.