Main Centers
International Centers
India
USA
Wisdom
FILTERS:
SORT BY:
ಯಾರಾದರೂ ನಿಮ್ಮನ್ನು ನೀವು ಅವರಿಗೆ ಸೇರಿದವರು ಎಂಬುದಕ್ಕಾಗಿ ಪ್ರೀತಿಸಿದರೆ, ನೀವು ಅವರ ಆಸ್ತಿ ಎಂದಂತಾಯಿತಷ್ಟೆ. ಯಾರಾದರೂ ನಿಮ್ಮನ್ನು ನೀವು ಹೇಗಿರುವಿರೋ ಹಾಗೆಯೇ ಪ್ರೀತಿಸಿದರೆ, ನೀವು ಅದೃಷ್ಟವಂತರು.
ಕಾಡುಗಳು, ನದಿಗಳು, ಮತ್ತು ಪರ್ವತಗಳು ನಮಗಿಂತ ಎಷ್ಟೋ ಮಹತ್ತಾದ ಜೀವಗಳು, ಮತ್ತು ಹಲವು ರೀತಿಗಳಲ್ಲಿ ನಮ್ಮ ಜೀವನದ ಮೂಲ ಮತ್ತು ಆಧಾರವಾಗಿವೆ. ಅವು ಸುಸ್ಥಿತಿಯಲ್ಲಿ ಉಳಿಯಬೇಕೆಂದರೆ ನಾವು ಮಾಡುವ ಎಲ್ಲ ವಿಷಯಗಳಲ್ಲೂ ಸ್ವಲ್ಪ ಜಾಗರೂಕತೆ ಅಗತ್ಯ.
ಮನುಷ್ಯರಾಗಿರುವುದು ಎಂದರೆ ನೀವು ಸಂಪರ್ಕಕ್ಕೆ ಬರುವ ಎಲ್ಲರಿಗೂ ಮತ್ತು ಎಲ್ಲದಕ್ಕೂ ಪ್ರಜ್ಞಾಪೂರ್ವಕವಾಗಿ ನಿಮ್ಮ ಕೈಲಾದಷ್ಟು ಉತ್ತಮವಾದುದನ್ನು ಮಾಡುವುದು.
ನೀವು ನಶ್ವರರು ಎಂಬ ಅರಿವು ನಿಮ್ಮಲ್ಲಿ ಮೂಡಿದಾಗ, ನೀವು ಯಾವುದರ ಬಗ್ಗೆಯೂ ಸೀರಿಯಸ್ ಆಗಿರುವುದಿಲ್ಲ, ಬದಲಿಗೆ ಆದಷ್ಟು ತೀವ್ರವಾಗಿ ಜೀವಿಸಲು ಹಾತೊರೆಯುತ್ತೀರಿ.
ಬೇರೆಯವರಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಎಂದರೆ ನೀವು ಅವರ ಬದುಕನ್ನು ಸರಿಪಡಿಸಲು ನೋಡುತ್ತಿದ್ದೀರಿ. ನಿಮ್ಮದೇ ಬದುಕನ್ನು ಸರಿಪಡಿಸಿಕೊಳ್ಳಿ – ಅದು ಸ್ವಾತಂತ್ರ್ಯ.
ಸಂತೋಷ ಪ್ರಾರಂಭವಾಗುವುದು ನಿಮ್ಮಿಂದ – ನಿಮ್ಮ ಸಂಬಂಧಗಳು, ಕೆಲಸ, ಅಥವಾ ಹಣದಿಂದಲ್ಲ.
ನಾವು 'ಜೀವನ'ಕ್ಕೆ ಸಂವೇದನಾಶೀಲರಾಗಬೇಕು – ನಮ್ಮದೇ ಯೋಚನೆಗಳು, ಭಾವನೆಗಳು, ಅಹಂ, ಸಿದ್ಧಾಂತಗಳು, ಅಥವಾ ನಂಬಿಕೆಗಳಿಗಲ್ಲ. ಏಕೆಂದರೆ ಅತ್ಯುನ್ನತವಾದ ಮೌಲ್ಯ ಜೀವನವೇ ಆಗಿದೆ.
ಹೋಳಿಯು ಮೂಲಭೂತವಾಗಿ ಬದುಕು ಒಂದು ಲವಲವಿಕೆಯುತ ಪ್ರಕ್ರಿಯೆ ಎಂದು ಗುರುತಿಸುವ ಬಗ್ಗೆಯಾಗಿದೆ. ಈ ದಿನದಂದು ನೀವು ಅತ್ಯಂತ ಹೆಚ್ಚು ಜೀವಂತಿಕೆಯಿಂದಿರಬೇಕು, ಏಕೆಂದರೆ ಜೀವಂತವಾಗಿರುವುದೇ ಅತ್ಯಮೂಲ್ಯವಾದದ್ದು.
ನೀರು ಎಂಬುದು ಒಂದು ಸರಕಲ್ಲ, ಬದಲಿಗೆ ಜೀವನಿರ್ಮಾತೃ ಪದಾರ್ಥ. ನಿಮ್ಮ ದೇಹದ ಮೂರನೆಯ ಎರಡು ಭಾಗ ನೀರೇ ಆಗಿದೆ. ಇದನ್ನು ಅರಿವಿನಲ್ಲಿಟ್ಟುಕೊಳ್ಳುವುದು ಮನುಷ್ಯರ ಉಳಿವಿಗೆ ಅತ್ಯಗತ್ಯ.
ನಿಮಗೆ ಪ್ರೇರಣೆ ಬೇಕಿದ್ದರೆ ಪುಸ್ತಕಗಳನ್ನು ಓದಿ. ಆದರೆ ನಿಮಗೆ ನಿಜವಾಗಿಯೂ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಬೇಕೆಂದಿದ್ದರೆ, ಅದಕ್ಕಿರುವ ಏಕೈಕ ಮಾರ್ಗವೆಂದರೆ ಅಂತರ್ಮುಖರಾಗುವುದು.
ಒಬ್ಬೊಬ್ಬ ಮನುಷ್ಯರಲ್ಲೂ ರೂಪಾಂತರಣೆಯನ್ನು ತಂದ ಹೊರತು ಜಗತ್ತಿನಲ್ಲಿ ರೂಪಾಂತರಣೆ ಉಂಟಾಗದು.
ನೀವು ಯಾರನ್ನೇ ಭೇಟಿಯಾದರೂ, ಅದು ನಿಮಗೆ ಅವರೊಂದಿಗೆ ಸಿಗುತ್ತಿರುವ ಕೊನೆಯ ಅವಕಾಶ ಎಂಬಂತೆ ಮಾತನಾಡಿ. ಅದು ನಿಮ್ಮ ಬದುಕನ್ನು ರೂಪಾಂತರಿಸುತ್ತದೆ.