Wisdom
FILTERS:
SORT BY:
ಕರ್ಮವು ಒಳ್ಳೆಯದು-ಕೆಟ್ಟದ್ದರ ಬಗ್ಗೆಯಲ್ಲ. ಅದು ಕಾರಣ-ಪರಿಣಾಮಗಳ ಬಗ್ಗೆಯಷ್ಟೆ.
ಇದುವೇ ಜೀವನದ ರಹಸ್ಯ – ಎಲ್ಲದರಲ್ಲೂ ಸೀರಿಯಸ್ ಆಗಿಲ್ಲದೇ ಇರುವುದು, ಆದರೆ ನಿಚ್ಚಳ ತೊಡಗುವಿಕೆಯಿಂದ ಇರುವುದು. ಒಂದು ಕ್ರೀಡೆಯಂತೆ. ತೊಡಗುವಿಕೆ, ಆದರೆ ತೊಡರುವಿಕೆಯಿಲ್ಲ.
ನಿಮ್ಮ ಬಳಿ ಏನೆಲ್ಲ ಇವೆಯೋ – ನಿಮ್ಮ ಪ್ರೀತಿ, ನಿಮ್ಮ ಸಂತೋಷ, ನಿಮ್ಮ ಕೌಶಲಗಳು – ಎಲ್ಲವನ್ನೂ ಈಗಲೇ ತೋರಿ. ಅವನ್ನು ಇನ್ನೊಂದು ಜನ್ಮಕ್ಕೆ ಉಳಿಸಿಕೊಳ್ಳಲು ನೋಡಬೇಡಿ.
ಪುನರಾವರ್ತನೆಗೊಳ್ಳುವ ಬಾಳನ್ನು ಬಾಳುವುದು ನಮಗೆ ಬೇಕಿಲ್ಲ. ನಮ್ಮ ಬಾಳಿನ ಕಥೆಯನ್ನು ನಾವೇ ಬರೆಯಲು ನಾವು ಬಯಸುತ್ತೇವೆ.
ನಿಮ್ಮ ಬದುಕಿನಲ್ಲಿ ಅದೇನೇ ಸನ್ನಿವೇಶಗಳು ಘಟಿಸಲಿ, ನೀವು ಅದರಿಂದ ಹೆಚ್ಚು ಸದೃಢರಾಗಿ ಹೊರಬರಬಹುದು, ಅಥವಾ ಅದರಿಂದ ಚೂರುಚೂರಾಗಬಹುದು. ಇದು ನಿಮ್ಮದೇ ಕೈಯಲ್ಲಿರುವ ಒಂದು ಆಯ್ಕೆ.
ಸೃಷ್ಟಿಯ ಪ್ರತಿಯೊಂದು ಅಂಶ – ಧೂಳಿನ ಕಣದಿಂದ ಹಿಡಿದು ಬೆಟ್ಟದವರೆಗೆ, ಹನಿಯಿಂದ ಹಿಡಿದು ಸಾಗರದವರೆಗೆ – ಪ್ರತಿಯೊಂದೂ ಕೂಡ ಮಾನವ ಬುದ್ಧಿಮತ್ತೆಯನ್ನು ಎಷ್ಟೋ ಮೀರಿದಂತಹ ಒಂದು ಪ್ರಜ್ಞಾಶಕ್ತಿಯ ಅಭಿವ್ಯಕ್ತಿಯಾಗಿದೆ.
ವ್ಯಕ್ತಿಗತ ರೂಪಾಂತರಣೆಯನ್ನು ಉಂಟುಮಾಡದೇ ಜಗತ್ತನ್ನು ರೂಪಾಂತರಿಸುವುದು ಸಾಧ್ಯವಿಲ್ಲ.
ನಂಬುವುದು ಎಂದರೆ ನಿಮಗೆ ನಿಜವಾಗಿಯೂ ಗೊತ್ತಿಲ್ಲದೇ ಇರುವುದನ್ನು ಗೊತ್ತಿದೆ ಎಂದುಕೊಳ್ಳುವುದು. ಜಿಜ್ಞಾಸೆ ಎಂದರೆ ನಿಮಗೆ ಗೊತ್ತಿಲ್ಲ ಎಂಬುದನ್ನು ಗುರುತಿಸುವುದು.
ನಿಮ್ಮ ಸ್ವರೂಪವೇ ಆಗಿರುವ ಜೀವಚೈತನ್ಯಕ್ಕೆ ನೀವು ಗಮನವನ್ನಿತ್ತರೆ, ಅದು ನಿಮ್ಮೊಳಗೆ ಅರಳುವುದು.
ನಿಮ್ಮ ಸುತ್ತಲಿನ ಜನರ ಬಗ್ಗೆ ನಿಮಗೆ ಕಾಳಜಿಯಿದ್ದರೆ, ಅವರು ನಿಮ್ಮ ಒಡನಾಟವನ್ನು ಆನಂದಿಸುವಂತಹ ವ್ಯಕ್ತಿಯಾಗಿ ನಿಮ್ಮನ್ನು ರೂಪಿಸಿಕೊಳ್ಳಬೇಕು.