Main Centers
International Centers
India
USA
Wisdom
FILTERS:
SORT BY:
ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ಇದು ನಿಮ್ಮ ವಿಜಯದ ದಿನವಾಗಲಿ.
ಪ್ರೀತಿಯು ಇನ್ನೊಬ್ಬರ ಕುರಿತಾದುದಲ್ಲ. ಪ್ರೀತಿಯು ಒಂದು ಕ್ರಿಯೆಯಲ್ಲ. ಪ್ರೀತಿಯು ನೀವು ಇರುವ ರೀತಿಯೇ ಆಗಿದೆ.
ಭಯವು ಪ್ರಜ್ಞಾಹೀನತೆಯ ಒಂದು ಪರಿಣಾಮ. ಭಯಭೀತರಾಗಿರುವುದು ನಮ್ಮನ್ನು ಕಾಪಾಡುವುದಿಲ್ಲ. ಪ್ರಜ್ಞಾಪೂರ್ವಕರಾಗುವ ಮೂಲಕವಷ್ಟೆ ನಾವು ಜೀವನವನ್ನು ನಿಜವಾಗಿಯೂ ಸೃಜಿಸಬಹುದು.
ಜ್ಞಾನೋದಯ ಎಂದರೆ ‘ಬೆಳಕು’ ಮೂಡುವ ಬಗ್ಗೆಯಲ್ಲ – ಅದು ಕತ್ತಲು-ಬೆಳಕುಗಳನ್ನು ಮೀರಿದ ಒಂದು ಸಾಕ್ಷಾತ್ಕಾರ.
ನಿಮ್ಮ ದೇಹ ಮನಸ್ಸುಗಳನ್ನೂ ಒಳಗೊಂಡಂತೆ ನಿಮ್ಮೆಲ್ಲ ಸಾಧನಗಳನ್ನು ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು.
ದೇವಿಯ ಅನುಗ್ರಹಕ್ಕೆ ಪಾತ್ರರಾದವರು ಸೌಭಾಗ್ಯವಂತರು. ಆಗ ನೀವು ನಿಮ್ಮ ಕಲ್ಪನೆ, ಸಾಮರ್ಥ್ಯಗಳನ್ನು ಎಷ್ಟೋ ಮೀರಿದಂತಹ ಬಾಳನ್ನು ಬಾಳುವಿರಿ.
ಸ್ತ್ರೀತತ್ವವು ಜೀವನದ ಶಕ್ತಿಯುತವಾದ ಆಯಾಮ. ‘ಶಕ್ತಿ’ ಇಲ್ಲದೇ ಹೋದರೆ ಅಸ್ತಿತ್ವದಲ್ಲಿ ಏನೊಂದೂ ಇರದು.
The best way to approach Navratri is in a spirit of Celebration. This is the secret of life: to be non-serious but absolutely Involved.
ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು.
ದೇಹ ಮತ್ತು ಮನಸ್ಸುಗಳ ನಡುವೆ ಆಳವಾದ ಸಂಬಂಧವಿದೆ. ದೇಹವು ನಿಶ್ಚಲವಾದರೆ ಮನಸ್ಸೂ ಸಹಜವಾಗಿಯೇ ನಿಶ್ಚಲವಾಗುತ್ತದೆ.
ಮನುಷ್ಯರಾಗಿರುವುದು ಎಂದರೆ ಪ್ರಕೃತಿಯ ನಿಯಮಗಳನ್ನು ಮೀರುವ ಸಾಮರ್ಥ್ಯವನ್ನು ಹೊಂದಿರುವುದು, ಮತ್ತು ನಮಗಿಂತ ಮಹತ್ತರವಾದುದನ್ನು ಸಾಕಾರಗೊಳಿಸುವುದು.
ನಿಮ್ಮ ಪಿತೃಗಳು ನಿಮಗೆ ಒಂದು ಸೋಪಾನವಾಗಬೇಕೇ ಹೊರತು ಬಂಧನವಲ್ಲ. ಮಹಾಲಯ ಅಮಾವಾಸ್ಯೆಯು ಆ ಸಾಧ್ಯತೆಯನ್ನು ತೆರೆಯುತ್ತದೆ.