Main Centers
International Centers
India
USA
Wisdom
FILTERS:
SORT BY:
ನಾಯಕತ್ವ ಎಂದರೆ ಪ್ರಾಬಲ್ಯ ಮೆರೆಯುವುದಲ್ಲ. ನಾಯಕತ್ವ ಎಂದರೆ ತಮ್ಮ ಕೈಯಲ್ಲಿ ಸಾಧ್ಯ ಎಂದು ಜನರು ಕಲ್ಪಿಸಿಯೂ ಕೊಂಡಿರದಿದ್ದುದನ್ನು ಮಾಡುವಂತೆ ಅವರನ್ನು ಸಶಕ್ತರಾಗಿಸುವುದು.
ಭಕ್ತಿ ಎಂಬುದು ನೀವು ತೊಡಗಿರುವ ಎಲ್ಲದರೊಂದಿಗೂ—ಉಸಿರು, ಕೆಲಸ, ಜನರು, ಭೂಮಿ, ಮತ್ತು ಈ ವಿಶ್ವದೊಂದಿಗೇ—ವಿಲೀನವಾಗಿಬಿಡಲು ಒಂದು ವಿಧಾನ.
ಒಂದು ಬಾಹ್ಯ ಸನ್ನಿವೇಶವನ್ನು ಸೃಷ್ಟಿಸಲು ನಿಮಗೆ ಇತರ ಜನರ ಮತ್ತು ಶಕ್ತಿಗಳ ಸಹಯೋಗ ಅಗತ್ಯ. ಆದರೆ ಅಂತರಂಗದ ಸನ್ನಿವೇಶವನ್ನು ಸೃಷ್ಟಿಸಲು ನಿಮಗೆ ಅಗತ್ಯವಿರುವುದು ನೀವಷ್ಟೆ.
ನೀವು ಗತಕಾಲವನ್ನು ನಿಮ್ಮೊಳಗೆ ಜೀವಂತವಾಗಿರಿಸಿಕೊಂಡರೆ, ವರ್ತಮಾನಕ್ಕೆ ನೀವು ಸತ್ತಂತಿರುತ್ತೀರಿ.
ಸರಿ-ತಪ್ಪು, ಇಷ್ಟಾನಿಷ್ಟಗಳ ಆಯಾಮದಲ್ಲೇ ಸಿಲುಕಿಕೊಂಡಿರುವವರು ಪ್ರೀತಿಯ ಕಂಪನ್ನು ಎಂದೂ ಅರಿಯಲಾರರು.
ಎಲ್ಲವೂ ಬರುವುದು ಒಂದೇ ಮೂಲದಿಂದ. ನಿಮ್ಮಲ್ಲಿ ಪರಮ ನಿರಾಳತೆ ಉಂಟಾಗುವುದು ನಿಮ್ಮನ್ನು ನೀವು ಅಸ್ತಿತ್ವದ ಭಾಗವಾಗಿ ಅನುಭವಿಸಿದಾಗ ಮಾತ್ರ, ಒಬ್ಬ ಪ್ರತ್ಯೇಕ ವ್ಯಕ್ತಿಯಾಗಿಯಲ್ಲ.
ಸಂತೋಷವು ಒಂದು ಸಾಧನೆಯಲ್ಲ. ಅದು ನಿಮ್ಮ ಜೀವನದ ಸಹಜ ವಾತಾವರಣವಾಗಿರಬೇಕು.
ಭೂಮಿಯಂತೆ, ಮರದಂತೆ ಅಪ್ಪಟ ಜೀವಚೈತನ್ಯವಾಗಿ. ನೀವು ಅಪ್ಪಟ ಜೀವವಾಗಿದ್ದರೆ, ನಿಮ್ಮ ಮಾನವ ಪ್ರಜ್ಞೆಯು ಸಹಜವಾಗಿಯೇ ಅಭಿವ್ಯಕ್ತಿ ಪಡೆಯುತ್ತದೆ.
ಹೊಸ ಸವಾಲುಗಳನ್ನು ಒಡ್ಡುವ ಸನ್ನಿವೇಶಗಳು ಸಾಧ್ಯತೆಗಳು, ಸಮಸ್ಯೆಗಳಲ್ಲ. ಸಮಸ್ಯೆ ಯಾವುದೆಂದರೆ ನಿಮ್ಮ ಜೊತೆ ಏನೂ ಹೊಸತು ನಡೆಯದೇ ಇರುವುದು.
ಜೀವಶಕ್ತಿಯಿಂದ ಊರ್ಜಿತವಾದಾಗ, ಕಲ್ಪನೆಯು ವಾಸ್ತವವಾಗಿ ಮೈದಾಳುತ್ತದೆ.
ನೀವು ಗ್ರಹಿಸುವುದು ಮಾತ್ರ ನಿಮಗೆ ತಿಳಿದಿದೆ, ಉಳಿದದ್ದೆಲ್ಲವೂ ಬರೀ ಕಲ್ಪನೆಯಷ್ಟೆ. ಯೋಗ ಎಂದರೆ ನಿಮ್ಮ ಗ್ರಹಣಶೀಲತೆಯನ್ನು ವರ್ಧಿಸುವ ಒಂದು ವಿಜ್ಞಾನ.
ನಿಮಗೆ ನಿಮ್ಮ ನಶ್ವರತೆಯ ಅರಿವು ಸತತವಾಗಿ ಇದ್ದರೆ, ನಿಮ್ಮ ಆಧ್ಯಾತ್ಮಿಕ ಅನ್ವೇಷಣೆಯು ಅಚಲವಾಗಿರುತ್ತದೆ.