Main Centers
International Centers
India
USA
Wisdom
FILTERS:
SORT BY:
ಸ್ಪೆಷಲ್ ಅನಿಸಿಕೊಳ್ಳಲು ಹೆಚ್ಚು ಪ್ರಯತ್ನಿಸಿದಷ್ಟೂ ನೀವು ಹೆಚ್ಚು ಘಾಸಿಗೊಳಗಾಗುತ್ತೀರಿ. ಸುಮ್ಮನೆ ಹಾಗೇ ಕರಗಿಹೋಗಿ ತಂಗಾಳಿಯ, ಭೂಮಿಯ ಭಾಗವಾಗಿ; ಎಲ್ಲದರಲ್ಲಿ ವಿಲೀನವಾಗಿ. ಅದುವೇ ಸೃಷ್ಟಿಯ ಸಂಕಲ್ಪ.
ನೀವು ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದರೆ, ನೀವು ಈ ಕ್ಷಣದಲ್ಲಿ ಹೇಗಿದ್ದೀರಿ ಎಂಬುದನ್ನು ಬಾಹ್ಯ ಸನ್ನಿವೇಶಗಳು ನಿರ್ಧರಿಸುತ್ತವೆ. ಪ್ರಜ್ಞಾಪೂರ್ವಕರಾಗಿ ಸ್ಪಂದಿಸಿದರೆ, ನಿಮ್ಮ ಒಳಿತು ನಿಮ್ಮ ಕೈಯಲ್ಲೇ ಇರುತ್ತದೆ.
ಬದುಕು ಬಹಳ ಚುಟುಕಾದದ್ದು. ನಿಮ್ಮ ಬಾಳನ್ನು ಧನ್ಯಗೊಳಿಸಲು ಇರುವ ಒಂದೇ ದಾರಿಯೆಂದರೆ ನಿಮ್ಮ ಹೃದಯಕ್ಕೆ ನಿಜವಾಗಿಯೂ ಕಳಕಳಿಯಿರುವುದರಲ್ಲಿ ತೊಡಗುವುದು.
ಭಯ, ಸಿಟ್ಟು, ಮತ್ತು ದ್ವೇಷಗಳು ಮೂಲತಃ ಉಂಟಾಗುವುದು ಜೀವನವೆಂದರೆ ಏನೆಂಬ ಅರಿವಿನ ಕೊರತೆಯಿಂದ.
ಎಲ್ಲದರ ಬಗ್ಗೆಯೂ ಸೀರಿಯಸ್ ಆಗಿರುವವರಿಗಿಂತ, ಸಂತೋಷಭರಿತ, ಜವಾಬ್ದಾರಿಯುತ, ಮತ್ತು ಸ್ವಲ್ಪ ವಿವೇಚನೆಯಿರುವ ವ್ಯಕ್ತಿಯು ಸವಾಲಿನ ಪರಿಸ್ಥಿತಿಗಳನ್ನು ಎಷ್ಟೋ ಚೆನ್ನಾಗಿ ನಿಭಾಯಿಸಬಲ್ಲರು.
ಇದು ಗ್ರಹಣಶೀಲತೆ, ಅನುಗ್ರಹ, ಜ್ಞಾನೋದಯ, ಮತ್ತು ಪರಮಮುಕ್ತಿಯ ದಿನ. ಅತ್ಯುನ್ನತವಾದುದನ್ನು ನೀವು ಹಂಬಲಿಸುವಂತಾಗಲಿ.
ಯಾರಿಗಾದರೂ ನೋವಾಗುತ್ತಿದ್ದಾಗ ಅದರಿಂದ ನಿಮಗೆ ನೋವಾಗದಿದ್ದರೆ, ಅದರರ್ಥ ನೀವು ನಿಮ್ಮ ಮಾನವೀಯತೆಯನ್ನು ತೊರೆದುಬಿಟ್ಟಿದ್ದೀರಿ.
ಜಗತ್ತನ್ನೆಲ್ಲ ನಮಗೆ ಬೇಕಾದಂತೆ ಎಂಜಿನಿಯರಿಂಗ್ ಮಾಡುವ ಮೊದಲು ಆಗಬೇಕಿರುವ ಅತ್ಯಂತ ಮುಖ್ಯ ಎಂಜಿನಿಯರಿಂಗ್ ಕಾರ್ಯವೆಂದರೆ ನಿಮ್ಮನ್ನು ನೀವು ನಿಮಗೆ ಬೇಕಿರುವಂತೆ ಎಂಜಿನಿಯರಿಂಗ್ ಮಾಡುವುದು.
ಜೀವನದೊಂದಿಗೆ ನೀವು ಒಂದಿನಿತು ವಿನೋದಮಯರಾಗಿದ್ದರೆ, ಪ್ರತಿ ಕ್ಷಣವೂ ಒಂದು ಸಂಭ್ರಮಾಚರಣೆಯಾಗುತ್ತದೆ.
ಮನುಷ್ಯರಾಗಿರುವ ನೀವು ನಿಂತ ನೀರಲ್ಲ, ಬದಲಿಗೆ ಒಂದು ‘ಆಗು’ವಿಕೆ, ಒಂದು ನಿರಂತರ ಪ್ರಕ್ರಿಯೆ. ಅಂದರೆ ನಿಮ್ಮೊಳಗೆ ಯಾವುದೂ ಪೂರ್ವನಿಗದಿತವಲ್ಲ. ನೀವು ನಿಮಗೆ ಬೇಕಿದ್ದಂತೆ ಇರಬಹುದು.
ನಿಮ್ಮ ಬಳಿ ಏನಿದೆಯೋ – ನಿಮ್ಮ ಕೌಶಲ, ನಿಮ್ಮ ಪ್ರೀತಿ, ನಿಮ್ಮ ಸಂತೋಷ, ನಿಮ್ಮ ಮೇಧಾವಿತನ, ನಿಮ್ಮ ಕಾರ್ಯಸಾಮರ್ಥ್ಯ – ಅದನ್ನು ಈಗಲೇ ಅಭಿವ್ಯಕ್ತಪಡಿಸಿ. ಅದನ್ನು ಇನ್ನೊಂದು ಜೀವಮಾನಕ್ಕೆ ಉಳಿಸಲು ನೋಡಬೇಡಿ.
ನೀವು ಮಗುವಾಗಿದ್ದಾಗ ನಿಮ್ಮಷ್ಟಕ್ಕೆ ನೀವೇ ಸಂತೋಷದ ಬುಗ್ಗೆಯಾಗಿದ್ದಿರಿ. ಆಗ ನಿಮಗೆ ದುಃಖವುಂಟಾಗಲು ಯಾರೋ ಏನೋ ಮಾಡಬೇಕಿತ್ತು. ಈಗ ನಿಮಗೆ ಸಂತೋಷವಾಗಲು ಯಾರೋ ಏನೋ ಮಾಡಬೇಕಾಗಿ ಬಂದಿದೆ. ಮನಸ್ಸಿನ ಈ ಫಜೀತಿಯಿಂದ ಜೀವನದ ಲವಲವಿಕೆಗೆ ಮರಳುವ ಸಮಯ ಬಂದಿದೆ.