Main Centers
International Centers
India
USA
Wisdom
FILTERS:
SORT BY:
ಬದುಕನ್ನು ಸಮೃದ್ಧವೂ, ಧನ್ಯವೂ ಆಗಿಸುವುದು ನೀವೆಷ್ಟು ಕೆಲಸ ಮಾಡಿದಿರಿ ಎಂಬುದಲ್ಲ, ಬದಲಿಗೆ ಬದುಕನ್ನು ಎಷ್ಟು ಆಳವಾಗಿ ಅನುಭವಿಸಿದಿರಿ ಎಂಬುದು.
ಮಾನವ ಪ್ರಜ್ಞೆಯನ್ನು ಮೇಲೇರಿಸುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಮುಖ್ಯವಾಗಿದೆ. ಆಗಷ್ಟೆ ತಂತ್ರಜ್ಞಾನವು ವಿನಾಶದ ಸಾಧನವಾಗದೆ, ಸಶಕ್ತತೆಯ ಸಾಧನವಾಗುವುದು.
ಇಂದ್ರಿಯಸುಖವು ಸಂತೋಷದ ನೆರಳಷ್ಟೆ. ನಿಮ್ಮೊಳಗೆ ಸಂತೋಷವು ಇಲ್ಲದಿದ್ದಾಗ, ನೀವು ಸುಖವನ್ನು ಅರಸುತ್ತೀರಿ.
ನಿಮ್ಮ ಬದುಕು ನಿಮ್ಮದೇ ರಚನೆ. ದೇವರು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
ಜೀವನ್ಮರಣಗಳು ಉಚ್ಛ್ವಾಸ-ನಿಶ್ವಾಸಗಳಂತೆ. ಅವು ಸದಾ ಒಟ್ಟಾಗಿಯೇ ಇರುತ್ತವೆ.
ನಿಮಗೆ ನಿಜವಾಗಿಯೂ ಕಾಳಜಿಯಿರುವುದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ನಿಮ್ಮ ಇಡೀ ಬದುಕೇ ರಜಾದಂತಿರುತ್ತದೆ.
ಮಾರುಕಟ್ಟೆಯಲ್ಲಿ ಯಾರು ಕಡಿಮೆ ಕೊಟ್ಟು ಜಾಸ್ತಿ ಕೊಳ್ಳುತ್ತಾರೋ ಅವರೇ ಜಾಣರೆನಿಸಿಕೊಳ್ಳುತ್ತಾರೆ. ಆದರೆ ಒಂದು ನಿಜವಾದ ಸಂಬಂಧದಲ್ಲಿ ನಿಮಗೇನು ಸಿಗುತ್ತದೆ ಎಂಬ ಪರಿವೆಯೇ ಇಲ್ಲದೆ ನೀವು ನಿಮಗೆ ಸಾಧ್ಯವಿರುವುದನ್ನೆಲ್ಲ ನೀಡಬೇಕು.
ನೀವು ಏನನ್ನೇ ಮಾಡಿದರೂ, ಅದನ್ನು ಮನಃಪೂರ್ವಕವಾಗಿ ಮಾಡಬಹುದು, ಅಥವಾ ಒಲ್ಲದ ಮನಸ್ಸಿನಿಂದ ಮಾಡಬಹುದು. ಮನಃಪೂರ್ವಕವಾಗಿ ಮಾಡಿದರೆ, ಅದು ಸ್ವರ್ಗವಾಗುವುದು. ಒಲ್ಲದ ಮನಸ್ಸಿನಿಂದ ಮಾಡಿದರೆ, ಅದು ನರಕವಾಗುವುದು.
ನೀವು ಸೃಷ್ಟಿಯ ತುಣುಕೆಂಬುದು ನಿಜವಾಗಿದ್ದರೆ, ಸೃಷ್ಟಿಕರ್ತನು ಖಂಡಿತವಾಗಿಯೂ ನಿಮ್ಮೊಳಗೆ ಅಂತರ್ಗತನಾಗಿದ್ದಾನೆ. ಅದನ್ನು ಅರಿಯಲು ನೀವು ಅಂತರ್ಮುಖರಾಗಬೇಕಷ್ಟೆ.
From amoeba to elephant, all creatures nourish the ecology. Only we humans are in destruction mode, and we think we are brilliant.
ಪ್ರೀತಿಯು ಯಾವಾಗಲೂ ಮುಕ್ತಗೊಳಿಸುವ ಪ್ರಕ್ರಿಯೆಯಾಗಬೇಕು, ಬಂಧಿಸುವ ಪ್ರಕ್ರಿಯೆಯಲ್ಲ.