Main Centers
International Centers
India
USA
Wisdom
FILTERS:
SORT BY:
ನಿಮಗೆ ಇಷ್ಟವಾದ ವಿಷಯಗಳ ಮಿತಿಯೊಳಗೆ ತಳವೂರುವುದಕ್ಕಿಂತ ನಿಮ್ಮ ಮಿತಿಗಳನ್ನು ಮೀರಿ ಹೋಗುವುದು ಅದೆಷ್ಟೋ ಹೆಚ್ಚು ಮುಖ್ಯವಾದುದು.
ನಿಮ್ಮ ಜೊತೆ ಏನೇ ನಡೆದರೂ, ಅದನ್ನು ನೀವೊಂದು ಶಾಪವಾಗಿ ನೋಡಿ ನರಳಬಹುದು, ಅಥವಾ ಒಂದು ವರವಾಗಿ ನೋಡಿ ಅದನ್ನು ಉಪಯೋಗಪಡಿಸಿಕೊಳ್ಳಬಹುದು.
ಬದುಕನ್ನು ಸಮೃದ್ಧವೂ, ಧನ್ಯವೂ ಆಗಿಸುವುದು ನೀವೆಷ್ಟು ಕೆಲಸ ಮಾಡಿದಿರಿ ಎಂಬುದಲ್ಲ, ಬದಲಿಗೆ ಬದುಕನ್ನು ಎಷ್ಟು ಆಳವಾಗಿ ಅನುಭವಿಸಿದಿರಿ ಎಂಬುದು.
ಮಾನವ ಪ್ರಜ್ಞೆಯನ್ನು ಮೇಲೇರಿಸುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಮುಖ್ಯವಾಗಿದೆ. ಆಗಷ್ಟೆ ತಂತ್ರಜ್ಞಾನವು ವಿನಾಶದ ಸಾಧನವಾಗದೆ, ಸಶಕ್ತತೆಯ ಸಾಧನವಾಗುವುದು.
ಯಾವ ಕೆಲಸವೂ ಒತ್ತಡದಿಂದ ಕೂಡಿಲ್ಲ. ಅದನ್ನು ಒತ್ತಡವಾಗಿಸುವುದು ನಿಮ್ಮ ದೇಹ, ಮನಸ್ಸು, ಮತ್ತು ಭಾವನೆಗಳನ್ನು ನಿಭಾಯಿಸುವಲ್ಲಿನ ನಿಮ್ಮ ಅಸಾಮರ್ಥ್ಯ.
ಜೀವನ್ಮರಣಗಳು ಉಚ್ಛ್ವಾಸ-ನಿಶ್ವಾಸಗಳಂತೆ. ಅವು ಸದಾ ಒಟ್ಟಾಗಿಯೇ ಇರುತ್ತವೆ.
ಸಂಕಷ್ಟದ ಸಮಯಗಳ ಮೂಲಕ ನೀವು ಆಂತರಿಕ ಸಂತುಲನೆಯೊಂದಿಗೆ ಸಾಗಬಲ್ಲಿರಾದರೆ, ನಾವು ಎದುರಿಸುವ ಪ್ರತಿಯೊಂದು ಸನ್ನಿವೇಶವೂ ನಮ್ಮ ಜೀವನವನ್ನು ವರ್ಧಿಸಿಕೊಳ್ಳಲು ಒಂದು ಅವಕಾಶ ಎಂಬುದನ್ನು ನೀವು ನೋಡುವಿರಿ.
ಧ್ಯಾನ ಎಂಬುದು ನಿಮ್ಮ ಅಸ್ತಿತ್ವದ ಸೊಬಗನ್ನು ಅರಿಯಲು ಒಂದು ಸಾಧನ.
ನೀವು ಏನನ್ನೇ ಮಾಡಿದರೂ, ಅದನ್ನು ಮನಃಪೂರ್ವಕವಾಗಿ ಮಾಡಬಹುದು, ಅಥವಾ ಒಲ್ಲದ ಮನಸ್ಸಿನಿಂದ ಮಾಡಬಹುದು. ಮನಃಪೂರ್ವಕವಾಗಿ ಮಾಡಿದರೆ, ಅದು ಸ್ವರ್ಗವಾಗುವುದು. ಒಲ್ಲದ ಮನಸ್ಸಿನಿಂದ ಮಾಡಿದರೆ, ಅದು ನರಕವಾಗುವುದು.
ನೀವು ಸೃಷ್ಟಿಯ ತುಣುಕೆಂಬುದು ನಿಜವಾಗಿದ್ದರೆ, ಸೃಷ್ಟಿಕರ್ತನು ಖಂಡಿತವಾಗಿಯೂ ನಿಮ್ಮೊಳಗೆ ಅಂತರ್ಗತನಾಗಿದ್ದಾನೆ. ಅದನ್ನು ಅರಿಯಲು ನೀವು ಅಂತರ್ಮುಖರಾಗಬೇಕಷ್ಟೆ.