Main Centers
International Centers
India
USA
Wisdom
FILTERS:
SORT BY:
ಒಳ್ಳೆಯ ಉದ್ದೇಶವಿದ್ದರೆ ಸಾಲದು. ಸರಿಯಾದ ಪ್ರಯತ್ನವನ್ನು ಸರಿಯಾದ ಪ್ರಜ್ಞೆಯೊಂದಿಗೆ ಹೂಡಿದರೆ ಮಾತ್ರ ನಿಮಗೆ ಬೇಕಾದ ಫಲಿತಾಂಶ ದೊರೆಯುತ್ತದೆ.
ಜೀವನವೆಂದರೆ ತೊಡಗುವಿಕೆ. ಎಲ್ಲಿ ತೊಡಗುವಿಕೆಯಿಲ್ಲವೋ, ಅಲ್ಲಿ ಜೀವನವಿಲ್ಲ.
ಬೇರೆಯವರು ನಿಮ್ಮ ನಿರೀಕ್ಷೆಗೆ ಅನುಗುಣವಾಗಿ ವರ್ತಿಸುವುದೇ ನಿಮ್ಮ ಪ್ರಕಾರ ವಿಶ್ವಾಸ ಎಂದಾದರೆ, ಅದು ವಿಶ್ವಾಸವಲ್ಲ, ಅದು ಕಪಟ.
ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಬೇಕು, ನೀವು ನಿಮ್ಮ ಮನಸ್ಸಿನ ಹಿಡಿತದಲ್ಲಿರುವುದಲ್ಲ.
‘ನನಗೆ ಗೊತ್ತಿಲ್ಲ’ ಎಂಬುದು ಒಂದು ಅಗಾಧ ಸಾಧ್ಯತೆ. ‘ನನಗೆ ಗೊತ್ತಿಲ್ಲ’ ಎಂದು ನಿಮಗೆ ಮನವರಿಕೆಯಾದಾಗಷ್ಟೆ, ನಿಮ್ಮೊಳಗೆ ಹಾತೊರೆತ, ಜಿಜ್ಞಾಸೆ, ಮತ್ತು ಅರಿತುಕೊಳ್ಳುವ ಸಾಧ್ಯತೆ ಏಳುತ್ತವೆ.
ನೀವು ಒಂದು ವಿಷಯದ ಮೇಲೆ—ಅದೇನೇ ಆಗಿರಲಿ—ಏಕಾಗ್ರರಾಗುವುದನ್ನು ನಾನು ನೋಡ ಬಯಸುತ್ತೇನೆ. ಏಕೆಂದರೆ ಮನುಷ್ಯರು ಏಕಾಗ್ರರಾದರೆ, ವಿಶ್ವವೇ ಅವರಿಗೆ ಒಲಿಯುತ್ತದೆ.
ಯಾವುದು ಅತ್ಯಂತ ಹೆಚ್ಚು ಮಹತ್ವಪೂರ್ಣವಾದುದೋ, ಅದು ನಿಮ್ಮೊಳಗೇ ಇದೆ.
ನಮ್ಮಲ್ಲಿ ಅದೇನೇ ಸಾಮರ್ಥ್ಯಗಳು, ಕೌಶಲಗಳು, ಮತ್ತು ಪ್ರತಿಭೆಗಳಿರಲಿ – ಅವೆಲ್ಲವೂ ಸಾರ್ಥಕವಾಗುವುದು ನಮ್ಮಲ್ಲಿ ಸಂತುಲನೆ ಇದ್ದಾಗ ಮಾತ್ರ.
ಕೃಷಿಯು ಸಮೃದ್ಧವಾದ ಮಣ್ಣಿನಲ್ಲಷ್ಟೆ ಏಳಿಗೆ ಹೊಂದಬಲ್ಲದು. ಅದಕ್ಕೆ ಬೇರೆ ಯಾವ ದಾರಿಯೂ ಇಲ್ಲ. ಮಣ್ಣಿನ ಪುನಶ್ಚೇತನವೇ ಜೀವನದ ಪುನಶ್ಚೇತನ.
ನಿಮ್ಮ ಜೀವವ್ಯವಸ್ಥೆಯಲ್ಲಿರುವ ಪ್ರತಿಯೊಂದು ಪರಮಾಣುವೂ ಸಮಸ್ತ ಬ್ರಹ್ಮಾಂಡದೊಂದಿಗೆ ನಿರಂತರವಾಗಿ ಸಂವಹಿಸುತ್ತಿದೆ. ಆದರೆ ನೀವು ಮಾತ್ರ ನೀವೊಂದು ಪ್ರತ್ಯೇಕ ಅಸ್ತಿತ್ವ ಎಂದುಕೊಂಡಿದ್ದೀರಿ.
ನೀವು ಎಷ್ಟು ಕೂಡಿಟ್ಟಿದ್ದೀರಿ ಎಂಬುದಕ್ಕಿಂತ ನಿಮ್ಮ ಜೀವನದ ಅನುಭವವು ಎಷ್ಟು ತೀವ್ರವಾಗಿದೆ ಎಂಬುದು ಹೆಚ್ಚು ಮುಖ್ಯವಾದುದು.