Main Centers
International Centers
India
USA
Wisdom
FILTERS:
SORT BY:
ಸಿದ್ಧಾಂತಗಳು ನಿಮಗೆ ಸ್ಪಷ್ಟತೆಯಿಂದ ಹೊರತಾದ ಆತ್ಮವಿಶ್ವಾಸವನ್ನು ನೀಡುತ್ತವೆ. ಸ್ಪಷ್ಟತೆಯಿರದ ಆತ್ಮವಿಶ್ವಾಸವು ಒಂದು ದುರಂತ.
ನೀಡುವುದರಲ್ಲಿ ಧನ್ಯತೆಯಿದೆ.
ಮಣ್ಣು ಜೀವಂತವಾದ ಪದಾರ್ಥ – ಅದು ನಮ್ಮ ಸೊತ್ತಲ್ಲ. ಅದು ನಮಗೆ ಬಂದಿರುವ ಬಳುವಳಿ. ಅದನ್ನು ನಾವು ಮುಂದಿನ ಪೀಳಿಗೆಗಳಿಗೆ ಜೀವಂತ ಮಣ್ಣಾಗಿಯೇ ಹಸ್ತಾಂತರಿಸಬೇಕು.
ಯಾರು ತಮ್ಮೊಳಗೆ ಸತತವಾದ ವಿಶ್ರಾಂತಿಯಲ್ಲಿದ್ದಾರೋ, ಅವರು ಕೊನೆಯಿಲ್ಲದಂತೆ ಕಾರ್ಯಗೈಯಲು ಸಮರ್ಥರಾಗುತ್ತಾರೆ.
ಅಸ್ತಿತ್ವವು ಮಾನವ-ಕೇಂದ್ರಿತವಾದುದಲ್ಲ. ನೀವು ಈ ಬ್ರಹ್ಮಾಂಡದಲ್ಲಿ ಒಂದು ನಗಣ್ಯವಾದ ಚುಕ್ಕೆಯಷ್ಟೆ.
ನಿಮ್ಮಲ್ಲಿ ಪ್ರತಿಯೊಬ್ಬರೂ ಧ್ಯಾನಲಿಂಗವನ್ನು ಅನುಭವಿಸಬೇಕೆಂಬುದು ನನ್ನ ಹಾರೈಕೆ ಮತ್ತು ಆಶೀರ್ವಾದ. ನೀವು ಜಗತ್ತಿನಲ್ಲಿ ಎಲ್ಲೇ ಇದ್ದರೂ, ಈ ಸಾಧ್ಯತೆಗೆ ನಿಮ್ಮನ್ನು ನೀವು ತೆರೆದುಕೊಂಡಿದ್ದರೆ, ಆಧ್ಯಾತ್ಮಿಕ ಮುಕ್ತಿಯ ಬೀಜವು ನಿಮ್ಮದಾಗುತ್ತದೆ.
ಅಜ್ಞಾನವು ಆನಂದಮಯವಾಗಿರುವುದು ವಾಸ್ತವವು ನಿಮ್ಮನ್ನು ಬಡಿದೆಬ್ಬಿಸುವವರೆಗಷ್ಟೆ.