Main Centers
International Centers
India
USA
Wisdom
FILTERS:
SORT BY:
ನಿಮ್ಮೊಳಗಿನ ಜೀವವೇ ಆನಂದಮಯವಾಗಿರಲು ಹಾತೊರೆಯುತ್ತಿದೆ, ಏಕೆಂದರೆ ಆನಂದವು ಸೃಷ್ಟಿಯ ಮೂಲದ ಸ್ವರೂಪವೇ ಆಗಿದೆ.
ಪ್ರಬಲವಾದ ಇಷ್ಟಾನಿಷ್ಟಗಳನ್ನು ಹೊಂದುವ ಮೂಲಕ ನೀವು ಜೀವನದ ಅನೇಕ ಸಾಧ್ಯತೆಗಳ ಬಾಗಿಲುಗಳನ್ನು ಮುಚ್ಚಿಬಿಡುತ್ತೀರಿ.
‘ನನಗೆ ಗೊತ್ತಿಲ್ಲ’ ಎಂಬುದು ನಕಾರಾತ್ಮಕ ಮನಸ್ಥಿತಿಯಲ್ಲ. ಪ್ರತಿಯೊಂದು ಶೋಧನೆಯೂ ಆಗಿದ್ದು ಈ ಮನವರಿಕೆಯಿಂದಲೇ.
ನಾವು ಮಾಡುವ ಪ್ರತಿಯೊಂದು ಕಾರ್ಯದ ಮೂಲಕ, ನಾವು ಹುಟ್ಟುಹಾಕುವ ಪ್ರತಿಯೊಂದು ಯೋಚನೆ-ಭಾವನೆಯ ಮೂಲಕ, ನಾವು ನಮ್ಮ ಸುತ್ತ ಹೆಚ್ಚು ಒಳ್ಳೆಯ ಸನ್ನಿವೇಶವನ್ನು ಸೃಷ್ಟಿಸಬಹುದು.
ಚಮತ್ಕಾರ ಎಲ್ಲೆಡೆಯಲ್ಲೂ ಇದೆ. ಅದನ್ನು ನೀವು ಜೀವಿಸಲು ಕಲಿತರೆ, ಜೀವನವು ದಿನನಿತ್ಯವೂ ಪವಾಡಸದೃಶವಾಗುವುದರಲ್ಲಿ ಸಂಶಯವಿಲ್ಲ.
ಜೀವಂತಿಕೆಯ ಚಿಲುಮೆ ಉಕ್ಕಿ ಹರಿಯುತ್ತಿರುವವರಿಗೆ ಜೀವಿಸಲು ಯಾವುದೇ ಉದ್ದೇಶ ಬೇಕಿಲ್ಲ. ಜೀವನವು ತನ್ನಲ್ಲೇ ಒಂದು ಉದ್ದೇಶ.
ಯೋಗವು ಒಂದು ತಂತ್ರಜ್ಞಾನ. ನೀವದನ್ನು ಬಳಸಲು ಕಲಿತರೆ ಅದು ಕೆಲಸ ಮಾಡುತ್ತದೆ ಅಷ್ಟೆ. ನೀವು ಎಲ್ಲಿಯವರು, ನೀವೇನನ್ನು ನಂಬುತ್ತೀರಿ, ಏನನ್ನು ನಂಬುವುದಿಲ್ಲ ಎಂಬುದೆಲ್ಲ ಲೆಕ್ಕಕ್ಕೆ ಬಾರದು.
ನೀವು ಅಂತರ್ಮುಖರಾದರೆ, ಎಲ್ಲದಕ್ಕೂ ಪರಿಹಾರ ಇರುವ ಒಂದು ಸ್ಥಳವನ್ನು ಅಲ್ಲಿ ನೀವು ಕಂಡುಕೊಳ್ಳುತ್ತೀರಿ.
ನಿಮ್ಮ ಜೀವಶಕ್ತಿ ಮತ್ತು ನಿಮ್ಮ ಅರಿವು ನೇರವಾದ ಸಂಬಂಧ ಹೊಂದಿವೆ. ನಿಮ್ಮ ಜೀವಶಕ್ತಿಯು ತೀವ್ರವಾಗಿದ್ದರೆ, ನಿಮ್ಮ ಅರಿವೂ ಕೂಡ ಸಹಜವಾಗಿಯೇ ವರ್ಧಿಸುತ್ತದೆ ಮತ್ತು ತೀಕ್ಷ್ಣವಾಗುತ್ತದೆ.
ನೀವು ನಿಮ್ಮೊಳಗೆ ಸಲಹಬಹುದಾದ ಅತ್ಯಂತ ಮಧುರವಾದ ಭಾವನೆಯೆಂದರೆ ಭಕ್ತಿ.
ಲವಲವಿಕೆಯಿಂದ, ಜೀವಂತಿಕೆಯಿಂದ ಬಾಳುವುದು ಸಾಧ್ಯವಾಗುವುದು ನೀವು ಬದುಕಿನ ಅನಿಶ್ಚಿತತೆಗಳನ್ನು ಲೀಲಾಜಾಲವಾಗಿ ಆನಂದಿಸಿದರೆ ಮಾತ್ರ.