Main Centers
International Centers
India
USA
FILTERS:
SORT BY:
ಪ್ರಯತ್ನ ಬೇಕಿರುವುದು ಜೀವಂತವಾಗಿರಲು. ಸಾವು ಕರಾರುವಾಕ್ಕಾಗಿ ನಡೆಯುತ್ತದೆ – ಅದನ್ನು ನೀವು ಅಭ್ಯಾಸ ಮಾಡಬೇಕಾಗಿಲ್ಲ. ಆದರೆ ಜೀವಿಸಲು ಬಹಳ ಅಭ್ಯಾಸ ಅಗತ್ಯ.
ಜೀವನವು ಒಂದು ವರವೋ ಶಾಪವೋ ಎಂಬುದು ನಿಮ್ಮ ಮನಸ್ಸು ನಿಮ್ಮ ಸೂಚನೆಯಂತೆ ನಡೆದುಕೊಳ್ಳುತ್ತಿದೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿದೆ.
ಭವಿಷ್ಯಕ್ಕಾಗಿ ಪ್ಲಾನ್ ಮಾಡುವುದು, ಮತ್ತು ಇನ್ನೂ ಬಂದಿಲ್ಲದ ಭವಿಷ್ಯವನ್ನು ಈಗಲೇ ನರಳುವುದು – ಇವೆರಡೂ ಬೇರೆ ಬೇರೆ ವಿಷಯಗಳು.
ಜನರು ಯಾವಾಗಲೂ ಜಗತ್ತಿನ ಅತ್ಯದ್ಭುತ ವ್ಯಕ್ತಿಯನ್ನು ಭೇಟಿಯಾಗಲು ಬಯಸುತ್ತಾರೆ. ನೀವೇ ಆ ಅತ್ಯದ್ಭುತ ವ್ಯಕ್ತಿಯೇಕೆ ಆಗಬಾರದು.
ಎಲ್ಲ ಸಮಸ್ಯೆಗಳ ಮೂಲ ನಿಮ್ಮೊಳಗೇ ಇದೆ. ಪರಿಹಾರಗಳೂ ಕೂಡ ನಿಮ್ಮೊಳಗೇ ಇದೆ.
ಇಂದ್ರಿಯಸುಖವು ಸುಂದರವಾದುದೇ, ಆದರೆ ಅದು ನಮ್ಮನ್ನು ಗುಲಾಮರಾಗಿಸುತ್ತದೆ. ಸಂತೋಷವು ಅದ್ಭುತವಾದುದು – ಎಲ್ಲಕ್ಕಿಂತ ಮಿಗಿಲಾಗಿ ಅದು ನಮ್ಮನ್ನು ಮುಕ್ತಗೊಳಿಸುತ್ತದೆ.
ಕೆಲವೊಮ್ಮೆ ಪ್ರಪಂಚ ನಿಮಗೆ ವಿರುದ್ಧವಾಗಬಹುದು. ಆದರೆ ನೀವೇ ನಿಮಗೆ ವಿರುದ್ಧವಾಗಿದ್ದರೆ, ಆಗ ಪರಿಹಾರವೇ ಇಲ್ಲ.
ಸಂತೋಷಭರಿತರಾಗಿರುವವರಿಗೆ ಜೀವನವು ಚುಟುಕಾದದ್ದು. ತೊಳಲಾಡುತ್ತಿರುವವರಿಗೆ ಅದು ಬಹಳ ದೀರ್ಘವಾದುದು.
ಕೆಲವೇ ಕೆಲವರಷ್ಟೆ ನಿಜವಾಗಿಯೂ ಜೀವಿಸುತ್ತಿದ್ದಾರೆ. ಉಳಿದವರು ಜೀವಿಕೆ ನೋಡಿಕೊಳ್ಳುತ್ತಿದ್ದಾರೆ ಅಷ್ಟೆ.
ಮಕ್ಕಳು ಗಮನ ನೀಡುತ್ತಾ, ತೊಡಗುತ್ತಾ ಬೆಳೆಯುತ್ತಾರೆಯೇ ಹೊರತು, ಬೋಧನೆ ಮತ್ತು ಸಿದ್ಧಾಂತಗಳನ್ನು ಕೇಳುವುದರಿಂದಲ್ಲ. ನಿಮ್ಮ ಮಗುವು ಯಾವ ರೀತಿಯ ವ್ಯಕ್ತಿಯಾಗಬೇಕೆಂದು ಬಯಸುತ್ತೀರೋ ನೀವು ಅಂತಹ ವ್ಯಕ್ತಿಯಾಗಬೇಕು.
ಚೆನ್ನಾಗಿ ಬಾಳುವುದು ಎಂದರೆ ಐಷಾರಾಮಿ ಬದುಕು ಎಂದರ್ಥವಲ್ಲ. ಚೆನ್ನಾಗಿ ಬಾಳುವುದು ಎಂದರೆ ನೀವೊಂದು ಕಲ್ಲಿನ ಮೇಲೆ ಕೂತರೂ ಸಂತೋಷದಿಂದ ಕೂರುತ್ತೀರಿ.
ನಿಮ್ಮ ಮನಸ್ಸನ್ನು ನೀವು ನಡೆಸಬೇಕು. ಮನಸ್ಸು ನಿಮ್ಮನ್ನು ನಡೆಸುವುದಲ್ಲ.