Main Centers
International Centers
India
USA
Wisdom
FILTERS:
SORT BY:
ಬಹಳ ತಾರ್ಕಿಕವಾದ ಮನಸ್ಸನ್ನು ಹುಚ್ಚು ಹೃದಯದ ಮೂಲಕ ಸರಿದೂಗಿಸಲು ಪ್ರಯತ್ನಿಸುವುದೇ ಯೋಗ.
ಕಾಲವು ಎಲ್ಲರಿಗೂ ಒಂದೇ ವೇಗದಲ್ಲಿ ಸರಿದುಹೋಗುತ್ತಿದೆ. ಕಾಲವನ್ನು ನೀವು ನಿರ್ವಹಿಸಲಾರಿರಿ, ಆದರೆ ನೀವು ನಿಮ್ಮ ಶಕ್ತಿಯನ್ನು ನಿರ್ವಹಿಸಬಹುದು.
ಪ್ರತಿಯೊಬ್ಬ ಮನುಷ್ಯನಿಗೂ ಬೇಕಿರುವುದು ಸಹಿಷ್ಣುತೆ ಅಥವಾ ಕರುಣೆಯಲ್ಲ, ಬದಲಿಗೆ ಸ್ವೀಕೃತಿ ಮತ್ತು ಗೌರವ.
Once you create a distance between you and your body, between you and your Mind – that is the end of suffering.
ನೀವು ನಿಜವಾಗಿಯೂ ಸತ್ಯವನ್ನು ಅನ್ವೇಷಿಸುತ್ತಿದ್ದರೆ, ಏನನ್ನೂ ಭಾವಿಸಿಕೊಳ್ಳಬೇಡಿ. ಸುಮ್ಮನೆ ಅನ್ವೇಷಿಸಿ ಅಷ್ಟೆ.
ಪ್ರೀತಿಸುವ ನಿಮ್ಮ ಸಾಮರ್ಥ್ಯವು ಅಪರಿಮಿತವಾದದ್ದು. ನೀವು ಸ್ವತಃ ಪ್ರೀತಿಯೇ ಆಗಿಬಿಟ್ಟಾಗ, ಸಮಸ್ತ ವಿಶ್ವವನ್ನೇ ನಿಮ್ಮ ಪ್ರೀತಿಯ ತೆಕ್ಕೆಯಲ್ಲಿ ಇರಿಸಬಲ್ಲಿರಿ.
ನೀವು ಯಾವುದಕ್ಕೆಲ್ಲ ಹೃತ್ಪೂರ್ವಕವಾಗಿ ಸ್ಪಂದಿಸುತ್ತೀರೋ ಅದೆಲ್ಲವೂ ನಿಮ್ಮದೇ ಆಗುತ್ತದೆ. ನೀವು ಸಂಪರ್ಕಕ್ಕೆ ಬರುವ ಎಲ್ಲದಕ್ಕೂ ನೀವು ಪ್ರಜ್ಞಾಪೂರ್ವಕವಾಗಿ ಸ್ಪಂದಿಸಿದರೆ, ಸಮಸ್ತ ವಿಶ್ವವೇ ನಿಮ್ಮದಾಗುತ್ತದೆ.
ನಿಮ್ಮ ಬದುಕಿನ ಅತ್ಯಂತ ಮಧುರವಾದ ಸಂಗತಿಗಳು – ಪ್ರೀತಿ, ಸೃಜನಶೀಲತೆ, ಸಂಗೀತ, ನೃತ್ಯ, ಮತ್ತು ನಗು – ಇವೆಲ್ಲವೂ ನಡೆಯುವುದು ನೀವು ನಿಮ್ಮನ್ನು ಪಕ್ಕಕ್ಕೆ ಇರಿಸಿದಾಗ ಮಾತ್ರ. ನಿಮ್ಮನ್ನು ನೀವು ಮರೆಯುವುದರಲ್ಲಿರುವ ಆನಂದ ಮತ್ತು ಭಾವಪರವಶತೆಯ ಅರಿವು ನಿಮಗಾಗಲಿ.
ಪ್ರೀತಿಯ ಮುದ ಮತ್ತು ಸಂತೋಷದ ರಂಗು ತುಂಬಿರುವ ಸ್ಫೂರ್ತಿಯುತ ಪರಿಸರವನ್ನು ನಿರ್ಮಿಸಿದ್ದೇ ಆದಲ್ಲಿ, ಮಕ್ಕಳಿಗೆ ನೀವು ಹೆಚ್ಚೇನೂ ‘ಕಲಿಸ’ಬೇಕಾಗಿಲ್ಲ. ಅವರು ಸಹಜವಾಗಿಯೇ ಅರಳಿ ತಮ್ಮ ಸಂಪೂರ್ಣ ಅಂತಸ್ಸತ್ವವನ್ನು ಕಂಡುಕೊಳ್ಳುತ್ತಾರೆ.
ಜನರು ಉಪದೇಶ ಕೊಟ್ಟಾಗ, ಯಾವಾಗಲೂ ಅದು ಅವರಿಗೆ ಕೆಲಸ ಮಾಡಿದೆಯೇ ಎಂದು ನೋಡಿ.
ಯೋಗ ಎಂದರೆ ಬ್ರಹ್ಮಾಂಡದ ಜ್ಯಾಮಿತೀಯ ರಚನೆಯೊಂದಿಗೆ ಲಯವನ್ನು ಕಂಡುಕೊಳ್ಳುವುದು. ನೀವು ಸೃಷ್ಟಿಯ ತುಣುಕಾಗಿ ಇರುತ್ತೀರೋ, ಅಥವಾ ಸೃಷ್ಟಿಯ ಮೂಲದ ಭಾಗವಾಗುತ್ತೀರೋ ಎಂಬುದು ನಿಮ್ಮದೇ ಆಯ್ಕೆ.
ನೀವು ‘ಏನನ್ನು’ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನಿಮ್ಮನ್ನು ರೂಪಾಂತರಿಸುವುದು ನಿಮ್ಮೊಳಗಿನ ತೊಡಗುವಿಕೆ ಯಾವ ಮಟ್ಟದಲ್ಲಿದೆ ಎಂಬುದು.