Main Centers
International Centers
India
USA
Wisdom
FILTERS:
SORT BY:
ಮನುಷ್ಯರು ತಮ್ಮ ಹುಚ್ಚನ್ನು ಮರೆಮಾಚಲು ಮನರಂಜನೆಯ ಮೊರೆ ಹೋಗುತ್ತಿದ್ದಾರೆ. ಅವರು ಸಂಪೂರ್ಣವಾಗಿ ಸ್ವಸ್ಥಚಿತ್ತರಾಗಿದ್ದರೆ, ಸುಮ್ಮನೆ ಕುಳಿತು ಹೂವು ಅರಳುವುದನ್ನು ನೋಡಬಲ್ಲವರಾಗಿರುತ್ತಿದ್ದರು.
ಏನನ್ನೋ ಅರಸಲು ನೋಡಬೇಡಿ. ಬದುಕಿನ ಅರ್ಥವನ್ನು ಅರಸಲು ನೋಡಬೇಡಿ. ದೇವರನ್ನು ಅರಸಲು ನೋಡಬೇಡಿ. ಸುಮ್ಮನೆ ‘ನೋಡಿ’ – ಅಷ್ಟೆ.
ಕತ್ತಲನ್ನು ತೊಡೆದುಹಾಕುವುದೇ ಬೆಳಕಿನ ಸ್ವಭಾವ.ನಿಮ್ಮೊಳಗಿನ ಬೆಳಕು ಮಿರುಗಲಿ – ನಿಮ್ಮನ್ನೂ ನಿಮ್ಮ ಸುತ್ತಲಿರುವುದೆಲ್ಲವನ್ನೂ ಬೆಳಗಲಿ.ನಿಮ್ಮ ದೀಪಾವಳಿಯು ದೇದೀಪ್ಯಮಾನವಾಗಿರಲಿ.ಪ್ರೀತಿ ಮತ್ತು ಆಶೀರ್ವಾದಗಳು,
ದೇಹ-ಮನಸ್ಸುಗಳ ಮಿತಿಗಳನ್ನು ಮೀರಿದ ನಿಮ್ಮ ಸ್ವರೂಪವನ್ನು ನೀವು ನಿಜವಾಗಿಯೂ ಅನುಭವಿಸಿದರೆ, ಆಗ ಭಯ ಎಂಬುದಿರದು.
ಎಲ್ಲ ಊಹಾಪೋಹಗಳನ್ನು ಬಿಟ್ಟುಬಿಡುವುದೇ ಅಧ್ಯಾತ್ಮದ ತಳಹದಿ: ‘ನನಗೆ ಗೊತ್ತಿರುವುದಷ್ಟೆ ನನಗೆ ಗೊತ್ತಿದೆ. ನನಗೆ ಗೊತ್ತಿಲ್ಲದ್ದು ನನಗೆ ಗೊತ್ತಿಲ್ಲ.’
ಜಗತ್ತಿನಲ್ಲಿ ಇಂದು ಸುಳ್ಳೇ ಪ್ರಧಾನವಾಗಿ ಹೋಗಿದೆ ಮತ್ತು ಸತ್ಯವು ಗೌಣವಾಗಿಬಿಟ್ಟಿದೆ. ಇದನ್ನು ಅದಲುಬದಲಾಗಿಸುವ ಸಮಯ ಬಂದಿದೆ.
ಸಫಲತೆ-ವಿಫಲತೆ, ಆರೋಗ್ಯ-ಅನಾರೋಗ್ಯ, ಜೀವನ್ಮರಣಗಳನ್ನು ಮೀರಿ ಪರಸ್ಪರರಿಗೆ ಬದ್ಧರಾಗಿರುವುದು – ಇದುವೇ ಕುಟುಂಬ.
ನೀವು ಜಗತ್ತನ್ನು ‘ಇದು ನನಗೆ ಇಷ್ಟ’ ಮತ್ತು ‘ಇದು ನನಗೆ ಇಷ್ಟವಿಲ್ಲ’ ಎಂಬುದಾಗಿ ವಿಭಜಿಸಿದರೆ, ಸತ್ಯವನ್ನು ಗ್ರಹಿಸಲು ನೀವು ಅಸಮರ್ಥರಾಗುತ್ತೀರಿ.
ನೀವು ಪರ್ಫೆಕ್ಟ್ ಆಗಬೇಕಾಗಿಲ್ಲ. ಮುಖ್ಯವಾದ ವಿಷಯವೆಂದರೆ ನೀವು ನಿರಂತರವಾಗಿ ಬೆಳೆಯಲು ಪ್ರಯತ್ನಿಸುತ್ತಿರಬೇಕು.
ನಿಮ್ಮ ಸಿಹಿಯ ಲಾಲಸೆಯೊಂದಿಗೆ ಹೋರಾಡಬೇಡಿ. ನೀವೇ ಸ್ವತಃ ಸವಿಯಿಂದ ತುಂಬಿದರೆ, ಸಿಹಿತಿನಿಸುಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ.
ಪ್ರಕೃತಿಯು ನಿಮಗೆ ನೀವೊಬ್ಬ ಪ್ರತ್ಯೇಕ ವ್ಯಕ್ತಿಯೆಂಬ ಭಾವನೆಯನ್ನು ನೀಡಿದೆ, ಆದರೆ ಜೀವನವು ನಡೆಯುವುದು ಪ್ರತ್ಯೇಕವಾಗಲ್ಲ. ಜೀವನವು ಒಂದು ಅಖಂಡ ವಿದ್ಯಮಾನ.
ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ.