Main Centers
International Centers
India
USA
Wisdom
FILTERS:
SORT BY:
ಜೀವಂತಿಕೆಯ ಚಿಲುಮೆ ಉಕ್ಕಿ ಹರಿಯುತ್ತಿರುವವರಿಗೆ ಜೀವಿಸಲು ಯಾವುದೇ ಉದ್ದೇಶ ಬೇಕಿಲ್ಲ. ಜೀವನವು ತನ್ನಲ್ಲೇ ಒಂದು ಉದ್ದೇಶ.
ಯೋಗವು ಒಂದು ತಂತ್ರಜ್ಞಾನ. ನೀವದನ್ನು ಬಳಸಲು ಕಲಿತರೆ ಅದು ಕೆಲಸ ಮಾಡುತ್ತದೆ ಅಷ್ಟೆ. ನೀವು ಎಲ್ಲಿಯವರು, ನೀವೇನನ್ನು ನಂಬುತ್ತೀರಿ, ಏನನ್ನು ನಂಬುವುದಿಲ್ಲ ಎಂಬುದೆಲ್ಲ ಲೆಕ್ಕಕ್ಕೆ ಬಾರದು.
ನೀವು ಸದ್ಯದಲ್ಲಿ ಏನಾಗಿರುವಿರೋ ಅಷ್ಟಕ್ಕೆ ತೃಪ್ತಿ ಪಟ್ಟುಕೊಂಡರೆ, ಆಗ ಪ್ರಯತ್ನ ಪಟ್ಟರೆ ನೀವೇನಾಗಬಹುದು ಎಂಬ ಅರಿವೇ ನಿಮಗೆ ಇರುವುದಿಲ್ಲ.
ಜ್ಞಾನೋದಯ ಘಟಿಸುವುದು ನಿಶ್ಶಬ್ದವಾಗಿ. ಅದೊಂದು ಹೂವಿನ ಅರಳುವಿಕೆಯಂತೆ.
ನೀವು ನಿಮ್ಮೊಳಗೆ ಸಲಹಬಹುದಾದ ಅತ್ಯಂತ ಮಧುರವಾದ ಭಾವನೆಯೆಂದರೆ ಭಕ್ತಿ.
ಲವಲವಿಕೆಯಿಂದ, ಜೀವಂತಿಕೆಯಿಂದ ಬಾಳುವುದು ಸಾಧ್ಯವಾಗುವುದು ನೀವು ಬದುಕಿನ ಅನಿಶ್ಚಿತತೆಗಳನ್ನು ಲೀಲಾಜಾಲವಾಗಿ ಆನಂದಿಸಿದರೆ ಮಾತ್ರ.
ನೀವು ನಿಮ್ಮನ್ನು ದೊಡ್ಡವರೆಂದುಕೊಂಡರೆ ಸಣ್ಣವರಾಗುತ್ತೀರಿ. ‘ನಾನೇನೂ ಅಲ್ಲ’ ಎಂದು ನೀವು ಅರಿತರೆ, ನೀವು ಅಗಾಧವಾಗುತ್ತೀರಿ. ಇದುವೇ ಮನುಷ್ಯರಾಗಿರುವುದರ ಸೊಬಗು.
ಜೀವನ ಎಂದರೆ ಪ್ರಜ್ಞಾಪೂರ್ವಕತೆ – ಚಿಂತೆ, ಪ್ರವೃತ್ತಿವಶತೆ, ಅಥವಾ ತಿಕ್ಕಾಟಗಳಲ್ಲ. ಮುಂಬರುವ ತಿಂಗಳುಗಳು ಮನುಷ್ಯ ಚೇತನದ ಅಗಾಧತೆಯನ್ನು ಮುನ್ನೆಲೆಗೆ ತರಲಿ, ಮತ್ತು ಆನಂದಮಯ ಜೀವನಕ್ಕೆ ದಾರಿ ಮಾಡಿಕೊಡಲಿ.ಪ್ರೀತಿ ಮತ್ತು ಆಶೀರ್ವಾದಗಳು,
ನಾವು ಮಾಡುವ ಪ್ರತಿಯೊಂದು ಕಾರ್ಯದ ಮೂಲಕ, ನಾವು ಹುಟ್ಟುಹಾಕುವ ಪ್ರತಿಯೊಂದು ಯೋಚನೆ-ಭಾವನೆಯ ಮೂಲಕ, ನಾವು ನಮ್ಮ ಸುತ್ತ ಹೆಚ್ಚು ಒಳ್ಳೆಯ ಸನ್ನಿವೇಶವನ್ನು ಸೃಷ್ಟಿಸಬಹುದು.
ಸದ್ಗುಣ ಎಂದರೆ ನೈತಿಕತೆಯ ಆಚರಣೆಯಲ್ಲ. ಸಕಲ ಜೀವರಾಶಿಯನ್ನು ನಿಮ್ಮದಾಗಿ ಒಳಗೂಡಿಸಿಕೊಳ್ಳುವುದೇ ಅತ್ಯಂತ ಶ್ರೇಷ್ಠ ಸದ್ಗುಣ.
ಯಾರೋ ಅದ್ಭುತ ವ್ಯಕ್ತಿ ನಿಮಗೆ ಸಿಗಬೇಕೆಂದು ಹಂಬಲಿಸಬೇಡಿ. ಬೇರೆಯವರು ಯಾವ ರೀತಿಯ ಅದ್ಭುತ ವ್ಯಕ್ತಿಯಾಗಿರಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರೋ, ನೀವೇ ಆ ಅದ್ಭುತ ವ್ಯಕ್ತಿಯಾಗಲು ಹಂಬಲಿಸಿ.
ಗತಕಾಲ ಮತ್ತು ಭವಿಷ್ಯಗಳು ಇರುವುದು ನಿಮ್ಮ ನೆನಪು ಮತ್ತು ಕಲ್ಪನೆಗಳಲ್ಲಿ ಮಾತ್ರ. ನೀವು ‘ಅನುಭವಿಸು’ವುದು ಈ ಕ್ಷಣದಲ್ಲಿ ಇರುವುದನ್ನಷ್ಟೆ.